Pages

Showing posts with label VB News. Show all posts
Showing posts with label VB News. Show all posts

Thursday, 5 January 2012

Honour Killing: Vokkaliga Girl Loves Dalit Boy


ದಲಿತ ಹುಡುಗನನ್ನು ಪ್ರೀತಿಸಿದ್ದಕ್ಕಾಗಿ ಒಕ್ಕಲಿಗ ತರುಣಿಯ ಕೊಲೆ?;ಮಂಡ್ಯದಲ್ಲೊಂದು ಮರ್ಯಾದಾ ಹತ್ಯೆ ಪ್ರಕರಣ 
ಶುಕ್ರವಾರ  
ಜನವರಿ -06-2012


ಮಂಡ್ಯ, ಜ.5: ಪರಿಶಿಷ್ಟ ಜಾತಿಗೆ ಸೇರಿದ ಯುವಕನೋರ್ವನನ್ನು ಪ್ರೀತಿಸಿದ್ದಕ್ಕಾಗಿ ಒಕ್ಕಲಿಗ ಯುವತಿಯೊಬ್ಬಳನ್ನು ಆಕೆಯ ಸಂಬಂಧಿಕರು ಥಳಿಸಿ ಕೊಂದಿದ್ದು, ಬಳಿಕ ನೇಣು ಹಾಕಿದ್ದಾರೆ ಎಂದು ಮಂಡ್ಯದ ಕೊಪ್ಪ ಪೊಲೀಸ್ ಠಾಣೆ ಯಲ್ಲಿ ಯುವಕನ ಕುಟುಂಬ ದೂರು ನೀಡಿದೆ.ಯುವತಿಯನ್ನು ಯುವಕನ ಮನೆಯಲ್ಲೇ ಥಳಿಸಿ ಕೊಂದು ಬಳಿಕ ನೇಣು ಹಾಕಲಾಗಿದೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದರೆ, ಅವರು ದೂರು ದಾಖಲಿಸದೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ದಲಿತ ಯುವಕ ಗೋವಿಂದ ರಾಜು ಎಂಬವನ ಸಹೋದರ ತಿಮ್ಮಪ್ಪ ಕೆ. ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕೊಪ್ಪ ಹೋಬಳಿಯ ಮದ್ದೂರು ತಾಲೂಕಿನ ಅಂಬಲವಾಡಿ ಗ್ರಾಮದ ಪರಿಶಿಷ್ಟ ಜಾತಿಯ ಮಾದಿಗ ಸಮಾಜಕ್ಕೆ ಸೇರಿದ ದೊಡ್ಡ ವೆಂಕಟಾಚಲ ಎಂಬವರ ಪುತ್ರ ಗೋವಿಂದರಾಜು ಯಾನೆ ಗುಂಡ ಎಂಬಾತ ಒಕ್ಕಲಿಗ ಸಮುದಾಯದ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಹಾಗೂ ಕೊಪ್ಪ ಜೆಡಿಎಸ್ ಮುಖಂಡ ದವಲನ ರಾಮಕೃಷ್ಣ ಎಂಬವರ ಪುತ್ರಿ ಸುವರ್ಣಾ ಎಂಬಾಕೆಯನ್ನು ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಇದಕ್ಕೆ ಯುವತಿಯ ಕಡೆಯವರಿಂದ ವಿರೋಧವಿತ್ತೆಂದು ಹೇಳಲಾಗಿದೆ.

ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಇವರಿಬ್ಬರು ಪ್ರೀತಿಸುತ್ತಿರುವ ವಿಷಯ ತನ್ನ ಗಮನಕ್ಕೆ ಬಂದಾಗ ತಾನು ಗೋವಿಂದ ರಾಜುಗೆ ಬುದ್ಧಿವಾದ ಹೇಳಿ ಊರು ಬಿಟ್ಟು ಕಳುಹಿಸಿಕೊಟ್ಟಿದ್ದೆ ಎಂದು ಸಹೋದರ ತಿಮ್ಮಪ್ಪ ತಿಳಿಸಿದ್ದಾರೆ. ಆದರೆ ಈ ನಡುವೆ ನವೆಂಬರ್ 6ರಂದು ಸುವರ್ಣಾ ತನ್ನ ತಮ್ಮ ಗೋವಿಂದ ರಾಜುವನ್ನು ಅರಸೀಕೆರೆಗೆ ಕರೆಸಿ ಭೇಟಿಯಾಗಿದ್ದಾರೆಂದು ಹೇಳಲಾಗಿದ್ದು,ಇದನ್ನರಿತ ಸವರ್ಣೀಯರು ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿಸಿದ್ದು, ದೇವರಾಜು ಎಂಬಾತ ಗೋವಿಂದರಾಜುವನ್ನು ನನ್ನ ಬಳಿ ಬಿಟ್ಟು ನಿನ್ನ ತಮ್ಮನನ್ನು ಮನೆಗೆ ಕರೆದುಕೊಂಡು ಹೋಗು ಎಂದು ಹೇಳಿದ್ದಾನೆ.

ನಾನು ತಮ್ಮನನ್ನು ಮನೆಗೆ ಕರೆತಂದ ಕೆಲವೇ ಹೊತ್ತಿನಲ್ಲಿ ನಮ್ಮ ಮನೆಗೆ ನುಗ್ಗಿದ ಸವರ್ಣೀಯರಾದ ದವಲನ ರಾಮಣ್ಣ, ಆತನ ಮಗ ತಿಮ್ಮೇಶ, ತಿಮ್ಮೇಶ ಬಿನ್ ಪುಟ್ಟತಾಯಮ್ಮ, ಮಲ್ಲೇಶ ಬಿನ್ ಮುಸುರಿ ತಿಮ್ಮಣ್ಣ, ತಿಮ್ಮೇಶನ ಅಕ್ಕನ ಮಗ ಮುರುಗೇಶ, ದವಲನ ಜಯಣ್ಣನ ಮಗ ಹಾಗೂ ಲಕ್ಷ್ಮಿ ಎಂಬಾಕೆಯ ಗಂಡ ಯಾಮ, ಚಿಕ್ಕತಾಯಿ ಎಂಬವರ ಗಂಡ ರವಿ ಮುಂತಾದವರು ನನ್ನ ತಮ್ಮನನ್ನುದ್ದೇಶಿಸಿ ‘‘ಮಾದಿಗ... ಸೂಳೆ ಮಗ... ನಿನಗೆ ಒಕ್ಕಲಿಗ ಹುಡುಗಿಯೇ ಬೇಕಾ ಎಂಬಿತ್ಯಾದಿ ಪದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಲ್ಲದೆ, ತಮ್ಮನನ್ನು ಮನೆಯಿಂದ ಎಳೆದುಕೊಂಡು ಹೋಗಿ ಸುವರ್ಣಾ ಇದ್ದ ಕೊಠಡಿಗೆ ಕೂಡಿ ಹಾಕಿ ಇಬ್ಬರ ಮೇಲೂ ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ತಿಮ್ಮಪ್ಪ ಕೆ. ಕೊಪ್ಪ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್‌ಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ದವಲನ ರಾಮಕೃಷ್ಣ ಇವರಿಬ್ಬರನ್ನೂ ನೇಣಿಗೆ ಹಾಕಿ ಎಂದು ಹೇಳಿದ್ದಾನೆ. ಇದಾದ ಕೆಲವೇ ಹೊತ್ತಿನಲ್ಲಿ ದವಲನ ರಾಮಕೃಷ್ಣ ಇತರ ಸವರ್ಣೀಯರಾದ ದವಲನ ರಾಮಣ್ಣ, ಆತನ ಮಗ ತಿಮ್ಮೇಶ, ತಿಮ್ಮೇಶ ಬಿನ್ ಪುಟ್ಟತಾಯಮ್ಮ, ರಾಜು ಬಿನ್ ಲಲ್ಲೇಗೌಡ, ಮಲ್ಲೇಶ ಬಿನ್ ಮುಸುರಿ, ತಿಮ್ಮಣ್ಣ ದವಲನ ಜಯಣ್ಣನ ಮಗ ತಿಮ್ಮೇಶ, ಆತನ ಅಕ್ಕನ ಮಗ ಮುರುಗೇಶ, ಲಕ್ಷ್ಮಿಯ ಗಂಡ ಯಾಮ, ಚಿಕ್ಕತಾಯಿ ಗಂಡ ರವಿ ಎಂಬವರೊಂದಿಗೆ ಸೇರಿ ಸುವರ್ಣಾಳನ್ನು ನನ್ನ ಮನೆಗೆ ಕರೆ ತಂದು ನಮ್ಮ ಮನೆಯಲ್ಲೇ ನೇಣು ಹಾಕಿ ಕೊಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟಿಸಿದ ನನ್ನ ಹೆಂಡತಿ ತಾಯಮ್ಮ ಮತ್ತು ನನ್ನ ನಾದಿನಿ ಮಂಗಳಮ್ಮ ಎಂಬವರ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ನಡುವೆ ಮಾರಣಾಂತಿಕ ಹಲ್ಲೆಯಿಂದ ತಪ್ಪಿಸಿಕೊಂಡ ಗೋವಿಂದ ರಾಜು ಹೊರಟು ಹೋಗಿದ್ದಾನೆ. ಭಯಭೀತನಾದ ನಾನು ಕೊಪ್ಪ ಪೊಲೀಸ್ ಠಾಣೆಗೆ ತೆರಳಿ ಘಟನೆಯನ್ನು ಪೊಲೀಸರಿಗೆ ವೌಖಿಕವಾಗಿ ವಿವರಿಸಿದ್ದೆ. ತಕ್ಷಣ ಕ್ರಮ ಕೈಗೊಳ್ಳಬೇಕಾದ ಪೊಲೀಸರು ‘‘ಈ ವಿಚಾರ ನೀನು ಯಾರಲ್ಲೂ ಹೇಳಬೇಡ. ಈಗ ನೀನು ತಲೆಮರೆಸಿ ಎಲ್ಲಾದರೂ ಇರು. ನಿನ್ನ ಅಗತ್ಯ ಬಿದ್ದಾಗ ನಾನೇ ನಿನಗೆ ಫೋನ್ ಮಾಡಿ ತಿಳಿಸುತ್ತೇವೆ ಎಂದು ನನ್ನ ಫೋನ್ ನಂಬರ್ ಪಡೆದು ನಿನಗೇನಾದರೂ ತೊಂದರೆಯಾದರೆ ಈ ನಂಬರ್‌ಗೆ ಫೋನ್ ಮಾಡು ಎಂದು 9480804870 ಈ ಮೊಬೈಲ್ ಸಂಖ್ಯೆ ನೀಡಿ ಕಳುಹಿಸಿಕೊಟ್ಟಿದ್ದಾರೆ’’ ಎಂದು ತಿಮ್ಮಪ್ಪ ದೂರಿಕೊಂಡಿದ್ದಾರೆ.

ಈ ಘಟನೆಯಿಂದ ನನ್ನ ಇನ್ನೋರ್ವ ತಮ್ಮ ತಿಮ್ಮೇಶ ಮತ್ತು ತಂದೆ ಜೊತೆ ಊರು ಬಿಟ್ಟು ತಲೆಮರೆಸಿಕೊಂಡಿದ್ದೆವು. ನನ್ನ ತಾಯಿ ಮತ್ತು ನನ್ನ ಪತ್ನಿ ಪೊಲೀಸ್ ರಕ್ಷಣೆಯಲ್ಲೇ ಊರಿನಲ್ಲಿದ್ದರು. ಈ ಮಧ್ಯೆ ನವೆಂಬರ್ 28ರಂದು ಸುವರ್ಣಾಳ ತಂದೆ ದವಲನ ರಾಮಕೃಷ್ಣ ನನ್ನ ತಾಯಿಯ ಮೇಲೆ ಹಲ್ಲೆ ಮಾಡಿ ‘‘ನಿನ್ನ ಸೊಸೆಯನ್ನು ಅತ್ಯಾಚಾರ ಮಾಡುತ್ತೇನೆ’’ ಎಂದು ಬೆದರಿಕೆ ಹಾಕಿದ್ದಾರೆ ಅಂದಿನಿಂದ ನನ್ನ ತಾಯಿ ಮತ್ತು ನನ್ನ ಪತ್ನಿ ಸಹ ಇವರ ಬೆದರಿಕೆಗೆ ಊರು ಬಿಟ್ಟು ತೆರಳಿದ್ದಾರೆ. ಮಾತ್ರವಲ್ಲದೆ, ಘಟನೆಯ ಬಗ್ಗೆ ಯಾರಾದರೂ ಸಾಕ್ಷಿ ಹೇಳಿದರೆ ಅಂತವರ ಮನೆಗೆ ಪೆಟ್ರೋಲ್ ಹಾಕಿ ಬೆಂಕಿಯಿಟ್ಟು ಕೊಂದು ಹಾಕುವುದಾಗಿಯೂ ದವಲನ ರಾಮಕೃಷ್ಣ ಬೆದರಿಕೆ ಹಾಕಿದ್ದು, ಇದರಿಂದಾಗಿ ಯಾರೂ ಸಾಕ್ಷಿ ಹೇಳಲು ಮುಂದೆ ಬರುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಗ್ರಾಮ ಪಂಚಾಯತ್ ಸದಸ್ಯನಾಗಿರುವ ನಾನು ಪಂಚಾಯತ್ ಸಭೆಗೆ ಹಾಜರಾದರೆ ಕೊಲೆ ಮಾಡುವುದಾಗಿಯೂ ಆತ ಬೆದರಿಕೆ ಹಾಕಿದ್ದು, ಇದರಿಂದಾಗಿ ನಾನು ಪಂಚಾಯತ್ ಸಭೆಗೂ ಹಾಜರಾಗಿಲ್ಲ. ಘಟನೆಯ ಬಳಿಕ ಸುಮಾರು 60 ಸಾವಿರ ರೂ. ವೌಲ್ಯ ಎತ್ತು ಮತ್ತು ಗಾಡಿಗಳನ್ನು ಬಡೇರ ಕೃಷ್ಣ ಎಂಬವರು ಕಳವು ಮಾಡಿರುವುದಾಗಿಯೂ ಇವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಘಟನೆಯಿಂದ ಜೀವಭಯಕ್ಕೊಳಗಾಗಿರುವ ನಾನು ಊರು ಬಿಟ್ಟು ಅಲೆಯುತ್ತಿದ್ದು, ನಾನು ಬೆಳೆದಿರುವ ಭತ್ತ, ಕಬ್ಬು ಕಟಾವು ಮಾಡಲು ಊರಿಗೆ ತೆರಳಬೇಕಾಗಿದ್ದು, ನನಗೆ ಜೀವ ಭಯ ಇದೆ.

ನನ್ನ ಹೆಂಡತಿ, ತಾಯಿ, ತಮ್ಮನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ಬೆದರಿಕೆಯೊಡ್ಡಿದ ಹಾಗೂ ಸುವರ್ಣಾಳನ್ನು ನೇಣು ಹಾಕಿ ಕೊಲೆ ಮಾಡಿರುವ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಮತ್ತು ಭದ್ರತೆ ನೀಡುವಂತೆ ಅವರು ಪೊಲೀಸ್ ಇಲಾಖೆಯನ್ನು ಮನವಿ ಮಾಡಿದ್ದಾರೆ.

-VB News

Wednesday, 14 December 2011

ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಇಳಿಕೆ: ರಾಜ್ಯಸಭೆಯಲ್ಲಿ ಚಿದಂಬರಂ




ಗುರುವಾರ - ಡಿಸೆಂಬರ್-15-2011


ಹೊಸದಿಲ್ಲಿ, ಡಿ. 14: ಕರ್ನಾಟಕ, ಮಧ್ಯಪ್ರದೇಶ, ಒಡಿಶಾ ಮತ್ತು ಗುಜರಾತ್ ರಾಜ್ಯಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಈ ವರ್ಷದ ಅಕ್ಟೋಬರ್ ತಿಂಗಳವರೆಗೆ 170ಕ್ಕೆ ಕಡಿಮೆಯಾಗಿದೆ ಎಂದು ಗೃಹ ಸಚಿವ ಪಿ. ಚಿದಂಬರಂ ಇಂದು ರಾಜ್ಯ ಸಭೆಗೆ ತಿಳಿಸಿದರು.


‘‘ಅಲ್ಪಸಂಖ್ಯಾತರ ಅದರಲ್ಲೂ ಮುಖ್ಯವಾಗಿ ಕ್ರೈಸ್ತರ ಮೇಲಿನ ದೌರ್ಜನ್ಯ ಪ್ರಕರಣಗಳು ದೇಶದಲ್ಲಿ, ಮುಖ್ಯವಾಗಿ ಕರ್ನಾಟಕ, ಒಡಿಶಾ, ಮಧ್ಯಪ್ರದೇಶ ಮತ್ತು ಗುಜರಾತ್‌ಗಳಲ್ಲಿ ಹೆಚ್ಚುತ್ತಿದೆ ಎನ್ನುವುದು ಸರಿಯಲ್ಲ’’ ಎಂದು ಪ್ರಶ್ನೋತ್ತರ ಅವಧಿಯಲ್ಲಿ ಅವರು ಹೇಳಿದರು.



ಈ ನಾಲ್ಕು ರಾಜ್ಯಗಳಲ್ಲಿ ಈ ವರ್ಷದ ಅಕ್ಟೋಬರ್ ತಿಂಗಳವರೆಗೆ ಕೋಮು ಹಿಂಸೆ ಪ್ರಕರಣಗಳು 170ಕ್ಕೆ ಇಳಿದಿವೆ ಎಂದು ಹೇಳಿದ ಅವರು, ಕಳೆದ ವರ್ಷದ ಇದೇ ಅವಧಿಯಲ್ಲಿ 204 ಪ್ರಕರಣಗಳು ದಾಖಲಾಗಿದ್ದವು ಎಂದರು.



ದೇಶದಲ್ಲಿ ಕೋಮು ಸಾಮರಸ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ರಾಜ್ಯ ಸರಕಾರಗಳ ನಿರ್ದಿಷ್ಟ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಹಾಗೂ ಪೊಲೀಸ್ ಪಡೆಗಳನ್ನು ಆಧುನೀಕರಣ ಗೊಳಿಸುವ ಮೂಲಕ ಕೇಂದ್ರ ಸರಕಾರ ನೆರವು ನೀಡುತ್ತಿದೆ ಎಂದು ಸಚಿವರು ತಿಳಿಸಿದರು.



ರಾಷ್ಟ್ರ ರಾಜಧಾನಿಯಲ್ಲಿ ಈಶಾನ್ಯ ಭಾಗದ ಜನರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ದಿಲ್ಲಿಯಲ್ಲಿ ವಾಸಿಸುವ ಈಶಾನ್ಯ ಭಾಗದ ಜನರಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಚಿದಂಬರಂ ನುಡಿದರು.
ಹಣಕಾಸು ಸಚಿವರಾಗಿದ್ದಾಗ ಚಿದಂಬರಂ ಕೂಡ 2ಜಿ ಹಗರಣದಲ್ಲಿ ಭಾಗಿಯಾಗಿ ರುವುದರಿಂದ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳು ಘೋಷಣೆಗಳನ್ನು ಕೂಗುವುದರ ನಡುವೆಯೇ ಎಲ್ಲ ಪೂರಕ ಪ್ರಶ್ನೆಗಳಿಗೆ ಚಿದಂಬರಂ ಉತ್ತರಿಸಿದರು.



ಎಪ್ರಿಲ್‌ನಿಂದ ಮಾರ್ಚ್‌ವರೆಗಿನ ಕಳೆದ ಹಣಕಾಸು ವರ್ಷದಲ್ಲಿ 1,574 ಕಸ್ಟಡಿ ಸಾವುಗಳು ಸಂಭವಿಸಿದ್ದವು. ಇವುಗಳ ಪೈಕಿ 1,426 ಸಾವುಗಳು ನ್ಯಾಯಾಂಗ ಕಸ್ಟಡಿಯಲ್ಲಿ ಸಂಭವಿಸಿದರೆ, 146 ಪೊಲೀಸ್ ಕಸ್ಟಡಿಯಲ್ಲಿ ಸಂಭವಿಸಿದವು.



ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಕ್ರಮ ತೆಗೆದುಕೊಳ್ಳುವುದು ರಾಜ್ಯಗಳ ಕೆಲಸ ಎಂದರು. ಹಾಗಾಗಿ, ಕಸ್ಟಡಿ ಸಾವುಗಳ ವಿಷಯದಲ್ಲಿ ಕೇಂದ್ರ ಸರಕಾರ ನೇರವಾಗಿ ಮಧ್ಯಪ್ರವೇಶಿಸುವುದಿಲ್ಲ, ಬದಲಿಗೆ ಕಾಲ ಕಾಲಕ್ಕೆ ಸಲಹೆ ಸೂಚನೆಗಳನ್ನು ನೀಡುತ್ತದೆ ಎಂದು ಚಿದಂಬರಂ ತಿಳಿಸಿದರು.

ಮಡೆಸ್ನಾನ ನಿಷೇಧಕ್ಕೆ ದಲಿತ ನಾಯಕರ ಒತ್ತಾಯ


ಗುರುವಾರ - ಡಿಸೆಂಬರ್-15-2011

ದಲಿತರ ಸಭೆಯಲ್ಲಿ ಸಮಸ್ಯೆಗಳ ಮಹಾಪೂರ
 ಮಂಗಳೂರು, ಡಿ.14: ಸುಬ್ರಹ್ಮಣ್ಯ ಕ್ಷೇತ್ರ ಸೇರಿ ದಂತೆ ಜಿಲ್ಲೆಯ ದೇವಸ್ಥಾನಗಳಲ್ಲಿ ನಡೆಯುವ ಪಂಕ್ತಿ ಬೇಧದ ಭೋಜನ ಹಾಗೂ ಮಡೆಸ್ನಾನ ವನ್ನು ನಿಷೇಧಿಸುವಂತೆ ವಿವಿಧ ಸಂಘಟನೆಗಳ ದಲಿತ ನಾಯಕರು ಒಕ್ಕೊರಳಿನಿಂದ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ ಘಟನೆ ಇಂದು ನಡೆಯಿತು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ 1 ವರ್ಷದ ಬಳಿಕ ಇಂದು ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಾಯಕರ ಸಭೆಯಲ್ಲಿ ವಿಶೇಷವಾಗಿ ಮಡೆಸ್ನಾನ, ಧರ್ಮಸ್ಥಳದಲ್ಲಿ ಡಿಸಿ ಮನ್ನಾ ಭೂಮಿಯನ್ನು ಖಾಸಗಿಯವರಿಗೆ ಮಂಜೂರು ಮಾಡಿರುವ ಬಗ್ಗೆ ದಲಿತರಿಂದ ತೀವ್ರ ವಿರೋಧ ವ್ಯಕ್ತವಾಯಿತು.
ಮಡೆಸ್ನಾನ ವಿರೋಧಿಸಿ ಮಾತು ಆರಂಭಿಸಿದ ದಲಿತ ಹಕ್ಕುಗಳ ಹೋರಾಟ ಸಮಿತಿಯ ನಾಯಕ ಶೇಖರ್ ಬೆಳ್ತಂಗಡಿ, ಬುದ್ಧಿವಂತರ ಜಿಲ್ಲೆಯಲ್ಲೂ ಇಂತಹ ಅನಿಷ್ಟ ಪದ್ಧತಿ ನಡೆಯುತ್ತಿರುವುದು ನಾಚಿಕೆಗೇಡಿನ ವಿಷಯ. ಮಡೆಸ್ನಾನಕ್ಕೆ ಹೇರಲಾಗಿದ್ದ ನಿಷೇಧವನ್ನು ಹಿಂದೆಗೆದುಕೊಳ್ಳುವ ಮೂಲಕ ದಲಿತ ನಾಯಕರ ಮೇಲಿನ ಹಲ್ಲೆ ಘಟನೆಗೆ ನೇರವಾಗಿ ಜಿಲ್ಲಾಧಿಕಾರಿಯೇ ಹೊಣೆ ಎಂದು ದೂರಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಭಕ್ತರ ಭಾವನೆಗಳಿಗೆ ಬೆಲೆ ಕೊಟ್ಟು ನಿಷೇಧವನ್ನು ತೆರವುಗೊಳಿಸಬೇಕಾಯಿತು ಎಂದು ಹೇಳಿದಾಗ ಸಭೆಯಲ್ಲಿ ಉಪಸ್ಥಿತರಿದ್ದ ದಲಿತರು ಒಕ್ಕೊರಳಿ ನಿಂದ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು.
ಚಂದ್ರಗುತ್ತಿಯಲ್ಲಿ ಬೆತ್ತಲೆ ಸೇವೆ, ಸತಿಸಹಗ ಮನ ಪದ್ಧತಿ ನಿಷೇಧದ ವೇಳೆಯೂ ಈ ರೀತಿಯ ವಿರೋಧಗಳು ವ್ಯಕ್ತವಾಗಿದ್ದವು. ಹಾಗಿದ್ದರೂ ಅವುಗಳನ್ನು ನಿಷೇಧಿಸಲಾಗಿದೆ. ಮಡೆಸ್ನಾನ ಕೂಡಾ ನಿಷೇಧವಾಗಬೇಕು. ಇಲ್ಲವಾದರೆ ಬಿಡುವುದಿಲ್ಲ ಎಂಬ ಮಾತುಗಳು ದಲಿತ ನಾಯಕರಿಂದ ವ್ಯಕ್ತವಾಯಿತು.
ದೇವಸ್ಥಾನಗಳಲ್ಲಿ ದಲಿತರಿಗೆ ಅನ್ನ ಬಡಿಸಲು ಅವಕಾಶವಿಲ್ಲವೇಕೆ?
ಕಟೀಲು, ಸುಬ್ರಹ್ಮಣ್ಯ ಮೊದಲಾದ ಸರಕಾರಿ ಸ್ವಾಮ್ಯದ ದೇವಾಲಯಗಳಲ್ಲಿ ಎಲೆ ತೆಗೆಯುವ ಕೆಲಸ ಮಾಡುವ ದಲಿತರಿಗೆ ಅನ್ನ ಬಡಿಸುವ ಅವಕಾಶ ಏಕಿಲ್ಲ ಎಂದು ಪ್ರಶ್ನಿಸಿದ ದಲಿತ ನಾಯಕ ಭಾನುಚಂದ್ರ, ದೇವಸ್ಥಾನಗಳಲ್ಲಿ ಮೊಕ್ತೇಸರರಾಗಿ ಪರಿಶಿಷ್ಟ ಜಾತಿ, ಪಂಗಡದ ಒಬ್ಬ ಸದಸ್ಯರ ನೇಮಕ ಮಾಡಬೇಕು. ಆದರೆ ಆ ಅವಕಾಶವನ್ನು ಮರಾಠಿ ನಾಯ್ಕ ಸಮುದಾಯಕ್ಕೆ ಮಾತ್ರವೇ ನೀಡಲಾಗುತ್ತದೆ ಹೊರತು ಕೊರಗ ಜನಾಂಗ ಸೇರಿದಂತೆ ಇತರ ದಲಿತ ಸಮುದಾಯದವ ರನ್ನು ಸೇರಿಸಲಾಗುತ್ತಿಲ್ಲ ಎಂದು ದೂರಿದರು.

ಈ ನಡುವೆ ಮಾತನಾಡಿದ ದಲಿತ ನಾಯಕರೊಬ್ಬರು, ದೇವಸ್ಥಾನಗಳ ಮೂಲಕವೇ ದಲಿತರ ಶೋಷಣೆ ನಡೆಯುತ್ತಾ ಬಂದಿದೆ ಎಂದು ಅಸಹನೆ ವ್ಯಕ್ತಪಡಿಸಿದರು. ಸರಕಾರಿ ಕಾರ್ಯಕ್ರಮಗಳಾದ ವಾಲ್ಮೀಕಿ ಜಯಂತಿ, ಅಂಬೇಡ್ಕರ್ ಜಯಂತಿ ಹೊರತು ಪಡಿಸಿ ಉಳಿದ ಸ್ವಾತಂತ್ರ ದಿನಾಚರಣೆ, ಗಣರಾಜ್ಯೋತ್ಸವ ಮೊದಲಾದ ರಾಷ್ಟ್ರೀಯ ಹಬ್ಬಗಳ ಪೂರ್ವಭಾವಿ ಸಭೆಯಲ್ಲಿ ದಲಿತ ನಾಯಕರಿಗೆ ಅವಕಾಶ ನೀಡದೆ ತಾರತಮ್ಯ ಎಸಗಲಾಗುತ್ತಿದೆ ಎಂದು ಸಭೆಯಲ್ಲಿ ಭಾನುಚಂದ್ರ ಆರೋಪಿಸಿದರು.
 ಡಿಸಿ ಮನ್ನಾ ಭೂಮಿ ಖಾಸಗಿಯವರಿಗೆ ಮಂಜೂರು!
ಇದೇ ವೇಳೆ ಕಳೆದ ವರ್ಷ ನಡೆದ ದಲಿತ ನಾಯಕರ ಸಭೆಯಲ್ಲಿ ನಾಗರಿಕ ಸೇವಾ ಟ್ರಸ್ಟ್‌ನ ಪ್ರತಿನಿಧಿಗಳ ಬೇಡಿಕೆಯಂತೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಧರ್ಮಸ್ಥಳದಲ್ಲಿ ವಿದ್ಯಾಸಂಸ್ಥೆಗೆ ಡಿಸಿ ಮನ್ನಾ ಜಮೀನು ಸ.ನಂಬ್ರ 507, 508/1, 509, 521/1 ಹೀಗೆ ಒಟ್ಟು 12 ಸರ್ವೆ ನಂಬ್ರದ ಭೂಮಿಯನ್ನು ಮಂಜೂರು ಮಾಡಿರುವುದರ ವಿರುದ್ಧ ದಲಿತರು ಒಕ್ಕೊರಳಿ ನಿಂದ ಸಭೆಯಲ್ಲಿ ವಿರೋಧಿಸಿದರು. ಸರಕಾರಿ ಆದೇಶದ ಪ್ರಕಾರ 43.90 ಎಕರೆ ಜಮೀನು ಖಾಸಗಿಯವರಿಗೆ ಮಂಜೂರು ಆಗಿದೆ ಎಂದು ಜಿಲ್ಲಾಧಿಕಾರಿ ಹೇಳಿದಾಗ ಸಭೆಯಲ್ಲಿ ದಲಿತರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಇಂದಿನ ಸಭೆಯಲ್ಲಿ ದಲಿತರ ಸಾಕಷ್ಟು ಸಮಸ್ಯೆಗಳು ಡಿಸಿ ಮನ್ನಾ ಭೂಮಿಯ ಅತಿಕ್ರಮಣದ ತೆರವಿನ ಕುರಿತಂತೆಯೇ ಆಗಿದೆ. ದಲಿತರು ಒಂದು ಸೆಂಟ್ಸ್ ಭೂಮಿಗಾಗಿ ಪರದಾಡುತ್ತಿರುವಾಗ ಡಿಸಿ ಮನ್ನಾ ಭೂಮಿ ಯನ್ನು ಖಾಸಗಿಯವರಿಗೆ ಬಿಟ್ಟು ಕೊಟ್ಟಿರುವುದು ಖಂಡನೀಯ. ದಲಿತರು ಆರ್‌ಟಿಸಿಗಾಗಿ ಹತ್ತಾರು ವರ್ಷ ಕಚೇರಿಗಳಿಗೆ ಅಲೆಯಬೇಕಾದರೆ ಡಿಸಿ ಮನ್ನಾ ಭೂಮಿಯನ್ನು ಖಾಸಗಿಯವರಿಗೆ ತೀರಾ ಸಲೀಸಾಗಿ ಮಂಜೂರು ಮಾಡಲಾಗಿದೆ ಎಂದು ದಲಿತ ನಾಯಕರಾದ ಕೃಷ್ಣಾನಂದ, ಸೇಸಪ್ಪ ಸೇರಿದಂತೆ ದಲಿತ ನಾಯಕರು ಆಕ್ಷೇಪಿಸಿದರು. ಈ ಬಗ್ಗೆ ಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಂಡು ಸರಕಾರದ ಮಂಜೂರಾತಿ ಯನ್ನು ರದ್ದುಪಡಿಸುವಂತೆ ಆಗ್ರಹಿಸಲಾಯಿತು.
ಸಭೆಯಲ್ಲಿ ಜಿಪಂ ಸದಸ್ಯೆ ಚಂದ್ರಕಲಾ ಮೇಲಿನ ದೌರ್ಜನ್ಯ ಪ್ರಕರಣ ಸೇರಿದಂತೆ, ದಲಿತರ ಮಕ್ಕಳಿಗೆ ಐಎಎಸ್, ಐಪಿಎಸ್ ಶಿಕ್ಷಣಕ್ಕೆ ಪೂರಕ ವ್ಯವಸ್ಥೆ, ಅಂಬೇಡ್ಕರ್ ಭವನ ನಿರ್ಮಾಣ, ಶ್ಮ್ಮಶಾನದ ಕೊರತೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳ ಕೊರತೆ, ಎಪ್ರಿಲ್ 14ರಂದು ಶಾಲೆಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಗೆ ಅವಕಾಶ ಸೇರಿದಂತೆ ಹಲವಾರು ಸಮಸ್ಯೆಗಳನ್ನು ದಲಿತ ನಾಯಕರು ಜಿಲ್ಲಾಧಿಕಾರಿ ಎದುರು ಪ್ರಸ್ತಾಪಿಸಿದರು.
ದಲಿತರಿಗೆ ನಿವೇಶನ ನೀಡುವ ಕುರಿತಂತೆ ಈಗಾಗಲೆ ಜಿಲ್ಲೆಯಲ್ಲಿ ಒಟ್ಟು 92 ಎಕರೆ ಖಾಲಿ ಇರುವ ಜಾಗವನ್ನು ಗುರುತಿಸಲಾಗಿದ್ದು, ಅದನ್ನು ಅರ್ಹರಿಗೆ ಹಂಚಲು ಆದ್ಯತೆ ನೀಡಲಾಗುವುದು. ಗುರುತಿಸಲಾಗಿರುವ ಭೂಮಿಯ ಬಗ್ಗೆ ದಲಿತ ಪ್ರತಿನಿಧಿಗಳು ಪರಿಶೀಲನೆ ನಡೆಸಿ ನಿವೇಶನ ರಹಿತರ ಪಟ್ಟಿ ನೀಡುವಂತೆ ಜಿಲ್ಲಾಧಿಕಾರಿ ಚನ್ನಪ್ಪ ಗೌಡ ಸಭೆಯಲ್ಲಿ ಸೂಚಿಸಿದರು.
ಮೂರು ತಿಂಗಳಿಗೊಮ್ಮೆ ಸಭೆಯ ಭರವಸೆ
ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಪ್ರತಿ ಎರಡು ತಿಂಗಳಿಗೊಮ್ಮೆ, ಜಿಲ್ಲಾಧಿಕಾರಿ ಮಟ್ಟದಲ್ಲಿ ಮೂರು ತಿಂಗಳಿಗೊಮ್ಮೆ ದಲಿತ ನಾಯಕರ ಸಭೆ ನಡೆಸುವುದಾಗಿ ಭರವಸೆ ನೀಡಿದ ಜಿಲ್ಲಾಧಿಕಾರಿ, ದಲಿತರು ತಮ್ಮ ಸಮಸ್ಯೆಗಳನ್ನು ಸಭೆಗಳಿಗಾಗಿಯೇ ಕಾಯದೆ ನೇರವಾಗಿ ಬಂದು ಚರ್ಚಿಸಿದಲ್ಲಿಯೂ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ನಾಗರಿಕ ಹಕ್ಕು ನಿರ್ದೇಶನಾಲ ಯದ ಎಸ್ಪಿ ಸರ್ವೋತ್ತಮ ಪೈ, ಪುತ್ತೂರು ಸಹಾಯಕ ಆಯುಕ್ತ ಸುಂದರ ಭಟ್, ಮಂಗಳೂರು ಸಹಾಯಕ ಆಯುಕ್ತ ವೆಂಕಟೇಶ್, ಮಂಗಳೂರು ಮನಪಾ ಆಯುಕ್ತ ಡಾ. ಹರೀಶ್ ಕುಮಾರ್, ಪುತ್ತೂರು ಎಎಸ್ಪಿ ಪ್ರಭಾಕರ್, ಮಂಗಳೂರು ಎಸಿಪಿ ಸುಬ್ರಹ್ಮಣ್ಯ ಮೊದಲಾದ ವರು ಉಪಸ್ಥಿತರಿದ್ದರು.

ಹರಕೆಯ ಬಯಲಾಟ!
  ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ 3 ತಿಂಗಳಿಗೊಮ್ಮೆ ನಡೆಯಬೇಕಿರುವ ಜಿಲ್ಲಾ ಮಟ್ಟದ ದಲಿತರ ಕುಂದು ಕೊರತೆಗಳ ಸಭೆಯು ಒಂದು ವರ್ಷದ ಬಳಿಕ ಇಂದು ನಡೆದ ಹಿನ್ನೆಲೆ ಯಲ್ಲಿ ಸುಳ್ಯ, ಪುತ್ತೂರು, ಬಂಟ್ವಾಳ ಸೇರಿದಂತೆ ಎಲ್ಲ ತಾಲೂಕುಗಳ ದಲಿತ ನಾಯಕರು ಹಾಗೂ ಕಾರ್ಯಕರ್ತರು ತಮ್ಮ ನೂರಾರು ಸಮಸ್ಯೆಗಳೊಂದಿಗೆ ಸಭೆಗೆ ಹಾಜರಾ ಗಿದ್ದರು. ಜಿಲ್ಲಾಧಿಕಾರಿಯ ಮಿನಿ ಕೋರ್ಟ್ ಹಾಲ್‌ನಲ್ಲಿ ಆಸನಗಳ ಕೊರತೆ, ಇಕ್ಕಟ್ಟಿನಿಂದಾಗಿ ದಲಿತರ ನೇಕರು ನಿಂತುಕೊಂಡೇ ಸಭೆಯಲ್ಲಿ ಭಾಗವಹಿಸಬೇಕಾಯಿತು. ಈ ಬಗ್ಗೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾ ಯಿತು. ಇದೇ ವೇಳೆ, ‘ಇದು ಕಾಟಾಚಾರದ ಸಭೆ. ಹರಕೆಯ ಬಯಲಾಟ. ನಮಗೆ ಕುಳಿತು ಕೊಳ್ಳಲೇ ಅವಕಾಶವಿಲ್ಲ. ಇನ್ನು ನಮ್ಮ ಸಮಸ್ಯೆ ಪರಿಹಾರವಾಗುವುದೆಂತು’ ಎಂಬ ಅಸಹನೆಯ ಮಾತು ಕೂಡಾ ಸಭೆಯಲ್ಲಿ ನಿಂತುಕೊಂಡಿದ್ದ ದಲಿತರಿಂದ ಕೇಳಿಬಂತು.

ಆರೆಸ್ಸೆಸ್ ನಿಷೇಧಕ್ಕೆ ಬಿಹಾರ ಕಾಂಗ್ರೆಸ್ ಆಗ್ರಹ


ನವೆಂಬರ್ -13-2010


ಪಾಟ್ನಾ, ನ. 12: ಆರೆಸ್ಸೆಸ್ ಭಯೋತ್ಪಾದಕ ಸಂಘಟನೆ, ತಕ್ಷಣವೇ ಅದನ್ನು ನಿಷೇಧಿಸುವಂತೆ ಬಿಹಾರ ಕಾಂಗ್ರೆಸ್ ನಾಯಕ ಪ್ರೇಮ್ ಚಂದ್ರ ಮಿಶ್ರಾ ಇಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಆರೆಸ್ಸೆಸ್ ನಾಯಕ ಕೆ.ಎಸ್. ಸುದರ್ಶನ್ ಮಾಡಿರುವ ಆಪಾದನೆಗಳನ್ನು ವಿರೋಧಿಸಿ, ಇಂದಿಲ್ಲಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಿಶ್ರಾ ಈ ರೀತಿ ಆಗ್ರಹಿಸಿದ್ದಾರೆ. ಆಕ್ರೋಶಿತ ಕಾಂಗ್ರೆಸ್ ಕಾರ್ಯಕರ್ತರು, ಆರೆಸ್ಸೆಸ್ ನಾಯಕ ಸುದರ್ಶನ್‌ರ ಪ್ರತಿಕೃತಿಯನ್ನು ದಹಿಸಿ, ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು.

ಹಿರಿಯ ಕಾಂಗ್ರೆಸ್ ನಾಯಕ ಪ್ರೇಮ್ ಚಂದ್ರ ಮಿಶ್ರಾರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದು, ಪಾಟ್ನಾ ಜಂಕ್ಷನ್ ಬಳಿಯಿಂದ ಡಾಕ್ ಬಂಗ್ಲೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಅಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸುದರ್ಶನ್‌ರ ಪ್ರತಿಕೃತಿಯನ್ನು ದಹಿಸಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು. ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಲಲನ್ ಕುಮಾರ್ ಉಪಸ್ಥಿತರಿದ್ದರು.

ಸೋನಿಯಾ ಗಾಂಧಿಯ ತೇಜೋವಧೆ ಮಾಡಲೆತ್ನಿಸಿದ ಸುದರ್ಶನ್ ವಿರುದ್ಧ ಪ್ರಕರಣ ದಾಖಲಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದರು. ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಮಿಶ್ರಾ, ಆರೆಸ್ಸೆಸ್ ಒಂದು ಭಯೋತ್ಪಾದಕ ಸಂಘಟನೆ ಎಂದು ಆಪಾದಿಸಿದರು. ದೇಶದ ವಿರುದ್ಧ ಕಾರ್ಯಾಚರಿಸುತ್ತಿರುವ ಆರೆಸ್ಸೆಸ್‌ನ್ನು ತಕ್ಷಣವೇ ನಿಷೇಧಿಸುವಂತೆ ಅವರು ಆಗ್ರಹಿಸಿದರು.







http://vbnewsonline.com/specialNews/32621/







html