Pages

Showing posts with label V Srinivasa Prasad. Show all posts
Showing posts with label V Srinivasa Prasad. Show all posts

Monday, 12 December 2011

Spotlight on Buddha's message at Dalit convention



Staff Correspondent




MAKING A RESOLVE: A Dalit convention on equality was organised at the Maharaja's College Grounds in Mysore on Sunday. — PHOTO: M A SRIRAM

MYSORE: A large number of Dalits participated in a convention on equality in Mysore on Sunday and resolved to spread the message of Buddha.
At the convention titled "Buddhanedege Marali Manege," leaders and youth of the Dalit community from across the State adopted a resolution to take up a door-to-door campaign on spreading the principles of Buddha.
Karnataka Pradesh Congress Committee President M. Mallikarjun Kharge; the former Union Minister V. Srinivas Prasad, the former Ministers G. Parameshwar and H.C. Mahadevappa, and writer Devanur Mahadev were among those present on the occasion.
Tableau
A tableau flagged off from Bangalore, carrying the portrait of Buddha in meditation, arrived at the venue before the convention began. It was kept on the stage.
The convention was organised by the Dr. B.R. Ambedkar Research and Extension Centre of Mysore University and the Dr. B.R. Ambedkar Dhamma Deekshe Golden Jubilee Committee. It provided a platform for holding deliberations on Buddha and B.R. Ambedkar. It was organised to mark the 50 years of Dr. Ambedkar embracing Buddhism as a mark of protest against casteism.
The gathering adopted a resolution to condemn the social boycott, caste atrocities and exploitation of Dalits. Although 60 years had passed since India attained freedom , social evils had not been eliminated, it was observed.

Saturday, 30 July 2011

Casteism dangerous than terrorism: Prasad

Casteism dangerous than terrorism: Prasad
Mysore, June 19, DHNS:

MLA V Sreenivas Prasad said casteism is more dangerous than terrorism. He was speaking at the Loka Shanthigagi Nirantara Buddha Sandesha Yatre (a journey of Buddha’s messages for world peace) organised here on Sunday at the Vishwa Mytri Buddha Vihar.

 MLA V Sreenivas Prasad, Prof K S Bhagwan, MP R Dhruvanarayan, former mayor Purushotham offering floral tributes to the idol of Bhagwan Buddha in Mysore on Sunday. DH photoPrasad said casteism and untouchability still exists in the society, and were growing at a fast pace. As a result, dalits are living under fear. Comparatively, casteism and untouchability have a greater impact on the nation, rather than corruption and black money. There is a need to weed out the same.

The MLA said accepting Hindu religion is akin to embracing inequality. However, he said, there is no meaning for religious conversion until and unless there is a good cause. Dr B R Ambedkar accepted Buddhism to free his self from the religion he belonged to way back in 1956.

Chamarajanagar MP R Dhruvanarayan said people would love to embrace the religion that promises equality and non-violence. Compared with Mangalore, where many converted into Buddhism, it was vice-versa in the old Mysore region.
http://www.deccanherald.com/content/170101/casteism-dangerous-terrorism-prasad.html

Wednesday, 18 May 2011

ಅಸ್ಪೃಶ್ಯತೆ, ಜಾತೀಯತೆ ಆಚರಣೆ: ವಿಷಾದ

ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ‘ಡಾ.ಬಿ.ಆರ್.ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ’ ಕುರಿತು ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಶಾಸಕ ವಿ.ಶ್ರೀನಿವಾಸ ಪ್ರಸಾದ್ ಉದ್ಘಾಟಿಸಿದರು. ಮೈಸೂರು ವಿವಿ ಸಿಂಡಿಕೇಟ್ ಸದಸ್ಯರಾದ ಪ್ರೊ.ಸುಮಿತ್ರಾಬಾಯಿ, ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ರಮೇಶ್, ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಜೆ.ಸೋಮಶೇಖರ್ ಇದ್ದಾರೆ.
March 28, 2011

ಮೈಸೂರು: ‘ಡಾ.ಬಿ.ಆರ್.ಅಂಬೇಡ್ಕರ್ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೆಲಸ ಮಾಡಬೇಕು. ಒಂದು ವೇಳೆ ಅವರ ಆಶಯ ಈಡೇರಿದರೆ ದೇಶ ಸ್ವರ್ಗವಾಗುತ್ತದೆ’ ಎಂದು ಶಾಸಕ ವಿ.ಶ್ರೀನಿವಾಸ ಪ್ರಸಾದ್ ಇಲ್ಲಿ ತಿಳಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ‘ಡಾ.ಬಿ.ಆರ್.ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ಹೊರಗುಳಿಯುವಿಕೆ ಮತ್ತ ಒಳಗೊಳ್ಳುವಿಕೆ’ ಕುರಿತು ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

‘ದೇಶಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ, ಪ್ರತಿಯೊಬ್ಬ ಪ್ರಜೆಯು ಸ್ವತಂತ್ರವಾಗಿ ಬದುಕಲು ಸಂವಿಧಾನ ರಚನೆ ಮಾಡಲಾಗಿದೆ. ಅಂಬೇಡ್ಕರ್ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು. ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾನತೆಯಿಂದ ಬದುಕುವ ಹಕ್ಕನ್ನು ಕಲ್ಪಿಸಿಕೊಟ್ಟಿದ್ದಾರೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ವಿಶ್ವಕ್ಕೆ ಮಾದರಿಯಾಗಿದೆ’ ಎಂದು ಹೇಳಿದರು.

‘ಅಸ್ಪೃಶ್ಯತೆಯನ್ನು ಅಂಬೇಡ್ಕರ್ ಅವರು ತೀವ್ರವಾಗಿ ವಿರೋಧಿಸುತ್ತಿದ್ದರು. ಅದನ್ನು ಸ್ವತಃ ಅವರೇ ಅನುಭವಿಸಿದ್ದರು. ಸಮಾಜದ ಎಲ್ಲ ವರ್ಗದ ಜನರಿಗೂ ಸಮಾನತೆಯಿಂದ ಬದುಕುವ ಹಕ್ಕನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅವರು ಜೀವನದ ಉದ್ದಕ್ಕೂ ಹೋರಾಟ ನಡೆಸಿದರು. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನ ನಾವು ಮುಂದುವರೆದಿದ್ದರೂ ಅಸ್ಪೃಶ್ಯತೆ, ಜಾತಿಯತೆ ಸಮಾಜದಲ್ಲಿ ಇನ್ನೂ ಜೀವಂತವಾಗಿದೆ. ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಕೀಳಾಗಿ, ನಿಕೃಷ್ಟವಾಗಿ ಕಾಣುವುದು ಸರಿಯಲ್ಲ. ಮಾನವೀಯತೆಯಿಂದ ಕಾಣಬೇಕು’ ಎಂದರು.

ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ರಮೇಶ್, ಮೈಸೂರು ವಿವಿ ಸಿಂಡಿಕೇಟ್ ಸದಸ್ಯರಾದ ಪ್ರೊ.ಸುಮಿತ್ರಾಬಾಯಿ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಜೆ.ಸೋಮಶೇಖರ್ ಉಪಸ್ಥಿತರಿದ್ದರು. ‘ಅಂಬೇಡ್ಕರ್ ಸ್ಮರಣಾರ್ಥ ಫುಟ್‌ಬಾಲ್ ಪಂದ್ಯಾವಳಿ ಆಯೋಜಿಸಲು ಸಿದ್ಧತೆ’

ಡಾ.ಬಿ.ಆರ್.ಅಂಬೇಡ್ಕರ್ ಸ್ಮರಣಾರ್ಥ ಫುಟ್‌ಬಾಲ್ ಪಂದ್ಯಾವಳಿಯನ್ನು ಆಯೋಜಿಸುವ ಸಿದ್ಧತೆ ನಡೆಯುತ್ತಿದೆ ಎಂದು ಶಾಸಕ ವಿ.ಶ್ರೀನಿವಾಸಪ್ರಸಾದ್ ತಿಳಿಸಿದರು.ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಅಂತರ ವಲಯ ಫುಟ್‌ಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಮೈಸೂರು ಕ್ರೀಡಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಕೊಟ್ಟಿದೆ. ಆದರೆ ಬೆಂಗಳೂರು ರಾಜಧಾನಿಯಾದ ಮೇಲೆ ಅವಕಾಶಕ್ಕಾಗಿ ಮೈಸೂರಿನ ಕ್ರೀಡಾಪಟುಗಳು ಬೆಂಗಳೂರಿಗೆ ಹೋಗುತ್ತಿದ್ದಾರೆ. ಆದ್ದರಿಂದ ಹೆಚ್ಚು ಪಂದ್ಯಾವಳಿಗಳನ್ನು ಆಯೋಜಿಸಿ ಅರ್ಹ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದರು.

ದಿನದ 24 ಗಂಟೆಯೂ ರಾಜಕೀಯದಲ್ಲಿ ಮುಳುಗಿರುವ ರಾಜಕಾರಣಿಗಳಿಗೆ ಇಂತಹ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನೆಮ್ಮದಿ, ಸಂತೋಷ ಸಿಗುತ್ತದೆ. ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಫುಟ್ ಬಾಲ್ ಸಂಸ್ಥೆಯ ಕೆ.ಜಿ.ಸುಬ್ರಮಣ್ಯಸ್ವಾಮಿ, ಕೆಎಸ್ ಎಫ್‌ಎ ಕಾರ್ಯದರ್ಶಿ ಇ.ಕೃಷ್ಣನಾರಾಯಣ್, ಖಜಾಂಚಿ ಎ.ಡಿ.ನಾಗೇಂದ್ರ, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್, ಸಂಘಟನಾ ಕಾರ್ಯದರ್ಶಿ ಎಲ್.ಮಂಜುನಾಥ್, ಪಂದ್ಯಾವಳಿಯ ಕಾರ್ಯದರ್ಶಿಗಳಾದ ಎಸ್.ಎ.ಬಷೀರ್, ಎಸ್.ಕೃಷ್ಣೋಜಿ ರಾವ್, ಪಿ.ನರಸಿಂಹಯ್ಯ ಇತರರು ಉಪಸ್ಥಿತರಿದ್ದರು.



ಅಂಬೇಡ್ಕರರ ರಾಜಕೀಯ ನಿಲುವಿನ ಬಗ್ಗೆ ತಪ್ಪಭಿಪ್ರಾಯ ಸಲ್ಲ!


ಹಿರಿಯರಾದ, ಶಾಸಕರೂ ಆದ ಮಾಜಿ ಕೇಂದ್ರ ಸಚಿವ ಶ್ರೀ ವಿ. ಶ್ರೀನಿವಾಸಪ್ರಸಾದ್ರವರು ಅಂಬೇಡ್ಕರರ ಬಗ್ಗೆ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಜಾತೀಯತೆ, ರಾಜಕೀಯದ ಸೋಂಕಿಲ್ಲದ ನಾಯಕ ಅಂಬೇಡ್ಕರ್ ಎಂದಿದ್ದಾರೆ. ಈ ಹಿನ್ನಿಲೆಯಲ್ಲಿ ಒಂದು ಪ್ರತಿಕ್ರಿಯೆ.

ನಿಜಕ್ಕೂ ಪ್ರಸಾದರ ಈ ಹೇಳಿಕೆ ದುರದೃಷ್ಟಕರ. ಯಾಕೆಂದರೆ ಯಾವ ಅಂಬೇಡ್ಕರ್ ತನ್ನ ಜೀವನದುದ್ದಕ್ಕೂ ದಲಿತರ ಪ್ರತಿಯೊಂದು ಸಮಸ್ಯೆಗಳಿಗೂ ರಾಜಕೀಯ ಅಧಿಕಾರ ಪಡೆಯುವುದರಲ್ಲಿಯೇ ಪರಿಹಾರವಿದೆಯೆಂದು ಪ್ರತಿಪಾದಿಸುತ್ತಿದ್ದರೋ, ರಾಜಕೀಯವನ್ನು ತನ್ನ ಜೀವನದ ಉಸಿರಾಗಿ ಹೊಂದಿದ್ದರೋ ಅಂತಹ ಅಂಬೇಡ್ಕರರನ್ನು ರಾಜಕೀಯದ ಸೋಂಕಿಲ್ಲದವರೆನ್ನುವುದು ಅದೆಷ್ಟು ಸರಿ? ಉದಾಹರಣೆಗೆ ಹೇಳುವುದಾದರೆ 1948 ಏಪ್ರಿಲ್ 25 ರ ಭಾನುವಾರ ಲಕ್ನೋ ನಗರದಲ್ಲಿ ಪರಿಶಿಷ್ಟ ಜಾತಿಗಳ ಒಕ್ಕೂಟವನ್ನುದ್ದೇಶಿಸಿ ಮಾತನಾಡುತ್ತಾ ಅಂಬೇಡ್ಕರ್ರವರು ಸಾಮಾಜಿಕವಾಗಿ ಆಭಿವೃದ್ಧಿ ಹೊಂದಲು ರಾಜಕೀಯ ಅಧಿಕಾರ ಪಡೆಯುವುದು ಅತ್ಯಗತ್ಯವಾಗಿದೆ. ಆದ್ದರಿಂದ ರಾಜಕೀಯ ಅಧಿಕಾರ ಪಡೆಯುವುದರ ಮೂಲಕ ಪರಿಶಿಷ್ಟಜಾತಿಯ ಜನರು ತಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎನ್ನುತ್ತಾರೆ. ಮತ್ತೊಂದೆಡೆ 1942 ಆಗಸ್ಟ್ 23 ರಂದು ದೆಹಲಿಯಲ್ಲಿ ಮಾತನಾಡುತ್ತಾ ಅವರು ರಾಜ್ಯದ ಆಡಳಿತದ ಬೀಗದ ಕೈಯನ್ನು ನಿಮ್ಮ ಕೈಗೆ ತರಲು ನಾನು ಯತ್ನಿಸುತ್ತಿದ್ದೇನೆ. ನೀವು ಇತರರ ಜೊತೆ ಸಮಾನತೆಯ ಅಧಾರದ ಮೇಲೆ ಆ ರಾಜಕೀಯ ಅಧಿಕಾರವನ್ನು ಹಂಚಿಕೊಂಡು ಮುನ್ನುಗ್ಗಬೇಕು ಎಂದು ಕರೆ ನೀಡುತ್ತಾರೆ.



ಅಂದಹಾಗೆ ಅಂಬೇಡ್ಕರರ ಬಗ್ಗೆ ಅವರ ರಾಜಕೀಯ ಒಲವು ನಿಲುವುಗಳ ಬಗ್ಗೆ ಇಂತಹ ಒಂದಲ್ಲ ಎರಡಲ್ಲ ಒಂದು ನೂರು ಉದಾಹರಣೆ ಕೊಡಬಹುದು. ಹಾಗೆಯೇ ರಾಜಕೀಯ ಎಂದರೆ ರಾಜಕೀಯ ಪಕ್ಷಗಳನ್ನು ಸ್ಥಾಪಿಸಬೇಕಲ್ಲವೇ? ಅಂಬೇಡ್ಕರರು ತಮ್ಮ ಜೀವಿತಾವಧಿಯಲ್ಲಿ ಸ್ಥಾಪಿಸಿದ್ದು ಬರೆ ಒಂದಲ್ಲ! ಸ್ವತಂತ್ರ ಕಾಮರ್ಿಕ ಪಕ್ಷ, ಪರಿಶಿಷ್ಟ ಜಾತಿಗಳ ಒಕ್ಕೂಟ, ರಿಪಬ್ಲಿಕನ್ ಪಾಟರ್ಿ ಆಫ್ ಇಂಡಿಯಾ ಎಂಬ ಒಟ್ಟು ಮೂರು ರಾಜಕೀಯ ಪಕ್ಷಗಳನ್ನು! ಸ್ವತಂತ್ರ ಕಾಮರ್ಿಕ ಪಕ್ಷದಿಂದ ಮುಂಬೈ ಲೆಜಿಸ್ಲೇಟಿವ್ ಅಸೆಂಬ್ಲಿಗೆ ಸ್ಪಧರ್ಿಸಿ 17 ಸ್ಥಾನಗಳನ್ನು ಗೆಲ್ಲುವ ಅವರು, ಬ್ರಿಟಿಷ್ ಸಕರ್ಾರದಲ್ಲಿ ನಾಲ್ಕು ವರ್ಷ, ಸ್ವತಂತ್ರ ಬಂದಾಗ ನಾಲ್ಕು ವರ್ಷ ಒಟ್ಟು 8 ವರ್ಷ ಕೇಂದ್ರದಲ್ಲಿ ಮಂತ್ರಿಯಾಗಿಯೂ ಸೇವೆ ಸಲ್ಲಿಸುತ್ತಾರೆ. ಎರಡು ಬಾರಿ ಲೋಕಸಭಾ ಚುನಾವಣೆಗೆ ಸ್ಪಧರ್ಿಸಿ ಕಾಂಗ್ರೆಸ್ ಅಭ್ಯಥರ್ಿಗಳ ಎದುರು ಸೋಲುವ ಅವರು ಕಡೆಗೆ ಮುಂಬೈ ಅಸೆಂಬ್ಲಿಯಿಂದ ಪಕ್ಷೇತರರ ಸಹಾಯದಿಂದ ರಾಜ್ಯಸಭೆಗೆ ಆಯ್ಕೆಗೆ ರಾಜ್ಯಸಭಾ ಸದಸ್ಯರೂ ಆಗುತ್ತಾರೆ! ಇಷ್ಟೆಲ್ಲಾ ಇರುವಾಗ ಅವರಿಗೆ ರಾಜಕೀಯದ ಸೋಂಕಿಲ್ಲ ಎನ್ನುವುದು ಅದೆಷ್ಟು ಸರಿ? ಯಾಕೆ ಅಂಬೇಡ್ಕರ್ರವರು ಕಾಂಗ್ರೆಸ್ ಪಕ್ಷವನ್ನು ಸೇರಿದ್ದರೆ ಮಾತ್ರ ಅವರು ರಾಜಕೀಯ ವ್ಯಕ್ತಿಯಾಗುತ್ತಿದ್ದರೆ? ಕಾಂಗ್ರೆಸ್ಸನ್ನು ತಮ್ಮ ಜೀವನದುದ್ದಕ್ಕೂ ವಿರೋಧಿಸಿ ಸ್ವಂತ ಶಕ್ತಿಯ ಮೇಲೆ ಆಡಳಿತದ ಚುಕ್ಕಾಣಿ ಹಿಡಿಯಲು ಯತ್ನಿಸಿದ್ದು ರಾಜಕೀಯವಾಗುವುದಿಲ್ಲವೇ? ಬೇಡ, ಅಂಬೇಡ್ಕರರ ಸ್ವಾಭಿಮಾನಿ ರಾಜಕೀಯದ ಬಗ್ಗೆ ಹಗುರವಾಗಿ ಮಾತನಾಡುವುದು ಬೇಡ. ಹಾಗೇನಾದರೂ ಮಾತನಾಡಿದರೆ ಅದು ನಾವು ಅವರ ವ್ಯಕ್ತಿತ್ವಕ್ಕೆ ಎಸಗುವ ಅಪಚಾರವಲ್ಲದೆ ಬೇರೇನಲ್ಲ. 
Ho Ba Raghothama
ರಘೋತ್ತಮ ಹೊ.ಬ
ಚಾಮರಾಜನಗರ_571313

Monday, 9 May 2011

‘Atrocities against dalits haven’t stopped’


Mysore, April 5, DHNS

Expressing disappointment at group clashes that occurred at Alagudu in T Narsipur Taluk recently, MLA V Srinivasa Prasad bemoaned that atrocities against Dalits hadn’t stopped as yet.

He was speaking at the 104th birth anniversary celebrations of Babu Jagjivanram organised jointly by the Babu Jagjivanram Research and Extension Centre and Scheduled Caste/ Scheduled Tribe Special Unit at the EMMRC auditorium, here on Tuesday.

Questioning the crime committed by dalits at Alagudu, Prasad bewailed that dalits were treated in the most inhuman manner. He said that even though we are in the 21st century, dalits are still ill-treated.

He said that Babu Jagjivanram had immense concern about marginalised sections of the society. Commending the late leader for his administrative skills, Prasad said that Jagjivanram had performed exceedingly well in his duties during his tenure at various ministries.

Prasad said: “It is very important for the University of Mysore to translate the work of Babu Jagjivanram into Kannada.” He commended the  Babu Jagjivanram Research and Extension Centre for bringing out a book on the challenges faced by the caste system in the country.

Addressing the audience, litterateur Prof De Javaregowda said that all mutts in the State are keeping the caste system alive for their personal interests.

He said that even now the country is facing problems such as casteism and untouchability. Mentioning that the oppressed classes should be given education, he warned the audience against falling into the trap of a few seers who visited Dalit localities, but avoided eating at the houses of people belonging to the caste classified as ‘lower’ according to them.

Prasad released the book ‘Challenges of the caste system in India’, written by Prof T Y Bhoothaiaya and Prof Gowramma.

Prasaranga Director Prof C Naganna, former vice chancellor Prof O Anantharamaiah, former MLA C Ramesh, Vice Chancellor Prof V G Talawar, Registrar (Evaluation) B Ramu and centre Director Prof Myla Halli Revanna and others were present.

Sunday, 8 May 2011

‘ಅಂಬೇಡ್ಕರ್ ಆಧ್ಯಾತ್ಮ ನಾಯಕನೇ ಹೊರತು ರಾಜಕೀಯ ನಾಯಕನಲ್ಲ’

ಸೋಮವಾರ - ಮೇ -09-2011

ಹಾಸನ, ಮೇ 8: ಅಂಬೇಡ್ಕರ್ ಒಬ್ಬ ಆಧ್ಯಾತ್ಮ ನಾಯಕನೇ ಹೊರತು ರಾಜಕೀಯ ನಾಯಕನಲ್ಲ. ರಾಜಕೀಯ ಸಾಧನೆಗೆ ಅಂಬೇಡ್ಕರ್ ಹೆಸರು ಬಳಕೆ ಮಾಡಿ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಬೇಡಿ ಎಂದು ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಮನವಿ ಮಾಡಿದ್ದಾರೆ.

ಹಾಸನದಲ್ಲಿ ದಲಿತ ಸಂಘಟನೆಗಳ, ನೌಕರರ ಮತ್ತು ವಿದ್ಯಾರ್ಥಿಗಳ ಒಕ್ಕೂಟ ಆಯೋಜಿಸಿದ್ದ ಬಾಬಾ ಸಾಹೇಬ್ ಡಾ.ಅಂಬೇಡ್ಕರ್‌ರ 120ನೆ ಜನ್ಮದಿನ ಮತ್ತು ದಲಿತರ ಐಕ್ಯತಾ ದಿನ ಕಾರ್ಯಕ್ರಮದಲ್ಲಿ ಆಶಯ ಭಾಷಣ ಮಾಡಿದ ಶ್ರೀನಿವಾಸ್ ಪ್ರಸಾದ್, ಅಂಬೇಡ್ಕರ್ ಪ್ರತಿಯೊ ಬ್ಬರಿಗೂ ಆತ್ಮಗೌರವ ತಂದುಕೊಂಡ ಮಹಾನ್ ಮಾನವತಾವಾದಿ ಎಂದು ಪ್ರತಿಪಾದಿಸಿದರು.

ಆದರೆ ಅಂಬೇಡ್ಕರ್ ಅವರ ಹೆಸರು ಬಳಕೆ ಮಾಡಿಕೊಂಡು ರಾಜಕಾರಣ ಮಾಡಲು ಯಾರೊಬ್ಬರೂ ಮುಂದಾಗಬಾರದು. ಅವರನ್ನು ಆಧ್ಯಾತ್ಮಿಕ ಗುರುವನ್ನಾಗಿ ಸ್ವೀಕರಿಸಿ, ತತ್ವಾದರ್ಶಗಳನ್ನು ಪಾಲಿಸಬೇಕೆಂದು ಕರೆ ನೀಡಿದರು.
ಅಸ್ಪಶ್ಯತೆಯ ನೋವನ್ನು ಅನುಭವಿಸಿ ಛಲ ಬಿಡದೆ ಶಿಕ್ಷಣ ಪಡೆದು ದಲಿತರ ಏಳಿಗೆಗೆ ಶ್ರಮಿಸಿ ದ್ದಲ್ಲದೇ ಪ್ರಪಂಚಕ್ಕೆ ಮಾದರಿಯಾದ ಸಂವಿಧಾನವನ್ನು ನೀಡಿದ್ದಾರೆ. ಅವರನ್ನು ದಲಿತರು ಮಾತ್ರವಲ್ಲ ಪ್ರತಿಯೊಬ್ಬ ಭಾರತೀಯನೂ ಸ್ಮರಿಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಸ್ಫೂರ್ತಿಧಾಮದ ಮಹಾವನ ಬೌದ್ಧವಿಹಾರದ ಬಂತೆ ಬೋಧಿದತ್ತ, ದಲಿತರು ಸಾಂಸ್ಕೃತಿಕವಾಗಿ ಬದಲಾವಣೆ ಆಗಬೇಕಿದೆ ಎಂದು ಪ್ರತಿಪಾದಿಸಿದರು.

ಬಡತನದಲ್ಲಿ ಸಿಲುಕಿರುವ ದಲಿತರು ಹಬ್ಬ -ಹರಿದಿನಗಳ ಹೆಸರಿನಲ್ಲಿ ಸಾವಿರಾರು ರೂ. ವೆಚ್ಚ ಮಾಡಿ ಸಾಲಗಾರರಾಗುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಿ ಬೌದ್ಧ ಧರ್ಮದ ತತ್ವಗಳನ್ನು ಪಾಲಿಸುವ ಮೂಲಕ ನೆಮ್ಮದಿಯ ಬದುಕು ಸಾಗಿರುವಂತೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಎಂಜಿನಿಯರ್ ಎನ್.ಎಚ್.ಕಾಂತರಾಜು ವಹಿಸಿ ದ್ದರು. ಶಾಸಕ ಎಚ್.ಕೆ.ಕುಮಾರಸ್ವಾಮಿ, ದಲಿತ ಚಿಂತಕ ಪ್ರೊ.ಎಚ್.ಎಂ.ರುದ್ರಸ್ವಾಮಿ, ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಜಿ.ಸೋಮಶೇಖರ್, ದಲಿತ ಮುಖಂಡರಾದ ಡಿ.ಸಿ.ಸಣ್ಣಸ್ವಾಮಿ, ಕೃಷ್ಣದಾಸ್, ಕೆ.ಈರಪ್ಪ, ಜಯರಾಂ, ಎಚ್.ಕೆ.ಸಂದೇಶ್, ಮಾದಿಗ ದಂಡೋರ ಸಮಿ ತಿಯ ಜಿಲ್ಲಾಧ್ಯಕ್ಷ ವಿಜಯಕುಮಾರ್, ವಕೀಲ ಕೆ.ಟಿ.ಮಂಜಯ್ಯ, ಅರೇಹಳ್ಳಿರಾಜು, ನಿರ್ವಾಣಯ್ಯ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಅಂಬೇಡ್ಕರ್ ಭಾವಚಿತ್ರದೊಂದಿಗೆ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಮೆರವಣಿಗೆ ನಡೆಸಿದರು. ಕಲಾ ತಂಡಗ ಳೊಂದಿಗೆ ಮೆರವಣಿಗೆ ನಡೆಸಿದ ನಂತರ ಜಿಲ್ಲಾಧಿ ಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಮಾಲಾರ್ಪಣೆ ಮಾಡಿದರು.

Wednesday, 4 May 2011

‘ಮಾನವೀಯತೆಯಿಂದ ಅಸ್ಪೃಶ್ಯತೆ ನಿರ್ಮೂಲನೆ ಸಾಧ್ಯ’

ಮೈಸೂರು: ‘ಭಾರತದಲ್ಲಿ ಅಮಾನುಷವಾಗಿ ಬೆಳೆದಿರುವ ಅಸ್ಪೃಶ್ಯತೆಯನ್ನು ಮಾನವೀಯ ಚಿಂತನೆ ಮತ್ತು ನಡವಳಿಕೆಯಿಂದ ಮಾತ್ರ ನಿರ್ಮೂಲನೆ ಮಾಡಲು ಸಾಧ್ಯ’ ಎಂದು ಶಾಸಕ ವಿ.ಶ್ರೀನಿವಾಸ ಪ್ರಸಾದ್ ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭಾನುವಾರ ನಗರ ಘಟಕ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ.ವಿ.ಮುನಿವೆಂಕ ಟಪ್ಪ ಸಂಪಾದಿಸಿರುವ ‘ದಲಿತ ಚಳವಳಿ ಚರಿತ್ರೆ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

‘ಕಮ್ಯೂನಿಸ್ಟ್ ಪ್ರೇರಣೆಯಿಂದ ಕೇರಳದಂತಹ ರಾಜ್ಯದಲ್ಲಿ ವರ್ಗ ಸಂಘರ್ಷ ನಡೆದಿದೆ. ಆದರೆ ಅದೇ ನಾಡಿನಲ್ಲಿ ಜಾತಿಯ ಹೆಸರಲ್ಲಿ ಪ್ರತಿಮೆ ಗಳನ್ನು, ಕುರ್ಚಿಗಳನ್ನು ಗಂಜಲದಿಂದ ತೊಳೆಯುವ ಅವಿವೇಕ, ಅಮಾನುಷ ಘಟನೆಗಳು ನಡೆಯುತ್ತಿರುವುದು ದೊಡ್ಡ ದುರಂತ’ ಎಂದು ವಿಷಾದ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿ.ವಿ. ಅಂತಾರಾಷ್ಟ್ರೀಯ ಕೆಂದ್ರದ ನಿರ್ದೇಶಕಿ ಪ್ರೊ.ಆರ್.ಇಂದಿರಾ ಮಾತನಾಡಿ ‘ಚಳವಳಿಗಳ ಉದ್ದೇಶ ಸಾಮಾಜಿಕ ನ್ಯಾಯವೇ ಆಗಿರುವುದರಿಂದ ಅಂತರ್ ಸಂಬಂಧ ಅಗತ್ಯ’ ಎಂದರು.

‘ದಲಿತ ಚಳವಳಿ ಚರಿತ್ರೆ’ ಕೃತಿ ಕುರಿತು ಪತ್ರಕರ್ತ ರವೀಂದ್ರ ಭಟ್ ಐನಕೈ ಮಾತನಾಡಿದರು. ಸಂಪಾದಕ ಡಾ.ವಿ.ಮುನಿವೆಂಕಟಪ್ಪ ಅನುಭವವನ್ನು ಹಂಚಿಕೊಂಡರು. ಪ್ರಕಾಶಕ ಮಾನಸ ಇದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಎಂ.ಚಂದ್ರಶೇಖರ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ವಿ.ವಿದ್ಯಾಸಾಗರ ಕದಂಬ ನಿರೂಪಿಸಿ, ವಂದಿಸಿದರು

html