ಬುಧವಾರ - ಡಿಸೆಂಬರ್-14-2011
ದೇವನಹಳ್ಳಿ, ಡಿ.13: ತಾಲೂಕಿನ ವಿಜಯಪುರ ಹೋಬಳಿಯ ಪುರ ಗ್ರಾಮದಲ್ಲಿ ಇತ್ತೀಚೆಗೆ ಡಾ.ಬಿ.ಆರ್. ಅಂಬೇಡ್ಕರ್‌ರ ಭಾವಚಿತ್ರಕ್ಕೆ ದುಷ್ಕಮಿ ಗಳು ಮಸಿ ಬಳಿದು ಅವಮಾನಗೊಳಿಸಿ ರುವ ಘಟನೆಯನ್ನು ಖಂಡಿಸಿ ಇಂದು ತಾಲೂಕು ದಲಿತ ಸಂಘರ್ಷ ಸಮಿತಿ ಹಾಗೂ ತಾ.ಛಲವಾದಿ ಸಂಘದ ವತಿಯಿಂದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಅಂಬೇಡ್ಕರ್‌ರ ಭಾವಚಿತ್ರಕ್ಕೆ ಅವಮಾ ನಗೊಳಿಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳುವಂತೆ ಒತ್ತಾಯಿ ಸಿದ ಪ್ರತಿಭಟನಕಾರರು, ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪ ಡಿಸಿದರು.
ಈ ಸಂಬಂಧ ತಾಲೂಕು ಶಿರಸ್ತೆದಾರ ಮತ್ತು ಪೊಲೀಸ್ ಡಿವೈಎಸ್ಪಿ ಶ್ರೀಧರ್‌ರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾರಹಳ್ಳಿ ಶ್ರೀನಿವಾಸ್, ಜಿಲ್ಲಾ ಸಂಚಾಲಕ ಜೋಗಹಳ್ಳಿ ನಾರಾಯಣ ಸ್ವಾಮಿ, ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಕಾಳಪ್ಪ ವೆಂಕಟೇಶ್, ಉಪಾಧ್ಯಕ್ಷ ರೆಡ್ಡಹಳ್ಳಿ ಮುನಿರಾಜ್, ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಸುಮಿತ್ರ ಪ್ರಶಾಂತ್, ಬಿದಲೂರು ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಸೇರಿದಂತೆ ಮೊದಲಾ ದವರು ಹಾಜರಿದ್ದರು.