Pages

Showing posts with label Rationalist. Show all posts
Showing posts with label Rationalist. Show all posts

Saturday, 30 April 2011

ಸಾಯಿಬಾಬಾರ ಧರ್ಮಾರ್ಥಗಳು ಪ್ರಜಾತಂತ್ರದ ಅಣಕವಲ್ಲವೇ?

ದೈವಮಾನವ, ನಡೆದಾಡುವ ದೇವರು, ದೈವಾಂಶ ಸಂಭೂತ ಇತ್ಯಾದಿ ಅಲಂಕಾರ ಗಳಿಂದ ಪ್ರಭುತ್ವ ಮತ್ತು ಸಮಾಜ ಕೊಂಡಾಡು ತ್ತಿದ್ದ ಸಾಯಿಬಾಬಾನಂಥ ಸಾಯಿಬಾಬಾ ಸಹ ಮೃತರಾಗಿದ್ದಾರೆ. ಸಾಯುವ ಮುನ್ನ ಸಾಮಾನ್ಯ ನರಮಾನವರಂತೆ 28ಕ್ಕೂ ಹೆಚ್ಚು ದಿನಗಳ ಕಾಲ ಹಲವಾರು ಖಾಯಿಲೆಗಳಿಂದ ನರಳಿದ್ದಾರೆ. ತಮ್ಮಲ್ಲೇ ಸರ್ವರೋಗನಿವಾರಿಣಿ ಬೂದಿಯಿ ದ್ದರೂ ಅವೇನೂ ದೇವಮಾನವನ ಸಾವನ್ನೂ ತಡೆಯಲಿಲ್ಲ. ನೋವನ್ನೂ ಕಡಿಮೆ ಮಾಡಲಿಲ್ಲ. ಬದಲಿಗೆ ಹಗಲು ರಾತ್ರಿ ಶ್ರಮಿಸಿ ಆ ನಿರ್ಜೀವ ದೇಹವನ್ನು ಎಪ್ರಿಲ್ 24ರ ತನಕ ಉಳಿಸಲು ಹರಸಾಹಸ ಪಟ್ಟಿದ್ದು ಅಮೆರಿಕ ಹಾಗೂ ಭಾರತದ ಅತ್ಯುತ್ತಮ ವೈದ್ಯರುಗಳು!

ಹಾಗೆ ನೋಡಿದರೆ ಇದೇ ಸಾಯಿಬಾಬಾ ವಿದೇಶಿ ಸಂಘ ಸಂಸ್ಥೆಗಳ ಅಪಾರ ಧನಸಹಾಯ ದೊಂದಿಗೆ ಕಟ್ಟಿದ್ದ ಆಸ್ಪತ್ರೆಗಳಲ್ಲಿ ಕೊಡುತ್ತಿದ್ದದ್ದು ಸಾಯಿಬಾಬಾ ಮಂತ್ರಿಸಿದ ಬೂದಿಯನ್ನೇನಲ್ಲ. ವೈಜ್ಞಾನಿಕ ವಿಧಾನದಿಂದ ಅನ್ವೇಷಿತವಾದ ಔಷಧಿಗಳನ್ನೇ. ಈ ಆಸ್ಪತ್ರೆಯ ಸಹಾಯದಿಂದ ಸಾಕಷ್ಟು ಜನರು ಉಪಯೋಗ ಪಡೆದು ಕೊಂಡಿದ್ದು ನಿಜ. ಆದರೆ ವಿಪರ್ಯಾಸವೇ ನೆಂದರೆ ಸಾಯಿಬಾಬಾರ ಸಾವು, ಆಧುನಿಕ ವೈದ್ಯಕೀಯ ಸೇವೆ ಇವೆಲ್ಲವೂ ಸಾರಾಂಶದಲ್ಲಿ ಸಾಯಿಬಾಬಾ ಜೀವನದುದ್ದಕ್ಕೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪ್ರಚಾರ ಮಾಡಿದ ಮೌಢ್ಯಗಳನ್ನೇನೂ ಅಲುಗಾಡಿಸುತ್ತಿಲ್ಲ.

ಬದಲಿಗೆ ಕಷ್ಟ ಕಾಲದಲ್ಲಿ ಬಡಜನತೆಗೆ ಒದಗಿಬಂದ ಸಹಾಯ ಅವರಲ್ಲಿ ಋಣೀ ಭಾವನೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅದು ಅವರಲ್ಲಿ ಸಾಯಿ ಬಾಬಾರ ದೈವತ್ವದ ಬಗ್ಗೆ ಮತ್ತಷ್ಟು ವಿಶ್ವಾಸ ವನ್ನು ಹೆಚ್ಚಿಸುತ್ತಿದೆ. ಇದು ಸಾಯಿಬಾಬಾರನ್ನು ಮರಣಾನಂತರವೂ ಸಹ ಪವಾಡ ಪುರುಷನ ನ್ನಾಗಿ ಸ್ಥಾಪಿಸುತ್ತಿದೆ. ಮತ್ತು ಒಂದು ಪ್ರಜಾ ತಂತ್ರದಲ್ಲಿಯೂ ಜನರು ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ಪವಾಡ ಗಳನ್ನೋ ಅಥವಾ ಪವಾಡ ಪುರುಷರನ್ನೋ ಆಶ್ರಯಿಸುವಂತೆ ಮಾಡುತ್ತದೆ. ಹೀಗಾಗಿ ಸಾಯಿಬಾಬಾರ ವೈಭವೀಕರಣ ಸಾರಾಂಶ ದಲ್ಲಿ ಪ್ರಜಾತಂತ್ರದ ವೈಫಲ್ಯದ ವೈಭವೀ ಕರಣವೇ ಆಗಿದೆ.

ಸಾಯಿಬಾಬಾರ ಬದುಕು ಮತ್ತು ಅವರ ಬದುಕಿನ ಏರುಗತಿ ನಮ್ಮ ದೇಶದ ಪ್ರಜಾಸತ್ತೆ ಮತ್ತು ಜನತೆಯ ಬದುಕಿನ ಅವನತಿಯ ಜೊತೆಜೊತೆಗೆ ನೇರವಾಗಿ ಸಂಬಂಧಿಸಿದೆ. ಪ್ರಾರಂಭದಲ್ಲಿ ಸಾಯಿಬಾಬಾ ಮೂರನೆ ದರ್ಜೆ ತಂತ್ರಗಳನ್ನು ಬಳಸಿ, ಬೂದಿ, ಉಂಗುರಗಳನ್ನು ‘ಶೂನ್ಯದಿಂದ ಸೃಷ್ಟಿಸಿ’ ಕೊಡುವ ಕಳಪೆ ಕಣ್ಕಟ್ಟುಗಳನ್ನು ಮಾಡುತ್ತಾ ಪವಾಡ ಪುರುಷರ ಸ್ಥಾನ ಗಿಟ್ಟಿಸಿಕೊಂಡರು. ಈ ದೇಶದ ಸಾಮಾಜಿಕ ಪರಿಸ್ಥಿತಿ ಮತ್ತು ದಮನಿತ ಜನರ ದೈನೇಸಿ ಪರಿಸ್ಥಿತಿಗಳು ಬಾಬಾಗಳ ಬುರುಡೆಯನ್ನು ಪ್ರಶ್ನಿಸುವ ಮನಸ್ಥಿತಿಗಿಂತ ಅದನ್ನು ಒಪ್ಪಿಕೊಂಡು ಅದರ ಮೂಲಕ ತಮ್ಮ ತೀರದ ಬವಣೆಗಳಿಗೆ ಭ್ರಾಮಕ ಪರಿಹಾರ ವನ್ನು ಕಂಡುಕೊಳ್ಳುವ ಶರಣಾಗತಿಯ ಮನೋ ಭಾವವನ್ನೇ ಮುಂದುವರಿಸಿತ್ತು. ಬೇರೆ ಯಾವುದೇ ದೇಶಗಳಿಗಿಂತ

ಈ ದೇಶದಲ್ಲಿ ಧರ್ಮ ಮತ್ತು ಜಾತಿ ವ್ಯವಸ್ಥೆಗಳಂಥಾ ವ್ಯವಸ್ಥಿತ ಆಕ್ರಮ ಣಗಳು ದಮನಿತ ಜನತೆಯಲ್ಲಿ ತಮ್ಮ ಶೋಚ ನೀಯ ಪರಿಸ್ಥಿತಿಗೆ ಕಾರಣಗಳನ್ನು ವ್ಯವಸ್ಥೆಯಲ್ಲಿ ಹುಡುಕುವುದಕ್ಕಿಂತ ತಮ್ಮ ಪೂರ್ವಜನ್ಮದ ಪಾಪ ಕರ್ಮಗಳಲ್ಲೇ ಹುಡುಕಿಕೊಳ್ಳುವಂಥ ಆತ್ಮಘಾ ತುಕ ಮನಸ್ಥಿತಿಯನ್ನು ಪೋಷಿಸಿಕೊಂಡು ಬಂದಿವೆ. ಹೀಗಾಗಿಯೇ ಈ ದೇಶದ ದಮನಿತ ಮತ್ತು ಬಡಜನರಲ್ಲಿ ತಮ್ಮ ಬಗ್ಗೆ ತಮಗೆ ಆತ್ಮ ವಿಶ್ವಾಸ ಇರುವುದಕ್ಕಿಂತ ಪವಾಡ ಪುರುಷರ ಬಗ್ಗೆ, ದೇವೀ ಮಾನವರ ಬಗ್ಗೆ ನಂಬಿಕೆ, ಮೂಢ ನಂಬಿಕೆ ಹೆಚ್ಚು. ಈ ಮೂಢ ನಂಬಿಕೆಯ ಮೂಲ ಅವರ ಅಸಹಾಯಕತೆಯನ್ನು ಹೆಚ್ಚಿ ಸುವ ತಮ್ಮ ನಿಯಂತ್ರಣದಲ್ಲಿಲ್ಲದ ಶೋಷಕ ವ್ಯವಸ್ಥೆಯಲ್ಲಿದೆ.

ವಾಸ್ತವವಾಗಿ ಒಂದು ಪ್ರಜಾತಂತ್ರ ಜನರ ಈ ನಿಸ್ಸಹಾಯತೆಯನ್ನು ದೂರ ಮಾಡಿ ಜನತೆಗೆ ತಮ್ಮ ಸಂಘಟಿತ ಶಕ್ತಿಯ ಮೇಲೆ ತಮಗೇ ನಂಬಿಕೆ ಬರುವಂತೆ ಮಾಡಬೇಕಿತ್ತು. ಇದು ವರೆಗೆ ಹೇಳಿದ್ದನ್ನೆಲ್ಲಾ ಒಪ್ಪಿಕೊಂಡು ಬಂದ ಸಮಾಜ ಮತ್ತು ಜನರಲ್ಲಿ ಪ್ರಶ್ನಿಸುವ ಮತ್ತು ಸ್ವೀಕೃತ ಗ್ರಹಿಕೆಗಳನ್ನು ಅನುಮಾನಿಸುವ ವಿಚಾರ ವಾದಿ ಮನೋಧರ್ಮವನ್ನು ಹುಟ್ಟುಹಾಕ ಬೇಕಿತ್ತು. ಒಂದು ಪ್ರಜಾತಂತ್ರ ಜನರಿಗೆ ತಮ್ಮ ಬದುಕಿನ ಆಗುಹೋಗುಗಳ ಮೇಲೆ ತಮಗೇ ನಿಯಂತ್ರಣ ಇರುವಂತಹ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ನೀಡಿದ್ದಿದ್ದರೆ ಹಾಗೂ ವೈಜ್ಞಾನಿಕ ಮನೋಭಾವವನ್ನು ಹುಟ್ಟು ಹಾಕುವಂಥ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿದ್ದರೆ ಜನರಲ್ಲಿ ಪರಾವಲಂಬಿ ಮನೋಭಾವವೇ ಹುಟ್ಟುತ್ತಿರಲಿಲ್ಲ. ಆತ್ಮವಿಶ್ವಾಸ, ಸ್ವಾಭಿಮಾನ ಮತ್ತು ಸ್ವಾವಲಂಬನೆ ಇರುವ ಸಮಾಜ ನಿರ್ಮಾಣವಾಗಿದ್ದರೆ ಈ ದೇಶದಲ್ಲಿ ಬಾಬಾಗಳು ಹುಟ್ಟಿಕೊಳುತ್ತಲೇ ಇರಲಿಲ್ಲ.

ಆದರೆ ನಮ್ಮ ಪ್ರಜಾತಂತ್ರಕ್ಕೆ ಜನರನ್ನು ಸ್ವಾವ ಲಂಬಿಗಳನ್ನಾಗಿ ಮಾಡುವ ಅಜೆಂಡಾವೇ ಇರ ಲಿಲ್ಲ. ಬಡತನ ಮತ್ತು ಪರಾವಲಂಬನೆ ಮುಂದುವರಿಸುವುದು ಈ ದೇಶದ ಆಳುವ ವರ್ಗಗಳ ಪಟ್ಟಭದ್ರ ಹಿತಾಸಕ್ತಿಯೂ ಆಗಿದ್ದ ರಿಂದ ಈ ದೇಶದ ಜನತೆಯ ನಿಸ್ಸಹಾಯಕ ಪರಾವಲಂಬನೆ ಹಾಗೆಯೇ ಮುಂದುವರಿದು ಬಾಬಾಗಳ ಹುಟ್ಟಿಗೆ ಭೂಮಿಕೆಯನ್ನು ಸೃಷ್ಟಿಸಿತ್ತು. ಈ ಸಾಮಾಜಿಕ ಸಂದರ್ಭದ ಮನೋಭೂಮಿ ಕೆಯೇ ಪವಾಡಗಳನ್ನು ನಂಬುವ, ಹಂಬಲಿಸುವ ಮಾನಸಿಕತೆಯನ್ನು ಹುಟ್ಟುಹಾಕಿತು. ಇದರ ಪ್ರಯೋಜನವನ್ನು ಮಾಡಿಕೊಂಡು ಸಾಯಿ ಬಾಬಾಗಳಂಥವರು ಜನರನ್ನು ಹಿಂಬಾಲಕರನ್ನಾ ಗಿಸಿಕೊಂಡರು.

ಈ ಪ್ರಕ್ರಿಯೆಯಲ್ಲಿ ಸಾಯಿ ಬಾಬಾ ವ್ಯಕ್ತಿಯಾಗದೇ ಜನರ ವಿಶ್ವಾಸವನ್ನು ಗಳಿಸಿಕೊಂಡ ಶಕ್ತಿಕೇಂದ್ರವಾಗುತ್ತಿದ್ದಂತೆ ಆಳುವ ವರ್ಗ ಮತ್ತು ಪ್ರಭುತ್ವಗಳು ಸಹ ಯೋಜಿತವಾಗಿ ಸಾಯಿಬಾಬಾರನ್ನು ವಿಶ್ವಮಾನ್ಯ ಆಧ್ಯಾತ್ಮಿಕ ಗುರು ವನ್ನಾಗಿ ಪ್ರವರ್ಧಮಾನಕ್ಕೆ ತಂದರು. ಸಾಯಿ ಬಾಬಾರ ವರ್ಗಾತೀತ ಸಂಘರ್ಷ ರಹಿತ ಮಾನ ವತೆ, ದಾನ-ಧರ್ಮಗಳ ಮುಸುಕಿನಲ್ಲಿ ಎಲ್ಲಾ ವ್ಯವಸ್ಥಿತ ಶೋಷಣೆ, ಲೂಟಿಗಳಿಗೆ ಪಾರಮಾ ರ್ಥಿಕ ಮಾನ್ಯತೆಗಳನ್ನು ಗಳಿಸಿಕೊಂಡರು. ಹಾಗೂ ಲಕ್ಷಾಂತರ ಕೋಟಿ ರೂಪಾಯಿ ಬೆಲೆ ಬಾಳುವ ಹಲವು ಲೌಕಿಕ ದಂಧೆಗಳಿಗೆ ಸಾಯಿಬಾಬಾ ಸಂಸ್ಥೆ ಅಲೌಕಿಕ ಮುಸುಕನ್ನು ಒದಗಿಸಿ ಕೊಡುವ ಸಂಸ್ಥೆಯಾಗಿಯೂ ಬಳಕೆಯಾಯಿತು.

ಆದರೆ 80ರ ದಶಕದಲ್ಲಿ ಸ್ವಶ್ರಮ ಮತ್ತು ಸಾರ್ವಜನಿಕ ಹಿತಾಸಕ್ತಿಯ ಮೌಲ್ಯಗಳು ಜೀವಂತವಾಗಿದ್ದ ಸಂದರ್ಭದಲ್ಲೂ ಹುಟ್ಟಿ ಕೊಂಡಿದ್ದ ಮಧ್ಯಮವರ್ಗ ಈ ಮೌಢ್ಯಗಳ ಬೇರುಗಳನ್ನು ಪ್ರಶ್ನಿಸದಿದ್ದರೂ ಒಟ್ಟಾರೆಯಾಗಿ ಸಾಯಿಬಾಬಾರ ಹಿಂದಿದ್ದ ಪ್ರಭಾವಲಯವನ್ನು ಪ್ರಶ್ನಿಸುತ್ತಲೇ ಬಯಲುಗೊಳಿಸುತ್ತಾ ಬಂದರು. ಉಂಗುರ ಕೊಡುವ ಸಾಯಿಬಾಬಾ ಕುಂಬಳ ಕಾಯಿ ಏಕೆ ಕೊಡಲು ಸಾಧ್ಯವಿಲ್ಲ, ಶೂನ್ಯ ದಲ್ಲೇ ಎಲ್ಲಾ ಸೃಷ್ಟಿಸಲು ಸಾಧ್ಯವಿದ್ದರೆ ಸಮುದ್ರ ದಲ್ಲಿ ಬೆರಳದ್ದಿ ಪೆಟ್ರೋಲು ಮಾಡಿಬಿಟ್ಟರೆ ದೇಶದ ಹಲವು ಕಷ್ಟಗಳು ತೀರುತ್ತದಲ್ಲ ಎಂಬ ಕೋವೂರ್, ಹೆಚ್. ನರಸಿಂಹಯ್ಯ ಇನ್ನಿ ತರರ ವಾದ ಸಮಾಜದಲ್ಲಿ ಸಾಯಿಬಾಬಾರ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿತು.

ಅದೇ ಸಮಯದಲ್ಲಿ ಸಾಯಿಬಾಬಾ ಆಶ್ರಮದಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಡೆದ ನಾಲ್ಕು ಕೂಲೆಗಳೂ ಸಹ ಸಾಯಿಬಾಬಾರ ಪ್ರಭಾವಲ ಯವು ವಿಸ್ತರಿಸುವುದಕ್ಕೆ ಅಡ್ಡಿಯಾಯಿತು.ಆದರೆ 1991ರ ಜಾಗತೀಕರಣದ ನೀತಿ ಗಳು ಈ ದೇಶದ ಪ್ರಜಾತಂತ್ರ, ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಆಶಯದ ಮೂಲಕ್ಕೆ ಕೊಡಲಿ ಪೆಟ್ಟು ಹಾಕಿದವು. ಅದು ಈವರೆಗೆ ಜನರಿಗೆ ಜವಾಬುದಾರರಾಗಿರಬೇಕಾದ ಸರಕಾರವನ್ನು ಸ್ಥಳಾಂತರಿಸಿ ಅದರಲ್ಲಿ ಜನರ ನೇರ ನಿಯಂತ್ರಣಕ್ಕೆ ಒಳಪಡದ, ಬಲವಿದ್ದ ವರು ಮಾತ್ರ ಬದುಕಬಹುದಾದ ಮಾರುಕಟ್ಟೆ ಯೆಂಬ ಕಸಾಯಿಖಾನೆಗೆ ಜನರನ್ನು ದೂಡಿತು. ಇದರಿಂದ ಜನರ ಅತಂತ್ರತೆ ಇನ್ನಷ್ಟು ಹೆಚ್ಚಾಗಿ ಪರಾವಲಂಬೀ ಮನೋಭಾವ ಇನ್ನಷ್ಟು ಬೇರು ಬಿಡುವಂತಾಯಿತು.

ಕಷ್ಟಪಟ್ಟು ಒಂದೊಂದೇ ಹನಿ ಯನ್ನು ಶೇಖರಿಸಿ ರೂಪುಗೊಂಡ ಮಧ್ಯಮ ವರ್ಗಕ್ಕಿಂತ ಜಾಗತೀಕರಣದಿಂದ ಮತ್ತು ಮಾರು ಕಟ್ಟೆ ನೀತಿಯಿಂದ ದಿಢೀರ್ ಸಂಪನ್ನರಾದ ಒಂದು ನವ ಶ್ರೀಮಂತ ವರ್ಗ ಈ ಕಾಲಘಟ್ಟ ದಲ್ಲಿ ಉದಯವಾಯಿತು. ಈ ನವ ಮೇಲ್ ಮಧ್ಯಮ ವರ್ಗದ ಸುಸಂಪನ್ನತೆಗೆ ಅದರ ಶ್ರಮ ಕ್ಕಿಂತ, ಪ್ರತಿಭೆಗಿಂತ ಮಾರುಕಟ್ಟೆಯ ಒಲವೇ ಕಾರಣವಾದ್ದರಿಂದ ಈ ನವ ಮಧ್ಯಮವರ್ಗದಲ್ಲಿ ವೈಚಾರಿಕತೆ, ವೈಜ್ಞಾನಿಕತೆಗಿಂತ ಹೆಚ್ಚಾಗಿ ಅದೃಷ್ಟ ದಲ್ಲಿ, ಮಾರುಕಟ್ಟೆಯ ಆಶೀರ್ವಾದದಲ್ಲಿ, ಅದನ್ನು ದೊರಕಿಸಿಕೊಡಬಹುದಾದ ಅತಿಮಾನವರಲ್ಲಿ ನಂಬಿಕೆ ಇಡುವುದು ಒಂದು ಮೌಲ್ಯವೂ ಜೀವನ ಶೈಲಿಯೂ ಆಯಿತು.
ಇಂದಿಗೂ ನಗರಗಳಲ್ಲಿ ಸಾಯಿಬಾಬಾನ ಭಕ್ತರು ಈ ನವ ಶ್ರೀಮಂತರೇ ಆಗಿರುತ್ತಾರೆ. ಮತ್ತು ಅವರ ಜೀವನ ದೃಷ್ಟಿ ಪ್ರಜಾತಂತ್ರ ವಿರೋಧಿ ಮಾರುಕಟ್ಟೆ ಪರ ವಕ್ತಾರಿಕೆಯೇ ಆಗಿರುತ್ತದೆ.

ಆಧ್ಯಾತ್ಮಿಕವಾಗಿ ಮಾನವಾತೀತ ಶಕ್ತಿಗಳ ಎದುರು ಶರಣಾಗುವುದೇ ಈ ವರ್ಗದ ಆಧ್ಯಾತ್ಮಿಕ ಮೌಲ್ಯವೂ ಆಗಿರುತ್ತದೆ. ಈ ವರ್ಗ ಈ ಕಾಲಘಟ್ಟದಲ್ಲಿ ಸಮಾಜದಲ್ಲಿ ನೇತಾರಿಕೆಯ ಮತ್ತು ವಕ್ತಾರಿಕೆಯ ಸ್ಥಾನವನ್ನೂ ಪಡೆದ್ದರಿಂದಲೇ ಪವಾಡಗಳ ಬಯಲಿಂದ ಮಂಕಾಗಿದ್ದ ಸಾಯಿಬಾಬಾ ಮತ್ತೆ ದೇವಮಾನವರ ಸ್ಥಾನಕ್ಕೆ ಪರ್ಯಾಯ ಸರಕಾರದ ಸ್ಥಾನಕ್ಕೆ ಏರಿದ್ದು.ಆದರೆ ಅದೇ ಸಮಯದಲ್ಲಿ ಸರಕಾರ ಶಿಕ್ಷಣ, ಆರೋಗ್ಯ ಇನ್ನಿತರ ಜನತೆಯ ಅತ್ಯಗತ್ಯ ಕ್ಷೇತ್ರಗಳಿಂದ ಹಿಂದೆ ಸರಿಯುತ್ತಿತ್ತು. ಸಾಯಿಬಾಬಾ ತಮ್ಮ ಟ್ರಸ್ಟ್ ಮೂಲಕ ಕುಡಿಯುವ ನೀರು ಮತ್ತು ಹೈಟೆಕ್ ಆಸ್ಪತ್ರೆಯ ಸೌಲಭ್ಯವನ್ನು ಬಡಜನರಿಗೂ ವಿಸ್ತರಿಸಿ ಸರಕಾರದಿಂದ ವಂಚಿತಗೊಂಡು ಕಂಗಾಲಾಗಿದ್ದ ಜನರ ಕಣ್ಣಲ್ಲಿ ನಡೆದಾಡುವ ದೇವರೇ ಆಗಿಬಿಟ್ಟರು.

ಆದರೆ ಈ ಆಸ್ಪತ್ರೆ ಮತ್ತು ಶಿಕ್ಷಣವನ್ನು ದೊರಕಿಸಲು ಬೇಕಾಗಿದ್ದ ಸಂಪನ್ಮೂಲ ಸಾಯಿಬಾಬಾ ಸಂಸ್ಥೆ ಪಡೆದುಕೊಂಡಿದ್ದು ಹೇಗೆ? ಅಷ್ಟು ಹಣ ಒಂದು ಸರಕಾರದ ಬಳಿ ಇರುವುದಿಲ್ಲವೇ? ಎಂಬ ಪ್ರಶ್ನೆಗಳನ್ನು ಯಾರೂ ಕೇಳದೇ ಸಾಯಿಬಾಬಾರ ಸಮಾಜ ಸೇವೆಯನ್ನು ವಾಚಾಮಗೋಚರ ವಾಗಿ ಹೊಗಳಲು ಪ್ರಾರಂಭಿಸಿದ್ದಾರೆ. ಅದರಲ್ಲೂ ಸಾಯಿಬಾಬಾ ನಿಧನದ ನಂತರ ಅವರ ಪವಾಡ ಇತ್ಯಾದಿಗಳ 1991ರ ಪೂರ್ವಾಶ್ರಮದ ಅವತಾರವನ್ನು ಖಂಡಿಸಿದ ಕೆಲವೇ ಕೆಲವು ಮಾಧ್ಯಮಗಳೂ ಸಹ ನಂತರದಲ್ಲಿ ಅವರು ಮಾಡಿದ ಕುಡಿಯುವ ನೀರಿನ ಯೋಜನೆ ಮತ್ತು ಒದಗಿಸಿದ ಆಸ್ಪತ್ರೆ ಸೌಲಭ್ಯಗಳೇ ನಿಜವಾದ ಪವಾಡ, ಅವರ ಜಾತ್ಯತೀತ ಮಾನವೀಯತೆ ಇವೆಲ್ಲವೂ ಹೆಚ್ಚೂ ಕಡಿಮೆ ಅವರು ದೇವಮಾನವನಿಗೆ ಸಮ ಎಂಬುದನ್ನು ರುಜುವಾತು ಮಾಡುತ್ತದೆ ಎಂದು ಬರೆಯುತ್ತಿವೆ. ಇನ್ನುಳಿದ ಮಾಧ್ಯಮಗಳಂತೂ ಸಾಯಿಬಾಬಾ ಸಾಮಾನ್ಯ ಮನುಷ್ಯರಂತೆ ಸತ್ತರೂ ಈ ಕಾಲದಲ್ಲೂ ಆತ ದೈವಾಂಶ ಸಂಭೂತ ಮತ್ತೆ ಆತ ಪುನರ್ಜನ್ಮ ಎತ್ತುತ್ತಾನೆ ಎನ್ನುವಂತೆಯೇ ಬಿತ್ತರಿಸುತ್ತಿವೆ.

ಅದೇ ರೀತಿ ಪ್ರಭುತ್ವವೂ ಸಹ ಸಾಯಿಬಾಬಾರನ್ನು ದೈವೀ ಮಾನವ ಮತ್ತು ಜನತೆಯಿಂದ ಆಯ್ಕೆಯಾದ ಸರಕಾರಕ್ಕೆ ಪರ್ಯಾಯವಾದ ಮತ್ತು ಅದಕ್ಕಿಂತಲೂ ಮಿಗಿಲಾದ ಆಧಾತ್ಮಿಕ ಮತ್ತು ಸಾಮಾಜಿಕ ಶಕ್ತಿ ಕೇಂದ್ರವೆಂದು ಅಧಿಕೃತವಾದ ಮಾನ್ಯತೆ ನೀಡುತ್ತಿದೆ.“Why People believe in wierd things” ಇದರ ಹಿಂದೆ ಒಂದು ವ್ಯವಸ್ಥಿತ ಷಡ್ಯಂತ್ರವಿದೆ. ಇದು ಪ್ರಭುತ್ವ ಜನರ ಕಲ್ಯಾಣ ಕಾರ್ಯಕ್ರಮಗಳಿಂದ ಹಿಂದೆಗೆಯುವು ದನ್ನು, ಜನರಲ್ಲಿ ತಮಗಿಂತ ಹೆಚ್ಚಾಗಿ ಮಾನವಾತೀತ ಶಕ್ತಿಗಳಲ್ಲಿ ನಂಬಿಕೆ ಇಡುವುದನ್ನು, ಸ್ವಶ್ರಮ ಮತ್ತು ಸ್ವಾವಲಂಬನೆಗಳಿಗಿಂತ ಅದೃಷ್ಟ ಮತ್ತು ಪವಾಡಗಳಲ್ಲಿ ನಂಬಿಕೆ ಇಡುವಂಥ ವ್ಯವಸ್ಥೆಯನ್ನು ಪೋಷಿಸುವ ಅತ್ಯಂತ ಪ್ರಜಾತಂತ್ರ ವಿರೋಧಿ ಮಾನಸಿಕತೆಯನ್ನು ಪೋಷಿಸುವ ಮತ್ತು ಸಾಂಸ್ಥೀಕರಿಸುವ ಹುನ್ನಾರ ಇದರಲ್ಲಡಗಿದೆ.

ಸಹಾಯ ಮಾಡಿದವರನ್ನು ನೆನೆಯುವ ಜನಸಾಮಾನ್ಯರ ಸಹಜ ಭಾವನೆಗಳನ್ನು ದುರುಪಯೋಗ ಪಡಿಸಿಕೊಂಡು ವ್ಯವಸ್ಥೆ ಈ ಸಂದರ್ಭದಲ್ಲಿ ಜನರನ್ನು ಶಾಶ್ವತವಾಗಿ ದೈನೇಸಿಗಳನ್ನಾಗಿ ಮಾಡುವ ಹುನ್ನಾರ ನಡೆಸಿದೆ. ಜನರ ಪ್ರಶ್ನಿಸುವ ಮನೋಭಾವವನ್ನೇ ಚಿವುಟಿಹಾಕುವ ಯತ್ನದಲ್ಲಿದೆ. ಎಂಬ (ಜನರೇಕೆ ಅಸಂಗತ ವಿಷಯಗಳಲ್ಲಿ ನಂಬಿಕೆ ಇಡುತ್ತಾರೆ?) ಪುಸ್ತಕಕ್ಕೆ ಮುನ್ನುಡಿ ಬರೆಯುತ್ತಾ ಅಮೆರಿಕದ ಪ್ರಖ್ಯಾತ ವಿಚಾರವಾದಿ ಸ್ಟೀಫನ್ ಜೇ ಗೌಲ್ಡ್ ಎಂಬುವರು “Skepticism is the agent of reason against organized irrationalism—and is therefore one of the keys to human and social decency” ಎಂದು ಹೇಳುತ್ತಾರೆ. ಅಂದರೆ ಅನುಮಾನಿಸುವುದು ಸಂಘಟಿತ ಮೌಢ್ಯದ ವಿರುದ್ಧ ವಿಚಾರವಾದದ ಉಪಕರಣವಾಗಿರುತ್ತದೆ. ಆದ್ದರಿಂದಲೇ ಅದು ಮಾನವೀಯ ಮತ್ತು ಸಾಮಾಜಿಕ ಆರೋಗ್ಯವನ್ನು ಸಾಧಿಸಲು ಒಂದು ಪ್ರಮುಖ ಸಾಧನವೂ ಆಗುತ್ತದೆ ಎಂದು ಹೇಳುತ್ತಾರೆ. ಸಾಯಿಬಾಬಾರಂಥ ಸಂಘಟಿತ ಮೌಢ್ಯದ ವಿರುದ್ಧ ಎಲ್ಲಿಯೂ ಒಂದು ಅನುಮಾನದ ಎಳೆಯೂ ಕಾಣದಿರುವುದು ನಮ್ಮ ಪ್ರಜಾತಂತ್ರ ಎಷ್ಟು ಅನಾರೋಗ್ಯವಾಗಿದೆ ಎಂಬುದರ ಸಂಕೇತವಾಗಿಲ್ಲವೇ?
ರವಿವಾರ - ಮೇ -01-2011
-ಶಿವ
VB News

Intellectuals to campaign against superstition


Members slam political leaders for promoting blind beliefs
Intellectuals to campaign against superstition
Mysore, March 19, DHNS:

As superstition, blind belief and black magic make an entry into political arena, a forum of intellectuals from the city have come together to fight against such beliefs.

In a meeting held at Jaladarshini guest house here on Saturday, intellectuals and writers like Prof K S Bhagawan, Prof Hi Shi Ramachandra Gowda, Prof Shivaramu Kadanakuppe, Prof V N Laxminarayana and progressive thinkers Janamana Krishna and others took a dig at the growing influence of black magic and superstition.

They blamed the political leaders, including the government for giving importance to blind beliefs citing Chief Minister B S Yeddyurappa’s statements on alleged black magic against him. Several regional television channels are also responsible for the present scenario, they opined.

Writer Joganahalli Gurumurthy, convener of the intellectuals meet against superstition said the meeting decided to start a big campaign against shedding belief in black magic and superstition.

He said the intellectuals and progressive thinkers from city would strengthen campaign against these beliefs from the hobli and taluk levels. A meeting of like-minded people from these centres would be convened on the first Sunday of April to chalk out the campaign programme, he said .

During the meeting, the participants expressed concern at the increasing communal and religious thoughts and black magic and superstition since the BJP came to power in the state. 


http://www.deccanherald.com/content/147185/intellectuals-campaign-against-superstition.html

Book on communalism and terrorism released


Mangalore, Feb 9, DHNS:

''Those who divide mankind in the name of religion and caste are misanthropists,'' said noted writer and intellectual K S Bhagawan.

He was speaking after releasing the Kannada book ‘Komuvada Mathu Bhayotpadane’ edited by intellectual C N Shetty at a programme organised by Karnataka Komu Souhardha Vedike (KKSV) and Vijnana Jyothi Prakashana here on Sunday. Bhagawan said, “most of the riots and bloodshed in the world takes place in the name of gods and religions.”

What is the purpose of a religion if mankind itself is being slaughtered in the name of religion, he questioned. Hence, the protection of human being must be the primary objective of mankind, he added.

Bhagawan opined that all religious texts promote anti-human philosophy. Further, quoting Swamy Vivekananda he said, “we have to lead mankind where there is no Vedas, no Quran and no Bible.” Talking about terrorism, he said that it is a barbaric act through which the people are being deprived of their basic rights to live. “Rational thinking is the right remedy to treat communalism,” he added.

Budhism never paved way for terrorism because it does not impose doctrines on its followers. It gave freedom for the people to think about doctrines, Bhagawan said. “In our life, we need to follow principles and not the religion. Communal hatred develops in the society only because of religions,” he added.

Litterateur J H Narayanaswamy spoke on the essence of the book. Senior journalist Sanath Kumar Belagali presided over the function while C N Shetty, Popular Front of India District President Anwar Sadath and Feminist Manjula were the guests.
http://www.deccanherald.com/content/51806/book-communalism-terrorism-released.html

‘Religion corrupting mutual feelings of people’


Udupi, June 15, 2010 DHNS:

''Practicing inequalities and differences among humans is against the ethics. It is the extreme level of ignorance,'' opined veteran thinker and writer from Mysore Dr K S Bhagvan.

Speaking after releasing the book ‘Anavarana’ written by Gopal B Shetty in a programme organised jointly by Udupi Rationalists Association and Nutana Publications here, he accused religion of corrupting the mutual feelings of people. It is brutal to segregate human beings based on caste and religion. The religious scriptures only preach the requirements of yesteryear. They hold no truth respecting approaches of mankind. Mosques, churches and temples should be dismantled to spread oneness among humans. These are the places that create the feelings of disparities, he added.

Quoting Swami Vivekananda, Bhagvan stressed the importance of leading mankind to where there are no Vedas, Bible or Quran. Youths should come forward to eradicate the communal hatred. They should imbibe secular feelings besides propagating the notion of oneness, he added. Buddha was an ever great thinker whose ideologies are relevant to all eras. He preached real humanity. People are forced to psychological slavery. They are obligated not to think beyond religion. Superstitions, hatred and evil practices only yield disasters and nothing else, he added.

Coming down heavily on the Prevention of Slaughter and Preservation of Cattle Bill 2010, Bhagvan pointed out that one can not come across the restrictions on food consumption anywhere else in the world. “We have the rights to decide what to eat or what not eat.

Who are these people to decide our food pattern,” he questioned.

Writer Gopal B Shetty, Komu Sauharda Vedike General Secretary K L Ashok, Veteran thinkers J H Narayanswami, C N Shetty, Badgubettu Cooperative Bank General Manager Jayaker Shetty Indrali and others were present.

http://www.deccanherald.com/content/75556/religion-corrupting-mutual-feelings-people.html

html