Pages

Showing posts with label Shimoga Dalits. Show all posts
Showing posts with label Shimoga Dalits. Show all posts

Thursday, 28 April 2011

ಬೇಡಿಕೆ ಈಡೇರಿಕೆಗೆ ದಲಿತರ ಪ್ರತಿಭಟನೆ


  • ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಯನ್ನ ನಡೆಸಿದ ಕರ್ನಾಟಕ ರಾಜ್ಯ ದಲಿತ ರಕ್ಷಣಾ ವೇದಿಕೆ ಕಾರ್ಯಕರ್ತ
  • ಶಿವಮೊಗ್ಗ: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮಾದಿಗ ಅಭಿವೃದ್ಧಿ ನಿಗಮ ಸ್ಥಾಪಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು. ಮಾದಿಗ ಜನಾಂಗದವರು ಕಡುಬಡವರಾಗಿದ್ದು, ಸರ್ಕಾರದ ಸೌಲಭ್ಯದಿಂದ ಸಂಪೂರ್ಣ ವಂಚಿತರಾಗಿದ್ದಾರೆ. ಹಲವು ವರ್ಷಗಳಿಂದ ಸತತವಾಗಿ ಸಮಾಜದ ಒಳಿತಿಗಾಗಿ ಹೋರಾಟಮಾಡಿಕೊಂಡು ಬಂದರೂ ಸರ್ಕಾರದಿಂದ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು. ಕೆಲವು ಜನಾಂಗಗಳು ಯಾವುದೇ ಹೋರಾಟ ಮಾಡದಿದ್ದರೂ ಅವರಿಗೆ ಸರ್ಕಾರದ ಹಲವು ಸವಲತ್ತುಗಳನ್ನು ಒದಗಿಸಲಾಗಿದೆ. ನಮಗೆ ಮಾತ್ರ ಸರ್ಕಾರ ಮಲತಾಯಿಧೋರಣೆಯನ್ನು ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದರು. ಸರ್ಕಾರ ಈಗಾಗಲೇ ಪರಿಶಿಷ್ಟ ಜಾತಿಯ ಇತರೆ ವರ್ಗಗಳಿಗೆ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದೆ. ಅದೇ ರೀತಿ ನಮ್ಮ ಜನಾಂಗಕ್ಕೂ ಸರ್ಕಾರ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು. ರಾಜ್ಯದಲ್ಲಿ ಒಟ್ಟು ಪರಿಶಿಷ್ಟ ಜಾತಿಗೆ ಅನುಕೂಲವಾಗುವ ರೀತಿಯಲ್ಲಿ ಒಳಮೀಸಲಾತಿ ಮಾಡಬೇಕು. ಪರಿಶಿಷ್ಟ ಜಾತಿಯ ಜನರು ಮಾಡಿರುವ ಎಲ್ಲಾ ಸಾಲವನ್ನು ಮನ್ನಾಮಾಡಬೇಕು. ಪರಿಶಿಷ್ಟ ಜಾತಿಗಳನ್ನು ಒಡೆದು ಆಳುವ ಹುನ್ನಾರವನ್ನು ಕೆ„ಬಿಡಬೇಕು. ಬಡವರಿಗೆ ಜಮೀನು ಹಾಗೂ ಆಶ್ರಯಮನೆ ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯ ನೇತೃತ್ವವನ್ನು ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್‌.ಎನ್‌.ಪ್ರಭು, ಬಿ.ಸಿ.ನಾಗರಾಜು, ಆರ್‌.ಕುಮಾರ್‌, ಸೂಲಯ್ಯ ಮತ್ತಿತರರು ವಹಿಸಿದ್ದರು.

html