Pages

Showing posts with label Raghothama H B. Show all posts
Showing posts with label Raghothama H B. Show all posts

Sunday, 2 October 2011

dalit vote



     “¥ÀævÉåÃPÀ ªÀÄvÀzÁ£À ¥ÀzÀÞw“ §ºÀıÀB CA¨ÉÃqÀÌgïgÀªÀgÀ ºÉÆÃgÁlzÀ §ºÀĪÀÄÄRå CA±À«zÀÄ. »AzÀÆUÀ½AzÀ zÀ°vÀgÀ ªÉÄÃ¯É DUÀÄwÛzÀÝ zËdð£ÀåPÉÌ, zÀ¨Áâ½PÉUÉ ¥ÀjºÁgÀªÁV CA¨ÉÃqÀÌgÀgÀjUÉ PÀArzÉÝà ¥ÀævÉåÃPÀ ªÀÄvÀzÁ£À JA§ F ¨sÀªÀå ¥ÀzÀÞw. MAzÀxÀðzÀ° §ºÀÄvÉÃPÀ gÁdQÃAiÀÄ «±ÉèõÀPÀgÀÄ C©ü¥ÁæAiÀÄ ¥ÀqÀĪÀ ºÁUÉ CA¨ÉÃqÀÌgÀjUÉ CªÀgÀ D ¥ÀæªÀÄÄR ¨ÉÃrPÉAiÀiÁzÀ “¥ÀævÉåÃPÀ ªÀÄvÀzÁ£À”ªÉãÁzÀgÀÆ ¹QÌzÀÝgÉ CªÀgÀÄ F zÉñÀzÀ ¥ÀæxÀªÀÄ ¥ÀæzsÁ¤AiÀiÁVgÀÄwÛzÀÝgÀÄ! DzÀgÉ?
     EgÀ°, ¥ÀævÉåÃPÀ ªÀÄvÀzÁ£À ºÁUÉAzÀgÉãÀÄ? JAzÀÄ ªÉÆzÀ°UÉ w½zÀÄPÉÆ¼ÀÄîªÀÅzÀÄ CvÀåUÀvÀå.
     “¥ÀævÉåÃPÀ ªÀÄvÀzÁ£À” ºÁUÉAzÀgÉ PÉ®ªÉÇAzÀÄ ¤¢ðµÀÖ ªÀUÀðUÀ½UÉ MAzÀµÀÄÖ ¸ÁÜ£ÀUÀ¼À£ÀÄß «ÄøÀ°qÀĪÀÅzÀÄ, ºÁUÉ «ÄøÀ°lÖ ¸ÁÜ£ÀUÀ¼À°è AiÀiÁªÀ eÁwAiÀĪÀgÀÄ ¸Àà¢üð¸À¨ÉÃPÉAzÀÄ ¸ÀÆa¸À¯ÁUÀÄvÀÛzÉAiÉÆÃ CzÉà eÁwAiÀĪÀgÀÄ ¸Àà¢üð¸À¨ÉÃPÀÄ. ºÁUÉ C°è NlÄ ªÀiÁqÀĪÀªÀgÀÆ PÀÆqÀ CzÉà eÁwAiÀĪÀgÀÄ,  CªÀgÀ£ÀÄß ºÉÆgÀvÀÄ ¥Àr¹ ¨ÉÃgÉ AiÀĪÀÅzÉà eÁwAiÀĪÀgÀÄ C°è NlÄ ªÀiÁqÀĪÀ ºÁV®è. CAzÀgÉ GzÁºÀgÀuÉUÉ ¥Àj²µÀÖjUÉ  MAzÀµÀÄÖ ¸ÁÜ£ÀUÀ¼À£ÀÄß «ÄøÀ°nÖvÉAzÀgÉ C°è ¸Àà¢üð¸ÀĪÀªÀgÀÄ ¥Àj²µÀÖeÁwUÉ ¸ÉÃjgÀ¨ÉÃPÀÄ, ºÁUÉ C°è NlĪÀiÁqÀĪÀªÀgÀÆ PÀÆqÀ ¥Àj²µÀÖgÉ. ¨ÉÃgÉ AiÀiÁªÀÅzÉà eÁwAiÀĪÀgÀÄ D PÉëÃvÀæzÀ°è NlÄ ªÀiÁqÀĪÀ ºÁV®è, ºÁUÉ ¸Àà¢üð¸ÀĪÀ ºÁUÀÆ E®è. ºÁVzÀÝgÉ F ¥ÀzÀÞw »AzÉ eÁjAiÀİèvÉÛ? RArvÀ, ¸ÀévÀAvÀæ ¥ÀƪÀðzÀ°è ªÀÄĹèêÀÄgÀÄ, PÉæöʸÀÛgÀÄ, ªÀÄvÀÄÛ CAUÉÆèÃEArAiÀÄ£ÀßjUÉ CAvÀºÀ ¥ÀævÉåÃPÀ ªÀÄvÀPÉëÃvÀæ ªÀÄvÀÄÛ ªÀÄvÀzÁ£ÀzÀ ¥ÀzÀÞw EvÀÄÛ. D±ÀÑAiÀÄðªÉAzÀgÉ EAvÀºÀ MAzÀÄ ¥ÀzÀÞw E¢ÝzÀÝjAzÀ¯Éà ªÀÄvÀÄÛ CAvÀºÀ ¥ÀzÀÞw¬ÄAzÀ ªÀÄĹèêÀÄgÀÄ §ºÀÄ ¸ÀASÉåAiÀİè DAiÉÄÌAiÀiÁUÀÄwÛzÀÝjAzÀ¯Éà F zÉñÀzÀ°è ¥ÁQ¸ÁÛ£ÀªÉA§ ºÉƸÀ zÉñÀ ¸ÀȶÖAiÀiÁzÀzÉÝA§ÄzÀÄ «avÀæªÉ¤¹zÀgÀÆ ªÁ¸ÀÛªÀªÉA§ÄzÀAvÀÆ ¸ÀvÀå.
     ºÁVzÀÝgÉ CAvÀºÀ ZÀÄ£ÁªÀuÁ ¥ÀzÀÞw FUÀ C¹ÛvÀézÀ°èªÉ J£ÀÄߪÀÅzÁzÀgÉ FUÀ®Æ EzÉ. DzÀgÉ ¹Ã«ÄvÀ ªÁå¦ÛAiÀİè CAvÀºÀ ZÀÄ£ÁªÀuÉ ¥ÀzÀÞw C®è°è C¹ÛvÀézÀ°èzÉ. GzÁºÀgÀuÉUÉÉ J.¦.JA.¹. ZÀÄ£ÁªÀuÉ, ««zsÀ jÃwAiÀÄ ¸ÀºÀPÁgÀ ¸ÀAWÀUÀ¼À ZÀÄ£ÁªÀuÉ EvÁå¢. J.¦.JA.¹ ZÀÄ£ÁªÀuÉAiÀÄ£ÀÄß vÉUÉzÀÄPÉÆ¼ÀÄîªÀÅzÁzÀgÉ C°è ¸Àà¢ð¸ÀĪÀªÀgÀÄ gÉÊvÀ£ÉÆÃ ªÁå¥ÁjAiÉÆÃ DVgÀ¨ÉÃPÀÄ. ºÁUÉ C°è ªÀÄvÀzÁ£À ªÀiÁqÀĪÀªÀgÀÆ PÀÆqÀ gÉÊvÀgÀÄ ªÀÄvÀÄÛ ªÁå¥ÁgÀ¸ÀÜgÉ. CAzÀºÁUÉ “¥ÀævÉåÃPÀ ªÀÄvÀzÁ£À” ¥ÀzÀÞw FUÀ PÁAiÀÄð¸ÁzÀĪÀ®èªÉ JA§ÄzPÀÀµÉÖ J.¦.JA.¹.AiÀÄ F GzÁºÀgÀuÉ PÉÆqÀ¨ÉÃPÁ¬ÄvÀÄ. »ÃVgÀĪÁUÀ CAzÀgÉ ¥ÀævÉåÃPÀ ªÀÄvÀzÁ£À ¥ÀzÀÞw FUÀ®Æ PÁAiÀÄð¸ÁzsÀĪÁVgÀĪÁUÀ CA¨ÉÃqÀÌgï CAzÀÄ ©ænõÀgÀ£ÀÄß, AiÀiÁªÀ jÃw  ªÀÄĸÀ¯Áä£ÀgÀÄ, PÉæöʸÀÛgÀÄ, ¹RÍgÀÄ, CAUÉÆèà EArAiÀÄ£ÀßjUÉ “¥ÀævÉåÃPÀ ªÀÄvÀzÁ£À” ¥ÀzÀÞw PÉÆqÀ¯ÁVvÉÆÛà CAvÀºÀzÉà ¥ÀzÀÞwAiÀÄ£ÀÄß £ÀªÀÄUÀÆ PÉÆr JAzÀÝzÀÄÝ? ¤dPÀÆÌ CzÀÄ CA¨ÉÃqÀÌgÀgÀ §Ä¢ÝªÀAwPÉAiÀÄ, zÀÆgÀzÀȶÖAiÀÄ gÁdQÃAiÀÄ ZÁvÀÄgÀåzÀ ¨ÉÃrPÉAiÀiÁVvÀÄÛ. 1930gÀ ªÉÆzÀ®£ÉAiÀÄ zÀÄAqÀÄ ªÉÄÃf£À ¸À¨sÉAiÀİè CA¨ÉÃqÀÌgÀgÀÄ ©ænõÀgÉzÀgÀÄ ¸ÀªÀÄxÀð ªÁzÀ

Wednesday, 18 May 2011

ಅಂಬೇಡ್ಕರರ ರಾಜಕೀಯ ನಿಲುವಿನ ಬಗ್ಗೆ ತಪ್ಪಭಿಪ್ರಾಯ ಸಲ್ಲ!


ಹಿರಿಯರಾದ, ಶಾಸಕರೂ ಆದ ಮಾಜಿ ಕೇಂದ್ರ ಸಚಿವ ಶ್ರೀ ವಿ. ಶ್ರೀನಿವಾಸಪ್ರಸಾದ್ರವರು ಅಂಬೇಡ್ಕರರ ಬಗ್ಗೆ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಜಾತೀಯತೆ, ರಾಜಕೀಯದ ಸೋಂಕಿಲ್ಲದ ನಾಯಕ ಅಂಬೇಡ್ಕರ್ ಎಂದಿದ್ದಾರೆ. ಈ ಹಿನ್ನಿಲೆಯಲ್ಲಿ ಒಂದು ಪ್ರತಿಕ್ರಿಯೆ.

ನಿಜಕ್ಕೂ ಪ್ರಸಾದರ ಈ ಹೇಳಿಕೆ ದುರದೃಷ್ಟಕರ. ಯಾಕೆಂದರೆ ಯಾವ ಅಂಬೇಡ್ಕರ್ ತನ್ನ ಜೀವನದುದ್ದಕ್ಕೂ ದಲಿತರ ಪ್ರತಿಯೊಂದು ಸಮಸ್ಯೆಗಳಿಗೂ ರಾಜಕೀಯ ಅಧಿಕಾರ ಪಡೆಯುವುದರಲ್ಲಿಯೇ ಪರಿಹಾರವಿದೆಯೆಂದು ಪ್ರತಿಪಾದಿಸುತ್ತಿದ್ದರೋ, ರಾಜಕೀಯವನ್ನು ತನ್ನ ಜೀವನದ ಉಸಿರಾಗಿ ಹೊಂದಿದ್ದರೋ ಅಂತಹ ಅಂಬೇಡ್ಕರರನ್ನು ರಾಜಕೀಯದ ಸೋಂಕಿಲ್ಲದವರೆನ್ನುವುದು ಅದೆಷ್ಟು ಸರಿ? ಉದಾಹರಣೆಗೆ ಹೇಳುವುದಾದರೆ 1948 ಏಪ್ರಿಲ್ 25 ರ ಭಾನುವಾರ ಲಕ್ನೋ ನಗರದಲ್ಲಿ ಪರಿಶಿಷ್ಟ ಜಾತಿಗಳ ಒಕ್ಕೂಟವನ್ನುದ್ದೇಶಿಸಿ ಮಾತನಾಡುತ್ತಾ ಅಂಬೇಡ್ಕರ್ರವರು ಸಾಮಾಜಿಕವಾಗಿ ಆಭಿವೃದ್ಧಿ ಹೊಂದಲು ರಾಜಕೀಯ ಅಧಿಕಾರ ಪಡೆಯುವುದು ಅತ್ಯಗತ್ಯವಾಗಿದೆ. ಆದ್ದರಿಂದ ರಾಜಕೀಯ ಅಧಿಕಾರ ಪಡೆಯುವುದರ ಮೂಲಕ ಪರಿಶಿಷ್ಟಜಾತಿಯ ಜನರು ತಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎನ್ನುತ್ತಾರೆ. ಮತ್ತೊಂದೆಡೆ 1942 ಆಗಸ್ಟ್ 23 ರಂದು ದೆಹಲಿಯಲ್ಲಿ ಮಾತನಾಡುತ್ತಾ ಅವರು ರಾಜ್ಯದ ಆಡಳಿತದ ಬೀಗದ ಕೈಯನ್ನು ನಿಮ್ಮ ಕೈಗೆ ತರಲು ನಾನು ಯತ್ನಿಸುತ್ತಿದ್ದೇನೆ. ನೀವು ಇತರರ ಜೊತೆ ಸಮಾನತೆಯ ಅಧಾರದ ಮೇಲೆ ಆ ರಾಜಕೀಯ ಅಧಿಕಾರವನ್ನು ಹಂಚಿಕೊಂಡು ಮುನ್ನುಗ್ಗಬೇಕು ಎಂದು ಕರೆ ನೀಡುತ್ತಾರೆ.



ಅಂದಹಾಗೆ ಅಂಬೇಡ್ಕರರ ಬಗ್ಗೆ ಅವರ ರಾಜಕೀಯ ಒಲವು ನಿಲುವುಗಳ ಬಗ್ಗೆ ಇಂತಹ ಒಂದಲ್ಲ ಎರಡಲ್ಲ ಒಂದು ನೂರು ಉದಾಹರಣೆ ಕೊಡಬಹುದು. ಹಾಗೆಯೇ ರಾಜಕೀಯ ಎಂದರೆ ರಾಜಕೀಯ ಪಕ್ಷಗಳನ್ನು ಸ್ಥಾಪಿಸಬೇಕಲ್ಲವೇ? ಅಂಬೇಡ್ಕರರು ತಮ್ಮ ಜೀವಿತಾವಧಿಯಲ್ಲಿ ಸ್ಥಾಪಿಸಿದ್ದು ಬರೆ ಒಂದಲ್ಲ! ಸ್ವತಂತ್ರ ಕಾಮರ್ಿಕ ಪಕ್ಷ, ಪರಿಶಿಷ್ಟ ಜಾತಿಗಳ ಒಕ್ಕೂಟ, ರಿಪಬ್ಲಿಕನ್ ಪಾಟರ್ಿ ಆಫ್ ಇಂಡಿಯಾ ಎಂಬ ಒಟ್ಟು ಮೂರು ರಾಜಕೀಯ ಪಕ್ಷಗಳನ್ನು! ಸ್ವತಂತ್ರ ಕಾಮರ್ಿಕ ಪಕ್ಷದಿಂದ ಮುಂಬೈ ಲೆಜಿಸ್ಲೇಟಿವ್ ಅಸೆಂಬ್ಲಿಗೆ ಸ್ಪಧರ್ಿಸಿ 17 ಸ್ಥಾನಗಳನ್ನು ಗೆಲ್ಲುವ ಅವರು, ಬ್ರಿಟಿಷ್ ಸಕರ್ಾರದಲ್ಲಿ ನಾಲ್ಕು ವರ್ಷ, ಸ್ವತಂತ್ರ ಬಂದಾಗ ನಾಲ್ಕು ವರ್ಷ ಒಟ್ಟು 8 ವರ್ಷ ಕೇಂದ್ರದಲ್ಲಿ ಮಂತ್ರಿಯಾಗಿಯೂ ಸೇವೆ ಸಲ್ಲಿಸುತ್ತಾರೆ. ಎರಡು ಬಾರಿ ಲೋಕಸಭಾ ಚುನಾವಣೆಗೆ ಸ್ಪಧರ್ಿಸಿ ಕಾಂಗ್ರೆಸ್ ಅಭ್ಯಥರ್ಿಗಳ ಎದುರು ಸೋಲುವ ಅವರು ಕಡೆಗೆ ಮುಂಬೈ ಅಸೆಂಬ್ಲಿಯಿಂದ ಪಕ್ಷೇತರರ ಸಹಾಯದಿಂದ ರಾಜ್ಯಸಭೆಗೆ ಆಯ್ಕೆಗೆ ರಾಜ್ಯಸಭಾ ಸದಸ್ಯರೂ ಆಗುತ್ತಾರೆ! ಇಷ್ಟೆಲ್ಲಾ ಇರುವಾಗ ಅವರಿಗೆ ರಾಜಕೀಯದ ಸೋಂಕಿಲ್ಲ ಎನ್ನುವುದು ಅದೆಷ್ಟು ಸರಿ? ಯಾಕೆ ಅಂಬೇಡ್ಕರ್ರವರು ಕಾಂಗ್ರೆಸ್ ಪಕ್ಷವನ್ನು ಸೇರಿದ್ದರೆ ಮಾತ್ರ ಅವರು ರಾಜಕೀಯ ವ್ಯಕ್ತಿಯಾಗುತ್ತಿದ್ದರೆ? ಕಾಂಗ್ರೆಸ್ಸನ್ನು ತಮ್ಮ ಜೀವನದುದ್ದಕ್ಕೂ ವಿರೋಧಿಸಿ ಸ್ವಂತ ಶಕ್ತಿಯ ಮೇಲೆ ಆಡಳಿತದ ಚುಕ್ಕಾಣಿ ಹಿಡಿಯಲು ಯತ್ನಿಸಿದ್ದು ರಾಜಕೀಯವಾಗುವುದಿಲ್ಲವೇ? ಬೇಡ, ಅಂಬೇಡ್ಕರರ ಸ್ವಾಭಿಮಾನಿ ರಾಜಕೀಯದ ಬಗ್ಗೆ ಹಗುರವಾಗಿ ಮಾತನಾಡುವುದು ಬೇಡ. ಹಾಗೇನಾದರೂ ಮಾತನಾಡಿದರೆ ಅದು ನಾವು ಅವರ ವ್ಯಕ್ತಿತ್ವಕ್ಕೆ ಎಸಗುವ ಅಪಚಾರವಲ್ಲದೆ ಬೇರೇನಲ್ಲ. 
Ho Ba Raghothama
ರಘೋತ್ತಮ ಹೊ.ಬ
ಚಾಮರಾಜನಗರ_571313

Saturday, 30 April 2011

ಕಾಮರ್ಿಕರು, ಬ್ರಾಹ್ಮಣವಾದ ಮತ್ತು ಅಂಬೇಡ್ಕರ್

ಕಾಮರ್ಿಕರು ಹಾಗೆಂದರೆ ಶ್ರಮ ಜೀವಿ ವರ್ಗದವರು ಎಂಧರ್ಥ. ಅದು ಹೋಟಲ್ನಲ್ಲಿ, ತಟ್ಟೆ ಲೋಟ ತೊಳೆಯುವ ಸಣ್ಣ ಕಾಮರ್ಿಕರಿರಬಹುದು, ಕಾಖರ್ಾನೆಯಲ್ಲಿ ದೊಡ್ಡ ದೊಡ್ಡ ಯಂತ್ರಗಳನ್ನು ಚಲಾಯಿಸ ವವರಿರಬಹುದು, ಪ್ರತಿಯೊಬ್ಬರೂ ಕಾಮರ್ಿಕರೆ. ಅದರಲ್ಲೂ ಭಾರತದ ಅರ್ಥ ವ್ಯವಸ್ಥೆಯಲ್ಲಿ ಅತಿ ದೊಡ್ಡ ಉತ್ಪಾದಕ ಗುಂಪೆಂದರೆ ಕಾಮರ್ಿಕರದ್ದೆ. ಆದರೆ ಪ್ರಶ್ನೆಯೆನೆಂದರೆ ಈ ದೇಶದಲ್ಲಿ ಅದೆಷ್ಟು ದುಡಿಯುವ ಜೀವಿಗಳಿಗೆ ತಾವು ಕಾಮರ್ಿಕರು, ನಮಗೂ ಹಕ್ಕು ಅಧಿಕಾರ ಇದೆ, ಚಳುವಳಿ ಹೋರಾಟ ಇದೆ ಇತ್ಯಾದಿ ವಿಷಯಗಳ ಅರಿವು ಅದೆಷ್ಟಿದೆ? ಬಹುಶಃ ಈ ಪ್ರಶ್ನೆಗೆ ಉತ್ತರ ಶೂನ್ಯಕ್ಕೆ ಹತ್ತಿರ ಎನ್ನಬಹುದು ಯಾಕೆಂದರೆ ಕಾಮರ್ಿಕರು ಸಂಘಟತರಾಗೆ ಇಲ್ಲ, ಅದಕ್ಕೆ ಕಾರಣ ಅವರಲ್ಲಿರುವ ಅಜ್ಞಾನ ಅನಕ್ಷರತೆ ಮುಖ್ಯವಾಗಿ ಜಾತೀಯತೆ!
ಹೌದು, ಜಾತೀಯತೆ ಈ ದೇಶದ ಕಾಮರ್ಿಕರನ್ನು ಸಂಘಟಿತರಾಗದ ಹಾಗೆ ತಡೆದಿಟ್ಟಿದೆ. ಯಾವ ಮಾಕ್ಸರ್್, ಲೆನಿನ್ ಅಲ್ಲಲ್ಲಿ ಜೀವಂತವಿದ್ದರೂ ಕೂಡ ಈ ದೇಶದ ಜಾತೀಯ ವ್ಯವಸ್ಥೆಯ ಮುಂದೆ ಅವರು ಸಹ ಏನೂ ಮಾಡಲಾಗದೆ ಕನ್ಪ್ಯೂಸ್ ಆಗಿ ಕುಳಿತ್ತಿದ್ದಾರೆ. ಹಾಗಿದ್ದರೆ ಜಾತಿಯತೆಯ ವಿಷಮ ಬಲೆಯಲ್ಲಿ ಬಿದ್ದಿರುವ ಈ ದೇಶದ ಕಾಮರ್ಿಕರ ಹೋರಾಟ ಏನಾಗಿರಬೇಕು? ಯಾವ ದಿಕ್ಕನಲ್ಲಿರಬೇಕು? ಯಾರ ವಿರುದ್ಧ ಇರಬೇಕು? ಅವರ ನಾಯಕ ಯಾರಾಗಬೇಕು. ಉತ್ತರಕ್ಕೆ ತಡಕಾಡಬೇಕಿಲ್ಲ. ಯಾಕೆಂದರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬಾಬಾ ಸಾಹೇಬ್ ಅಂಬೇಡ್ಕರ್ರವರಲ್ಲದೆ ಬೇರಾರು ಅಲ್ಲ ಅದಕ್ಕೆ.
ಹೌದು, ಅಂಬೇಡ್ಕರ್ ಈ ದೇಶದ ಕಾಮರ್ಿಕರ ನಾಯಕ. ಅಕಸ್ಮಾತ್ ಈ ದೇಶದಲ್ಲಿ ಜಾತೀಯತೆ ಇಲ್ಲದೆ ಇದ್ದರೆ ಅವರ ಮುಖ್ಯ ಹೋರಾಟ ಕಾಮರ್ಿಕರ ಪರವೇ ಇರುತ್ತಿತ್ತು. ಆದರೆ ಭಾರತದ ಹಿಂದೂ ಸಾಮಾಜಿಕ ವ್ಯವಸ್ಥೆಯನ್ನು, ಭೀಕರ ಅಸ್ಪೃಶ್ಯತೆಯನ್ನು ಕಂಡು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಅದರ ಹೊಣೆಹೊತ್ತುಕೊಂಡರೆ ಹೊರತು ಇನ್ನಾವುದೇ ಪೂವರ್ಾಗ್ರಹ ಪೀಡಿತ ಮನಸ್ಸಿನಿಂದಲ್ಲ! ಒಂದರ್ಥದಲಿ ಹಿಂದೂ ಧರ್ಮ ಮೈನಸ್ ಜಾತೀಯತೆ ಎಂದಿದ್ದರೆ ಖಂಡಿತ ಅವರು ಅದರ ತಂಟೆಗೆ ಹೋಗುತ್ತಿರಲಿಲ್ಲ ಬದಲಿಗೆ ಭಾರತದ ಕಾಮರ್ಿಕರು ಮತ್ತು ಕಾಮರ್ಿಕರ ಸಮಸ್ಯೆಗಳು ಎಂದು ಸಂಪೂರ್ಣ ಕಾಮರ್ಿಕರ ಪರ ನಿಲ್ಲುತ್ತಿರುತ್ತಿದ್ದರು. "ದಾಸ್ ಕ್ಯಾಪಿಟಲ್" ನಂತಹ ಮತ್ತೊಂದು ಕೃತಿಯನ್ನು ರಚಿಸಿ ಅವರು ಭಾರತದ ಕಾಲರ್್ಮಾಕ್ಸರ್್ ಆಗಿರುತ್ತಿದ್ದರು ತನ್ಮೂಲಕ ಅವರ ಚಿಂತನೆಗಳು ಇಡೀ ವಿಶ್ವವನ್ನೇ ವ್ಯಾಪಿಸಿರುತ್ತಿತ್ತು. ಆದರೆ? ಈ ದೇಶದ ಸಾಮಾಜಿಕ ವ್ಯವಸ್ಥೆ ಅದಕ್ಕೆ ಅವಕಾಶ ಕೊಡಲಿಲ್ಲ ಆ ಮೂಲಕ ನೈಜ ಸಾಮಾಜಿಕ ಕಳಕಳಿಯ ಬಾಬಾಸಾಹೇಬರು ಈ ದೇಶದ ಹಿಂದೂ ಸಾಮಾಜಿಕ ಜಂಜಡಗಳನ್ನು ಬಗೆಹರಿಸುವುದರಷ್ಟಕ್ಕೆ ಸಿಮೀತ ಗೊಳ್ಳಬೇಕಾಯಿತು. 
ಹಾಗಿದ್ದರೆ ಭಾರತದ ಕಾಮರ್ಿಕರು ಮತ್ತು ಅವರ ಸಮಸ್ಯೆಗಳನ್ನು ಕುರಿತಂತೆ ಅಂಬೇಡ್ಕರರ ಚಿಂತನೆಗಳು? ಬಹುಶಃ ಅದನ್ನು ಹೇಳತೊಡಗಿದರೆ ಬಾಬಾಸಾಹೇಬರ ವಿಶ್ವರೂಪ ಎಲ್ಲರಿಗೂ ಪರಿಚಯ ವಾಗುವುದಂತೂ ನಿಶ್ಚಿತ.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಈ ದೇಶದ ಮೊಟ್ಟಮೊದಲ ದಲಿತ ವರ್ಗಕ್ಕೆ ಸೇರಿದ ಮಂತ್ರಿ ಮತ್ತು ಅವರು ಕಾಮರ್ಿಕ ಇಲಾಖೆ ಸಚಿವರಾಗಿದ್ದರು ಎಂಬ ಸಾಮಾನ್ಯ ಜ್ಞಾನವನ್ನು ಮೊದಲಿಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಷ್ಟೆ. ಏಕೆಂದರೆ 1938 ರಿಂದ 1942 ರ ವರೆಗೆ ತಮ್ಮ ಃಣಥಿ ಹೋರಾಟದ ನಡುವೆಯೂ ಅವರು ಅಂದಿನ ಕೇಂದ್ರ ಮಂತ್ರಿಮಂಡಲದಂತಿದ್ದ ಗೌರ್ನರ್ ಜನರಲ್ರವರ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರಾಗಿದ್ದು ಬಹುತೇಕರಿಗೆ ತಿಳಿದಿಲ್ಲ. ಗೌರ್ನರ್ ಜನರಲ್ರವರ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿ ಮುಖ್ಯವಾಗಿ ಅವರು ನಿರ್ವಹಿಸಿದ್ದು ಕಾಮರ್ಿಕ, ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಗಳನ್ನು. ಇತಿಹಾಸದಲ್ಲಿ ಅಂಬೇಡ್ಕರ್ರವರ ಬಗ್ಗೆ ಏನೇನೋ ಹೇಳಲಾಗಿದೆ ಅದರೆ ಅವರ ಜೀವನದ ಇಂತಹ ನೈಜ ಅದ್ಬುತ ಸಾಧನೆಗಳನ್ನು, ಅನುಭವಿಸಿದ ಹುದ್ದೆಗಳನ್ನು ಮುಚ್ಚಿಡಲಾಗಿದೆ! ಯಾಕೋ ಏನೋ ಅಂಬೇಡ್ಕರರು ಬ್ರಿಟೀಷ್ ಸಕರ್ಾರದಲ್ಲಿ ಅಂತಹ ಮಂತ್ರಿಯಾಗಿದ್ದರು ಎಂಬ ವಿಷಯವೇ ಬಹುತೇಕರಿಗೆ ಕಸಿವಿಸಿ ಮೂಡಿಸುವಂತಹದ್ದಿರಬೇಕು! ಅದಕ್ಕೆ ಅದರ ಬಗ್ಗೆ ಪ್ರಸ್ಥಾಪಿಸಲು ಹೋಗಿಲ್ಲ. ಮತ್ತೊಂದು ವಿಷಯ ಅಂಬೇಡ್ಕರರು ಕಾಮರ್ಿಕರ ಹೆಸರಿನಲ್ಲಿ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದನ್ನು ಮುಟ್ಟಿಡಲಾಗಿದೆ. ಹೇಗೆ ಇಂಗ್ಲೇಂಡಿನಲ್ಲಿ "ಲೇಬರ್ ಪಾಟರ್ಿ" ಇದೆಯೋ ಅದೇ ರೀತಿ ಭಾರತದಲ್ಲಿ "ಇಂಡಿಯನ್ ಲೇಬರ್ ಪಾಟರ್ಿ" (ಭಾರತ ಕಾಮರ್ಿಕ ಪಕ್ಷ) ವನ್ನು ಸ್ಥಾಪಿಸಿದರು. ಪ್ರಶ್ನೆಯೆನೆಂದರೆ ಬಾಬಾಸಾಹೇಬ್ ಅಂಬೇಡ್ಕರ್ರ ಬಗ್ಗೆ ಇಂತಹ ಸರಳ ಸತ್ಯ ಅದೆಷ್ಟು ಜನರಿಗೆ ಗೊತ್ತು? ಎಂಬುದು. ಒಂದಂತು ನಿಜ ಕಾಮರ್ಿಕ ಇಲಾಖೆ ಮಂತ್ರಿಯಾಗಿ ಅಪ್ರತಿಮ ಸಾಧನೆಗಳನ್ನು ಮಾಡಿ ಕಾಮರ್ಿಕರ ಹೆಸರಿನಲ್ಲೇ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಿದ ಈ ದೇಶದ ಎಕೈಕ ರಾಜಕೀಯ ನಾಯಕರೆಂದರೆ ಅದು ಬಾಬಾಸಾಹೇಬ್ ಅಂಬೇಡ್ಕರ್ ಮಾತ್ರ. ಈ ನಿಟ್ಟಿನಲ್ಲಿ ಕಾಮರ್ಿಕರ ಬಗ್ಗೆ ಬಾಬಾಸಾಹೇಬ್ ಅಂಬೇಡ್ಕರ್ರ ಚಿಂತನೆಗಳು ಮತ್ತು ಅಲೋಚನೆಗಳನ್ನು ತಿಳಿದುಕೊಳ್ಳುವುದು ಈಗ ಹಿಂದಿಗಿಂತಲೂ ಹೆಚ್ಚಿನ ಅಗತ್ಯವುಳ್ಳದ್ದಾಗಿದೆ. 
ಹಾಗಿದ್ದರೆ ಕಾಮರ್ಿಕರ ಕುರಿತಂತೆ ಬಾಬಾಸಾಹೇಬ್ ಅಂಬೇಡ್ಕರ್ರ ಚಿಂತನೆಗಳೇನು? 1938 ಫ್ರೆಬ್ರವರಿ-12 ರಂದು ಮನ್ಮಾಂಡ್ ಎಂಬಲ್ಲಿ "ಬೃಹತ್ ಭಾರತ ಪ್ರಸ್ಥಭೂಮಿ ಶೋಷಿತ ರೈಲ್ವೆ ನೌಕರರ ಸಮ್ಮೇಳನ" ವನ್ನು ಉದ್ದೇಶಿಸಿ ಮಾತನಾಡುತ್ತಾ ಅಂಬೇಡ್ಕರರು "ಶೋಷಿತರು ಇದುವರೆಗೆ ತಮ್ಮ ಸಾಮಾಜಿಕ ನೋವುಗಳ ಬಗ್ಗೆ  ಹೋರಾಟ ಮಾಡುತ್ತಿದ್ದರು. ತಮ್ಮ ಆಥರ್ಿಕ ಸಂಕಷ್ಟಗಳ ಬಗ್ಗೆ ಇದುವರೆಗೆ ಅವರು ಮಾತಾಡಿರಲೇ ಇಲ್ಲ. ಆದರೆ ಇಂದು ಪ್ರಪ್ರಥಮವಾಗಿ ನೀವು ನಿಮ್ಮ ಆಥರ್ಿಕ ಅಗತ್ಯತೆಗಳ ಬಗ್ಗೆ ಚಚರ್ಿಸಲು ಇಲ್ಲಿ ಸೇರಿದ್ದಿರಿ. ಇದುವರೆಗೆ ನೀವು ಅಸ್ಪೃಶ್ಯರಾಗಿ ಒಟ್ಟಿಗೆ ಸೇರುತ್ತಿದ್ದಿರಿ. ಆದರೆ ಇಂದು ನೀವು ಕಾಮರ್ಿಕರಾಗಿ ಒಟ್ಟಿಗೆ ಸೇರಿದ್ದೀರಿ". ಎಂದು ತಾನೇಕೆ ಇದುವರೆಗೆ ಕಾಮರ್ಿಕರ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಲಿಲ್ಲ ಎಂಬುದಕ್ಕೆ ಪೀಠಿಕೆ ನೀಡುತ್ತಾರೆ. ಈ ಪ್ರಕಾರ ಅಂಬೇಡ್ಕರರ ಮೊದಲ ಹೋರಾಟ ಸಾಮಾಜಿಕ ಅಗತ್ಯತೆಗೆ ಸಂಬಂಧಿಸಿದ್ದಾಗಿತ್ತು ನಂತರವಷ್ಟೆ ಅವರು ಆಥರ್ಿಕತೆಗೆ ಅಥರ್ಾತ್ ಕಾಮರ್ಿಕರ ಬಗ್ಗೆ ತಲೆಕೆಡಿಸಿಕೊಂಡ್ಡದ್ದು ಎಂದು ತಿಳಿದು ಬರುತ್ತದೆ. ಅಂದಹಾಗೆ ಹಾಗೆ ಕಾಮರ್ಿಕರ ಬಗ್ಗೆ ವಿಶೇಷವಾಗಿ ಭಾರತದ ಕಾಮರ್ಿಕರ ಬಗ್ಗೆ ಮತ್ತವರ ಸಮಸ್ಯೆಗಳ ಬಗ್ಗೆ ಮಾತಾಡುತ್ತಾ ಅವರು "ನನ್ನ ದೃಷ್ಟಿಯಲ್ಲಿ ಕಾಮರ್ಿಕರು ವಿಶೇಷವಾಗಿ ಈ ದೇಶದ ಕಾಮರ್ಿಕರು ಇಬ್ಬರು ಶತ್ರುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕು. ಆ ಇಬ್ಬರು ಶತ್ರುಗಳೆಂದರೆ ಒಂದು ಬ್ರಾಹ್ಮಣವಾದ ಮತ್ತೊಂದು ಬಂಡವಾಳವಾದ".
"ಬ್ರಾಹ್ಮಣವಾದ ಹಾಗೆಂದರೆ ಬ್ರಾಹ್ಮಣ ಸಮುದಾಯವಲ್ಲ. ಅವರು ಪಡೆದಿರುವ ಹಕ್ಕು ಅಧಿಕಾರಗಳೂ ಅಲ್ಲ. ನನ್ನ ಪ್ರಕಾರ ಬ್ರಾಹ್ಮಣವಾದವೆಂದರೆ ಸಮಾನತೆ, ಸ್ವಾತಂತ್ರ್ಯ, ಸಹೋದರತೆಯ ನಿರಾಕರಣೆ ಎಂಧರ್ಥ. ಈ ಅರ್ಥದಲಿ ಬ್ರಾಹ್ಮಣವಾದದ ಮೂಲ ಬ್ರಾಹ್ಮಣರೆ ಇರಬಹುದು. ಆದರೆ ಅದು ಅವರಷ್ಟಕ್ಕೆ ಸಿಮೀತವಾಗಿಲ್ಲ. ಸಮಾಜದ ಎಲ್ಲಾ ವರ್ಗಗಳಲ್ಲೂ ಎಲ್ಲಾ ಜಾತಿಯ ಜನರಲ್ಲೂ ಹಾಸುಹೊಕ್ಕಾಗಿದೆ. ಆ ಮೂಲಕ ಅದು ಎಲ್ಲಾ ಜನರ ಅಲೋಚನೆ ಮತ್ತು ಕ್ರಿಯೆಯನ್ನು ನಿಯಂತ್ರಿಸುತ್ತಿರುತ್ತದೆ. ಒಂದಷ್ಟು ಜನರಿಗೆ ಅದು ಉನ್ನತ ಸ್ಥಾನವನ್ನು ಕಲ್ಪಿಸುತ್ತದೆ. ಮತ್ತೊಂದಷ್ಟು ಜನರಿಗೆ ಅದು ಸಮಾನ ಅವಕಾಶಗಳನ್ನು ನಿರಾಕರಿಸುತ್ತದೆ. ಹಾಗೆ  ಬ್ರಾಹ್ನಣವಾದವೆಂಬ ಆ ವಾದ ಸಾಮಾಜಿಕ ಹಕ್ಕುಗಳನ್ನು ನಿರಾಕರಿಸುವುದಷ್ಟಕ್ಕೆ ಸಿಮೀತವಾಗುವುದಿಲ.್ಲ ಬದಲಿಗೆ ನಾಗರೀಕ ಹಕ್ಕುಗಳನ್ನು ನಿರಾಕರಿಸುವತ್ತಲೂ ತನ್ನ ಕಬಂಧಕ ಬಾಹುಗಳನ್ನು ಚಾಚುತ್ತದೆ. ಬೇಕಿದ್ದರೆ ಶೋಷಿತ ಸಮೂದಾಯಕ್ಕೆ ಸೇರಿದ ಕಾಮರ್ಿಕನನ್ನು  ಶೋಷಿತ ಸಮೂದಾಯಕ್ಕೆ ಸೇರಿಲ್ಲದ ಕಾಮರ್ಿಕನ ಜೊತೆ ಹೋಲಿಸಿ. ಅವರಲ್ಲಿ ಯಾರಿಗೆ ಹೆಚ್ಚಿಗೆ ಅವಕಾಶ ದೊರೆಯುತ್ತದೆ? ಅಕಸ್ಮಾತ್ ಹಾಗೆ ಅವಕಾಶ ದೊರೆತ ಶೋಷಿತ ಸಮೂದಾಯದ ಕಾಮರ್ಿಕರಿಗೆ ಸೇವಾ ಭದ್ರತೆ ಹಾಗೂ ಬಡ್ತಿಯಲ್ಲಿ ಸಿಗುವ ಆದ್ಯತೆಯಾದರೂ ಏನು? ಕ್ರೂರ ಸತ್ಯವೆಂದರೆ ಹಲವಾರು ಸಂಧರ್ಭದಲ್ಲಿ ಅವರು ಅಸ್ಪೃಶ್ಯರೆಂಬ ಕಾರಣಕ್ಕಾಗಿಯೆ ಶೋಷಿತ ವರ್ಗಕ್ಕೆ ಸೇರಿದ ಕಾಮರ್ಿಕರುಗಳನ್ನು ಹಲವಾರು ವೃತ್ತಿಗಳಿಂದ ದೂರವಿರಿಸಲಾಗಿದೆ". ಹೀಗೆ ಸಾಗುವ ಅಂಬೇಡ್ಕರ್ರವರ ವಿಚಾರ ಲಹರಿಗಳು ಇದಕ್ಕೆ ಪೂರಕವಾಗಿ ಮುಂಬೈಯ ಹತ್ತಿ ಗಿರಣಿಗಳನ್ನು ಪ್ರಸ್ತಾಪಿಸುತ್ತಾ, ಅವರು ಅಲ್ಲಿ ಅಸ್ಪೃಶ್ಯರನ್ನು ಹೆಚ್ಚು ಸಂಬಳ ಬರುವ ನೇಯ್ಗೆ ವಿಭಾಗದಿಂದ ದೂರ ಇಟ್ಟು, ಕಡಿಮೆ ಸಂಬಳ ಬರುವ ನೂಲುಬಿಚ್ಚುವ ವಿಭಾಗದಲ್ಲಷ್ಟೆ ದುಡಿಸುತ್ತಿರುವುದನ್ನು ಉದಾಹರಿಸುತ್ತಾರೆ. ತನ್ಮೂಲಕ ಬ್ರಾಹ್ಮಣವಾದ ಈ ದೇಶದ ಕಾಮರ್ಿಕರ ವಿಶೇಷವಾಗಿ ಶೋಷಿತ ವರ್ಗಗಳ ಕಾಮರ್ಿಕರ ಮೇಲೆ ಬೀರುತ್ತಿರುವ ಘೋರ ಪರಿಣಾಮವನ್ನು ಅಂಬೇಡ್ಕರರು  ಬಿಚ್ಚಿಡುತ್ತಾರೆ. ಹಾಗೆಯೆ ರೈಲ್ವೆ ಇಲಾಖೆಯಲ್ಲಿ ಶೋಷಿತ ಕಾಮರ್ಿಕರ ಸ್ಥಿತಿಗತಿ ಬಗ್ಗೆ ಬರೆಯುವ ಅಂಬೇಡ್ಕರ್ರವರು ರೈಲ್ವೆಯಲ್ಲಿ ಶೋಷಿತರು ಬಹುತೇಕ ಗ್ಯಾಂಗ್ಮನ್ಗಳಾಗಿರುವುದನ್ನು ಉದಾಹರಿಸುತ್ತಾರೆ ಮತ್ತು ಅವರಿಗೆ ಯಾವುದೇ ಬಡ್ತಿ, ಮೂಲಭೂತ ಸೌಲಭ್ಯಗಳನ್ನು ನಿರಾಕರಿಸುವುದನ್ನು ಸಾಧ್ಯಂತವಾಗಿ ವಿವರಿಸಿಸುತ್ತಾರೆ. ಹಾಗೆಯೇ ರೈಲ್ವೆ ವಕರ್್ಶಾಪ್ನಲ್ಲಿ ಮ್ಯಾಕನಿಕ್, ಮೇಸ್ತ್ರಿಗಳಾಗಿ ನೇಮಿಸಲ್ಪಡದ ದಲಿತರು ಕೇವಲ ಕೂಲಿಗಳಾಗಿ ದುಡಿಯುವುದನ್ನು ಅವರು ವಿಷದವಾಗಿ ತಿಳಿಸುತ್ತಾರೆ. ಅವರ ಮಾತುಗಳಲ್ಲೇ ಹೇಳುವುದಾದರೆ "ಅವನು (ದಲಿತ) ಕೇವಲ ಕೂಲಿ ಕಾಮರ್ಿಕ ಮತ್ತು ಕೂಲಿ ಕಾಮರ್ಿಕನಾಗಿಯೇ ದುಡಿಯುತ್ತಾನೆ"!
ಎಷ್ಟೊಂದು ನಿಜ? ಅಂಬೇಡ್ಕರರರು ಆಗ ಹೇಳಿದ್ದು ಏಕೆಂದರೆ ಪ್ರಸ್ತುತ ರೈಲ್ವೆ, ಆರೋಗ್ಯ, ಶಿಕ್ಷಣ, ನಗರಪಾಲಿಕೆ ಇತ್ಯಾದಿ ಇಲಾಖೆಗಳಲೆಲ್ಲಾ ದಲಿತರು ಹೇರಳವಾಗಿ ಇದ್ದಾರೆ. ಅದು ಎಲ್ಲಿ? ಆ ಇಲಾಖೆಗಳಲ್ಲಿ ಕಸ ಗೂಡಿಸುವ "ಡಿ" ಗ್ರೂಪ್ ನೌಕರನಾಗಿ, ಕಕ್ಕಸ್ಸು ಉಚ್ಚೆ ಕ್ಲೀನ್ ಮಾಡುವ ಪೌರ ಕಾಮರ್ಿಕನಾಗಿ. ರಾತ್ರಿ ಎಲ್ಲಾ ಬ್ಯಾಡರಿ ಹಿಡಿದು ಸೂಕ್ತ ರಕ್ಷಣೆಯಿಲ್ಲದೆ ತಿರುಗಾಡುವ ಕಾವಲುಗಾರನಾಗಿ, ಅರಣ್ಯ ಇಲಾಖೆಯಲ್ಲಿ ಗಾಡರ್್ ಆಗಿ, ಮೇಟಿಯಾಗಿ ದುಡಿಯುತ್ತಿದ್ದಾರೆ. ಮಿಸಲಾತಿ ಎಲ್ಲಿ ಭತರ್ಿಮಾಡುತ್ತಾರೋ ಏನೋ ಗೊತ್ತಿಲ್ಲ. ಆದರೆ ಇಲ್ಲೆಲ್ಲ ಶೇಕಡ 18 ಇರಲಿ ಶೇಕಡ 90 ರಷ್ಟು ಮಿಸಲಾತಿಯನ್ನು ಮೈನ್ಟೈನ್ ಮಾಡಿರುತ್ತಾರೆ ತನ್ಮೂಲಕ ದಲಿತ ಕಾಮರ್ಿಕರ ಸ್ಥಾನ ಯಾವುದು ಎಂದು ತೋರಿಸಿಕೊಡುತ್ತಿದ್ದಾರೆ ! 
ಹಾಗಿದ್ದರೆ ಹೀಗೆ ವಿಗಂಡಿಸುವುದು ಸರಿಯೇ? ಅಂದರೆ ಕಾಮರ್ಿಕರನ್ನು ಮೇಲ್ಜಾತಿಯ ಕಾಮರ್ಿಕರು ಶೋಷಿತ ವರ್ಗದ ಕಾಮರ್ಿಕರು ಎಂದು ಕೆಲವರು ಕೇಳಬಹುದು (ವಿಶೇಷವಾಗಿ ಕಾಮರ್ಿಕ ಮುಖಂಡರು). ಆದರೆ? ಭಾರತದಂತಹ ಜಾತಿ ಕೊಚ್ಚೆಯಲಿ? ಅಂಬೇಡ್ಕರ್ರ ಒಟ್ಟಾರೆ ಸಮಸ್ತ ದಲಿತ ಕಾಮರ್ಿಕ ಚಿಂತಕರ ಈ ತೀಮರ್ಾನ ಸರಿ. ಅಂಬೇಡ್ಕರರ ಮಾತುಗಳನ್ನು ಇಲ್ಲಿ ಪ್ರಸ್ತುತ ಪಡಿಸುವುದಾದರೆ "ತಪ್ಪು ಕಲ್ಪನೆಯಿಂದಾಗಿ ನಮ್ಮನ್ನು ಟೀಕಿಸುವ ಕಾಲರ್್ಮಾಕ್ರ್ಸನ ಸಿದ್ದಾಂತವನ್ನು ಓದಿಕೊಂಡಿರುವ ಕೆಲ ಕಾಮರ್ಿಕ ನಾಯಕರು ಸಮಾಜವನ್ನು ಕೇವಲ ಮಾಲೀಕರ ವರ್ಗ ಮತ್ತು ಕಾಮರ್ಿಕ ವರ್ಗ ಎಂದಷ್ಟೆ ವಿಭಜಿಸುವ ವಾದವನ್ನು ಹೇಳುತ್ತಾರೆ. ಹಾಗೆ ಹೇಳುವ ಅವರು ಭಾರತಕ್ಕೂ ಅದೇ ಸಿದ್ದಾಂತವನ್ನು ಅಂದರೆ ಭಾರತದಲ್ಲೂ ಕೂಡ ಮಾಲೀಕ ವರ್ಗ ಮತ್ತು ಕಾಮರ್ಿಕ  ವರ್ಗಗಳಿವೆ ಎಂದು ಹಿಂದೆ ಮುಂದೆ ಯೋಚಿಸದೆ ಅಭಿಪ್ರಾಯ ಮಂಡಿಸುತ್ತಾರೆ. ಆ ಮೂಲಕ ಬಂಡವಾಳ ವಾದವನ್ನು ಬಗ್ಗುಬಡಿಯಬಹುದೆನ್ನುತ್ತಾರೆ. ನನ್ನ ಪ್ರಕಾರ ನಿಜಕ್ಕೂ ಇದು ತಪ್ಪಿನಿಂದ ಕೂಡಿದ್ದು. ಯಾಕೆಂದರೆ ಮಾಕ್ಸರ್್ ಸಮಾಜವನ್ನು ಮಾಲೀಕರ ವರ್ಗ ಕಾಮರ್ಿಕ ವರ್ಗವೆಂದು ವಿಭಜಿಸಬಹುದೆಂದು ಎಲ್ಲಿಯೂ ಅಟಜಚಿಡಿ ಛಿಣಣ ಆಗಿ ಹೇಳಿಲ್ಲ. ಹಾಗೆಯೇ ಅಂತಹ ಹೇಳಿಕೆ ನಿಜಕ್ಕೂ ಅಸತ್ಯವಾದುದು ಮತ್ತು ಅಪಾಯಕಾರಿಕೂಡ ಹೌದು ಮತ್ತು ಅದು ಅಂದರೆ ಮಾಕ್ಸರ್್ನ ಸಿದ್ದಾಂತ ಯುರೋಪ್ಗಷ್ಟೆ ನಿಜವಾಗಿದ್ದು ಭಾರತಕ್ಕಲ್ಲಾ ಎಂದು ಹೇಳುವುದು ಕೂಡ ಅಷ್ಟೆ ಅಸತ್ಯವಾದುದು. ಯಾಕೆಂದರೆ ಯುರೋಪ್ ಖಂಡಕ್ಕೆ ಸೇರಿದ ಜರ್ಮನಿಯಲ್ಲಿ ಬಡವರು ಮತ್ತು ಶೋಷಿತ ವರ್ಗದವರು ಇರಲಿಲ್ಲವೇ ಹಾಗೆ ಅದೇ ಯುರೋಪ್ ಖಂಡಕ್ಕೆ ಸೇರಿದ ಫ್ರಾನ್ಸ್ನಲ್ಲಿಯೂ ಎಲ್ಲಾವನ್ನು ಕಳೆದು ಕೊಂಡ ಬಡವರು ಕುಶಲಕಮರ್ಿಗಳು ಇರಲಿಲ್ಲವೆ?. ಹಾಗಿದ್ದರೆ ಜರ್ಮನಿಯ ಬಡವರು ಮತ್ತು ಫ್ರಾನ್ಸ್ನ ಬಡವರು ಮಾಕ್ಸರ್್ನ ಸಿದ್ದಾಂತದ ಹಾಗೆ ಯಾಕೆ ಒಂದಾಗಲಿಲ್ಲ? ಸಾಲದಕ್ಕೆ ಅವರು ಇತ್ತಿಚಿಗೆ ಮುಗಿದ ಯುದ್ಧದಲ್ಲಿ (ಒಂದನೇ ಮಹಾಯುದ್ಧ) ಪರಸ್ಪರ ಒಡದಾಡಿದರು, ಬಡಿದಾಡಿದರು, ಶತ್ರುಗಳಂತೆ ಕಾದಾಡಿದರು. ಯಾಕೆ? ಹಾಗಿದ್ದರೆ ಇಲ್ಲಿ ಮಾಕ್ಸರ್್ ಈಚಿಟಣಡಿಜ ಆದನೆಂದರ್ಥವೆ? ಖಂಡಿತ ಇಲ್ಲ. ಏಕೆಂದರೆ ಮಾಕ್ಸರ್್ ಯಾವುದೆ ಸಮಾಜವನ್ನು ಬಡವ ಶ್ರೀಮಂತ ಎಂದು ಅಟಜಚಿಡಿ ಛಿಣಣ ಆಗಿ ಎಲ್ಲಿಯೂ ವಿಭಜಿಸಿಯೇ ಇಲ್ಲ. ವಸ್ತುಸ್ಥಿತಿ ಹೀಗಿರುವಾಗ ಅಂತಹ ಸಿದ್ದಾಂತವನ್ನು ಅಂದರೆ ಬಡವ-ಶ್ರೀಮಂತ, ಮಾಲೀಕ-ಕಾಮರ್ಿಕ ಎಂಬ ಸಿದ್ದಾಂತವನ್ನು ಭಾರತದ ಕಾಮರ್ಿಕ ನಾಯಕರು ಭಾರತಕ್ಕೆ ಂಠಿಠಿಟಥಿ ಮಾಡುವುದು ಅದೆಷ್ಟು ಸರಿ?".
"ಒಂದಂತು ನಿಜ ಹೇಗೆ ಯುರೋಪ್ನಲ್ಲಿ ಬಡವ ಶ್ರೀಮಂತ ಎಂಬ ನೇರ ವಿಭಜನೆ ಸಾಧ್ಯವಿಲ್ಲವೋ ಹಾಗೆ ಭಾರತದಲ್ಲೂ ಕೂಡು ಬಡವ-ಶ್ರೀಮಂತ, ಮಾಲೀಕ-ಕಾಮರ್ಿಕ ಎಂಬ ನೇರ ವಿಭಜನೆ ಸಾದ್ಯವಿಲ್ಲ. ಒಟ್ಟಾರೆ ಎಲ್ಲಾ ಕಾಮರ್ಿಕರು ಒಂದು, ಒಂದು ವರ್ಗವಾಗಿದ್ದಾರೆ ಎಂಬುದು ಒಂದು ಅದರ್ಶವೆ ಹೊರತು ಅದು ಕಾರ್ಯಸಾದುವಲ್ಲ. ಒಟ್ಟಿನಲ್ಲಿ ಅದು ತಪ್ಪಭಿಪ್ರಾಯಕೂಡ ಹೌದು. ಹಾಗಿದ್ದರೆ ನಾವು ಕಾಮರ್ಿಕರನ್ನು ಒಂದೆಡೆ ಸೇರಿಸುವುದು ಹೇಗೆ? ಅವರಲ್ಲಿ ಐಕೈತೆಯನ್ನು ತರುವುದು ಹೇಗೆ? ಒಂದು ವರ್ಗದ ಕಾಮರ್ಿಕರು ಮತ್ತೊಂದು ವರ್ಗದ ಕಾಮರ್ಿಕರನ್ನು ತುಳಿಯುವುದರ ಮೂಲಕ ಅದು ಸಾಧ್ಯವೆ? ಅಥವಾ ಶೋಷಣೆಗೆ ಒಳಗಾದ ಆ ಮತ್ತೊಂದು ವರ್ಗದ ಕಾಮರ್ಿಕರ ಹೋರಾಟವನ್ನು ಹತ್ತಿಕ್ಕೂವುದರ ಮೂಲಕ ಅಂತಹ ಐಕ್ಯಮತ್ಯವನ್ನು ಸಾಧಿಸಬಹುದೆ? ಏಕೆಂದರೆ ಈಗ ಆಗುತ್ತಿರುವುದೆ ಹಾಗೆ. ಶೋಷಣೆಗೆ ಒಳಗಾಗುತ್ತಿರುವ ಆ ಮತ್ತೊಂದು ವರ್ಗದ ಕಾಮರ್ಿಕರು ಸಂಘಟಿತರಾಗದಂತೆ ಅವರ ಕಷ್ಟಗಳಿಗೆ ಹೋರಾಡದಂತೆ ಅವರನ್ನು ತಡೆಯಲಾಗುತ್ತಿದೆ. ಹಾಗಿದ್ದರೆ ಕಾಮರ್ಿಕರ ನಡುವಿನ ಐಕ್ಯತೆಯ ಪ್ರಶ್ನೆ?".
"ನಿಜವಾಗಿ ಹೇಳಬಹುದಾದರೆ ಧರ್ಮ ಮತ್ತು ಜನಾಂಗದ ಆಧಾರದ ಮೇಲೆ ಒಂದು ವರ್ಗದ ಕಾಮರ್ಿಕರು ಮತ್ತೊಂದು ವರ್ಗದ ಕಾಮರ್ಿಕರ ಮೇಲೆ ಏಕೆ ದೌಜನ್ಯ ನಡೆಸುತ್ತಾರೆ? ಆದರ ಹಿಂದಿರುವ ಕಾರಣಗಳೇನು ಎಂಬುದನ್ನು ಪತ್ತೆಹಚ್ಚಬೇಕು. ಮತ್ತು ಆ ಕಾರಣಗಳನ್ನು ತೊಡೆದು ಹಾಕಬೇಕು. ಆಗ ಮಾತ್ರ ಎಲ್ಲಾ ಕಾಮರ್ಿಕರಲ್ಲೂ ಐಕ್ಯಮತ್ಯ ಸಾಧ್ಯ".
"ಹಾಗೇಯೆ ಶೋಷಿತ ವರ್ಗದ ಯಾವುದೇ ಕಾಮರ್ಿಕರುಗಳಿಗೆ ಹಕ್ಕು ಅಧಿಕಾರಗಳನ್ನು ಕೊಡಲು ನಿರಾಕರಿಸುವ ಉನ್ನತ ವರ್ಗದ ಕಾಮರ್ಿಕರರುಗಳು, ಮಾಲೀಕರು ಮತ್ತು ಸಕರ್ಾರದಿಂದ ತಮ್ಮ ಹಕ್ಕು ಅಧಿಕಾರಗಳನ್ನು ನಿರೀಕ್ಷಿಸುವುದು ಅದೆಷ್ಟು ಸಮಂಜಸ? ನೈತಿಕವಾಗಿ ಅದೆಷ್ಟು ಸರಿ? ಇಂತಹದನ್ನು ಆ ಕಾಮರ್ಿಕರುಗಳಿಗೆ ಅರ್ಥಮಾಡಿಸಬೇಕು. ಹಾಗೆಯೇ ಅಂತಹ ಮೇಲ್ವರ್ಗದ ಕಾಮರ್ಿಕರುಗಳಿಗೆ ತಾತ್ವಿಕವಾಗಿ ಸಂಘಟನೆಯ ದೃಷ್ಟಿಯಿಂದ ಸಾಮಾಜಿಕ ತಾರತಮ್ಯ ಮಾಡುವುದನ್ನು ತಪ್ಪು ಎಂದು ಮನವರಿಕೆ ಮಾಡಿಕೊಡಬೇಕು. ಆಗ ಮಾತ್ರ ವಿವಿಧ ಕಾಮರ್ಿಕವರ್ಗಗಳಲ್ಲಿ ಐಕ್ಯಮತ್ಯ ಸಾದ್ಯ".
"ವಿಶಾಲಾರ್ಥದಲ್ಲಿ ಹೇಳುವುದಾದರೆ ಕಾಮರ್ಿಕರ ವಿವಿಧ ಗುಂಪುಗಳು ಒಟ್ಟಾಗಬೇಕಾದರೆ ಅವರ ನಡುವೆ ಇರುವ ಅಸಮಾನತೆಯ ಚೇತನವಾದ ಬ್ರಾಹ್ಮಣವಾದವನ್ನು ಕಿತ್ತೊಗೆಯಬೇಕು. ಬಂಡವಾಳವಾದದ ಬಗ್ಗೆ  ಗಂಟಲು ಹರಿದುಕೊಂಡು ಮಾತಾನಾಡುವ ಕಾಮರ್ಿಕ ನಾಯಕರುಗಳನ್ನು ನೋಡಿದ್ದೇನೆ. ಆದರೆ ಬ್ರಾಹ್ಮಣವಾದದ ಬಗ್ಗೆ ಮಾತನಾಡುವ ಕಾಮರ್ಿಕ ನಾಯಕರನ್ನು ನಾನು ಎಲ್ಲಿಯೂ ನೋಡಿಲ್ಲ. ಒಂದರ್ಥದಲಿ ಬ್ರಾಹ್ಮಣವಾದದ ಬಗೆಗಿನ ಅವರ ಈ ಮೌನ ಅನುಮಾನಾಸ್ಪದವಾದುದು. ಕಾಮರ್ಿಕರ ಸಂಘಟನೆಗಳಿಗೂ ಬ್ರಾಹ್ಮಣವಾದಕ್ಕೂ ಯಾವುದೇ ಸಂಬಂಧವಿಲ್ಲವೆಂಬುದು ಅವರ ಆ ಮೌನದ ಅರ್ಥವೇ? ಅಥವಾ ಕಾಮರ್ಿಕರ ಅಸಂಘಟನೆಗೆ ಬ್ರಾಹ್ಮಣವಾದ ದೊಡ್ಡ ತೊಡಕಾಗಿದೆ ಆದ್ದರಿಂದ ಅದರ ಬಗ್ಗೆ ಮಾತಾನಾಡದೆ ಇರುವುದೆ ಕ್ಷೇಮವೆಂದು  ಮೇಲ್ವರ್ಗದ ಕಾಮರ್ಿಕರು ಸುಮ್ಮನಿದ್ದಾರೆಯೇ? ಅಥವಾ ಕಾಮರ್ಿಕರ ನಾಯಕತ್ವವನ್ನಷ್ಟೆ ವಹಿಸಿಕೊಳ್ಳುವ ಇವರದು ಕೇವಲ ಅವಕಾಶವಾದಿತನವೇ? ಅದೆನೇಇರಲಿ ಕಾಮರ್ಿಕರ ಭಾವನೆಗಳಿಗೆ ನೋವಾದರೂ ಸರಿ ನಾನು ಇದನ್ನು ಪ್ರಶ್ನಿಸದೆ ಬಿಡುವುದಿಲ್ಲ".
"ಕಾಮರ್ಿಕರ ಅಸಂಘಟನೆಗೆ ಬ್ರಾಹ್ಮಣವಾದ ಕಾರಣ ಎನ್ನುವುದಾದರೆ ಅದನ್ನು ಕಿತ್ತೆಸೆಯುವ ಗಂಭೀರ ಪ್ರಯತ್ನ ನಡೆಯಬೇಕು. ಕೇವಲ ಉದಾಸೀನತೆಯಿಂದ  ಅಥವಾ ಮೌನವಾಗಿರುವುದರಿಂದ ಸೋಂಕು ನಿವಾರಣೆಯಾಗುವುದಿಲ್ಲ. ಅದನ್ನು ಗುರುತಿಸಬೇಕು ಮತ್ತು ಬೇರು ಸಮೇತ ಕಿತ್ತೊಗೆಯಬೇಕು. ಆಗ ಮತ್ತು ಅವಾಗ ಮಾತ್ರ ಕಾಮರ್ಿಕರ ಐಕ್ಯತೆಗೆ ಹಾದಿ ಸುಗಮವಾಗುತ್ತದೆ ಇಲ್ಲದಿದ್ದರೆ ಇದು ಖಂಡಿತ ಅಸಾಧ್ಯ". ಕಾಮರ್ಿಕರ ಐಕ್ಯತೆಗೆ ಸಂಬಂಧಿಸಿದಂತೆ ಅಂಬೇಡ್ಕರರ ನೇರ ಮಾತುಗಳಿವು. 
ಮುಂದುವರೆದು ಅವರು ಹೇಳುತ್ತಾರೆ "ಬ್ರಾಹ್ಮಣವಾದ ಒಂದು ಶಕ್ತಿಯಾಗಿ ಇರುವ ತನಕ ಜನರು ಅದಕ್ಕೆ ಅಂಟಿಕೊಂಡು ಇರಲು ಯತ್ನಿಸುತ್ತಾರೆ. ಏಕೆಂದರೆ ಅದು ಒಂದು ವರ್ಗಕ್ಕೆ ಅನುಕೂಲದ ರಾಶಿಯನ್ನು ಮತ್ತೊಂದು ವರ್ಗಕ್ಕೆ ಸಂಕೋಲೆಯ ಬೇಡಿಯನ್ನು ತೊಡಿಸುತ್ತದೆ. ಈ ಕಾರಣದಿಂದ ಸಂಕೋಲೆಯ ಬೇಡಿಯನ್ನು ತೊಡಿಸಲ್ಪಟ್ಟಿರುವ ಜನರು ಸಂಘಟಿತರಾಗಿ ಬ್ರಾಹ್ಮಣವಾದವನ್ನು ಬಗ್ಗೂಬಡಿಯುವುದು ಅವರ ವಿಮೋಚನೆಯ ದೃಷ್ಟಿಯಿಂದ ಅತ್ಯಂತ ಅಗತ್ಯವಾದುದಾಗಿದೆ. ಇಲ್ಲದಿದ್ದರೆ ಎಲ್ಲಿ ಬ್ರಾಹ್ಮಣವಾದ ಹಾಗೆಯೆ ಮುಂದುವರೆಯುತ್ತದೆಯೋ ಎಂಬ ಭಯ ನನಗೆ!" ಎಂದು ಅಂಬೇಡ್ಕರರು ತಮ್ಮ ಅತಂಕವನ್ನು ವ್ಯಕ್ತಪಡಿಸುತ್ತಾರೆ.
ಒಂದಂತು ಸತ್ಯ ಯಾವ ಬ್ರಾಹ್ಮಣವಾದ ಎಂಬ ಒಂದು ಪ್ರಮುಖ ಸಮಸ್ಯೆಯನ್ನು ಈ ದೇಶದ ಕಾಮರ್ಿಕ ನಾಯಕರುಗಳು ಸಮಸ್ಯೆಯೆಂದು ಪರಿಗಣಿಸಿರಲಿಲ್ಲವೋ ಅಂತಹದನ್ನು ಸಮಸ್ಯೆಯೆಂದು ಗುರುತಿಸಿದ್ದು ಬಾಬಾ ಸಾಹೇಬ್ ಅಂಬೇಡರ್. ಹಾಗಿದ್ದರೆ ಅಂಬೇಡ್ಕರ್ರವರು ಬ್ರಾಹ್ಮಣವಾದವನ್ನು ಈ ದೇಶದ ಕಾಮರ್ಿಕರ ಪ್ರಮುಖ ಸಮಸ್ಯೆಯಾಗಿ ಗುರುತಿಸಿದ್ದು ತಪ್ಪೆ? ಖಂಡಿತ ಇಲ್ಲ. ಯಾಕೆಂದರೆ ಯುರೋಪಿನಂತಹ ಅಲ್ಪಸ್ವಲ್ಪ ಸಮಾನತೆ ಇರುವ ಪ್ರದೇಶಕ್ಕೂ ಅನ್ವಯವಾಗದ ಮಾಕ್ಸರ್್ವಾದ ಭಾರತದಂತಹ ಅಸಮ ಸಮಾಜಕ್ಕೆ ಹೇಗೆ ಅನ್ವಯವಾಗುತ್ತದೆ? ಒಬ್ಬ ಹೊಲಗೇರಿಯ ಕಾಮರ್ಿಕ ಒಬ್ಬ ಬ್ರಾಹ್ಮಣಗೇರಿಯ ಕಾಮರ್ಿಕ ಇಬ್ಬರೂ ಒಂದೇ ಹುದ್ದೆಯಲ್ಲಿ ದುಡಿಯುತ್ತಿರಬಹುದು. ಒಂದೇ ಡ್ರೆಸ್ ಹಾಕುತ್ತಿರಬಹುದು. ಒಂದೇ ವೇತನ ಶ್ರೇಣಿ ಪಡೆಯುತ್ತಿರಬಹುದು. ಹಾಗಿದ್ದರೆ ಅವರಿಬ್ಬರು ಒಂದೇ ಎನ್ನಲು ಸಾಧ್ಯವೇ? ಅಂಬೇಡ್ಕರ್ರವರು ಬಿಡಿಸಿ ಬ್ರಾಹ್ಮಣವಾದವೆಂದು ವಿಸ್ತೃತವಾಗಿ ಹೇಳಿದ್ದು ಇದನ್ನೇ! ಹಾಗಿದ್ದರೆ ಇದಕ್ಕೆ ಪರಿಹಾರವಾಗಿ ಅಂಬೇಡ್ಕರ್ ಹೇಳಿದ್ದು? ಶೋಷಿತ ವರ್ಗಕ್ಕೆ ಸೇರಿದ ಕಾಮರ್ಿಕರು ಪ್ರತ್ಯೇಕವಾಗಿ ಸಂಘಟಿತರಾಗಬೇಕಾದ್ದನ್ನು. ಅವರ ಪ್ರಕಾರ ಟ್ರೇಡ್ ಯುನಿಯನ್ ಸಂಘಟನೆಗಳು ಭಾರತಕ್ಕೆ ಅತ್ಯಂತ ಅವಶ್ಯವಾದುದಾಗಿದೆ. ಆದರೆ ಅವು ಭಾರತದಲ್ಲಿ ನಿಂತ ನೀರಿನಂತಾಗಿವೆ ಅಥವಾ ಮುಳುಗುತ್ತಿರುವ ಹಡಗಿನಂತಾಗಿವೆ. ಇದಕ್ಕೆ ಕಾರಣ ಅದರ ನಾಯಕರ ಹೇಡಿತನ, ಸ್ವಾರ್ಥ ಮತ್ತು ತಪ್ಪು ಹಾದಿಯೆಂದು ಅಂಬೇಡ್ಕರ್ರು ದೂರುತ್ತಾರೆ. 
ಮುಂದುವರೆದು ಅವರು ಟ್ರೇಡ್ ಯೂನಿಯನ್ ನಾಯಕರ ಮುಖ್ಯ ಗುರಿ ಕಾಮರ್ಿಕರಲ್ಲಿ ಅತೃಪ್ತಿಯ ಭಾವನೆಯನ್ನು ಸೃಷ್ಟಿಸುವುದು. ಅಂತಹ ಅತೃಪ್ತಿಯಿಂದ ಕ್ರಾಂತಿಯನ್ನು ಬಯಸುವುದು. ಆ ಮೂಲಕ ಕಾಮರ್ಿಕರ ಆಡಳಿತ ಸ್ಥಾಪಿಸುವುದು ಎಂದು ವಿಶ್ಲೇಷಿಸುತ್ತಾರೆ ಅಂಬೇಡ್ಕರ್ರವರು. ಅದಕ್ಕೆ ಪರಿಹಾರವಾಗಿ "ಕಾಮರ್ಿಕ ನಾಯಕರುಗಳು ಕಾಮರ್ಿಕರ ಸಾಮಾಜಿಕ ಮತ್ತು ರಾಜಕೀಯ ಹಕ್ಕುಗಳನ್ನು ಅರಿತುಕೊಳ್ಳಬೇಕು. ತನ್ಮೂಲಕ ಸರ್ವರಿಗೂ ಸಮಾನ ನ್ಯಾಯ ಒದಗಿಸುವಂತಹ ವಿಶಾಲ ಮನೋಭಾವನೆ ಬೆಳೆಸಿಕೊಳ್ಳಬೇಕು" ಎಂದು ಸಲಹೆ ನೀಡುತ್ತಾರೆ. 
ಮುಂದುವರೆದು ಅಂಬೇಡ್ಕರ್ರವರು ಕಾಮರ್ಿಕ ಸಂಘಟನೆಗಳು ರಾಜಕೀಯ ಪ್ರವೇಶಿಸಲೇ ಬೇಕಾದ ಅಗತ್ಯತೆಯನ್ನು ಒತ್ತಿಹೇಳುತ್ತಾರೆ. ಏಕೆಂದರೆ ರಾಜಕೀಯ ಅಧಿಕಾರವಿಲ್ಲದೆ ಯಾವುದೇ ಕಾಮರ್ಿಕ ಸಂಘಟನೆಗಳು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಸಾಧ್ಯವಿಲ್ಲ ಎಂಬ ಸೂಕ್ಷ್ಮತೆಯನ್ನು ಬಿಡಿಸಿ ಹೇಳುತ್ತಾರೆ.
ಹಾಗಿದ್ದರೆ ಕಾಮರ್ಿಕ ಸಂಘಟನೆಗಳು ರಾಜಕೀಯ ಅಧಿಕಾರ ಪಡೆಯಬೇಕು ಎಂದಾಕ್ಷಣ ಅವುಗಳು ರಾಜಕೀಯ ಪಕ್ಷಗಳನ್ನು ಸೇರಲೇ ಬೇಕಲ್ಲವೇ? ಅದಕ್ಕೆ ಅಂಬೇಡ್ಕರ್ರು ಕಾಮರ್ಿಕ ವರ್ಗದ ಹಿತಾಸಕ್ತಿಯನ್ನು ಮತ್ತು ಕಾಮರ್ಿಕ ವರ್ಗದ ಚಿಂತನೆಯನ್ನು ಹೊಂದಿರುವ ರಾಜಕೀಯ ಪಕ್ಷಗಳನ್ನು ಕಾಮರ್ಿಕ ಸಂಘಟನೆಗಳು ಸೇರಬೇಕು ಎಂದು ಸಲಹೆ ನೀಡುತ್ತಾರೆ ತನ್ಮೂಲಕ ಕಾಮರ್ಿಕರ ಎಲ್ಲಾ ಸಮಸ್ಯೆಗಳಿಗೂ ರಾಜಕೀಯ ಅಧಿಕಾರ ಗಳಿಸಿಕೊಳ್ಳುವುದರಲ್ಲಿ ಪರಿಹಾರವಿದೆ ಎನ್ನುತ್ತಾರೆ. 
ಏನೇ ಆಗಲಿ ಪ್ರಸ್ತುತ ದಿನಗಳಲ್ಲಿ ಅಸಂಘಟಿತ ಕೂಲಿ ಕಾಮರ್ಿಕರೇ ಹೆಚ್ಚುತ್ತಿರುವ ಈ ದಿನಗಳಲ್ಲಿ ಕಾಮರ್ಿಕರು ವಿಶೇಷವಾಗಿ ಶೋಷಿತ ವರ್ಗಕ್ಕೆ ಸೇರಿದ ಕಾಮರ್ಿಕರು ಅಂಬೇಡ್ಕರ್ರವರ ವಿಚಾರಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಅವರು ಹೇಳಿದ ರಾಜಕೀಯ ಅಧಿಕಾರವನ್ನು ಪಡೆದುಕೊಳ್ಳಬೇಕಿದೆ. ಹಾಗಿದ್ದರೆ ಕಮ್ಯೂನಿಸ್ಟ್ ಪಕ್ಷಗಳಿವೆಯಲ್ಲವೆ ಎಂದು ಯಾರದರೂ ಪ್ರಶ್ನಿಸಬಹುದು. ಆದರೆ ಭಾರತದ ಕಮ್ಯೂನಿಸ್ಟ್ರಿಗೂ ಕೋಮುವಾದಿಗಳಿಗೂ ಅಂತಹ ವ್ಯತ್ಯಾಸವೆನಿಲ್ಲಾ ಯಾಕೆಂದರೆ ಯಾವ ಬ್ರಾಹ್ಮಣವಾದ ಭಾರತದ ಕಾಮರ್ಿಕರ ಸಮಸ್ಯೆಯೆಂದು ಅಂಬೇಡ್ಕರ್ ಪರಿಭಾವಿಸಿದರೋ ಅದೇ ಬ್ರಾಹ್ಮಣವಾದವನ್ನು ಭಾರತದ ಕಮ್ಯೂನಿಸ್ಟ್ರು ತಮ್ಮದಾಗಿಸಿಕೊಂಡಿದ್ದಾರೆ! ಭಾರತದ ಮಟ್ಟಿಗೆ "ಕೇಸರಿ" ಸ್ವಲ್ಪ ಗಾಢಬಣ್ಣಕ್ಕೆ ತಿರುಗಿ "ಕೆಂಪಾಗಿದೆ" ಎನ್ನಬಹುದು! 
ಈ ನಿಟ್ಟಿನಲ್ಲಿ ಕಾಮರ್ಿಕರು ಇಂದು ಅಂಬೇಡ್ಕರ್ ರವರು ಕಾಮರ್ಿಕರ ಸಮಸ್ಯೆಯೆಂದು ಪರಿಭಾವಿಸಿದ ಬ್ರಾಹ್ಮಣವಾದವನ್ನು ಅರ್ಥಮಾಡಿಕೊಳ್ಳಬೇಕಿದೆ. ಪರಸ್ಪರ ಸಾಮಾಜಿಕ ಹಕ್ಕುಗಳನ್ನು ಗೌರವಿಸುವುದನ್ನು ಕಲಿತು ಆ ಮೂಲಕ ಕಾಮರ್ಿಕ ವರ್ಗದ ಹಿತಾಸಕ್ತಿಯನ್ನು ಕಾಪಾಡ ಬಲ್ಲ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಬೇಕಿದೆ. ತನ್ಮೂಲಕ ಈ ದೇಶದ ನೈಜ ಕಾಮರ್ಿಕ ನಾಯಕ ಬಾಬಾ ಸಾಹೇಬ್ ಅಂಬೇಡ್ಕರ್ರ ಕಾಮರ್ಿಕ ಕನಸುಗಳನ್ನು ನನಸು ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಾಮರ್ಿಕರು ಮುಂದಡಿಇಡುವರೆ ? ಕಾದು ನೋಡಬೇಕಷ್ಟೆ.
       ( ರಘೋತ್ತಮ ಹೊ ಬ )
      ಚಾಮರಾಜನಗರ

Sunday, 24 April 2011

ಅಂಬೇಡ್ಕರ್: ಬುದ್ಧನನ್ನು ಮತ್ತೆ ತಂದ ಬೋಧಿಸತ್ವ



      ಬುದ್ಧ, ಬಹುಶಃ ಜಗತ್ತಿನಲ್ಲಿಯೇ ಶ್ರೇಷ್ಠ ಜ್ಞಾನಿ ಎಂದರೆ ಆತನೇ ಇರಬೇಕು. ಎಲ್ಲಾ ತತ್ವಜ್ಞಾನಿಗಳು ದೇವರ ಸುತ್ತ ಗಿರಕಿ ಹೊಡೆದರೆ  ಬುದ್ಧ ದೇವರ ಬಗ್ಗೆ ಚಕಾರವೆತ್ತದೆ  ಮಾನವನ ಸಮಸ್ಯೆಗಳಿಗೆಲ್ಲ ಆತನ ಮನಸ್ಸೇ ಮೂಲವೆಂದು, ಮನಸ್ಸನ್ನು ಹಿಡಿದಿಟ್ಟುಕೊಳ್ಳುವುದೇ ನಿಜವಾದ ಧರ್ಮವೆಂದು ಪ್ರತಿಪಾದಿಸಿದ ಅಪ್ಪಟ ಜ್ಞಾನಿ. ಅದಕ್ಕೇ ಇರಬೇಕು ಖ್ಯಾತ ವಿಜ್ಞಾನಿ ಆಲ್ಬಟರ್್ ಐನ್ಸ್ಟೀನ್  ಒಂದೆಡೆ  ಈ ಜಗತ್ತಿನಲ್ಲಿ ಯಾವುದಾದರೊಂದು ಧರ್ಮ ವಿಜ್ಞಾನದ ಅಗತ್ಯತೆಗಳನ್ನು ಪೂರೈಸುತ್ತದೆ ಎನ್ನುವುದಾದರೆ ಅದು ಬುದ್ಧ ಧರ್ಮ ಎಂದಿರುವುದು. ಇಂತಹ ವೈಜ್ಞಾನಿಕ ತಳಹದಿಯ ಮನೋವೈಜ್ಞಾನಿಕ ಸಿದ್ಧಾಂತದ ಬುದ್ಧನ ತತ್ವ 2500ವರ್ಷಗಳ ಹಿಂದೆ ಧರ್ಮವಾಗಿ ಮೈದಳೆದದ್ದು ನಿಜಕ್ಕೂ ಆಶ್ಚರ್ಯ ಮತ್ತು wonder of the world  ಎನ್ನಬಹುದು.ಆದರೆ ಅಂತಹ ಆಶ್ಚರ್ಯ ಮತ್ತು ಅದ್ಭುತ ತಾನು ಹುಟ್ಟಿದ ನೆಲದಲ್ಲಿ  ಇದ್ದಕ್ಕಿದ್ದಂತೆ ಮರೆಯಾದದ್ದು? ಬಹುಶಃ ಭಾರತೀಯರ ಪಾಲಿಗೆ ಒದಗಿದ ದೊಡ್ಡ ದುರಂತ ಅದು. ಆದರೆ ಅದನ್ನು ದುರಂತವೆಂದು  ಮತ್ತು ಅಂತಹ ದುರಂತದಿಂದ ಯಾರಿಗೂ ಪ್ರಯೋಜನವಿಲ್ಲವೆಂದು ವ್ಯಕ್ತಿಯೊಬ್ಬರು, ಕ್ಷಮಿಸಿ ಶಕ್ತಿಯೊಂದು ಹಾಗೆ ಕುಳಿತ್ತಿದ್ದರೆ? ಅದರ ಪುನರುತ್ಥಾನಕ್ಕಾಗಿ ಶ್ರಮಿಸದೇ ಇದ್ದಿದ್ದರೆ? ಬಹುಶಃ ನಾವು ಅದರ ಬಗ್ಗೆ ಬರೆಯುವ, ಅದರ ಬಗ್ಗೆ ತಿಳಿದುಕೊಳ್ಳುವ ಸಣ್ಣ ಅವಕಾಶವೂ ನಮಗೆ ಸಿಗುತ್ತಿರಲಿಲ್ಲವೋ ಏನೋ? ಆದರೆ ಶ್ರೇಷ್ಠ ಬದುಕು ಸತ್ತುಹೋಗಬಾರದು  ಹಾಗೆಯೇ ಈಗ ಜಾರಿಯಲ್ಲಿರುವ ಕನಿಷ್ಠಕ್ಕೆ ಪ್ರತ್ಯುತ್ತರವಾದ ಶ್ರೇಷ್ಠವಾದ ಆ ಬುದ್ಧ ತತ್ವ ನಶಿಸಿಹೋಗಬಾರದು ಎಂದು  ಬುದ್ಧನನ್ನು ಮತ್ತೆ ಭಾರತಕ್ಕೆ ತಂದ ವ್ಯಕ್ತಿ ಅಥರ್ಾತ್ ಶಕ್ತಿ, ಸರಳವಾಗಿ ಹೇಳುವುದಾದರೆ ಬೋಧಿಸತ್ವ ಬೇರಾರೂ ಅಲ್ಲ. ಬಾಬಾಸಾಹೇಬ್ ಅಂಬೇಡ್ಕರ್ . ನಿನಗೆ ನೀನೆ ಬೆಳಕು ಎಂದವನ್ನು ಬೆಳಕಿಗೆ ತಂದ ಬುದ್ಧ ಸಾಹೇಬ!
    ಹಾಗಿದ್ದರೆ ಬಾಬಾಸಾಹೇಬರೇಕೆ? ಬುದ್ಧನನ್ನು ಬೆಳಕಿಗೆ ತಂದರು? ಸುಮ್ಮನೆ ಹಿಂದೂ ಧರ್ಮವನ್ನು ಬೈದು, ಅದರ ಕೊಳಕು ಜಾತಿ ವ್ಯವಸ್ಥೆಯನ್ನು ಟೀಕಿಸಿ  ಸುಮ್ಮನಿರಬಹುದಿತ್ತಲ್ಲ? ಉತ್ತರ ಸ್ಪಷ್ಟ, ಸಾಧಾರಣ ನಾಯಕರು ಮಾತ್ರ ಹಾಗೆ ಇರುತ್ತಾರೆ . ಅವರು  ಬರೀ ಸಮಸ್ಯೆಗಳನ್ನು ಕೆದಕಿ ಅದರ ಪರಿಸ್ಥಿತಿಯ ಲಾಭವನ್ನಷ್ಟೆ ಬಯಸಿ ತಾವು ಒಂದು ಪದವಿಯನ್ನೊ ಅಧಿಕಾರವನ್ನೊ ಪಡೆದು ಸುನಮ್ಮನಾಗುತ್ತಾರೆ. ಆದರೆ ಅಂಬೇಡ್ಕರ್? ಸಮಚಿತ್ತದ ದೂರದಶರ್ಿ ವ್ಯಕ್ತಿತ್ವದ ನಾಯಕ. ತಾನು ಏನು ಮಾಡುತ್ತಿದ್ದೇನೆ ಅದರ ಪರಿಣಾಮ  ಏನಾಗಬಹುದು ಎಂಬುದನ್ನು ಸುಮಾರು 10000 ವರ್ಷಗಳ ಮುಂದಕ್ಕೆ  ಯೋಚಿಸಿದ ಅಸಾಧಾರಣ  ನಾಯಕ. ಬಹುಶಃ ಅಂತಹವರು ಯುಗಕ್ಕೆ ಒಬ್ಬರು ಇಬ್ಬರು ಜನಿಸಬಹುದಷ್ಟೆ. ಯಾಕೆಂದರೆ  ಅಂಬೇಡ್ಕರ್ ಬರೀ ಸಮಸ್ಯೆಗಳನ್ನಷ್ಟೆ ಕೆದಕಲಿಲ್ಲ. ಬದಲಿಗೆ ಅವುಗಳಿಗೆ  ಸೂಕ್ತ ಪರಿಹಾರವನ್ನು ಸಹ ತೆರೆದಿಟ್ಟು ಹೋದರು. ಹಿಂದೂ ಧರ್ಮದ ಅಂತಹ ಸಮಸ್ಯೆಗೆ ಪರಿಹಾರವಾಗಿ ಅವರು ತೆರೆದದ್ದೆ ಬುದ್ಧ ಮತ್ತು ಆತನ ಧರ್ಮದ ಹೆಬ್ಬಾಗಿಲು.
   ಹಾಗಿದ್ದರೆ ಅವರೇನು ಅದನ್ನು ಧಿಡೀರನೇ ತೆರೆದರೇ ? ಅಥವಾ  ಯಾವುದಾದರೂ ಒತ್ತಡಕ್ಕೆ ಸಿಲುಕಿ ಅದಕ್ಕೆ ಪುನರ್ಜನ್ಮ ನೀಡಿದರೇ? ಬಹುಶಃ ಇದಕ್ಕೆ ಉತ್ತರ ಅಂಬೇಡ್ಕರರ ಬಾಲ್ಯದಲ್ಲಿಯೇ ಸಿಗುತ್ತದೆ. ಅಂಬೇಡ್ಕರರು ಮೆಟ್ರಿಕುಲೇಷನ್ ಪಾಸಾದಾಗ ಅಭಿನಂದನಾರ್ಹವಾಗಿ ಅವರಿಗೆ ಬಂದದ್ದು ಗೌತಮ ಬುದ್ಧನ ಜೀವನ ಚರಿತ್ರೆಯ ಪುಸ್ತಕ. ತಾವೇ ಬರೆದಿದ್ದ ಆ ಪುಸ್ತಕವನ್ನು ಅವರಿಗೆ ನೀಡಿದ್ದು ಖ್ಯಾತ ಮರಾಠಿ ಲೇಖಕ ಮತ್ತು ಚಿಂತಕ ಕೃಷ್ಣ ಅಜರ್ುನ ಕೆಲೂಸ್ಕರ್ರವರು . ಇದು ನಡೆದದ್ದು 1907 ರಲ್ಲಿ. ಅಂದರೆ ಅಂಬೇಡ್ಕರ್ರವರಿಗೆ ಆಗ ಕೇವಲ 16 ವರ್ಷ.
    ಹಿಂದೂ ಎಂಬ ಮರುಭುಮಿ
ಯಲ್ಲಿ ಸಮಾನತೆ ಎಂಬ ನೀರು ಸಿಗದೆ ತಹತಹಿಸುತ್ತಿದ್ದ ಸಮುದಾಯವೊಂದಕ್ಕೆ ಅಂಬೇಡ್ಕರ್ರವರಿಗೆ ಸಿಕ್ಕ ಆ ಬುದ್ಧನ ಜೀವನ ಚರಿತ್ರೆ ಕೃತಿ ಹೇಗೆ ಕಂಡಿರಬೇಕು? ಮರುಭೂಮಿಯಲ್ಲಿ ಸಿಕ್ಕ ಒಯಸಿಸ್ನ ಹಾಗೆ ತಾನೆ? ಅಂಬೇಡ್ಕರ್ ಬುದ್ಧ ಧರ್ಮ ಎಂಬ ಆ ಒಯಸಿಸ್ಅನ್ನು ಅಪ್ಪಿಕೊಂಡರು. ಫಲಭರಿತ ಈ ಭರತ ಭೂಮಿ ಮರುಭೂಮಿ ಆದದ್ದೇಕೆ? ಎಂಬ ನಿಟ್ಟಿನಲಿ ಚಿಂತಿಸುತ್ತಾ ಮುನ್ನುಗ್ಗಿದ್ದರು.ಅಂತಹ ಆ ಮುನ್ನುಗ್ಗುವಿಕೆಯಲ್ಲಿ ಅವರು ಸಿಂಹದಂತೆ ಗಜರ್ಿಸಿದ್ದು 1935 ರಲ್ಲಿ ನಾಸಿಕ್ನ ಈಯೋಲಾ ಎಂಬಲ್ಲಿ,ನಾನು ಹಿಂದೂವಾಗಿ ಹುಟ್ಟಿರಬಹುದು ಅದು ನನ್ನ ಕೈಲಿರಲಿಲ್ಲ., ಆದರೆ ಹಿಂದೂವಾಗಿ ಖಂಡಿತ ಸಾಯುವುದಿಲ್ಲ ಎಂದು ಗುಡುಗಿದರು. ಬಹುಶಃ ಅಂಬೇಡ್ಕರರ ಆ ಗುಡುಗು 'ಮರುಭೂಮಿಯ ಜನರಿಗೆ' ದೀಪಾವಳಿ ಪಟಾಕಿ ಸದ್ದಿನ ಹಾಗೆ ಕೇಳಿಸಿರಬೇಕು! ಆದರೆ ಅದು ಪಟಾಕಿಯಲ್ಲ ಹೈಡ್ರೋಜನ್ ಬಾಂಬ್ ಎಂದು ಗೊತ್ತಾದದ್ದು 1956 ಅಕ್ಟೋಬರ್ 14 ರಂದು. ಏಕೆಂದರೆ ಅಂದು ಅಂಬೇಡ್ಕರರು ತಮ್ಮ 10 ಲಕ್ಷ ಅನುಯಾಯಿಗಳೊಂದಿಗೆ ನಾಗಪುರದ ದೀಕ್ಷಾಭೂಮಿಯಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರು . ತನ್ಮೂಲಕ  ಬುದ್ಧನ ಧರ್ಮದ ಪುನರುತ್ಥಾನಕ್ಕೆ ನಾಂದಿ ಹಾಡಿದರು.
    ಹಾಗಿದ್ದರೆ ಅಂಬೇಡ್ಕರರು ಬೌದ್ಧ ಧರ್ಮವನ್ನು ಸುಮ್ಮನೆ ಸ್ವೀಕರಿಸಿದರೇ? blind ಆಗಿ  follow ಮಾಡಿದರೆ? ಖಂಡಿತ ಇಲ್ಲ. ಹಾಗೆ ಹೇಳುವುದಾದರೆ ಬೇರೆಯವರು ಬೇಕಾದರೆ ಹಾಗೆ ಮಾಡಬಹುದಿತ್ತೋ ಏನೋ? ಆದರೆ ಅಪ್ಪಟ ಶ್ರೇಷ್ಠ ಜ್ಞಾನಿ, ಹೋರಾಟಗಾರ ಅಂಬೇಡ್ಕರ್ರವರು ಹಾಗೆ ಮಾಡಲಿಲ್ಲ. ಯಾಕೆಂದರೆ ಬೌದ್ಧ ಧರ್ಮವನ್ನು ಸ್ವೀಕರಿಸಬೇಕಾದ ಅವರ ಆ ನಿಧರ್ಾರದಲ್ಲಿ ಮುಖ್ಯವಾಗಿ ಅಡಗಿದ್ದು ದೇಶಪ್ರೇಮ, ತನ್ನಸಮುದಾಯದ ನೈಜ ಇತಿಹಾಸ ಮತ್ತು ಹಿತಚಿಂತನೆ, ಹಾಗೆ ಬುದ್ಧ ಎಂಬ ಮಹಾನ್ ಸಾಮಾಜಿಕ ವಿಜ್ಞಾನಿಯೆಡೆಗಿನ ಪ್ರೀತಿ.
    ಅಂದಹಾಗೆ ಅಂಬೇಡ್ಕರರ ಈ ನಿಧರ್ಾರದಲ್ಲಿ ದೇಶಪ್ರೇಮದ ಪಾತ್ರ ಎಂತಹದ್ದು? ಸರಳವಾಗಿ ಹೇಳುವುದಾದರೆ  ಅಂಬೇಡ್ಕರರು ಹಿಂದೂವಾಗಿ ಸಾಯಲಾರೆ ಎಂದಾಕ್ಷಣ ಮುಸ್ಲೀಮರು, ಕ್ರೈಸ್ತರು ಇತ್ಯಾದಿ ಧರ್ಮಗಳವರು ಅಂಬೇಡ್ಕರರನ್ನು ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳಲು ಮುಂದೆ ಬಂದರು. ಆದರೆ ದೇಶ ಪ್ರೇಮಕ್ಕೆ ಕಟಿಬದ್ಧರಾದ  ಅಂಬೇಡ್ಕರ್ರವರು ಸೇರುವುದಾದರೆ ನಮ್ಮ ದೇಶದಲ್ಲೇ ಹುಟ್ಟಿ ಬೆಳೆದ  ಧರ್ಮವನ್ನಷ್ಟೆ ಸೇರುವುದು  ಎಂದು ನಿರ್ಧರಿಸಿ ಬೌದ್ಧ ಧರ್ಮದತ್ತ ಒಲವು ತೋರಿದರು. ತನ್ಮೂಲಕ ದೇಶಪ್ರೇಮ ಎಂದು ಬಡಬಡಿಸುವವರಿಗೆ ನಿಜವಾದ ದೇಶಪ್ರೇಮದ ಸಣ್ಣ ಪಾಠವನ್ನು ಸಹ ಹೇಳಿಕೊಟ್ಟರು.
    ಹಾಗೆಯೇ ತನ್ನ ಸಮುದಾಯದ ನೈಜ ಇತಿಹಾಸ? ಹಾಗೆಂದರೆ? ಏಕೆಂದರೆ ಅಂಬೇಡ್ಕರರು ಒಂದೆಡೆ ಭಾರತದ ಇತಿಹಾಸ ನಿಜವಾಗಿಯೂ ಬೌದ್ಧ ಧರ್ಮಕ್ಕೂ ಬ್ರಾಹ್ಮಣ ಧರ್ಮಕ್ಕೂ ನಡೆದ ನಿರಂತರ ಸಂಘರ್ಷವಲ್ಲದೇ ಬೇರೇನಲ್ಲ ಎನ್ನುತ್ತಾರೆ. ಈ ನಿಟ್ಟಿನಲ್ಲಿ ಹೇಳುವುದಾದರೆ  ಅಂಬೇಡ್ಕರರ ಈ ಬೌದ್ಧ ಧರ್ಮದ ನಡೆಯ ಹಿಂದೆ ನಿಜಕ್ಕೂ ಇದ್ದದ್ದೂ ಅಂತಹ ಆ ಒರಿಜಿನಲ್ ಇತಿಹಾಸವೇ ಹೊರತು ಬೇರೇನಲ್ಲ. ಅಂತಹ ಭವ್ಯ ಇತಿಹಾಸವನ್ನು ಅಂಬೇಡ್ಕರರು ಹೀಗೆ ದಾಖಲಿಸುತ್ತಾರೆ ಭಾರತದ ಇತಿಹಾಸ ಗೊತ್ತಿರುವವರಿಗೆ ತಿಳಿದುಬರುವುದೇನೆಂದರೆ  ಈ ದೇಶದಲ್ಲಿ ಬೌದ್ಧ ಧರ್ಮವನ್ನು ಪ್ರಚುರ ಪಡಿಸಿದವರು ನಾಗ ಜನಾಂಗದವರು. ನಾಗಜನರು ಆರ್ಯರ ಪ್ರಭಲ ಶತೃಗಳಾಗಿದ್ದರು.  ಆರ್ಯರು ಮತ್ತು ನಾಗಜನರ ನಡುವೆ ಘೋರ ಯುದ್ಧಗಳು ನಡೆದಿವೆ.  ಆರ್ಯರು ನಾಗಜನರನ್ನು ಜೀವಂತ ಸುಟ್ಟಿರುವ ಅನೇಕ ಐತಿಹ್ಯಗಳು ಪುರಾಣದಲ್ಲಿವೆ. ಆದರೆ ಅಗಸ್ತ್ಯ ಮುನಿಯು  ಆರ್ಯರು ಮತ್ತು ನಾಗರ ಅಂತಹ ಘೋರ ಕದನದ ನಡುವೆ  ಒಬ್ಬ ನಾಗನನ್ನು ರಕ್ಷಿಸಿದರು. ಅವನ ವಾರಸುದಾರರೇ ನಾವು( ಅಂದರೆ ದಲಿತರು). ಆರ್ಯರ ಈ ದಬ್ಬಾಳಿಕೆಯಿಂದ  ನೊಂದಿದ್ದ ನಾಗ ಜನರು  ಮುಂದೊಂದು ದಿನ ತಮ್ಮನ್ನು ಈ ನೋವಿನಿಂದ ಮೇಲೆತ್ತುವ  ನಾಯಕನೊಬ್ಬ ಹುಟ್ಟುತ್ತಾನೆಂದು ನಂಬಿದ್ದರು. ಆ ನಾಯಕನೇ ಗೌತಮ ಬುದ್ಧ. ಬುದ್ಧನ ಕಾಲದಲ್ಲಿ  ನಾಗಜನರು ಅವನ ತತ್ವಗಳನ್ನು ಏಷ್ಯಾಖಂಡದಾಂದ್ಯಂತ ಪ್ರಚುರಪಡಿಸಿದರು. ಅಂತಹ ಶ್ರೇಷ್ಠ ನಾಗ ಜನಾಂಗಕ್ಕೆ ಸೇರಿದವರು ನಾವು ಎಂದು ಅಂಬೇಡ್ಕರರು  ತನ್ನ ಸಮುದಾಯದ ಭವ್ಯ ಇತಿಹಾಸವನ್ನು  ಬುದ್ಧನ ಜೊತೆ ಲಿಂಕ್ ಮಾಡುತ್ತಾರೆ.  ತನ್ಮೂಲಕ ತಾನೇಕೆ? ಜೊತೆಗೆ ತನ್ನ ಸಮುದಾಯವೇಕೆ ಬೌದ್ಧ ಧರ್ಮ ಸ್ವೀಕರಿಸಬೇಕು? ಎಂದು ಇಡೀ ಜಗತ್ತಿಗೆ  ಐತಿಹಾಸಿಕ ಸಾಕ್ಷಿಗಳೊಂದಿಗೆ ಸಾರಿಹೇಳುತ್ತರೆ. ಈಗ ಹೇಳಿ ಅಂಬೇಡ್ಕರ್ ಕಾಟಾಚಾರಕ್ಕೆ ಬೌದ್ಧ ಧನರ್ಮ ಸ್ವೀಕರಿಸಿದರೆ? ಕಾಟಾಚಾರ? ಅಂಬೇಡ್ಕರರ ಡಿಕ್ಷನರಿಯಲ್ಲಿ ಆ ಪದಕ್ಕೆ ಅರ್ಥವೇ ಇಲ್ಲವೇನೋ? ಯಾಕೆಂದರೆ ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು  ಅಂಬೇಡ್ಕರರು ಅಳೆದು ಸುರಿದು ಬದುಕಿದ್ದಾರೆ .ಹೆಜ್ಜೆಹೆಜ್ಜೆಗೂ  ತಮ್ಮ ಜೀವನವನ್ನು ತ್ಯಾಗ ಮಾಡಿ ತನ್ನ ಸಮುದಾಯದ ಏಳ್ಗೆಗಾಗಿ  ಒಟ್ಟಾರೆ ಮಾನವಪರ ಹಕ್ಕುಗಳಿಗಾಗಿ  ದುಡಿದಿದ್ದಾರೆ.ಅಂತಹ ಹುಟ್ಟು ಹೋರಾಟಗಾರ  ತನ್ನ ನಿರಂತರ ಹೋರಾಟದ ನಡುವೆಯೂ ಧರ್ಮವೊಂದನ್ನು ಪುನರುಜ್ಜೀವನಗೊಳಿಸಿದ್ದಿದೆಯಲ್ಲ? ಅದು ಟಠಿಟಥಿ ಣಠಿಜಡಿಛ! ಹಾಗಂದರೂ ಕೂಡ ತಪ್ಪಾಗುತ್ತದೆ. ಏಕೆಂದರೆ ಅಂಬೇಡ್ಕರರ ಸಾಧನೆಯನ್ನು ವಣರ್ಿಸಲು ಪದಗಳೇ ಸಾಲದು.
      ಕಡೆಯದಾಗಿ ಹೇಳುವುದಾದರೆ ಅಂಬೇಡ್ಕರರು ಬೌದ್ಧ ಧರ್ಮದತ್ತ  ಆಕಷರ್ಿತರಾದದ್ದು ಬುದ್ಧ ಮತ್ತು ಆತನ ಧರ್ಮದ  ಶ್ರೇಷ್ಠತನದಿಂದಾಗಿ .ಇಂತಹ ಶ್ರೇಷ್ಠತನವನ್ನು ಹೀಗಳೆದವರನ್ನು ಕೂಡ ಅವರು ಸುಮ್ಮನೆ ಬಿಟ್ಟಿಲ್ಲ.  ಏಕೆಂದರೆ ಮೇ 24, 1956 ರಂದು ಬುದ್ಧನ ಅಹಿಂಸಾ ತತ್ವದ ಬಗ್ಗೆ ಟೀಕೆ ಮಾಡಿದ್ದ ವೀರ್ ಸಾವರ್ಕರ್ ಬರಹಗಳಿಗೆ ಉಗ್ರವಾಗಿ ಉತ್ತರಿಸುತ್ತಾ ಅಂಬೇಡ್ಕರ್ರವರು ಹಿಂದೂ ಧರ್ಮ ದೇವರನ್ನು ನಂಬುತ್ತದೆ, ಆದರೆ ಬೌದ್ಧ ಧರ್ಮ ನಂಬುವುದಿಲ್ಲ.ಹಿಂದೂ ಧರ್ಮ ಅತ್ಮವನ್ನು ನಂಬುತ್ತದೆ ಆದರೆ ಬೌದ್ಧ ಧರ್ಮದ ಪ್ರಕಾರ ಆತ್ಮವೆಂಬುದೇ ಇಲ್ಲ! ಹಿಂದೂ ಧರ್ಮ ಚಾತುರ್ವಣ್ರ್ಯ ಮತ್ತು ಜಾತಿಪದ್ಧತಿಯನ್ನು ನಂಬುತ್ತದೆ ಆದರೆ ಬೌದ್ಧ ಧರ್ಮದಲ್ಲಿ ಚಾತುರ್ವಣ್ರ್ಯ ಮತ್ತು ಜಾತಿ ಪದ್ಧತಿಗೆ ಅವಕಾಶವೇ ಇಲ್ಲ ಆದ್ದರಿಂದ ತಾನು ಮತ್ತು ತನ್ನ ಸಮುದಾಯ ಬೌದ್ಧ ಧರ್ಮವನ್ನು ಸ್ವೀಕರಿಸುವುದಾಗಿ ಅಂಬೇಡ್ಕರ್ರವರು ಸಾವರ್ಕರ್ರಂತಹ ಹಿಂದುತ್ವವಾದಿಗಳಿಗೆ ಚುಚ್ಚಿ ಹೇಳುತ್ತಾರೆ ಮತ್ತು ಹಾಗೆ ಹೇಳುವ ಭರದಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸುವ ತಾನು  ಮತ್ತು ತನ್ನವರನ್ನು ಹಳ್ಳಕ್ಕೆ ಬೀಳುತ್ತಿದ್ದೀರಿ ಎಂದ ಹಿಂದುತ್ವವಾದಿಗಳಿಗೆ ಅಷ್ಟೆ ಸ್ಪೀಡಾಗಿ ಉತ್ತರಿಸಿದ ಅಂಬೇಡ್ಕರ್ರವರು ನನ್ನನ್ನು ಟೀಕಿಸುವವರು ನನ್ನನ್ನು ಒಂಟಿಯಾಗಿರಲು ಬಿಡಿ. ನಾನು ಮತ್ತು  ನನ್ನ ಜನ  ಹಳ್ಳಕ್ಕೆ ಬಿದ್ದರೂ ಪರವಾಗಿಲ್ಲ ಏಕೆಂದರೆ ಹಾಗೆ ಹಳ್ಳಕ್ಕೆ ಬೀಳುವ ಬಿದ್ದು ಏಳುವ ಸ್ವಾತಂತ್ರ್ಯ ನಮಗೆ ಇದ್ದೆ ಇದೆ! ಬೇರೆಯವರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮುಂದುವರಿದು ಅವರು , ಹಾಗೆ ಹೇಳುವುದಾದರೆ ನನ್ನ ಜನರು ಕುರಿಗಳಿದ್ದ ಹಾಗೆ. ನಾನು ಅವರನ್ನು ಕಾಯುವ ಕುರುಬ. ಅವರಿಗೆ ನನಗಿಂತ ಶ್ರೇಷ್ಠ ಮಾರ್ಗದರ್ಶಕ ಸಿಗುತ್ತಾನೆಂದು ಖಂಡಿತವಾಗಿಯೂ ನನಗನಿಸುತ್ತಿಲ್ಲ. ಆ ಕಾರಣಕ್ಕಾಗಿ ನನ್ನನ್ನು ಅವರು ಚಾಚೂ ತಪ್ಪದೇ ಪಾಲಿಸುತ್ತಾರೆ. ಹಾಗೆ ಪಾಲಿಸುವುದರ ಮೂಲಕ ಅವರು ಶ್ರೇಷ್ಠ ಜ್ಞಾನವನ್ನು ಕೂಡ ಪಡೆಯುತ್ತಾರೆ ಎಂದು ಅಂಬೇಡ್ಕರ್ರವರು ಹಿಂದುತ್ವವಾದಿಗಳಿಗೆ ಚುರುಕು ಮುಟ್ಟಿಸುತ್ತಾರೆ.
      ಒಂದಂತೂ ನಿಜ ಕ್ರಿ.ಪೂ.543ರಿಂದ ಕ್ರಿ.ಶ. 1400 ರವರೆಗೆ  ಈ ಭಾರತದಲ್ಲಿ ರಂಗು ರಂಗಾಗಿ ಮಿನುಗಿದ ಬುದ್ಧ ಧರ್ಮದ ಅವನತಿ ಹೇಗಾಯಿತೋ ಖಂಡಿತ ಗೊತ್ತಿಲ್ಲ.ಅಕಸ್ಮಾತ್ ಗೊತ್ತಿದ್ದರೂ ಅದನ್ನು ಪ್ರಸ್ತುತ ಪಡಿಸುವ ಅಗತ್ಯ ಇಲ್ಲಿ ಖಂಡಿತ ಕಾಣುತ್ತಿಲ್ಲ. ಆದರೆ ಅದಕ್ಕೆ ಜೀವಕ್ಕೆ ಜೀವಕೊಟ್ಟು, ಉಸಿರಿಗೆ ಉಸಿರು ಬೆಸೆದು ಕಾಪಾಡಿದ್ದು? ಪುನರ್ಜನ್ಮ ನೀಡಿದ್ದು? ಅಕ್ಷರಶಃ ನಿಜ ಅದು ಡಾ. ಅಂಬೇಡ್ಕರ್ರಲ್ಲದೇ ಬೇರಾರೂ ಅಲ್ಲ.ಸರಳವಾಗಿ ಹೇಳುವುದಾದರೆ ಕನ್ನಡದಲ್ಲಿ ಚಲನ ಚಿತ್ರವೊಂದಿದೆ ಭೂಮಿಗೆ ಬಂದ ಭಗವಂತ ಅಂತ. ಆ ಚಿತ್ರದಲ್ಲಿ ಭಗವಂತ ಭೂಮಿಗೆ ಬಂದನೋ? ಏನೋ? ಗೊತ್ತಿಲ್ಲ! ಆದರೆ ಅಂಬೇಡ್ಕರರಂತೂ ಭರತ ಭೂಮಿಗೆ ಬುದ್ಧನನ್ನು ಖಂಡಿತ ವಾಪಸ್ ತಂದರು.ಅವನ ಬೆಳಕಿನ ಹಣತೆಯನ್ನು ಈ ದೇಶವಾಸಿಗಳ ಬೆಚ್ಚನೆಯ ಹೃದಯದಲ್ಲಿ ಮೌನವಾಗಿ ಹಚ್ಚಿದರು.ತನ್ಮೂಲಕ ಬೋಧಿಸತ್ವ ಎಂಬ ತಮ್ಮ ಅನ್ವರ್ಥಕ್ಕೆ ಸಾಕ್ಷಿಯಾಗಿ ನಿಂತರು.
  ಯಾರು ಏನೆ ಹೇಳಲಿ ಅಂಬೇಡ್ಕರರು ಅಂದು ಹಚ್ಚಿದ ಹಣತೆ  ಇಂದು ದೇಶದ ಕೋಟ್ಯಾಂತರ ದಲಿತರ ಹೃದಯಗಳಲ್ಲಿ ಹಾಗೇ ಉರಿಯುತ್ತಿದೆ. ಎಲ್ಲಿ ಅಂಬೇಡ್ಕರರಿರುತ್ತಾರೋ ಅಲ್ಲಿ ಬುದ್ಧ ಎಂಬಂತಾಗಿದೆ! ಔಪಚಾರಿಕವಾಗಿ ಸ್ವೀಕರಿಸುವುದಷ್ಟೆ ಧರ್ಮವಲ್ಲ ಅನೌಪಚಾರಿಕವಾಗಿ ಹಾಗೆ ಒಪ್ಪಿಕೊಳ್ಳುವದೂ ಕೂಡ ಧರ್ಮವೇ! ಈ ನಿಟ್ಟಿನಲಿ ಅಂಬೇಡ್ಕರರು ಅಂದು ಸ್ಥಾಪಿಸಿದ ಅನೌಪಚಾರಿಕ ಬೌದ್ಧ ಧರ್ಮ ಮತ್ತಷ್ಟು ಬೆಳೆಯಲಿ ಬುದ್ಧ ನಮ್ಮೆಲ್ಲರೆದೆಯಲ್ಲಿ ನೆಲೆಗೊಳ್ಳಲಿ ಎಂಬುದಷ್ಟೆ ಸಧ್ಯದ ಕಳಕಳಿ.
      ರಘೋತ್ತಮ ಹೊ.ಬ
      ಚಾಮರಾಜನಗರ
       
     

ಅಂಬೇಡ್ಕರರಿಗೇ ವರ್ಗರಹಿತ ವಸತಿ ಸಿಗಲಿಲ್ಲ!


            ಬಹುಶಃ ಅದು 1917 ರ ಸಮಯ ಬಾಬಾಸಾಹೇಬ್ ಅಂಬೇಡ್ಕರರು ಲಂಡನ್ನಿನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ  ಡಿ.ಎಸ್.ಸಿ(ಡಾಕ್ಟರ್ ಆಫ್ ಸೈನ್ಸ್) ಪದವಿ ಪಡೆದು ಹಿಂದುರಿಗಿದ ವರ್ಷ. ಮೊದಲೆ ಆದ ಒಪ್ಪಂದದ ಹಾಗೆ ಅವರು ಬರೋಡ ಮಹಾರಾಜರ  ಆಸ್ಥಾನದಲ್ಲಿ ಅಧಿಕಾರಿಯಾಗಿ ಸೇವೆಗೆ ಸೇರಿದರು. ಆದರೆ ಆ ಸಂಧರ್ಭದಲ್ಲಿ ಬರೋಡದಲ್ಲಿ ಉಳಿದುಕೊಳ್ಳಲು ಅವರಿಗೆ ವಸತಿ ಸಿಕ್ಕಿತೇ? ದಿನಾಂಕ 22-4-2011 ರಂದು ಪ್ರಕಟವಾದ ಬಸವರಾಜ ಹುಡೇದಗಡ್ಡಿಯವರ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಆ ಘಟನೆಯನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ.
           ಸ್ವತಃ ಅಂಬೇಡ್ಕರರ ಮಾತುಗಳನ್ನೇ ಇಲ್ಲಿ ಸಂಕ್ಷಿಪ್ತವಾಗಿ ಹೇಳುವುದಾದರೆ  ಬರೋಡಕ್ಕೆ ನಾನು ಬಂದಾಗ ನನಗೆ ಉಳಿದು ಕೊಳ್ಳಲು ಎಲ್ಲಿಯೂ ಮನೆ ಸಿಗಲಿಲ್ಲ. ಕಡೆಗೆ ನಾನೊಂದು ಧರ್ಮ ಛತ್ರದಲ್ಲಿ  ಅದೂ ನಾನು ಪಾಸರ್ಿ ಧರ್ಮಕ್ಕೆ ಸೇರಿದವನು, ನನ್ನ ಹೆಸರು ಅಡಲ್ಜಿ ಸೊರಾಬ್ಜಿಎಂದು ಸುಳ್ಳು ಹೇಳಿ  ಉಳಿದುಕೊಂಡೆ. ಆದರೆ ಸತ್ಯ ಗೊತ್ತಾಗಲೆ ಬೇಕಲ್ಲವೇ? ಯಾಕೆಂದರೆ ಮಹಾರಾಜರ ಆಸ್ಥಾನದಲ್ಲಿ  ಮಹಾರ್ ಹುಡುಗನೊಬ್ಬ  ಅಧಿಕಾರಿಯಾಗಿ  ಕೆಲಸಕ್ಕೆ ಸೇರಿದ್ದಾನೆ ಎಂಬ ಸುದ್ದಿ ಅದಾಗಲೇ ಕಾಡ್ಗಿಚ್ಚಿನಂತೆ ಹರಡಿತ್ತು. ಅದೂ ನಾನು ಪಾಸರ್ಿ ವಸತಿ ಗೃಹವೊಂದರಲ್ಲಿ ಅನುಮಾನಾಸ್ಪದವಾಗಿ ಉಳಿದುಕೊಂಡಿರುವ ವಿಷಯ ಕೆಲವರಿಗೆ ತಿಳಿದು ಹೋಗಿತ್ತು. ಈ ಕಾರಣಕ್ಕಾಗಿ ನಾನು ಅಲ್ಲಿ ಉಳಿದುಕೊಂಡಿದ್ದ ಎರಡನೇ ದಿನ ನಾನು ತಿಂಡಿ ತಿಂದು ಕಛೇರಿಗೆ ತೆರಳುತ್ತಿದ್ದಂತೆ  ಪಾಸರ್ಿ ಹುಡುಗರ ಗುಂಪೊಂದು ದೊಣ್ಣೆಗಳನ್ನು ಹಿಡಿದು ನನ್ನ ಮೇಲೆ ದಾಳಿ ಮಾಡಿತು. 
          ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ, ಕೊಲ್ಲುವುದಾಗಿ ಬೆದರಿಕೆ ಹಾಕಿದ ಆ ಗುಂಪು ನಾನಾರೆಂದು? ಪ್ರಶ್ನಿಸಿತು. ತಪ್ಪಿಸಿಕೊಳ್ಳಲೆಂಬಂತೆ ನಾನು ಅಷ್ಟೇ ಕೂಲಾಗಿ ನಾನು ಹಿಂದೂ ಎಂದು ಉತ್ತರಿಸಿದೆ. ನನ್ನ ಉತ್ತರದಿಂದ ತೃಪ್ತರಾಗದ  ಉದ್ರಿಕ್ತ ಆ ಗುಂಪು ನನ್ನನ್ನು ಅವಾಚ್ಯ ಶಬ್ಧಗಳಿಂದ ಬೈಯುತ್ತಾ ಕೊಠಡಿ ಖಾಲಿ ಮಾಡುವಂತೆ ಕೂಗಾಡಿತು. ಬೇರೆ ದಾರಿಕಾಣದೆ ನನಗೆ ಎಂಟು ಗಂಟೆಗಳ ಕಾಲಾವಕಾಶ ಕೊಡಿ ಎಂದು ಆ ಗುಂಪನ್ನು ನಾನು ಧೈನ್ಯತೆಯಿಂದ  ಕೆಳಿಕೊಂಡೆ!
ನನಗೆ ಇದ್ದುದು ಕೆಲವೇ ಗಂಟೆಗಳು! ನನಗೆ ಪರಿಚಯವಿದ್ದ ಸ್ನೇಹಿತರನ್ನೆಲ್ಲ ನನಗೆ ವಸತಿ ವ್ಯವಸ್ಥೆ ಮಾಡಿಕೊಡುವಂತೆ ಗೋಗರೆದೆ. ಆದರೆ ಪ್ರತಿಯೊಬ್ಬರು ತಮ್ಮ ಅಸಹಾಯಕತೆಯನ್ನು ಪ್ರದಶರ್ಿಸಿದರು. ಮುಂದೇನು ಮಾಡಲಿ? ಎಲ್ಲಿ ಹೋಗಲಿ? ಅಸಹಾಯಕತೆಯಿಂದ ನಿರಾಶನಾಗಿ  ಬೀದಿಯಲ್ಲಿ ಒಂದೆಡೆ ಕುಳಿತು ಗಳಗಳನೆ ಅತ್ತೆ. ನನ್ನ ಕಣ್ಣಿನಿಂದ ನೀರು ಧಾರಾಕಾರವಾಗಿ ಸುರಿಯುತ್ತಿತ್ತು. ಕಡೆಗೆ ವಿಧಿ ಇಲ್ಲದೇ ನನ್ನ ಕೆಲಸಕ್ಕೆ ರಾಜೀನಾಮೆ ಇತ್ತು ಅದೇ ರಾತ್ರಿ ರೈಲಿನಲ್ಲಿ ಮುಂಬೈಗೆ ವಾಪಸ್ ಬಂದೆ.
    ಈಗ ಹೇಳಿ ಸ್ವತಃ ಅಂಬೇಡ್ಕರರಿಗೇ ಆ ಕಾಲದಲ್ಲಿ ವರ್ಗರಹಿತ ವಸತಿ ಸಿಗಲಿಲ್ಲ. ಅದೂ ಅಂಬೇಡ್ಕರರು  ನಾನು ಹಿಂದೂ ಎಂದರೂ, ನನ್ನದು ಪಾಸರ್ಿ ಧರ್ಮ ನನ್ನ ಹೆಸರು ಅಡಲ್ಜಿ ಸೊರಾಬ್ಜಿ ಎಂದು ಸುಳ್ಳು ಹೇಳಿದರೂ ಅವರಿಗೆ ವರ್ಗ ರಹಿತ ವಸತಿ ಸಿಗಲಿಲ್ಲ. ಇನ್ನು ಸಾಮಾನ್ಯ ದಲಿತರಿಗೆ ವರ್ಗ ರಹಿತ, ಜಾತಿ ರಹಿತ ವಸತಿ ಸಾಧ್ಯವೇ?  ಅಕಸ್ಮಾತ್ ಸಿಕ್ಕಿದರೂ ಅಂತಹ ವಸತಿ ಗೃಹಗಳಲ್ಲಿ ದಲಿತರು ಬದುಕಲು ಸಾಧ್ಯವೇ? ಹೆಚ್ಚೆಂದರೆ ಅಂಬೇಡ್ಕರರು ಮಾಡಿದ ಹಾಗೆ ಸಮಸ್ತ ದಲಿತರು ಅಂತಹ ವಸತಿಗೃಹಗಳ ಹೊರಗೆ ನಿಂತು ಗಳಗಳನೆ ಅಳಬೇಕಾಗುತ್ತದಷ್ಟೆ!
                                                               ರಘೋತ್ತಮ ಹೊ. ಬ
                                                              ಚಾಮರಾಜನಗರ-571313
ಮೊ-0381189116

ಅಣ್ಣಾ ಹೋರಾಟ ಸಂವಿಧಾನ ವಿರೋಧಿ? ದಲಿತ, ಹಿಂದುಳಿದವರ ವಿರೋಧಿ?


            ನಮಗೊಂದು ಡೌಟಿತ್ತು ಏನಿದು ಹಜಾರೆ ಇದ್ದಕ್ಕಿದ್ದಂತೆ ಭ್ರಷ್ಟಾಚಾರದ ವಿರುದ್ಧ ಉಪವಾಸ ಕುಳಿತ್ತದ್ಧಾರಲ್ಲ  ಎಂದು. ಅದೂ ಗಾಂಧಿ ಫೋಟೋ ಇಟ್ಟು ಕೊಂಡು. ಹಿಂದೆ ಭಾರತ ಮಾತೆಯ ಬೃಹತ್ ಬ್ಯಾನರ್ ಸಿಕ್ಕಿಸಿಕೊಂಡು! ಮತ್ತು ಅವರನ್ನು ಬೆಂಬಲಿಸಿದ್ದು? ಸ್ವಾಮಿ ಅಗ್ನಿವೇಶ್, ಕಿರಣ್ ಬೇಡಿ, ಶಾಂತಿ ಭೂಷಣ್ , ಬಾಬಾರಾಮ್ ದೇವ್, ಅಡ್ವಾಣಿ, ಗಡ್ಕರಿ,ಯಡಿಯೂರಪ್ಪ! ಒಂದಷ್ಟು ಚಿತ್ರತಾರೆಯರು. ಅಬ್ಬಬ್ಬಾ ಪಟ್ಟಿ ಹೇಳುತ್ತಾ ಹೋದರೆ ಒಂದರೆ ಕ್ಷಣ ಕನ್ಫ್ಯೂಸ್ ಆಗುವುದಂತೂ ಖಂಡಿತ. ಹಾಗಿತ್ತು ಹಜಾರೆಯವರ ಗುಂಪು ಮತ್ತು ಅವರ ಹಿಂದಿದ್ದ ಜನ. ಟಿವಿ ಮಾಧ್ಯಮಗಳಂತೂ ಇಡೀ ದೇಶವೇ ಅವರ ಹಿಂದೆ ಇದೆ ಎಂಬಂತೆ ತನ್ನ ಪಾತ್ರವನ್ನು ನಿರ್ವಹಿಸಿತು.
ಹಾಗಿದ್ದರೆ ಹಜಾರೆಯವರು ಮಾಡಿದ್ದಾದರೂ ಏನು? ಎಂತಹದ್ದು? ಅದೆಷ್ಟು ಸರಿ? ಉತ್ತರಕ್ಕೆ ಬಹಳ ದಿನ ಕಾಯಬೇಕಾಗಲಿಲ್ಲ.  ಯಾಕೆಂದರೆ ಉಪವಾಸ ಮುಗಿದ ಒಂದೆರಡೇ ದಿನಗಳಲ್ಲಿ ಹಜಾರೆ ಹೊಗಳಿದ್ದು ನರೇಂದ್ರ ಮೋದಿಯನ್ನು, ನಿತೀಶ್ ಕುಮಾರ್ರನ್ನು. ಅಡ್ವಾಣಿ , ಗಡ್ಕರಿ , ಯಡಿಯೂರಪ್ಪ ಇತ್ಯಾದಿ  ಎನ್.ಡಿ.ಎ., ಬಿಜೆಪಿ ಸಮೂಹದ ಎಲ್ಲರನ್ನೂ ಹೊಗಳುತ್ತಿದ್ದರೆಂದು ಕಾಣುತ್ತದೆ,  ಆದರೆ ಯಾಕೋ ಅವರ ಗಂಟಲು ತಡೆದಿರಬೇಕು. ದನಿ ಕಟ್ಟಿರಬೇಕು. ಅದಕ್ಕೆ ಮೋದಿ, ನಿತೀಶ್ ಅಷ್ಟೆ ಸಾಕೆಂಬಂತೆ ಸುಮ್ಮನಾಗಿದ್ದಾರೆ. ತನ್ಮೂಲಕ ತನ್ನ ಅಸಲಿ ಬಣ್ಣ ಏನೆಂದು ತೋರಿಸಿ ಕೊಟ್ಟಿದ್ಧಾರೆ.
             ಅಸಲಿಬಣ್ಣ ಹಾಗೆಂದರೇನು? ಕನ್ಫ್ಯೂಸ್ ಆಗಬೇಡಿ. ಅದು ಕೇಸರಿಯೇ. ಯಾಕೆಂದರೆ ಕೇಸರಿ ಪಡೆಗೆ ಮಾತ್ರ ಅಂತಹ ಸಮೂಹ ಸನ್ನಿಗೆ ಒಳಪಡುವಂತಹ  ಯಾರಿಗೂ ಗೊತ್ತಾಗದ ಹಾಗೆ ಯಾರ್ಯಾರ ಮೂಲಕವೋ ತನ್ನ ಆಟ ಆಡುವ ಹಕೀಕತ್ತಿರುತ್ತದೆ. ಯಾಕೆಂದರೆ basically ಹಜಾರೆಯವರು ಎತ್ತಿದ ಪ್ರಶ್ನೆಯೇ ಪ್ರಜಾಪ್ರಭುತ್ವ ವಿರೋಧಿ! ಸಂವಿಧಾನ ವಿರೋಧಿ!! ದಲಿತ, ಹಿಂದುಳಿದವರ ವಿರೋಧಿ!!!
              ಏಕೆಂದರೆ ಈ ದೇಶದಲ್ಲಿ ಅದೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಸುಪ್ರೀಮು? ಅಪ್ಪಟ ಪ್ರಜಾಪ್ರಭುತ್ವವಾದಿ ಬಾಬಾಸಾಹೇಬ್ ಅಂಬೇಡ್ಕರ್ ವಿರಚಿತ ಸಂವಿಧಾನದ ಪ್ರಕಾರ ಪಾಲರ್ಿಮೆಂಟ್ ತಾನೆ? ( ನಂತರ ಅದನ್ನು ಹಜಾರೆ ಒಪ್ಪಿಕೊಂಡಿರಬಹುದು ಅದು ಬೇರೆ ಮಾತು. ಆದರೆ ಉಪವಾಸ ಸಂಧರ್ಭದಲ್ಲಿ?) ವಸ್ತು ಸ್ಥಿತಿ ಹೀಗಿರುವಾಗ  ಲೋಕಪಾಲ ಮಸೂದೆಯಂತಹ  ಗಂಭಿರ ಕಾನೂನು ರಚನೆಯನ್ನು ಆಯ್ದ  ಕೆಲವೇ ಮಂದಿ ನಾಗರೀಕರಿಗೆ ನೀಡಿ ಎಂದದ್ದು ಅದೆಷ್ಟು ಸರಿ? ಅದೆಷ್ಟು ಸಂವಿಧಾನ ಬದ್ಧ? ಅದೂ ಕೂಡ ಅದರಲ್ಲಿ ದಲಿತರು ಮತ್ತು ಹಿಂದುಳಿದವರಿಗೆ ಸೂಕ್ತ ಪ್ರಾತಿನಿಧ್ಯ ಕೂಡ ಇಲ್ಲ ಯಾಕೆ? ಅಂದಹಾಗೆ ಇದು ಸಂವಿಧಾನ ಬದ್ಧವಲ್ಲವೆಂದ ಮೇಲೆ  ಹಜಾರೆ ಎಂಬ ಗಾಂಧಿವಾದಿ ನಡೆಸಿದ ಉಪವಾಸ ಸತ್ಯಾಗ್ರಹ  ಎಂಬ ದಾಳಿ ಯಾರ ವಿರುದ್ಧ? ಸಂವಿಧಾನದ ವಿರುದ್ಧವೇ ಅಲ್ಲವೇ? ಒಂದರ್ಥದಲಿ ಅದು ಗಾಂಧಿವಾದಿ ಹಜಾರೆ, ಅಂಬೇಡ್ಕರ್ ವಿರಚಿತ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೇಯ ವಿರುದ್ಧ ನಡೆಸಿದ ಭೀಭತ್ಸ ಹಲ್ಲೆ ಎನ್ನದೆ ವಿಧಿಯಿಲ್ಲ.
                 ಹಾಗಿದ್ದರೆ ಹಜಾರೆಯವರು ಎತ್ತಿದ ಭ್ರಷ್ಟಾಚಾರದ ಪ್ರಶ್ನೆ? ಭ್ರಷ್ಟಾಚಾರ ಇರಬೇಕೆ ಆಥವಾ ಅಂಬೇಡ್ಕರ್ವಾದಿಗಳು ಭ್ರಷ್ಟಾಚಾರವನ್ನು ಬೆಂಬಲಿಸುತ್ತಾರೆಂದು ಅರ್ಥವೇ? ಖಂಡಿತ ಇಲ್ಲ. ಭ್ರಷ್ಟಾಚಾರ ತೊಲಗಬೇಕು. ಅದಕ್ಕೆ ಪಿಎಸಿ, ಜೆಪಿಸಿ, ಸಿಬಿಐ, ಸಿವಿಸಿ, ಭ್ರಷ್ಟಾಚಾರ ನಿಗ್ರಹ ದಳ., ಪೋಲೀಸ್, ನ್ಯಾಯಾಲಯ ಇತ್ಯಾದಿ ಏಜೆನ್ಸಿಗಳಿವೆಯಲ್ಲವೇ? ಈಗಿರುವ ಕಾನೂನಿನಲ್ಲಿಯೇ ಅವುಗಳಿಗೆ ಸಾಕಷ್ಟು ಬಲವಿದೆ. ಅಕಸ್ಮಾತ್ ಈ ಸಂಸ್ಥೆಗಳಿಗೆ  ಮತ್ತಷ್ಟು ಬಲ ಬೇಕೆಂದರೂ ಅಥವಾ ಭ್ರಷ್ಟಾಚಾರ ತಡೆಗಟ್ಟಲು ಮತ್ತೊಂದು ಸಂಸ್ಥೆ ಸ್ಥಾಪಿಸಬೇಕೆಂದರೂ  ಈ ದೇಶದ  ಸಂಸತ್ತಿಗೆ ಅಂತಹದ್ದೊಂದು ಹಕ್ಕು ಅಧಿಕಾರ  ಇದ್ದೇ ಇರುತ್ತದೆಯಲ್ಲವೇ? ಹೀಗಿರುವಾಗ ಇಂತಹದ್ದೊಂದು ಹಕ್ಕು ಅಧಿಕಾರವನ್ನು ಆಯ್ದ ಕೆಲ ನಾಗರೀಕರಿಗೆ ನೀಡಿ ಎಂದದ್ದು ಅದೆಷ್ಟು ಸರಿ? ಯಾಕೆಂದರೆ ಮುಂದೊಂದು ದಿನ ಲೋಕಪಾಲ ಮಸೂದೆಯ ಹಾಗೆಯೇ ಬೇರೆ ಬೇರೆ ಮಸೂದೆಯ ರಚನೆಯಲ್ಲಿಯೂ ತಮಗೆ ಅವಕಾಶ ಕೊಡಿ ಎಂದು ಕಳ್ಳರು ಕಾಕರು ಸಮಾಜ ಘಾತುಕ ವ್ಯಕ್ತಿಗಳು  ಉಪವಾಸ ಕುಳಿತರೇ ? ಅಮರಣಾಂತ ನಿರಶನ ಕೈಗೊಂಡರೆ? ಆಗ ಅದನ್ನು ವಿರೋಧಿಸುವ ನೈತಿಕತೆ ನಮಗಿರುತ್ತದೆಯೇ? ಹಜಾರೆಗೊಂದು ನ್ಯಾಯ ಇತರರಿಗೊಂದು ನ್ಯಾಯ ಎನ್ನಲು ಸಾಧ್ಯವೇ?
                 ಅಂದಹಾಗೆ ಆಯ್ದ ಕೆಲ ನಾಗರೀಕರು ಎಂದರೆ ಹಜಾರೆ ಮತ್ತು ಮಿತ್ರರು, ಶಾಂತಿಭೂಷಣ್, ಪ್ರಶಾಂತ್ ಭೂಷಣ್ ಎಂಬಿಬ್ಬರು ಅಪ್ಪ ಮಕ್ಕಳು  ಮಾತ್ರವಂತೆ! ಯಾಕೆ ಬೇರಾರು ಇಲ್ಲವೇ? ಏಕೆಂದರೆ ಇತ್ತೀಚಿಗೆ ಬಿಡುಗಡೆಯಾದ  ಜನಸಂಖ್ಯಾ ವರದಿ ಪ್ರಕಾರ ಈ ದೇಶದ ಒಟ್ಟು ಜನಸಂಖ್ಯೆ ಬರೋಬ್ಬರಿ 120 ಕೋಟಿ.  ಹೀಗಿರುವಾಗ ಕೇವಲ ನಾಲ್ಕೈದು ಮಂದಿಗೆ ಈ ದೇಶದ ಭವಿಷ್ಯ ನಿರ್ಧರಿಸ ಬಲ್ಲಂತಹ ಮಸೂದೆ ರಚಿಸುವ , ಅದೂ ಸಂವಿಧಾನ ವಿರೋಧಿ ಮಾರ್ಗದಲ್ಲಿ ಹಕ್ಕು ಅಧಿಕಾರ ನೀಡುವುದಾದರೆ ಈ ದೇಶದ ಉಳಿದ ನಾಗರೀಕರೇನು ಮಾಡಬೇಕು? ಸಂವಿಧಾನ ಈ ನಾಗರೀಕರಿಗೆ ನೀಡಿರುವ ಓಟಿಗೆ ಅರ್ಥವಾದರೂ ಏನಿರುತ್ತದೆ? ಒಂದಂತು ನಿಜ ಇಂತಹ ಸಂವಿಧಾನ ವಿರೋಧಿ ಅಜೆಂಡಾ ಹೊಂದಿದ್ದರಿಂದಲೇ ಹಜಾರೆಯವರು ಗೋಧ್ರಾ ಹತ್ಯಾಕಾಂಡದಂತಹ ಗಂಭೀರ ಸಂವಿಧಾನ ವಿರೋಧಿ ಕೃತ್ಯ ನಡೆಸಿಯೂ , ಪರಮ ಭ್ರಷ್ಟಾಚಾರ ನಡೆಸಿಯೂ ಅಧಿಕಾರದಲ್ಲಿ ಮುಂದುವರಿದಿರುವ ನರೇಂದ್ರ ಮೋದಿಯನ್ನು ಬೆಂಬಲಿಸಿದ್ದು! ಅವರ ಸಹಮಾರ್ಗದಲ್ಲಿ ಸಾಗುತ್ತಿರುವ ನಿತೀಶ್ ಕುಮಾರ್ರನ್ನು ಬೆಂಬಲಿಸಿ ಮಾತಾಡಿದ್ದು. ಯಾಕೆ ಹಜಾರೆಗೆ  ಮಾಯಾವತಿ ಕಾಣಲಿಲ್ಲವೇ?  ಎಲ್ಲಿ ಕಾಣುತ್ತಾರೆ ಹೇಳಿ ? ಹೇಳಿ ಕೇಳಿ ಅಕೆ ದಲಿತ ವರ್ಗಕ್ಕೆ ಸೇರಿದ ಹೆಣ್ಣು ಮಗಳು . ಗಾಂಧಿವಾದಿಗಳಿಗೂ ದಲಿತರಿಗೂ ಹೊಂದಾಣಿಕೆ ಸಾಧ್ಯವೇ? ಅದಕ್ಕೆ ಹೇಳಿದ್ದು ಹಜಾರೆಯವರ ಉಪವಾಸ ದಲಿತ ವಿರೋಧಿ ಎಂದು.
               ಕುತೂಹಲಕಾರಿ ವಿಷಯವೊಂದೆಂದರೆ  ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದುರಾಡಳಿತದಂತಹ ಬಹುತೇಕ ಆರೋಪಗಳು ಬರುವುದು ದಲಿತರು, ಹಿಂದುಳಿದವರ ಮೇಲೆ! ಲೋಕಾಯುಕ್ತರಂತೂ ಹುಡುಕಿ ಹುಡುಕಿ ದಲಿತ, ಹಿಂದುಳಿದ ವರ್ಗಗಳಿಗೆ ಸೇರಿದ ಅಧಿಕಾರಿಗಳನ್ನು, ನೌಕರರನ್ನು ಭ್ರಷ್ಟರ ಬಲೆಗೆ ಬೀಳಿಸುತ್ತಾರೆ . ಭ್ರಷ್ಟಾಚಾರದ ಆರೋಪದ ಮೇಲೆ ಕಟಕಟಗೆ ತಂದು ನಿಲ್ಲಿಸುತ್ತಾರೆ. ಅದೂ ಆ ದಲಿತ, ಹಿಂದುಳಿದ ಜನಾಂಗದ ವ್ಯಕ್ತಿ ತನ್ನ ಜನಾಂಗದ ಹಿತಕ್ಕಾಗಿ ದುಡಿಯುತ್ತಾನೆಂದು ಕಂಡುಬಂದರಂತೂ ಅವನ ಕಥೆ ಮುಗಿಯಿತೆಂದೇ ಅರ್ಥ! ಯಾಕೆಂದರೆ ಲೋಕಾಯುಕ್ತ ಅಂತಹವರ ವಿರುದ್ಧ ಮುಗಿಬೀಳುತ್ತದೆ. ಒಂದಂತು ನಿಜ ದಲಿತರು , ಹಿಂದುಳಿದ ವರ್ಗದವರು ಇತ್ತ ಮೀಸಲಾತಿಯ  ಮೂಲಕ ಕೆಲಸಕ್ಕೆ ಸೇರುತ್ತಿದ್ದಂತೆ ಅತ್ತ ಲೋಕಾಯುಕ್ತ ಅವರ ವಿರುದ್ಧ ಕ್ರಮ ಕೈಗೊಳ್ಳಲು  ಅತ್ತ ಕತ್ತಿ ಮಸೆಯಲು ಪ್ರಾರಂಬಿಸಿರುತ್ತದೆ! ಅವರ ಆಸ್ತಿಯನ್ನು ವಶಪಡಿಸಿಕೊಳ್ಳುವುದು ಎಂದು? ಯಾವಾಗ? ಎಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿರುತ್ತದೆ! ಬೇಕಿದ್ದರೆ  ರಾಜ್ಯದಲ್ಲಿ ಇದುವರೆಗೆ ನಡೆದಿರುವ ದಾಳಿಗಳನ್ನು, ಆ ದಾಳಿಗಳಿಗೆ ಒಳಗಾಗಿರುವ  ನೌಕರರ ಜಾತಿಯನ್ನು ಲೋಕಾಯುಕ್ತರು ಬಹಿರಂಗ ಪಡಿಸಲಿ ? ಅರತಹ ಪಟ್ಟಿಯನ್ನು ಹೊರಹಾಕಲಿ ? ಖಂಡಿತ ಆ ಪಟ್ಟಿಯಲ್ಲಿರುವವರು ಬಹುತೇಕರು ದಲಿತರು, ಹಿಂದುಳೀದವರು.
              ಹಾಗಿದ್ದರೆ ದಲಿತರು ಮತ್ತು ಹಿಂದುಳಿದವರು ಮಾತ್ರ ಭ್ರಷ್ಟರೇ? ಉಳಿದವರೆಲ್ಲಾ ಸಾಚಾ ಜನರೆ? ಈ ನಿಟ್ಟಿನಲ್ಲೇ ಭ್ರಷ್ಟಾಚಾರ ವಿರೋಛಧಿ ಮಸೂದೆ ದಲಿತವಿರೋಧಿ , ಹಿಂದುಳಿದವರ ವಿರೋಧಿ ಎಂದಿದ್ದು. ಅಂದಹಾಗೆ ಅಂತಹ ಮಸೂದೆ ತಯಾರಿಕೆಯನ್ನು ಕೆಲವೇ ನಾಗರೀಕರಿಗೆ ನೀಡಿರುವುದರಿಂದ ಜಾತಿಯ ಮಸುಕು ಹೊದ್ದ  ಅವರೇನು ಮಾಡುತ್ತಾರೆ? ದಲಿತರನ್ನು , ಹಿಂದುಳಿದವರನ್ನು ಇನ್ನಷ್ಟು ಬಲಿಹಾಕುತ್ತಾರಷ್ಟೆ. ( ಈಗ ದಲಿತ ವರ್ಗಕ್ಕೆ ಸೇರಿದ ಮಾಜಿ ಸಚಿವ ಎ.ರಾಜಾ ಅವರನ್ನು ಬಲಿಹಾಕುತ್ತಿದ್ದಾರಲ್ಲಾ ಹಾಗೆ. ಏಕೆಂದರೆ ರಾಜಾ ಅವರ ಪ್ರಕರಣದ ತನಿಖೆ ನಡೆಸಿದ ಸಿಬಿಐ ಅವರಿಂದಾದ ನಷ್ಟ ಸುಮಾರು 30000 ಕೋಟಿ ಎಂದು ಅಂದಾಜು ಮಾಡಿದೆ. ಹಾಗಿದ್ದರೆ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಉಳಿದ 1 ಲಕ್ಷದ 45 ಸಾವಿರ  ಕೋಟಿ ನುಂಗಿದ್ದು ಯಾರು? ಏಕೆಂದರೆ ಸಿಎಜಿ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ 1ಲಕ್ಷದ 75 ಸಾವಿರ ಕೋಟಿ ನಷ್ಟ ಎಂದು ವರದಿ ನೀಡಿದೆ. ರಾಜಾ ಅವರಿಂದಾದ 30000 ಕೋಟಿ ಕಳೆದರೆ ಉಳಿಯುವುದು 1ಲಕ್ಷದ 45 ಸಾವಿರ ಕೋಟಿ ತಾನೆ? ಹಾಗಿದ್ದರೆ ಈ ಉಳಿದ ಹಣವನ್ನು ಕಬಳಿಸಿದ್ದು ಯಾರು? ಕುತೂಕಹಲಕರವೆಂದರೆ ಈ ಹಗರಣದಲ್ಲಿ ಕೇಳಿಬರುವ ಇತರ ಹೆಸರುಗಳಾದ ಅರುಣ್ ಜ್ಯೇಟ್ಲಿ, ಧಯಾನಿಧಿ ಮಾರನ್, ಸುಖ್ ರಾಂ , ಅನಂತ್ ಕುಮಾರ್, ನೀರಾರಾಡಿಯಾ, ಅನಿಲ್ ಅಂಬಾನಿ, ರತನ್ ಟಾಟಾ ಇತ್ಯಾದಿ ಜನರನ್ನು ವ್ಯವಸ್ಥೆ ರಕ್ಷಿಸುತ್ತಿದೆ. ಅವರು ಮೇಲ್ಜಾತಿಯವರೆಂಬ ಕಾರಣಕ್ಕಾಗಿಯೇ ಒಂದರ್ಥದಲಿ ರಕ್ಷಿಸಕಲ್ಪಡುತ್ತಿದ್ದಾರೆ. ಆದರೆ ರಾಜಾ ದಲಿತರಾದ ಕಾರಣಕ್ಕೆ ಬಲಿಯಾಗುತ್ತಿದ್ದಾರೆ!)
               ಈ ನಿಟ್ಟಿನಲ್ಲೇ ಭ್ರಷ್ಟಾಚಾರ ವಿರೋಧಿ ಕಾನೂನು ರಚನೆಯಾಗುತ್ತಿದೆ ಎಂದರೆ  in other sense   ಅದು ದಲಿತ ವಿರೋಧಿ ಕಾನೂನೇ ಎಂಬಂತಾಗಿದೆ. ಹಿಂದೆ ಮಹಾತ್ಮ ಗಾಂಧಿಯವರು ಪೂನಾ ಒಪ್ಪಂದದ ಸಂಧರ್ಭದಲಿ ದಲಿತರ ವಿರುದ್ಧ ಉಪವಾಸ ಕುಳಿತಿದ್ದರು.  ಈಗಲೂ ಅಷ್ಟೆ ಗಾಂಧಿವಾದಿ ಹಜಾರೆ ಲೋಕಪಾಲ ಮಸೂದೆಯ ಹೆಸರಿನಲ್ಲಿ ದಲಿತ ನೌಕರರ ವಿರುದ್ಧ ಉಪವಾಸ ನಡೆಸಿದ್ದಾರೆ! ಅಕಸ್ಮಾತ್ ಹಜಾರೆಯವರಿಗೆ ಸಮಾಜದ ಬಗ್ಗೆ ಅಂತಹ ಕಾಳಜಿ ಇದೆ ಎನ್ನುವುದಾದರೆ ಅವರು ಜಾತೀಯತೆಯ ವಿರುದ್ಧ, ಅಸೃಶ್ಯತೆಯ ವಿರುದ್ಧ ಉಪವಾಸ ಕೂರುತ್ತಿದ್ದರು! ಆದರೆ?
               ಆತಂಕದ ವಿಷಯವೊಂದನ್ನು ಇಲ್ಲಿ ಪ್ರಸ್ತಾಪಿಸಲೇ ಬೇಕು. ಅದೇನೆಂದರೆ ಬಾಲಿವುಡ್ ನಟ ಅನುಪಮ್ ಖೇರ್ ಹಜಾರೆಯವರ ಸತ್ಯಾಗ್ರಹವನರ್ನು ಬೆಂಬಲಿಸುತ್ತಾ  ಪ್ರಸ್ತುತ ಇರುವ ಸಂವಿಧಾನವನ್ನು ಬದಲಿಸಬೇಕೆಂದರು. ತನ್ಮೂಲಕ ತಮ್ಮ ಸಂವಿಧಾನ ವಿರೋಧಿ ಅಜೆಂಡಾವನ್ನು ಜಗಜ್ಜಾಹೀರುಗೊಳಿಸಿದರು! ಹೀಗಿರುವಾಗ  ಅಣ್ಣಾ ಹಜಾರೆ ಮತ್ತು ಮಿತ್ರರ ಇಂತಹ ಸಂವಿಧಾನ ವಿರೋಧಿ , ಅಂಬೇಡ್ಕರ್ ವಿರೋಧಿ ಹೋರಾಟವನ್ನು ದಲಿತರು, ಹಿಂದುಳಿದವರು ಬೆಂಬಲಿಸಬೇಕೆ?  ಅವರ ಆಟಾಟೋಪವನ್ನು ಸಹಿಸಿಕೊಳ್ಳಬೇಕೆ? ಇಲ್ಲ, ದಲಿತರು ಹಿಂದುಳಿದವರು ಮತ್ತಿತರ ಪ್ರಜ್ಞಾವಂತರು ಈ ನಿಟ್ಟಿನಲಿ ಎಚ್ಚತ್ತುಕೊಳ್ಳಬೇಕಿದೆ. ಭ್ರಷ್ಟಾಚಾರ ನಿಗ್ರಹದ  ಹೆಸರಿನಲ್ಲಿ ನಡೆಯುತ್ತಿರತುವ ಇಂತಹ ಸಂವಿಧಾನ ವಿರೋಧಿಗಳ ದುಷ್ಟ ಹುನ್ನಾರವನ್ನು ಹತ್ತಿಕ್ಕಬೇಕಿದೆ. ತನ್ಮೂಲಕ ಸಂವಿಧಾನದ ರಕ್ಷಣೆಗೆ ಬೀದಿಗೆ ಇಳಿಯಬೇಕಿದೆ.
                                                                  ರಘೋತ್ತಮ ಹೊ.ಬ
                                                                  ಚಾಮರಾಜನಗರ
email:raghothama16hb@gmail.com
Raghothama Ho Ba
 09481189116

html