Pages

Showing posts with label ಬೌದ್ಧ. Show all posts
Showing posts with label ಬೌದ್ಧ. Show all posts

Sunday, 30 October 2011

ಬೌದ್ಧ

ಬೌದ್ಧ ಧರ್ಮ

ಬೌದ್ಧ ಧರ್ಮದ ಪ್ರಮುಖ ಸಂಕೇತ -- - ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿ
ಬೌದ್ಧ ಧರ್ಮದ ಸ್ಥಾಪಕ - ----- ಗೌತಮ ಬುದ್ಧ
ಗೌತಮ ಬುದ್ಧನ ಇನ್ನೋಂದು ಹೆಸರು -- ಸಿದ್ಧಾರ್ಥ
ಗೌತಮ ಬುದ್ಧನ ತಂದೆಯ ಹೆಸರು -- ಶುದ್ಧೋದನ
ಶುದ್ಧೋದನ ಈ ಕುಲಕ್ಕೆ ಸೇರಿದ ಅರಸ - - ಶಾಕ್ಯ ಕುಲ
ಶುದ್ಧೋದನ ರಾಜ್ಯವಾಳುತ್ತಿದ್ದ ಪ್ರದೇಶ - - ಕಪಿಲವಸ್ತು
ಬುದ್ಧನ ತಾಯಿಯ ಹೆಸರು - - ಮಾಯಾದೇವಿ
ಮಾಯಾದೇವಿಯ ತವರು ಮನೆ - - ದೇವದಾಹ ಎಂಬ ನಗರ
ಮಾಯಾದೇವಿ ಬುದ್ಧನಿಗೆ ಜನ್ಮ ನೀಡಿದ ಪ್ರದೇಶ -- ಲುಂಬಿಣಿ ವನ
ಲುಂಬಿಣಿವನ ಪ್ರಸ್ತುತ ಈ ಪ್ರದೇಶದಲ್ಲಿದೆ -- ನೇಪಾಳದ ಗಡಿ ಪ್ರದೇಶ
ಬುದ್ಧನ ಮಲತಾಯಿಯ ಹೆಸರು - - ಮಹಾ ಪ್ರಜಾಪತಿ
ಜಿಂಕೆಯ ವನ ಎಂದು ಕರೆಯಲ್ಪಡುವ ಪ್ರದೇಶ - ಸಾರಾನಾಥ
ಬುದ್ದನ ಕುರಿತಾದ ತಮಿಳು ಕೃತಿ - - ಮಣಿಮೇಖಲೈ
ಬುದ್ದನ ಬಾಲ್ಯದಲ್ಲಿ ಭವಿಷ್ಯ ನುಡಿದ ಸನ್ಯಾಸಿ - ಅನಿತ
ಬುದ್ದನ ಪತ್ನಿಯ ಹೆಸರು - ಯಶೋಧರಾ
ಬುದ್ಧನ ಮುಗುವಿನ ಹೆಸರು - ರಾಹುಲ
ಬುದ್ಧ ಸನ್ಯಾಸತ್ವ ಪಡೆಯಲು ಕಾರಣವಾದ ಅಂಶ - ವೃದ್ದ ಕುಷ್ಠರೋಗಿ , ಶವ ಹಾಗೂ ಸನ್ಯಾಸಿ

ಸತ್ಯಾನ್ವೇಷಣಿ
ಬುದ್ಧನು ಲೌಕಿಕ ಪ್ರಪಂಚದಿಂದ ದೂರ ಸರಿಯಲು ಪ್ರಯತ್ನಿಸಿದ್ದು - 21 ನೇ ವಯಸ್ಸಿನಲ್ಲಿ
ಬುದ್ಧನು ಸತ್ಯಾನ್ವೇಷಣಿಗೆ ಹೊರಟ ಘಟನೆಯನ್ನು ಈ ಹೆಸರಿನಿಂದ ಕರೆಯುವರು - ಮಹಾಪರಿತ್ಯಾಗ
ರಾಜ್ಯ ತೊರೆದು ಹೊರಟ ಬುದ್ಧನು ತಲುಪಿದ ಮೊದಲ ಪ್ರದೇಶ - ಗಯಾ
ಬುದ್ಧನಿಗೆ ಜ್ಞಾನೇದಯವಾದದ್ದು - ಬೋದಿ ವೃಕ್ಷದ ಕೆಳಗೆ
ತಥಾಗತ ಎಂದರೇ - ಸತ್ಯವನ್ನು ಕಂಡವನು ಎಂದರ್ಥ
ಬುದ್ದನು ನಿರ್ವಾಣ ಹೊಂದಿದ ಪ್ರದೇಶ - ನೇಪಾಳದ ಕುಶೀನಗರ

ಬುದ್ದನ ತತ್ವಗಳು
ನಾಲ್ಕು ಮೂಲ ತತ್ವಗಳು
ನಾಲ್ಕು ಮಹಾನ್ ಸತ್ಯಗಳು
ಅಷ್ಟಾಂಗ ಮಾರ್ಗ

ನಾಲ್ಕು ಮೂಲ ತತ್ವಗಳು
ಅಹಿಂಸೆ
ಸತ್ಯ ನುಡಿಯುವಿಕೆ
ಕಳ್ಳತನ ಮಾಡದಿರುವುದು
ಪಾವಿತ್ರತೆ
ನಾಲ್ಕು ಮಹಾನ್ ಸತ್ಯಗಳು

ದುಃಖ
ದುಃಖಕ್ಕೆ ಕಾರಣ
ದುಃಖದ ನಿವಾರಣಿ
ದುಃಖದ ನಿವಾರಣಿಗೆ ಮಾರ್ಗ

ಅಷ್ಟಾಂಗ ಮಾರ್ಗ

ಒಳ್ಳೆಯ ನಂಬಿಕೆ
ಒಳ್ಳೆಯ ಆಲೋಚನೆ
ಒಳ್ಳೆಯ ಮಾತು
ಉತ್ತಮ ನಡತೆ
ಉತ್ತಮ ಜೀವನ
ಒಳ್ಳೆಯ ಪ್ರಯತ್ನ
ಉತ್ತಮ ವಿಚಾರಗಳ ನೆನಪು
ಯೋಗ್ಯ ರೀತಿಯ ಧ್ಯಾನ

ಅಹಿಂಸೆಯೆ ದುಃಖಕ್ಕೆ ಮೂಲ ಕಾರಣ ಎಂಬ ಹೇಳಿಕೆ ನೀಡಿದವರು - ಬುದ್ಧ
ಬುದ್ಧನ ಪ್ರಕಾರ ಮುಕ್ತಿಗೆ ಕೊಂಡೊಯ್ಯಲಿರುವ ದಾರಿ - ಅಷ್ಟಾಂಗ ಮಾರ್ಗ
ಅಷ್ಟಾಂಗ ಮಾರ್ಗವನ್ನು ಈ ಹೆಸರಿನಿಂದಲೂ ಕರೆಯುವರು - - ಮಾಧ್ಯಮಿಕ ಮಾರ್ಗ
ವ್ಯಕ್ತಿಯ ಮೋಕ್ಷ ಸಾಧನೆಗೆ ಸೂಕ್ತ ದಾರಿ ಕಲ್ಪಿಸುವ ಮಾರ್ಗ - ಅಷ್ಟಾಂಗ ಮಾರ್ಗ
ಬುದ್ಧನ ಉಪದೇಶಗಲನ್ನು ಒಳಗೊಂಡಿರುವ ಬೌದ್ಧ ಸಾಹಿತ್ಯ - ತ್ರಿಪಿಟಕ

ಬೌದ್ಧ ಧರ್ಮದ ಪ್ರಸಾರ


ಬುದ್ಧನ ಉಪದೇಶ ಈ ಭಾಷೆಯಲ್ಲಿ ಪ್ರಸಾರವಾಯಿತು - ಪಾಳಿ ಭಾಷೆ
ಬೌದ್ಧ ಧರ್ಮದ ಎರಡು ಪಂಗಡಗಳು - ಹೀನಾಯಾನ ಮತ್ತು ಮಹಾಯಾನ

ಬೌದ್ಧ ಮಹಾ ಸಭೆಗಳು
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ರಾಜಗೃಹದಲ್ಲಿ ಜರುಗಿತು.
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ವ್ಯವಸ್ಥೆಗೊಳಿಸಿದವರು - ಅಜಾತಶತೃ
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ಇದರ ಅಧ್ಯಕ್ಷತೆ ವಹಿಸಿದವರು - ಮಹಾಕಶ್ಯಪಾ
ಮೊದಲ ಸಭೆ - ಕ್ರಿ.ಪೂ. 483 ರಲ್ಲಿ ಈ ಸಭೆಯಲ್ಲಿ ತ್ರಿಪಿಟಕ ಎಂಬ ಗ್ರಂಥವನ್ನು ರಚಿಸಲಾಯಿತು
ಎರಡನೇ ಸಭೆ - ಕ್ರಿ.ಪೂ. 387 ರಲ್ಲಿ - ವೈಶಾಲಿಯಲ್ಲಿ ಜರುಗಿತು
ಮೂರನೇ ಸಭೆ - ಕ್ರಿ.ಪೂ. 237 ರಲ್ಲಿ ಪಾಟಲಿಪುತ್ರದಲ್ಲಿ ನಡೆಯಿತು
ಮೂರನೇ ಸಭೆ - ಕ್ರಿ.ಪೂ. 237 ರ ಸಭೆ - ಅಶೋಕನಿಂದ ಸಮಾವೇಶಗೊಂಡಿತು
ಮೂರನೇ ಸಭೆ - ಕ್ರಿ.ಪೂ. 237 ರ ಅಧ್ಯಕ್ಷತೆಯೆಯನ್ನು - ಮುಗ್ಗಲಿಪುತ್ರ ವಹಿಸಿದ್ದನ್ನು
ಮೂರನೇ ಸಭೆ - ಕ್ರಿ.ಪೂ. 237 ರಲ್ಲಿ ಕಥಾ ವಸ್ತು ಎಂಬ ಗ್ರಂಥವನ್ನು ರಚಿಸಲಾಯಿತು
ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಶ್ರೀನಗರದಲ್ಲಿ ನಡೆಯಿತು
ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಕಾನಿಷ್ಕನ ಆಶ್ರಯದಲ್ಲಿ ನಡೆಯಿತು
ನಾಲ್ಕನೇ ಮಹಾಸಭೆ ಕ್ರಿ.ಶ.100 ರಲ್ಲಿ ಬೌದ್ಧ ಧರ್ಮ ಮಹಾಯಾನ ಹಾಗೂ ಹೀನಾಯಾನ ಎಂಬ ಎರಡು ಪಂಗಡಗಳಾಗಿ ವಿಭಜನೆಗೊಂಡಿತು .

ಬೌದ್ಧ ಧರ್ಮದ ಅವನತಿಗೆ ಕಾರಣ
ಹೀನಾಯಾನ ಮಹಾಯಾನ ಪಂಗಡಗಳ ಉಗಮ
ಬೌದ್ಧ ಭಿಕ್ಷು ಹಾಗೂ ಭಿಕ್ಷುಣಿಯರು ಕಾರ್ಯದಲ್ಲಿ ಉತ್ಸಾಹ ಹೀನಾರಾಗಿದ್ದರು
ಬೌದ್ಧ ಸಂಗಾರಾಗಳು ಸಂಪತ್ತಿನ ಕೇಂದ್ರವಾಗಿದ್ದು
ಭಿಕ್ಷುಗಳ ಅಶ್ಲೀಲ ನಡತೆ
ಗುಪ್ತ ಸಾಮ್ರಾಜ್ಯದ ಉಗಮ
ಶಂಕರಾಚಾರ್ಯರ ವಾಸ
ಮುಸಲ್ಮಾನರ ದಾಳಿ


ತ್ರಿಪಿಟಕಗಳು - ಸುತ್ತ ಪಿಟಕ ,ವಿನಯ ಪಿಟಕ ಹಾಗೂ ಅಭಿಧಮ್ಮ ಪಿಟಕ
ಶಾಕ್ಯಮುನಿ ಎಂದು ಕರೆಸಿಕೊಂಡವರು - ಬುದ್ಧ
ಬುದ್ಧನು ಜನಿಸಿದ ದಿನ - ವೈಶಾಖ ಶುದ್ಧ ಪೂರ್ಣಿಮೆಯ ದಿನ
ಬುದ್ಧನ ಮಲತಾಯಿಯ ಹೆಸರು - ಮಹಾಪ್ರಜಾಪತಿ ಗೌತಮಿ
ರಾಜಗೃಹದಲ್ಲಿ ಬುದ್ಧನು ಭೇಟಿಮಾಡಿದ ಸನ್ಯಾಸಿಗಳು - ಉದ್ರಕ ,ರಾಮಪುತ್ರ ,ಆರಾಢಕಾಲ
ಬುದ್ಧ ಪದದ ಅರ್ಥ - ಜ್ಞಾನೋದಯ ಪಡೆದವನು
ಬುದ್ಧನಿಗೆ ಜ್ಞಾನೋದಯವಾದ ದಿನ - ವೈಶಾಖ ಶುದ್ದ ಪೂರ್ಣಿಮೆಯಂದು
ಜ್ಞಾನೋದಯದ ನಂತರ ಅರಳಿ ಮರ - ಭೋದಿ ವೃಕ್ಷವಾಯಿತು
ತಥಾಗತ ಎಂಬುವುದಾಗಿ ಪ್ರಖ್ಯಾತಿ ಪಡೆದವನು - ಬುದ್ಧ
ತಥಾಗತ ಎಂದರೆ - ಸತ್ಯವನ್ನು ಕಂಡವನು
ಬುದ್ಧ ನಿರ್ವಾಣ ಹೊಂದಿದ್ಧು ಈ ವಯಸ್ಸಿನಲ್ಲಿ - 80
ಬುದ್ಧನು ಪ್ರಥಮ ಭಾರಿಗೆ ಭೋಧನೆ ಆರಂಬಿಸಿದ್ದು ಈ ಪ್ರದೇಶದಲ್ಲಿ - ಸಾರಾನಾಥದ ಜಿಂಕೆ ಉದ್ಯಾನ
ಬುದ್ಧನಿಗಿದ್ದ ಪ್ರಾಥಮಿಕ ಶಿಷ್ಯರು - 5 ಮಂದಿ
ಬುದ್ಧನ ಬ್ರಾಹ್ಮಣ ಶಿಷ್ಯರು - ಆನಂದ ,ಸಾರಿಪುತ್ರ ,ಮಾದ್ಗಲ್ಯಾಯನ್ .ಅಶ್ರಜಿತು ,ಉರವೇಲ
ಬುದ್ಧನ ಶೂದ್ರ ಶಿಷ್ಯರು - ಉಪಾಲಿ ಮತ್ತು ಸುನಿತ
ಬುದ್ಧನ ವೈಶ್ಯ ಶಿಷ್ಯ - ಅನಿರುದ್ಧ
ಬುದ್ಧನ ಮಹಿಳಾ ಶಿಷ್ಯೆಯರು - ಆಮ್ರ ಪಾಲಿ , ಸುಜಾತ ,ಕಿಸಾಗೋತಮಿ ಕ್ಷೇಮ
ಬುದ್ಧನ ಹಿಂದಿನ ಜನ್ಮ ಕಥೆಗಳನ್ನು ಬಂದಿರುವ ಕಥೆ - ಜಾತಕ ಕಥೆಗಳು
ಜಾತಕ ಕಥೆ ಕೃತಿಯ ಕರ್ತೃ - ಆರ್ಯ ಮಿತ್ರ
ಬೌದ್ಧ ಧರ್ಮದ ಹಿರಿಮೆಯನ್ನು ಕುರಿತು ಇರುವ ಗ್ರಂಥ A History of Indian civilization
A History of Indian civilization ಕೃತಿಯ ಕರ್ತೃ - ರಾಧಕುಮುಧ್ ಮುಖರ್ಜಿ
Encint India - ಕೃತಿಯ ಕರ್ತೃ - ವಿ.ಸಿ.ಪಾಂಡೆ
ಬುದ್ಧನ ಮೂರು ಆದರ್ಶಗಳು - ಬುದ್ಧಂ ಶರಣಂ ಗಚ್ಚಾಮಿ ,ಧರ್ಮ ಶರಣಂ ಗಚ್ಚಾಮಿ , ಸಂಘಂ , ಗಚ್ಚಾಮಿ
ಬೌದ್ಧ ಧರ್ಮದ ಪ್ರಚಾರದಲ್ಲಿ ಅಗ್ರಗಣ್ಯನಾದ ಅರಸ - ಅಶೋಕ
ಅಶೋಕನ ಮಕ್ಕಳ ಹೆಸರು - ಮಹೇಂದ್ರ ಮತ್ತು ಸಂಘಮಿತ್ರೆ
ಮಹೇಂದ್ರ ಮತ್ತು ಸಂಘಮಿತ್ರೆ ಬೌದ್ಧ ಧರ್ಮ ಪ್ರಚಾರ ಮಾಡಿದ ಸ್ಥಳ - ಬರ್ಮಾ ಮತ್ತು ಶ್ರೀಲಂಕಾ
ಬೌದ್ಧ ಧರ್ಮದ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ ವಿದ್ಯಾಲಯ - ನಲಂದಾ ವಿಶ್ವವಿದ್ಯಾಲಯ
Light of Asia ಅಥವಾ ಏಷ್ಯಾದ ಬೆಳಕು ಎಂದು ಕರೆದವರು - ಸರ್ ಎಡ್ವಿನ್ ಅರ್ನಾಡ್
Edvine Arnald ರವರು - ಜೆಕೋ ಬುಕ್ತ ಕೃತಿಯಲ್ಲಿ ಬುದ್ಧನನ್ನ The Light of Asia ಎಂದು ಕರೆದಿದ್ದಾರೆ
ಹೀನಾಯಾನಿಗಳೆಂದರೆ - ಬುದ್ಧನ ಮೂಲ ತತ್ವದಲ್ಲಿ ನಂಬಿಕೆಯುಳ್ಳವರು
ಮಹಾಯಾನಿಗಳೆಂದರೇ - ಬುದ್ಧನನ್ನು ವಿಗ್ರಹ ರೂಪದಲ್ಲಿ ಆರಂಭಿಸಿದವರು
ಬುದ್ಧನ ಪಾದಗಳ ಗುರುತು ಅಥವಾ ಖಾಲಿ ಪೀಠಕ್ಕೆ ಪೂಜೆ ಸಲ್ಲಿಸುತ್ತಿದ್ದವರು - ಹೀನಾಯಾನ ಪಂಥದವರು
ಹೀನಾಯಾನಿಗಳು ಈ ರಾಜನ ಕಾಲದಲ್ಲಿ ಖ್ಯಾತಿ ಹೊಂದಿದ್ದರು - ಅಶೋಕ
ಬುದ್ಧನನ್ನು ದೇವರೆಂದು ಪರಿಗಣಿಸಿದವರು - ಮಹಾಯಾನಿಗಳು
ಮಹಾಯಾನ ಪಂಥ ಹೆಚ್ಚು ಪ್ರಚಲಿತದಲ್ಲಿದ್ದವು - ಕಾನಿಷ್ಕನ ಕಾಲದಲ್ಲಿ
ಬುದ್ದಗಯಾ ಹಾಗೂ ಬರಾಬರ್ ಗುಹಾಲಯ ಈ ರಾಜ್ಯದಲ್ಲಿದೆ - ಬಿಹಾರ
ಸಾಂಚಿಯ ಸ್ಥೂಪ ಈ ರಾಜ್ಯದಲ್ಲಿದೆ - ಮಧ್ಯಪ್ರದೇಶ
ಅಜಂತಾ ದೇವಾಲಯ ಈ ಪ್ರದೇಶದಲ್ಲಿದೆ - ಮಹಾರಾಷ್ಠ್ರ
ನಾಗರ್ಜುನಕೊಂಡ ಈ ಪ್ರದೇಶದಲ್ಲಿದೆ - ಆಂದ್ರಪ್ರದೇಶ
ವಿಶ್ವದಲ್ಲಿಯೆ ಅತಿ ದೊಡ್ಡದಾದ ಬೋರೋಬುದೂರ್ ಅಥವಾ ಬೃಹತ್ ಬುದ್ಧ ದೇವಾಲಯ ಇರುವ ಪ್ರದೇಶ ಇಂಡೋನೆಷ್ಯಾದ ಜಾವ ದ್ವೀಪದಲ್ಲಿ
1950 ಡಿಸೆಂಬರ್ ನಲ್ಲಿ ವಿಶ್ವ ಬೌದ್ಧ ಸಮ್ಮೇಳನ ನಡೆದ ಪ್ರದೇಶ - ಸಿಂಹಳ
ಡಾ//.ಬಿ.ಆರ್.ಅಂಬೇಡ್ಕರ್ ರವರು ಬೌದ್ಧ ಧರ್ಮವನ್ನು ಸ್ೀಕರಿಸಿದ ಪ್ರೇರಣಿಯಾದ ಸಮ್ಮೇಳನ - ಸಿಂಹಳದಲ್ಲಿ 1950 ರಲ್ಲಿ ನಡೆದ ಬೌದ್ಧ ಸಮ್ಮೇಳನ
ಅಂಬೇಡ್ಕರ್ ರವರು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು - 14/10/1956 ನಾಗಪುರದಲ್ಲಿ
ಅಂಬೇಡ್ಕರ್ ರವರು - ಬೌದ್ಧ ಧರ್ಮವನ್ನು ಸ್ವೀಕರಿಸಿದ ಸಂಧರ್ಭದಲ್ಲಿದ್ದ ಬೌದ್ಧ ಭಿಕ್ಷು - ಕುಶೀನಗರದ ಚಂದ್ರಮಣಿ
ಕ್ರಿ..ಶ. 2000 ದಲ್ಲಿ ತಾಲಿಬಾನ್ ಉಗ್ರರಿಂದ ನಾಶಗೊಂಡ ಬುದ್ಧನ ಶಿಲಾಕೃತಿ - ಅಫ್ಘಾನಿಸ್ಥಾನದ ಬೊಹೆಮಿಯಾನ್ ಪ್ರಾಂತ್ಯದ ಶಿಲಾಕೃತಿ

ಬೌದ್ಧ ಧರ್ಮದ ಪ್ರಮುಖ ಗ್ರಂಥಗಳು
ಬುದ್ಧನು ಜನಿಸಿದ ವರ್ಷ - ಕ್ರಿ.ಪೂ. 567
ರಾಹುಲ ಪದದ ಅರ್ಥ - ತೊಡಕು
ಬುದ್ಧನಿಗೆ ಹೊಸ ವಿಚಾಗಳು ಹೊಳೆದುದನ್ನು ಈ ಹೆಸರಿನಿಂದ ಕರೆಯುವರು - ಜ್ಞಾನೋದಯ
ಸಂಸ್ಕೃತದಲ್ಲಿ ಬೌದ್ಧ ಗ್ರಂಥಗಳನ್ನು ಬರದ ಪಂಥ - ಮಹಾಯಾನ
ಮಧುರೈಯಲ್ಲಿ ದ್ರಾವಿಡ ಸಂಘವನ್ನು ಕಟ್ಟಿದವರು - ಜೈನರು
ನಮ್ಮ ರಾಷ್ಟ್ರೀಯ ಲಾಂಛನ - ಸಾರಾನಾಥದ ಸ್ತಂಭಗ್ರದ ಸಿಂಹಗಳ ಪ್ರತಿಮೆಯನ್ನ ಹೊಂದಿದೆ
ಬುದ್ಧನು ನಿರ್ವಾಣ ಹೊಂದಿದ ದಿನಾಂಕ - ಕ್ರಿ.ಪೂ. 48 ರಲ್ಲಿ
ಪ್ರಸ್ತುತ ಧರ್ಮ ಗುರುವಿನ ಹೆಸರು - ದಲೈಲಾಮಾ
ದಲೈಲಾಮ ಈ ಪ್ರದೇಶದವರು - ಟಿಬೆಟ್
ಬುದ್ಧನು ಬೋದಿಸಿದ ಆರ್ಯ ಸತ್ಯಗಳ ಸಂಖ್ಯೆ - ನಾಲ್ಕು
ಅಶೋಕನ ಕಾಲದಲ್ಲಿ ನಡೆದ ಬೌದ್ಧ ಸಮ್ಮೇಳನ - ಮೂರನೇಯದು
ಎರಡನೇ ಬೌದ್ಧ ಸಮ್ಮೇಳನ ನಡೆದ ಸ್ಥಳ - ವೈಶಾಲಿ
ಮೊದಲನೆ ಬೌದ್ಧ ಸಮ್ಮೇಳನ ನಡೆದ ಸ್ಥಳ - ರಾಜಗೃಹ
ಮೂರನೇ ಬೌದ್ಧ ಸಮ್ಮೇಳನ ನಡೆದ ಸ್ಥಳ - ಪಾಟಲಿ ಪುತ್ರ
ಬುದ್ದನ ಮೂೂಲ ಬೋಧನೆಗಳಲ್ಲಿ ಬದಲಾವಣಿ ಬಯಸದ ಬೌದ್ಧ ಭಿಕ್ಷುಗಳನ್ನು ಈ ಹೆಸರಿನಿಂದ ಕರೆಯುವರು - ಸ್ಥವಿರರು
ಬೌದ್ಧ ಧರ್ಮವನ್ನು ಜೈನಧರ್ಮದಿಂದ ಪ್ರತ್ಯೇಕಿಸುವ ತತ್ವ - ಎಲ್ಲಾ ಜೀವ ವಸ್ತುಗಳಿಗೆ ಆತ್ಮವಿದೆ ಎಂಬುದು
ಬುದ್ಧನ ಅಭಿಪ್ರಾಯದಂತೆ ನಿರ್ವಾಣ ಪಡೆಯಲು ಸೂಕ್ತವಾದ ಮಾರ್ಗ - ಕಠಿಮ ತಪ್ಪಸ್ಸು
ಭಿಕ್ಷುಣಿಯರ - ಭಿಕ್ಷುಗಳ ದಿನಚರಿಯ ನಿಯಮ ಸಂಘದ ಶಿಷ್ಟಾಚಾರಗಳು ಮುಂತಾದುವುಗಳನ್ನು ಹೊಂದಿರುವ ಪಿಟಕ - ವಿನಯಪಿಟಕ
ಬುದ್ದನ ವಚನ , ಕಥನ ,ತತ್ವ ನಿರೂಪಣಿಗಳಿಂದ ಕೂಡಿರುವ ಪಿಟಕ - ಸುತ್ತ ಪಿಟಕ
ಬುದ್ಧನ ದಾರ್ಶನಿಕ ತತ್ವ ಹಾಗೂ ರಹಸ್ಯ ವಿಚಾರಗಳನ್ನು ಒಳಗೊಂಡಿರುವ ಪಿಟಕ - ಅಭಿದಮ್ಮ ಪಿಟಕ
ಪಿಟಕ ಪದದ ಅರ್ಥ - ಪೆಟ್ಟಿಗೆ ಅಥವಾ ಬುಟ್ಟಿ ಎಂದರ್ಥ
ಬುದ್ಧನು ತನ್ನ 16 ನೇ ವಯಸ್ಸಿನಲ್ಲಿ ವಿವಾಹವಾದನು
ಬುದ್ಧನು ಮಹಾ ಪರಿತ್ಯಾಗಿಯಾದುದು - 26 ನೇ ವಯಸ್ಸಿನಲ್ಲಿ
ಬುದ್ಧನು - ರಾಜಗೃಹವನ್ನು ತೊರೆದು ನಂತರ ಉರುವೇಲ ಗ್ರಾಮಕ್ಕೆ ಹೋಗಿ ಅಲ್ಲಿ ನಿರಂಜನ ನದಿಯಲ್ಲಿ ಸ್ನಾನ ಮಾಡಿ ಸುಜಾತ ಎಂಬುವವಳು ಕೊಟ್ಟ ಭಿಕ್ಷಾನ್ನವನ್ನ ತಿಂದು ನಂತರ ಗಯಾವನ್ನ ತಲುಪಿದ
ಬುದ್ಧಗಯಾದಲ್ಲಿ ತಪಸ್ಸನ್ನು ಕೈಗೊಂಡಿದ್ದು - 47 ದಿನ
ಬುದ್ಧನಿಗೆ ಜ್ಞಾನೋದಯವಾಗಿದ್ದು - 35 ನೇ ವಯಸ್ಸಿನಲ್ಲಿ
ಧರ್ಮ ಚಕ್ರದ ಪರಿವರ್ತನೆ ಎಂದರೆ - ಬುದ್ಧನು ತನ್ನ ಮೊದಲ ಪ್ರವಚನವನ್ನು ಸಾರಾನಾಥದ ಜಿಂಕೆಯವನ ದಲ್ಲಿ ಆರಂಭಿಸಿದ್ದನ್ನು ಈ ಹೆಸರಿನಿಂದ ಕರೆಯುವರು
ಬುದ್ಧನ ಮೊದಲ ಶಿಷ್ಯನ ಹೆಸರು - ಆನಂದ
ಬುದ್ದನು - ಉತ್ತರ ಪ್ರದೇಶದ ಗೋರಕ್ ಪುರ ಜಿಲ್ಲೆಯ ಕುಶಿನಗರದಲ್ಲಿ ಕ್ರ.ಪೂ. 487 ರಲ್ಲಿ ನಿರ್ವಾಣ ಹೊಂದಿದರು
ಬುದ್ಧನು ಬೋಧಿಸಿದ ಅಷ್ಟಾಂಗ ಮಾರ್ಗವು ಈ ಕಲ್ಪನೆಗೆ ಸಮಾನವಾಗಿದೆ - ಅರಿಸ್ಟಾಟಲ್ ಸುವರ್ಣ ಮಾಧ್ಯಮ ಕಲ್ಪನೆ
ಸುವರ್ಣ ಮಾಧ್ಯಮದ ಕಲ್ಪನೆ ನೀಡಿದವರು - ಅರಿಸ್ಟಾಟಲ್
4 ನೇ ಬೌದ್ಧ ಸಮ್ಮೇಳನ ನಡೆದದ್ದು - ಕುಂಡಲ ವನದಲ್ಲಿ ( ಕ್ರಿ.ಪೂ.100 ) ರಲ್ಲಿ
ಕುಂಡಲ ವನ ಈ ರಾಜ್ಯದಲ್ಲಿದೆ - ಕಾಶ್ಮೀರ
4ನೇ ಬೌದ್ಧ ಸಮ್ಮೇಳನ ನಡೆಸಿದವನು - ಕಾನಿಷ್ಕ
4 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು - ವಸುಮಿತ್ರ
5 ನೇ ಬೌದ್ಧ ಸಮ್ಮೇಳನ ನಡೆಸಿದವರು - ಹರ್ಷವರ್ಧನ
5 ನೇ ಬೌದ್ಧ ಸಮ್ಮೇಳನ ನಡೆದದ್ದು - ಕಾನೂಜ್ ನಲ್ಲಿ ಕ್ರಿ.ಶ. 643
5 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು - ಹ್ಯೂಯನ್ ತ್ಸಾಂಗ್
ನಲಂದಾ ಬೌದ್ಧ ವಿಶ್ವ ವಿದ್ಯಾಲಯವನ್ನು ಪೋಷಿಸಿದ ಅರಸ - ಹರ್ಷವರ್ಧನ
ಬೌದ್ಧ ಧರ್ಮವನ್ನು ಚೀನಾಗೆ ಪರಿಚಯಿಸಿದವರು - ಧರ್ಮರತ್ನ ಹಾಗೂ ಕಶ್ಯಾಪ
ಬೌದ್ಧ ಗ್ರಂಥಗಳನ್ನು ಚೀನಿ ಭಾಷೆಗೆ ತರ್ಜುಮೆ ಮಾಡಿದವನು - ಹ್ಯೂಯನ್ ತ್ಸಾಂಗ್
ನಲಂದಾ ವಿಶ್ವ ವಿದ್ಯಾಲಯಕ್ಕೆ ಬೆಂಕಿ ಇಟ್ಟ ಮುಸ್ಲಿಂ ದಾಳಿಕಾರ - ಭಕ್ತಿಯಾರ್ ಖಿಲ್ಜಿ
ಗಾಂಧಾರ ಶಿಲ್ಪಕಲೆಯನ್ನು ಹುಟ್ಟುಹಾಕಿದ ಧರ್ಮ - ಬೌದ್ಧ ಧರ್ಮ
ನಿರ್ವಾಣ ಎಂದರೇ - ಜನನ ಮರಣಗಳಿಂದ ಮುಕ್ತವಾಗಿ ದೈವಿ ಸಾನಿಧ್ಯ ಪಡೆಯುವುದು
ಕಪಿಲ ವಸ್ತು ಈ ಪ್ರದೇಶದಲ್ಲಿದೆ - ನೇಪಾಳ
ಬುದ್ಧನು ಮೋಕ್ಷ ಹೊಂದಿದ ದಿನವನ್ನು ಈ ಹೆಸರಿನಿಂದ ಕರೆಯಲಾಗಿದೆ - ಮಹಾಪರಿನಿರ್ವಾಣ
ಬುದ್ದನು ನಿರ್ವಾಣದ ಸಂಕೇತಗಳು - ಚೈತ್ಯಗಳು
ಬೌದ್ಧ ಧರ್ಮದ ಆಕ್ಸ್ ಫರ್ಡ್ ವಿಶ್ವ ವಿದ್ಯಾನಿಲಯ ಎಂದು ಕರೆಯಲ್ಪಡುವ ವಿ.ವಿ.ನಿಲಯ - ನಲಂದಾ ವಿಶ್ವ ವಿದ್ಯಾನಿಲಯ
ಬೌದ್ಧ ಗುರು ದಲೈಲಾಮ ಭಾರತಕ್ಕೆ ಟಿಬೆಟಿನಿಂದ ವಲಸೆ ಬಂದ ವರ್ಷ - ಕ್ರಿ.ಶ . 1959 ರಲ್ಲಿ
ಬುದ್ದನ ಸ್ವಾಮಿ ನಿಷ್ಠ ಸೇವಕ - ಚನ್ನ
ಮಹಾವೀರನ ಅನುಯಾಯಿಗಳಾದ ಮುನಿ - ವಸ್ತ್ರ
ಜೈನ ದೇವಾಲಯಗಳನ್ನು ಈ ಹೆಸರಿನಿಂದ ಕರೆಯುವರು - ಬಸದಿ
ಕೇವಲಿ ಎಂದರೆ - ಜ್ಞಾನಿ ಎಂದರ್ಥ
ಬುದ್ಧನ ಸ್ಮಾರಕಗಳಿರುವ ಪ್ರದೇಶ - ಸಾರಾನಾಥ
ಗೌತಮ ಬುದ್ಧ - 80 ವರ್ಷ ಧರ್ಮ ಪ್ರಚಾರ ಮಾಡಿದ
ಬುದ್ದನು ಪವಿತ್ರ ಸ್ನಾನ ಮಾಡಿದ ನಿರಂಜನ ನದಿಯ ಪ್ರಸ್ತುತ ಹೆಸರು - ಲೀಲಾಜನ್
ಸಂಸ್ಕೃತದಲ್ಲಿ ಅತ್ಯಂತ ಪ್ರಾಚೀನವಾದ ಪಾರಿಪುತ್ರ ಪ್ರಕರಣ ಎಂಬ ನಾಟಕವನ್ನ ರಚಿಸಿದವನು - ಅಶ್ವ ಘೋಷ
ಭಾರತದಲ್ಲಿ ಸ್ಥಾಪಿಸಲಾದ ಕೊನೆಯ ಬೌದ್ಧ ವಿ.ವಿ. ನಿಲಯ - ವಿಕ್ರಮಶೀಲ
ಕುಶಾನರ ಕಾಲಕ್ಕೆ ಸೇರಿದ ಬೌದ್ಧ ಸ್ಮಾರಕ ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಹೊರ ಬಿದ್ದಿತು - ಸಂಗೋಲ್
ಭಾರತದಲ್ಲಿ ರಚಿಸಲ್ಪಟ್ಟ ಕೊನೆಯ ಬೌದ್ಧ ಸಾಹಿತ್ಯ ಗ್ರಂಥದ ಹೆಸರು - ದೋಹಾ ಕೋಶ
ಗೌತಮ ಬುದ್ಧನನ್ನು ಪ್ರಪ್ರಥಮವಾಗಿ ಮಾನವ ರೂಪದಲ್ಲಿ ಪ್ರಕಟಿಸಿದ ಶಿಲ್ಪಕಲೆ - ಗಾಂಧಾರ ಶಿಲ್ಪಕಲೆ
ಅಭಿಧರ್ಮ ಪೀಠಿಕೆಯನ್ನು ರಚಿಸಿದ ಬೌದ್ಧ ಸಮ್ಮೇಳನ - ಪಾಟಲಿಪುತ್ರ ಸಂಗಿತಿ
ಮಹಾಯಾನ ಬೌದ್ಧರು ಪ್ರಪ್ರಥಮವಾಗಿ ವಿಗ್ರಹಾರಾಧನೆಯನ್ನು ಪ್ರಾರಂಭಿಸಿದ ವರ್ಷ - ಕ್ರಿ.ಶ.1 ನೇ ದಶಕ
ಬುದ್ದನ ಶಾಂತಿ ಸಂದೇಶದೊಂದಿಗೆ ರೋಹಿಣಿ ನದಿಯ ನೀರಿನ ಗಲಭೆಯನ್ನು ನಿವಾರಿಸಿಕೊಂಡ ರಾಜ್ಯಗಳು - ಶಾಕ್ಯಮ ಮತ್ತು ಕೋಸಲ
ಬುದ್ದನು ಈ ವಿಷಯದ ಕುರಿತು ಚರ್ಚೆ ಮಾಡುವುದನ್ನು ನಿರಾಕರಿಸಿದವನು - ಆತ್ಮ ಮತ್ತು ದೇವರು
ಪಾಟಲಿಪುತ್ರ ನಗರದ ನಿರ್ಮಾತೃ - ಅಜಾತಶತೃ
ಅಂಗೀರಸ ಎಂದು ಹೆಸರನ್ನು ಹೊಂದಿದವನು - ಬುದ್ಧ
ಗೊತಮ ಬುದ್ಧನು ವೈಶಾಲಿಯಲ್ಲಿ ಈ ಗುರುವಿನ ಬಳಿ ಪಾಂಡಿತ್ಯವನ್ನು ಸಂಪಾದಿಸಿದವನು - ಅಲಾರಕಲಾಮ
ಮೊಟ್ಟ ಮೊದಲ ಬೌದ್ಧ ಸನ್ಯಾಸಿನಿ - ಪ್ರಜಾಪತಿ ಗೌತಮಿ
ಬುದ್ಧನ ಪತ್ನಿ ಯಶೋಧರೆಯ ಇನ್ನೋಂದು ಹೆಸರು - ಭದ್ರಕಾಂತ ಕಾತ್ಯಾಯಿನಿ

ಬುದ್ಧಮ ಜೀವನದ ಐದು ಘಟನೆಗಳು ಹಾಗೂ ಅವುಗಳ ಸಂಕೇತ
ಜನನ - ಕಮಲ ಮತ್ತು ವೃಷಭ
ಜ್ಞಾನ ಪ್ರಾಪ್ತಿ - ಕುದುರೆ
ನಿರ್ವಾಣ - ಬೋಧಿವಕ್ಷ
ಪ್ರಥಮ ಧರ್ಮೋಪದೇಶ - ಧರ್ಮಚಕ್ರ
ಪರಿನಿರ್ವಾಣ - ಸ್ಥೂಪ

Wednesday, 18 May 2011

‘ಹೊಲಸು’: ಆಹಾರ ಪ್ರಮಾಣ


‘ಹೊಲಸು’: ಆಹಾರ ಪ್ರಮಾಣ ;ಭಾಗ-1- ಡಾ. ರಹಮತ್ ತರೀಕೆರೆ

ಯಾವ ಸಾಮಾಜಿಕ ಆವರಣದೊಳಗೆ ನಾವು ಬದುಕುತ್ತಿದ್ದೇವೆಯೋ ಅದರ ತಳಬುಡವನ್ನು ಅರಿತುಕೊಳ್ಳುವುದು ಸಂಸ್ಕೃತಿ ಚರ್ಚೆಯಲ್ಲಿ ಅಗತ್ಯ ವಾಗಿದೆ. ಯಾವ ನೆಲದಲ್ಲಿ ಜಲವುಣಿಸುವ ಧಾರೆ ಗಳಿಗಾಗಿ ನೆರಳನೀವ ತರುಗಳಿಗಾಗಿ ಅಮರ್ದಿನ ಬಳ್ಳಿಗಾಗಿ ತಡಕಾಡುತ್ತಿದ್ದೇವೆಯೋ, ಆ ನೆಲದ ಮೇಲೆ ಬೆಳೆದ ಕಳೆಕಸಗಳ ಪರಿವೆ ಇರಬೇಕಷ್ಟೇ. ‘ಪ್ರಮಾಣ’ವೆಂದರೆ, ನಮ್ಮ ಸಮಾಜದ ವಿವಿಧ ಸ್ತರಗಳಲ್ಲಿ ಆಳುವ ಸಂಸ್ಕೃತಿಯ ಆಲೋಚನಾ ಕ್ರಮಕ್ಕೆ ತಕ್ಕನಾಗಿ ರೂಪುಗೊಂಡು ನೆಲೆಸಿರುವ ನಂಬಿಕೆ ಆಚರಣೆಗಳು; ಮನುಷ್ಯರಿಂದ ಹಿಡಿದು ಪಶುಪಕ್ಷಿ ಗಿಡಮರ ದಿಕ್ಕುಗಳು ಬಣ್ಣಗಳು ಉಣ್ಣು ವುದು ಉಡುವುದು ಆಡುವ ಮಾತು ಮಾಡುವ ಕಸುಬುಗಳಾದಿಯಾಗಿ, ಜೀವನವನ್ನೆಲ್ಲಾ ವ್ಯಾಪಿಸಿ ಕೊಂಡಿರುವ ಶ್ರೇಣೀಕರಣಗಳು; ಈ ಪ್ರಮಾಣೀ ಕರಣಗಳು ನಮ್ಮ ದೈನಿಕ ಬದುಕಿನಲ್ಲಿ ಸಹಜವಾಗಿ ಸೇರಿಹೋಗಿವೆ.

ಎಷ್ಟೆಂದರೆ, ಎದುರಲ್ಲಿ ಗೋಚರಿ ಸುತ್ತಿದ್ದರೂ, ನಮ್ಮ ಭಾಷೆ ಸಾಹಿತ್ಯಕೃತಿ ದೈನಿಕ ವರ್ತನೆಗಳು ಅವನ್ನು ಮತ್ತೆಮತ್ತೆ ಪ್ರಕಟಿಸುತ್ತಿ ದ್ದರೂ, ತಟ್ಟನೆ ಅವು ಅರಿವಿಗೆ ಬರುವುದೇ ಇಲ್ಲ. ಬಂದರೂ ತಲೆ ಕೆಡಿಸುವುದಿಲ್ಲ. ಈ ಪ್ರಮಾಣೀ ಕರಣದ ಜಗತ್ತನ್ನು ಅರಿಯುವುದೆಂದರೆ, ಇಂಡಿ ಯಾದ ಬೇರೆಬೇರೆ ಸಮುದಾಯ ಗಳು ಅದನ್ನು ಎಲ್ಲಿ ಉಲ್ಲಂಘಿಸಿವೆ, ದಾಟ ಲಾಗದೆ ಬಳಲಿವೆ ಅಥವಾ ಜಗಳಕ್ಕೆ ಹೋಗದೆ ಬದಲಿ ನಿರ್ಮಿಸಿಕೊಂಡಿವೆ ಎಂಬುದರ ಶೋಧ ಕೂಡಾ. ಪ್ರತಿಸಂಸ್ಕೃತಿ ನಿರ್ಮಾಣದ ಚರ್ಚೆಗೆ ಹಿನ್ನೆಲೆ ಒದಗಿಸಿ ಕೊಳ್ಳುವುದಕ್ಕಾಗಿ, ಪ್ರಮಾಣಗಳ ‘ಚರಿತ್ರೆ’ ಯನ್ನು ವಿಶ್ಲೇಷಿಸಲು ಪ್ರಯತ್ನಿಸಲಾಗಿದೆ. ಈ ಪ್ರಮಾಣಗಳಲ್ಲಿ ಆಹಾರ ಪ್ರಮಾಣವು ಮುಖ್ಯವಾದುದು.

ಬಹುಸಂಸ್ಕೃತಿಗಳ ಈ ದೇಶದೊಳಗೆ ನಡೆದ, ಈಗಲೂ ನಡೆಯುತ್ತಿರುವ ದೊಡ್ಡ ದೌರ್ಜನ್ಯವೆಂದರೆ, ಸಂಸ್ಕೃತಿನಿಷ್ಠವೂ ಖಾಸ ಗಿಯೂ ಆದ ಉಣ್ಣುವ ವಸ್ತುಗಳನ್ನು, ಕನಿಷ್ಠ ವೆಂದು ಶ್ರೇಷ್ಠವೆಂದು ವಿಂಗಡಿಸಿ ಪ್ರಮಾಣೀ ಕರಿಸಿರುವುದು. ಈ ಬಗೆಯ ಪ್ರಮಾಣೀಕರ ಣಗಳು ಹೆಚ್ಚಾಗಿ ರಾಜಕೀಯ ಅಧಿಕಾರ ಪಡೆದ ಸಂಸ್ಕೃತಿಯ ಕೇಂದ್ರದಿಂದ ಸೃಷ್ಟಿಯಾ ಗಿರುತ್ತವೆ. ಸಾಮಾಜಿಕವಾಗಿ ಪ್ರತಿಷ್ಠೆ ಪಡೆಯ ಬಯಸುವ ಉಳಿದ ಸಮುದಾಯಗಳು ‘ಉಚ್ಚಸಂಸ್ಕೃತಿ’ಯ ಈ ಮಾದರಿಗಳನ್ನು ಆದರ್ಶ ವೆಂದು ಒಪ್ಪಿಕೊಳ್ಳುತ್ತವೆ. ಎಷ್ಟೋ ಸಮುದಾಯ ಗಳು ಚರಿತ್ರೆಯಲ್ಲಿ ಮಾಂಸಾಹಾರವನ್ನು ಬಿಟ್ಟು ಶ್ರೇಷ್ಠಗೊಳಿಸಲು ಯತ್ನಿಸಿದ್ದು ಹೀಗೆ. ಚಮ್ಮಾರರಾದ ಛತ್ತೀಸಗಢದ ಸತ್ನಾಮಿಗಳು, ಗುರುಘಾಸೀದಾಸನ ಪ್ರಭಾವದಿಂದ ಭಕ್ತರಾಗಿ ಜನಿವಾರ ಧರಿಸಿದರು. ಮಾಂಸಾಹಾರ ತ್ಯಜಿಸಿದರು.

ಮಾತ್ರವಲ್ಲ, ಕೆಂಪು ತರಕಾರಿ ಕೂಡ ತಿನ್ನುವುದನ್ನು ನಿಲ್ಲಿಸಿಬಿಟ್ಟರು. ಒಂದನ್ನು ಪಡೆಯಲು ಮತ್ತೊಂದರ ತ್ಯಾಗ. ಸಾಮಾಜಿಕ ಸ್ಥಾನಮಾನಕ್ಕಾಗಿ ಸಂಸ್ಕೃತೀಕರಣಗೊಳ್ಳಬೇಕೆಂಬ ಆಸೆ ಹಾಗೂ ತಮ್ಮ ಪ್ರೀತಿಯ ಆಹಾರಕ್ರಮಗಳನ್ನು ಕೈಬಿಡಲಾಗದ ಅಸಹಾಯಕತೆ. ಈ ತೊಳಲಾಟದಲ್ಲಿ ಅತ್ತಲೂ ಇತ್ತಲೂ ಇರಬಯಸುವ ಆದರೆ ವಾಸ್ತವದಲ್ಲಿ ಇರಲಾಗದ ದ್ವಂದ್ವಗಳಲ್ಲಿ ಉಳಿದುಬಿಡುವ ಸಮು ದಾಯಗಳೇ ಹೆಚ್ಚು. ಸದ್ಯಕ್ಕೆ ಇವು ಕೆಲವು ‘ಶುಭ’ ಕಾರ್ಯಗಳಲ್ಲಿ ಮಾತ್ರ ‘ಉಚ್ಚ’ ಸಂಸ್ಕೃತಿಯನ್ನು ಅನುಸರಿಸುವ ಮಟ್ಟಕ್ಕೆ ರಾಜಿಯಾಗಿವೆ. ಮುಖ್ಯವಾಗಿ ಇದು ಇಂಡಿಯಾದ ನಡುಹಂತದ ಶೂದ್ರ ಜಾತಿ ಸಮುದಾಯಗಳ ಪಾಡು.

ಆದರೆ ಸಂಸ್ಕೃತೀಕರಣದ ಯಾವ ಆಮಿಷಕ್ಕೂ ಮನಗೊಡದೆ ತಂತಮ್ಮ ಆಹಾರ ಕ್ರಮಗಳನ್ನು ಆತ್ಮವಿಶ್ವಾಸದಿಂದ ದಿಟ್ಟವಾಗಿ ಮುಂದುವರಿಸಿಕೊಂಡು ಬಂದವೆಂದರೆ, ತೀರ ಕೆಳಸ್ತರದ ಸಮುದಾಯಗಳು. ಅವಕ್ಕೆ ಮೇಲ್ಚ ಲನೆಯ ಸಾಧ್ಯತೆಗಳು ಕಡಿಮೆಯಿದ್ದುದರಿಂದಲೂ ಹೀಗಾಗಿರಬಹುದು. ಆದರೂ ತಮ್ಮ ಪಾರಂಪರಿಕ ಆಹಾರ ಪದ್ಧತಿಯನ್ನು ಬಿಟ್ಟುಕೊಡದ ಹಠವನ್ನು ಪ್ರತಿಸಂಸ್ಕೃತಿಯ ಜಿಗುಟುತನ ಎಂದು ಕರೆಯ ಬಹುದು.ಈ ಬಗೆಯ ಮೇಲ್ಚನೆಗಳಲ್ಲಿರುವ ವ್ಯಂಗ್ಯ ವೆಂದರೆ, ಯಾವ ಸಂಸ್ಕೃತಿಯು ಉಳಿದವಕ್ಕೆ ಮಾದ ರಿಯಾಗಿದೆಯೋ ಅದು, ಚರಿತ್ರೆಯ ಒಂದು ಘಟ್ಟದಲ್ಲಿ ಸ್ವತಃ ಇನ್ನೊಂದನ್ನು ಅನುಕರಿಸಿ ರುವುದು. ಅಂದರೆ ಪ್ರಮಾಣೀಕರಣಗಳನ್ನು ನಿರ್ಧ ರಿಸುವ ಅಧಿಕಾರ ಸ್ಥಾನದಲ್ಲಿರುವ ಬ್ರಾಹ್ಮಣರು, ಒಂದು ಕಾಲಕ್ಕೆ ಮಾಂಸಾಹಾರಿಗಳಾಗಿದ್ದವರು; ತಮ್ಮ ಯಜ್ಞ ಮತ್ತು ಶ್ರಾದ್ಧಗಳಲ್ಲಿ ಪ್ರಾಣಿಬಲಿ ಮಾಂಸದಡಿಗೆಗಳನ್ನು ಪವಿತ್ರ ಆಚರಣೆಗಳಾಗಿ ಹೊಂದಿದ್ದವರು.

ಈ ಸಂಗತಿಯನ್ನು ವೇದಗಳ ಬಗ್ಗೆ ಅಧ್ಯಯನ ಮಾಡಿರುವ ಅನೇಕ ವಿದ್ವಾಂಸರು ವಿಶ್ಲೇಷಿಸಿದ್ದಾರೆ. ಎಂತಲೆ ಚಾರ್ವಾಕರು ವಚನಕಾರರು ಬ್ರಹ್ಮಶಿವ ಮೊದಲಾದವರು ಬ್ರಾಹ್ಮಣರ ಟೀಕೆ ಮಾಡುವಾಗ, ಮೇಲಿನ ಚಾರಿತ್ರಿಕ ತಥ್ಯವನ್ನು ಒಂದು ಪ್ರಬಲ ಅಸ್ತ್ರ ಮಾಡಿಕೊಳ್ಳುತ್ತಾರೆ.ಮಾಂಸಾಹಾರದ ನಿರಾಕರಣೆ ಮತ್ತು ಒಪ್ಪು ವಿಕೆಯು ಭಾರತದ ಸಂಸ್ಕೃತಿಗಳಲ್ಲಿ ನಿರ್ಮಿಸಿರುವ ಆಕರ್ಷಣೆ ವಿಕರ್ಷಣೆಯ ದ್ವಂದ್ವಗಳು ವಿಚಿತ್ರ ವಾಗಿವೆ. ಸಮುದಾಯಗಳ ನಂಬಿಕೆ ಆಚರಣೆ ಮಿತ್‌ಗಳಲ್ಲಿ ಈ ದ್ವಂದ್ವವನ್ನು ಗುರುತಿಸಬಹುದು. ಇವನ್ನು ಮೂರು ನೆಲೆಗಳಲ್ಲಿ ವಿವರಿಸಬಹುದು.

ಅ. ‘ಗೋಮಾಂಸ’ ಸ್ವೀಕರಿಸುವ ಜನರ ಸಂಸ್ಕೃತಿಗಳು

ಆ. ದನವಲ್ಲದೆ ಇತರ ಪ್ರಾಣಿಗಳ ಮಾಂಸ ತಿನ್ನುವ ಜನರ ಸಂಸ್ಕೃತಿಗಳು ಇ. ಇಲಿ, ಉಡ, ಹಾವು, ಇರುವೆ ಇತ್ಯಾದಿಗಳನ್ನು ತಿನ್ನುವ ಜನರ ಸಂಸ್ಕೃತಿಗಳು.

ಇ. ‘ಗೋಮಾಂಸ’ದ ರಾಜಕಾರಣ: ವಲಸೆ ಗಾರರಾಗಿ ಬಂದ ಆರ್ಯರಿಗೆ ಹಸು ಸಂಪತ್ತೂ ಹೌದು, ಆಹಾರವೂ ಹೌದು. ಗೋವು ಪವಿತ್ರವಾಗಿತ್ತು ಎಂಬ ಕಾರಣಕ್ಕಾಗಿಯೇ ಅದರ ಮಾಂಸಸೇವನೆ ಪವಿತ್ರೀಕರಿಸುವ ಆಚರಣೆಗಳಲ್ಲಿ ಒಂದಾಗಿತ್ತು ಎಂದು ವೈದಿಕ ಧರ್ಮಶಾಸ್ತ್ರದ ದೊಡ್ಡವಿದ್ವಾಂಸ ಪಿ.ವಿ.ಕಾಣೆ ಹೇಳುತ್ತಾರೆ.

ವೇದಗಳಲ್ಲಿ ಬರುವ ‘ಗೋಘ್ನ’ (ಹಸು ತಿನ್ನುವವನು) ಎಂಬ ಶಬ್ದವು ಅತಿಥಿಗೆ ಪರ್ಯಾಯ ಹೆಸರು. ಯಾಕೆಂದರೆ ಆರ್ಯರು ಗೌರವಾನ್ವಿತ ಅತಿಥಿಗೆ ಕೊಡುತ್ತಿದ್ದ ‘ಮಧುಪರ್ಕ’ ದಲ್ಲಿ ದನದಮಾಂಸ ಇರಲೇಬೇಕಿತ್ತು. ಅಜಯಾಗ ದಲ್ಲಿ ಆಡಿನ, ಅಶ್ವಮೇಧಯಾಗದಲ್ಲಿ ಕುದುರೆಯ ವಿಭಿನ್ನ ಅಂಗಗಳನ್ನು ಹಂಚುವ ಮತ್ತು ಅಡುವ ವಿವರಣೆ ವೇದಗಳಲ್ಲಿದೆ. ಯಾವ ದೇವತೆಗಳಿಗೆ ಯಾವ ಬಣ್ಣದ ಹಸುವನ್ನು ಬಲಿಕೊಡಬೇಕೆಂಬ ವಿವರಣೆಗಳಿವೆ; ಮಹಾಭಾರತದಲ್ಲಿ (ಅರಣ್ಯ ಪರ್ವ: 207 - 209) ವದಂತಿರಾಜನ ಅಡುಗೆ ಮನೆಯಲ್ಲಿ ಪ್ರತಿದಿನ ಎರಡುಸಾವಿರ ದನಗಳ ಮಾಂಸವನ್ನು ಅಡುತ್ತಿದ್ದ ಬಗ್ಗೆ ಉಲ್ಲೇಖವಿದೆ. ಅಂಬೇಡ್ಕರ್ ತಮ್ಮ ‘ಅಸ್ಪಶ್ಯರು’ ಕೃತಿಯಲ್ಲಿ ಇಂತಹ ಅನೇಕ ಉಲ್ಲೇಖಗಳನ್ನು ವೈದಿಕ ವಾಙ್ಮಯದಿಂದ ಆಯ್ದು ಕೊಡುತ್ತಾರೆ.

ವೈದಿಕರು ತಮ್ಮ ಧಾರ್ಮಿಕ ಆಚರಣೆಗಳಲ್ಲಿ ನಡೆಸುತ್ತಿದ್ದ ಈ ಅವ್ಯಾಹತ ಪಶುವಧೆಗೆ ಪ್ರತಿ ರೋಧ ಒಡ್ಡಿದವನು ಬುದ್ಧ. ರೈತಾಪಿ ಸಮಾಜ ದಲ್ಲಿ ಈ ರೀತಿಯ ಪಶುವಧೆ ದುಷ್ಪರಿಣಾಮ ಬೀರುತ್ತದೆಂದು ಅವನು ಮಂಡಿಸಿದ ‘ಅಹಿಂಸೆ’ ಯ ತತ್ವವು, ಕೃಷಿಕ ಪಶುಪಾಲಕ ಜನಕ್ಕೆ ಪ್ರಿಯ ವಾಯಿತು. ಅವರು ಬೌದ್ಧಧರ್ಮ ಸೇರಿ ಅದನ್ನು ಜನಪ್ರಿಯಗೊಳಿಸಿದರು. ಎಂತಲೇ ಬೌದ್ಧ ಸಾಹಿ ತ್ಯಗಳಲ್ಲಿ ವೈದಿಕರ ‘ಹಿಂಸೆ’ಯ ಬಗ್ಗೆ ಬಲವಾದ ಟೀಕೆಗಳಿವೆ. ಯಾವಾಗ ಸಮುದಾಯಗಳನ್ನು ತನ್ನತ್ತ ಹೀಗೆ ಸೆಳೆದುಕೊಂಡು ಬೌದ್ಧಧರ್ಮವು ಒಂದು ಪ್ರತಿಶಕ್ತಿಯಾಗಿ ಬೆಳೆಯತೊಡಗಿತೋ, ಆಗ ವೈಗದಿಕರು ತಮ್ಮ ಜೀವನಕ್ರಮದ ಸ್ವವಿಮ ರ್ಶೆಗೂ ಸೂಕ್ತ ಮಾರ್ಪಾಟಿಗೂ ತೊಡಗಲೇ ಬೇಕಾಯಿತು.

ಅಂಬೇಡ್ಕರ್ ಪ್ರಕಾರ, ಬ್ರಾಹ್ಮಣರು ತಮ್ಮ ಜೀವನಕ್ರಮದಲ್ಲಿ ಎರಡು ಕ್ರಾಂತಿಕಾರಕ ಮಾರ್ಪಾಟನ್ನು ತಂದುಕೊಂಡರು. ಒಂದು: ಗೋಮಾಂಸ ಭಕ್ಷಣೆಯನ್ನು ನಿಲ್ಲಿಸಿದ್ದು. ಎರಡು: ಇನ್ನೂ ಕೊಂಚ ಮುಂದುವರಿದು ಎಲ್ಲ ಬಗೆಯ ಮಾಂಸಾಹಾರವನ್ನು ಕೈ ಬಿಟ್ಟಿದ್ದು. ‘ನನ್ನ ದೃಷ್ಟಿಯಲ್ಲಿ ಬ್ರಾಹ್ಮಣರು ಗೋಮಾಂಸ ಭಕ್ಷಣೆ ತ್ಯಜಿಸಿ ಗೋವನ್ನು ಪೂಜಿಸಲು ಆರಂಭಿಸಿದ್ದು ದೊಡ್ಡ ರಾಜ ತಂತ್ರ’ ಎನ್ನುವ ಅಂಬೇಡ್ಕರ್, ಬೌದ್ಧರ ಮತ್ತು ತಮ್ಮ ಧರ್ಮಗಳೊಳಗಣ ಸ್ಪರ್ಧೆ ಯಲ್ಲಿ ಬ್ರಾಹ್ಮಣರು, ತಾವು ಬೌದ್ಧರಿಗಿಂತ ಶ್ರೇಷ್ಠವೆಂದು ರುಜುವಾತು ಪಡಿಸುವ ಹಠದಲ್ಲಿ ಈ ಬದಲಾವಣೆಯನ್ನು ಪಡೆದರೆಂದು ವಿವರಿಸುತ್ತಾರೆ.

ವಿಸ್ಮಯವೆಂದರೆ, ಚರಿತ್ರೆಯಲ್ಲಾದ ಈ ಪಲ್ಲಟವನ್ನು ಈಗ ಗೋಪೂಜೆ ಹಾಗೂ ಸಸ್ಯಾಹಾರಗಳ ವಕ್ತಾರನಂತಿರುವ ಬ್ರಾಹ್ಮಣ ಸಂಸ್ಕೃತಿಯು ಮರೆತುಬಿಟ್ಟಿರುವುದು: ಬದ ಲಿಗೆ ಇಂಡಿಯಾದ ಅನೇಕ ಮಾಂಸಾ ಹಾರಿ ಸಂಸ್ಕೃತಿಗಳನ್ನು ಹೀನಾಯವಾಗಿ ನೋಡುವಂತಹ ದೃಷ್ಟಿಕೋನ ಬೆಳೆಯಲು ಕಾರಣವಾಗಿರುವುದು. ಗಳಗನಾಥರ ‘ಮಾಧವ ಕರುಣಾವಿಲಾಸ’ ಕಾದಂಬರಿ ಯಲ್ಲಿ ವಿದ್ಯಾರಣ್ಯನು ಅಸ್ಪಶ್ಯತೆಯನ್ನು ಕುರಿತು ಹೇಳುವುದನ್ನು ಗಮನಿಸಬೇಕು: ‘‘ಗೋಮಾಂಸಾದಿ ನಿಷಿದ್ಧ ಪದಾರ್ಥಗಳ ಭಕ್ಷಣ ಮಾಡುವವರೂ ಆದ ಪಂಚಮರು, ವೈದಿಕರಿಗೆ, ಪ್ರಾಚೀನ ಋಷಿ ಸಮ್ಮತವಾಗಿ ಧಾರ್ಮಿಕ ವ್ಯವಹಾರದಲ್ಲಿ ಸ್ಪರ್ಶರು ಹ್ಯಾಗಾದರು?’’
‘ಚಾರಿತ್ರಿಕ’ ಕಾದಂಬರಿಯೊಂದು ಒಪ್ಪಿಸು ತ್ತಿರುವ ಅಚಾರಿತ್ರಿಕ ನಂಬಿಕೆಯಿದು: ಅಂಬೇ ಡ್ಕರ್ ಪ್ರಕಾರ ಅಸ್ಪಶ್ಯರು ಸೃಷ್ಟಿಯಾಗಿದ್ದು, ಬ್ರಾಹ್ಮಣ ಸಂಸ್ಕೃತಿ ನಿಷೇಧಿಸಿದ ಆಹಾರವನ್ನು ಬಿಡದೆ ಮುಂದುವರಿಸಿದ್ದಕ್ಕೆ. ಅದರಲ್ಲೂ ಸತ್ತ ದನಗಳನ್ನು ಹೊರುವುದು, ಅದರ ಚರ್ಮ ಬಳಸಿ ವೃತ್ತಿ ಮಾಡುವುದು ಯಾರ ಸಾಮಾಜಿಕ ಕರ್ತವ್ಯ ವಾಗಿತ್ತೊ ಅಂತಹವರು ಸತ್ತ ದನದಮಾಂಸ ತಿನ್ನುವುದು ಸಹಜವಾಗಿತ್ತು. ಆ ಜನ ಅಸ್ಪಶ್ಯ ರೆನಿಸಿದರು.ಸ್ವಂತ ಅಭಿರುಚಿಗೆ ಸಂಬಂಧಿಸಿದ ವಿಷಯಕ್ಕೆ ಧಾರ್ಮಿಕ ಲೇಪ ಬಂದೊಡನೆ ‘ಗೋವು’ ಎಂಬ ಪ್ರಾಣಿಯು ಬ್ರಾಹ್ಮಣರೊಡನೆ (ಗೋಬ್ರಾಹ್ಮಣ) ಸಮೀಕರಣಗೊಂಡು ದೈವವಾಗಿ, ಕೋಟ್ಯಂತರ ದೇವತೆಗಳ ವಾಸಸ್ಥಾನವಾಗಿ, ಅದರ ಮಾಂಸ ಸೇವನೆಯು ಘೋರ ಪಾಪವಾಗಿಬಿಟ್ಟಿತು.

ಸನಾತನವಾದಿಗಳಾದ ಗುಪ್ತರ ಕಾಲದಲ್ಲಿ ಈ ನಂಬಿಕೆ ಧರ್ಮಶಾಶ್ತ್ರವಾಯಿತು. ಇಂತಹ ಸನಾತ ಸಂಸ್ಕೃತಿಯ ಅಲೆ ದಕ್ಷಿಣಕ್ಕೆ ಬಂದಾಗ, ತಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ಮದ್ಯ ಮಾಂಸಗಳನ್ನು ಪವಿತ್ರವೆಂದು ಎಣಿಸಿದ್ದ ‘ದ್ರಾವಿಡ’ ಸಂಸ್ಕೃತಿಗಳೂ ಪ್ರಭಾವಗೊಂಡವು.


ಡಾ. ರಹಮತ್ ತರೀಕೆರೆ

http://beta.varthabharathi.net/print/52748/

ಬೌದ್ಧ ದೀಕ್ಷೆ

 ದಲಿತ ರಾಜಕಾರಣದಿಂದ ಮೇಲೆ ಬಂದ ಮಾಯಾವತಿಯಂಥ ಮುಖ್ಯಮಂತ್ರಿ 'ಬ್ರಾಹ್ಮಣ ಜೋಡೋ ಆಂದೋಲನ' ನಡೆಸಿದ್ದು ಕಣ್ಣೆದುರಿಗಿದೆ. ಆದರೆ ಬೌದ್ಧದೀಕ್ಷೆ ಮಾತ್ರ ಇನ್ನೂ ಹಿಂದು ಧರ್ಮದ ವಿರುದ್ಧ ಪ್ರತಿಭಟನೆ ನಡೆಸುವ ಪ್ರತೀಕವಾಗಿ ಮಾತ್ರ ಉಳಿದುಕೊಂಡಿದೆ. ಬೌದ್ಧದೀಕ್ಷೆ ಪಡೆಯಲಾಯಿತು ಎಂಬುದಷ್ಟೇ ಸುದ್ದಿ. ದ್ಧ ಪೂರ್ಣಿಮೆ ಮುಗಿದಿದೆ. ಬುದ್ಧನ ಮಾರ್ಗದ ಬಗ್ಗೆ ಯಾವುದೇ ಚರ್ಚೆ ಇಲ್ಲದೆ. ಒಂದೊಮ್ಮೆ ಭಾರತದಲ್ಲಿ ಉಚ್ಚ್ರಾಯ ಸ್ಥಿತಿಗೆ ತಲುಪುವತ್ತ ಸಾಗಿದ್ದ ಧರ್ಮ ಕಾಲಕ್ರಮೇಣ ಅಂಥ ಸಾಧ್ಯತೆಯಿಂದ ದೂರ ಉಳಿಯಿತು. ಹಾಗೆ ನೋಡಿದರೆ ಪ್ರತಿಯೊಬ್ಬರೂ ಬೌದ್ಧರಾಗಬೇಕು. 

ಈ ವಿಷಯದಲ್ಲಿರುವ ಒಂದು ಸೌಂದರ್ಯವೆಂದರೆ ವ್ಯಕ್ತಿಯೊಬ್ಬ ಯಾವ ಧರ್ಮದಲ್ಲಿದ್ದುಕೊಂಡು ಬೇಕಾದರೂ ಬೌದ್ಧನಾಗಬಹುದು. 'ನೀನೂ ಬದುಕು, ಬೇರೆಯವರನ್ನೂ ಬದುಕಲು ಬಿಡು' ಎಂಬ ಆಶಯದ ಬುದ್ಧನ ಅಹಿಂಸಾ ಮಾರ್ಗವನ್ನು ತುಳಿಯುವುದಕ್ಕೆ ಯಾತರ ದರ್ದು, ಯಾವುದರ ನಿಬಂಧನೆ? ಇದೇ ಪತ್ರಿಕೆಯಲ್ಲಿ ಇತ್ತೀಚೆಗೆ ಲಿಂಗಾಯತ ಸಮುದಾಯದ ಪ್ರಸ್ತುತ ಸ್ವರೂಪವನ್ನಿಟ್ಟುಕೊಂಡು ಸಂವಾದ ನಡೆಸಲಾಯಿತು. ಲಿಂಗಾಯತ ಎನ್ನುವುದು ಬಸವ ತತìಗಳ ಆಚೆ ಬಂದು ಕೇವಲ ರಾಜಕೀಯ ಶಕ್ತಿ ಪ್ರದರ್ಶನದ ಪ್ರತೀಕವಾಗುವುದಾದರೆ ಅದಕ್ಕೆ ಪ್ರತ್ಯೇಕ ಧರ್ಮದ ಮೊಹರೇನೂ ಬೇಕಾಗಿಲ್ಲ ಎಂದು ಚರ್ಚೆಯಲ್ಲಿ ಭಾಗವಹಿಸಿದ್ದ ಬಹುತೇಕರು ಅಭಿಪ್ರಾಯ ಪಟ್ಟಿದ್ದರು. ಇದೇ ವ್ಯಾಪ್ತಿಯಲ್ಲಿ ಇಂದು ಬೌದ್ಧ ಧರ್ಮದ ಬಗೆಗೂ ಚರ್ಚೆಯ ಅವಶ್ಯಕತೆ ಇದೆ. ಈಗ ಬೌದ್ಧ ಧರ್ಮವನ್ನು ಅಪ್ಪಿಕೊಳ್ಳಲು ಬಯಸುತ್ತಿರುವವರ ಮನೋಭೂಮಿಕೆಯಲ್ಲಿ ಮಿಳಿತವಾಗಿರುವ ವಿಚಾರಗಳು ಯಾವುವು? ಆ ಯೋಚನೆಗಳಿಂದಾಗಿ ಅವರು ಬೌದ್ಧ ಧರ್ಮವನ್ನು ಒಪ್ಪಿಕೊಂಡ ಮೇಲೂ ಪ್ರತ್ಯೇಕವಾಗಿಯೇ ಉಳಿಯುವ ಚಹರೆಗಳು ಕಾಣುತ್ತಿವೆಯಲ್ಲ? ಇದರಿಂದ ಧರ್ಮಕ್ಕಾಗಲೀ, ಅದರೊಂದಿಗೆ ಗುರುತಿಸಿಕೊಂಡವರಿಗಾಗಲೀ ಆಗುತ್ತಿರುವ ಉದ್ದೇಶ ಸಾಧನೆಯಾದರೂ ಏನು? ಈ ಎಲ್ಲ ಪ್ರಶ್ನೆಗಳನ್ನು ಹರವಿಕೊಂಡು ಒಂದಿಷ್ಟು ಮಂಥನ ನಡೆಯಬೇಕಿದೆ. ಪರ್ಯಾಯವೊಂದನ್ನು ಹುಟ್ಟುಹಾಕಬೇಕಿದ್ದ 'ಬೌದ್ಧ ದೀಕ್ಷೆ' ಕೇವಲ ಸಂಕೇತಕ್ಕಷ್ಟೆ ಸೀಮಿತಗೊಂಡ ಆಚರಣೆಯಾಗಿಬಿಟ್ಟಿದೆಯೇ ಎಂಬುದು ಈ ಕ್ಷಣದ ಕೊರಗು. 

12ನೇ ಶತಮಾನದ ಹೊತ್ತಿಗೆಲ್ಲ ಮುಸುಕಾಗಿಬಿಟ್ಟಿದ್ದ ಬೌದ್ಧ ಧರ್ಮ ಮತ್ತೆ ತನ್ನ ಅಸ್ತಿತ್ವವನ್ನು ಪ್ರಚುರಪಡಿಸಿಕೊಳ್ಳಲು ದಲಿತ ಚಳವಳಿಯ ಪ್ರಭಾವ ಕಾರಣ. ಇವತ್ತಿಗೂ ಬುದ್ಧ ಪೂರ್ಣಿಮೆ ಹಾಗೂ ಅದರ ಆಚೀಚಿನ ದಿನಗಳಲ್ಲಿ ದಲಿತರು ಗುಂಪಾಗಿ ಬೌದ್ಧ ಧರ್ಮಕ್ಕೆ ಮತಾಂತರವಾಗಿ, ಬೌದ್ಧ ದೀಕ್ಷೆ ಪಡೆದುಕೊಳ್ಳುವುದನ್ನು ನೋಡುತ್ತೇವೆ, ಓದುತ್ತೇವೆ. ಆ ಕಾಲಘಟ್ಟದಲ್ಲಿ ಸಮಾಜದ ಆತ್ಮಸಾಕ್ಷಿಯನ್ನು ಕಲಕಲೇಬೇಕಾದ ತುರ್ತು ಅಗತ್ಯವೊಂದಿತ್ತು. ಕಂದಾಚಾರದ ಮನಸ್ಥಿತಿಯಿಂದ ಹೊರಬಾರದೇ ಉಳಿದವರಿಗೆ ಬಿಸಿ ತಾಗಬೇಕಾದರೆ, ದಮನಿತರಿಗೆ ತಮಗಾದ ಅನ್ಯಾಯದ ವಿರುದ್ಧ ಆಕ್ರೋಶ ತೋಡಿಕೊಳ್ಳಲು ಇದ್ದ ಮಾರ್ಗ ಅದೊಂದೆ. ಹಿಂದೂ ಧರ್ಮದ ಮೇಲ್ವರ್ಗ ಉಳಿದವರನ್ನು ಪ್ರಾಣಿಗಳಿಗಿಂತ ಕಡೆಯಾಗಿ ಕಂಡು ಅಸ್ಪ>ೃಶ್ಯತೆ ಜೀವಂತವಾಗಿಟ್ಟಾಗ ತಾನು ಆ ಧರ್ಮಕ್ಕೆ ಸೇರಿದವನು ಎಂದು ದಮನಿತನಾದವನು ಯಾಕಾದರೂ ಹೇಳಿಕೊಳ್ಳುತ್ತಾನೆ?ಹಾಗೆಂದೇ ದಲಿತರು ಬೌದ್ಧ ದೀಕ್ಷೆ ಪಡೆದು, ಹಿಂದೂ ಧರ್ಮದಿಂದ ಬೇರೆಯಾಗಿಯೇ ಗುರುತಿಸಿಕೊಳ್ಳುವ ಅಭಿಯಾನವೊಂದು ಪ್ರತಿಭಟನೆಯ ಸ್ವರೂಪದಲ್ಲಿ ಬೆಳೆದು ಬಂತು.

 1890ರ ವೇಳೆಗೇ ಪಂಡಿತ್‌ ಸಿ. ಅಯೋಧ್ಯ ದಾಸ್‌ ಎಂಬುವವರು ಸಖ್ಯ ಬುದ್ಧಿಷ್ಟ್‌ ಸೊಸೈಟಿ ಸ್ಥಾಪಿಸಿ ದಲಿತರು ಬೌದ್ಧ ಧರ್ಮಕ್ಕೆ ಪರಿವರ್ತಿತರಾಗಬೇಕಾದ ಅವಶ್ಯಕತೆಯನ್ನು ಪ್ರಚುರ ಪಡಿಸಿದರು. ತಮಿಳು ದಲಿತ ಚಳವಳಿಯ ಪ್ರವರ್ತಕರೆಂದೇ ಗುರುತಿಸಲ್ಪಡುವ ಇವರ ಪ್ರಭಾವ ತಮಿಳುನಾಡು ಹಾಗೂ ಕರ್ನಾಟಕಗಳಲ್ಲಿ ಕೆಲಸ ಮಾಡಿತು. ಆದಾಗ್ಯೂ ಈ ಅಭಿಯಾನಕ್ಕೆ ಗಟ್ಟಿ ದನಿ ಬಂದಿದ್ದು, ಬೌದ್ಧ ಧರ್ಮಕ್ಕೆ ಮತಾಂತರ ಹೊಂದುವ ನಿರ್ಧಾರವನ್ನು ಡಾ. ಬಿ. ಆರ್‌. ಅಂಬೇಡ್ಕರ್‌ ಅವರು ಕೈಗೊಂಡಾಗ. ಹಿಂದೂ ಧರ್ಮದಲ್ಲಿ ಜಾತಿ ಆಧಾರಿತ ತಾರತಮ್ಯದಿಂದ ಬೇಸತ್ತಿದ್ದ ಅಂಬೇಡ್ಕರ್‌, 1935ರಲ್ಲಿ ಸಮಾವೇಶವೊಂದರಲ್ಲೇ ಘೋಷಿಸಿದರು- 'ನಾನು ಹಿಂದು ಆಗಿ ಹುಟ್ಟಿದ್ದೇನೆ, ಆದರೆ ಹಿಂದುವಾಗಿ ಸಾಯಲಾರೆ'. ಚರಿತ್ರೆಯಲ್ಲಿ ಅದೊಂದು ಮಹತ್ವದ ಕ್ಷಣ. ಧರ್ಮದ ವಿಷಯದಲ್ಲಿ ಅಂದು ಅಂಬೇಡ್ಕರ್‌ ತೆಗೆದುಕೊಳ್ಳಲಿದ್ದ ನಿರ್ಧಾರದಲ್ಲಿ ಭಾರತದ ಭವಿಷ್ಯವೇ ಅಡಗಿತ್ತು ಎಂಬುದು ಖಂಡಿತ ಅತಿಶಯೋಕ್ತಿ ಅಲ್ಲ. ಅವತ್ತು ಅಂಬೇಡ್ಕರ್‌ ಅವರು ತೆಗೆದುಕೊಂಡ ನಿರ್ಧಾರದ ಹಾದಿಯನ್ನು ಅವಲೋಕಿಸಿದರೆ ತಿಳಿಯುತ್ತದೆ- ಅವರಿಗಿದ್ದಿದ್ದು ಕೇವಲ ಹಿಂದು ಧರ್ಮಕ್ಕೆ ಪ್ರತಿಭಟನೆ ವ್ಯಕ್ತಪಡಿಸುವ ಹಪಾಹಪಿ ಮಾತ್ರವೇ ಆಗಿರಲಿಲ್ಲ ಎಂದು. ಏಕೆಂದರೆ ಹಿಂದು ಧರ್ಮದಿಂದ ಸಿಡಿಯುವುದಷ್ಟೇ ಅವರ ಉದ್ದೇಶವಾಗಿದ್ದರೆ ಆ ಕ್ಷಣದಲ್ಲಿ ಯಾವ ಧರ್ಮವನ್ನಾದರೂ ಅವರು ಅಪ್ಪಿಕೊಂಡುಬಿಡಬಹುದಿತ್ತು. ಅಂಬೇಡ್ಕರ್‌ ಅವರ ಮನದಿಂಗಿತ ಹೊರಬೀಳುತ್ತಲೇ ಇಸ್ಲಾಂ ಹಾಗೂ ಕ್ರೈಸ್ತ ಧರ್ಮದ ಪ್ರತಿನಿಧಿಗಳೆಲ್ಲ ಅವರಿಗೆ ಒಂದು ಬಗೆಯ ಆಮಿಷವನ್ನೇ ಒಡ್ಡಿದ್ದರು. 

ಆಗ ಅಂಬೇಡ್ಕರ್‌ ಬರೀ ಆಕ್ರೋಶದ ಹೆಜ್ಜೆ ಇಡಲಿಲ್ಲ. ಧರ್ಮವೊಂದನ್ನು ಸ್ವೀಕರಿಸುವ ತಮ್ಮ ವೈಯಕ್ತಿಕ ನಡೆ ಸಮಾಜದ ಮೇಲೆ ಹಾಗೂ ತಮ್ಮನ್ನು ಅನುಸರಿಸುತ್ತಿರುವ ದಲಿತ ಸಮುದಾಯದ ಮೇಲೆ ಬೀರಬಹುದಾದ ದೂರಗಾಮಿ ಪರಿಣಾಮಗಳ ಬಗ್ಗೆ ಯೋಚಿಸಿದರು. ದೇಶಕಾಳಜಿಯ ಅಂಬೇಡ್ಕರ್‌ ಅವರ ಚಿಂತನಾ ಕ್ರಮವೇ ಅವರು ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳಿಗೆ ಬೆನ್ನು ತಿರುಗಿಸುವಂತೆ ಮಾಡಿದ್ದು. 

ಇಂದು ನಾಗಾಲ್ಯಾಂಡ್‌ನಂಥ ರಾಜ್ಯದಲ್ಲಿ ಕ್ರಿಸ್ತನ ಹೆಸರಿನಲ್ಲಿ ಪ್ರತ್ಯೇಕ ರಾಜ್ಯ ಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ. ಇಸ್ಲಾಂ ಬೆಳೆದಿದ್ದೇ ಆಕ್ರಮಣಶೀಲತೆಯಿಂದ. ಅಂಬೇಡ್ಕರ್‌ ಅವರಂಥ ಪ್ರಗತಿಪರ ಮನಸ್ಸು ಕಟ್ಟಳೆಗಳಿಂದಲೇ ಕೂಡಿದ ಆ ಧರ್ಮವನ್ನು ಒಪ್ಪಿಕೊಳ್ಳುವುದು ಹೇಗೆ? ಕೊನೆಗೂ ಅಂಬೇಡ್ಕರ್‌ ಆಯ್ಕೆ ಮಾಡಿಕೊಂಡಿದ್ದು, ಈ ನೆಲದ ಗಂಧದಲ್ಲೇ ಅರಳಿದ ಬೌದ್ಧ ಧರ್ಮವನ್ನು. ಹೀಗೆ ಅಳೆದು ತೂಗಿ 1956ರಲ್ಲಿ ತಮ್ಮ ಸಹಸ್ರಾರು ಬೆಂಬಲಿಗರೊಂದಿಗೆ ನಾಗ್ಪುರದಲ್ಲಿ ಬೌದ್ಧ ದೀಕ್ಷೆ ಸ್ವೀಕರಿಸಿದರು ಅಂಬೇಡ್ಕರ್‌. ನಾನು ಹಿಂದು ದೇವತೆಗಳನ್ನು ಪೂಜಿಸುವುದಿಲ್ಲ, ಬುದ್ಧವು ವಿಷ್ಣುವಿನ ಅವತಾರ ಎಂಬ ಕಲ್ಪನೆಯನ್ನು ಒಪ್ಪುವುದಿಲ್ಲ ಎಂಬ ಹಲ ಅಂಶಗಳ ಜೊತೆಗೆ ಮಾದಕ ವ್ಯಸನ, ಹೆಂಡದಂಥ ಚಟಗಳಿಗೆ ಬೀಳುವುದಿಲ್ಲ ಎಂಬುದೂ ಸೇರಿದಂತೆ 22 ಪ್ರತಿಜ್ಞೆಗಳೊಂದಿಗೆ ಬೌದ್ಧ ದೀಕ್ಷೆ ಸ್ವೀಕಾರವಾಯಿತು. ಅಂದಿನಿಂದ ಇಂದಿನವರೆಗೆ ಮಹಾರಾಷ್ಟ್ರ, ಹೈದರಾಬಾದ್‌, ಕರ್ನಾಟಕದ ಗುಲ್ಬರ್ಗ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಬೌದ್ಧ ದೀಕ್ಷೆಯ ಕ್ರಮ ನಡೆದುಕೊಂಡು ಬಂದಿದೆ. ಆದರೆ... ಅವತ್ತಿನಿಂದ ಇವತ್ತಿಗೆ ಮಹಾನದಿಗಳಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. 

ದಲಿತ ಉದ್ಯಮಶೀಲತೆ ಎಂಬ ಪದ ಕಿವಿಗೆ ಬಡಿದಿದೆ, ದಲಿತ ರಾಜಕಾರಣದಿಂದ ಮೇಲೆ ಬಂದ ಮಾಯಾವತಿಯಂಥ ಮುಖ್ಯಮಂತ್ರಿ 'ಬ್ರಾಹ್ಮಣ ಜೋಡೋ ಆಂದೋಲನ' ನಡೆಸಿದ್ದು ಕಣ್ಣೆದುರಿಗಿದೆ. ಆದರೆ ಬೌದ್ಧದೀಕ್ಷೆ ಮಾತ್ರ ಇನ್ನೂ ಹಿಂದು ಧರ್ಮದ ವಿರುದ್ಧ ಪ್ರತಿಭಟನೆ ನಡೆಸುವ ಪ್ರತೀಕವಾಗಿ ಮಾತ್ರ ಉಳಿದುಕೊಂಡಿದೆ. ಬೌದ್ಧದೀಕ್ಷೆ ಪಡೆಯಲಾಯಿತು ಎಂಬುದಷ್ಟೇ ಸುದ್ದಿ. ನಂತರ ಬೌದ್ಧಧರ್ಮ ನೆನಪಾಗಲು ಮುಂದಿನ ವರ್ಷವೇ ಬರಬೇಕು. ಮತ್ತೊಂದು ಬುದ್ಧ ಪೂರ್ಣಿಮೆ ಬಂದಾಗಲೇ ಮಾಮೂಲಿನಂತೆ ಪುರೋಹಿತಶಾಹಿಯ ವಿರುದ್ಧ ಬುದ್ಧಿಜೀವಿ ಭಾಷಣ, ದೀಕ್ಷೆ ಪ್ರಚಾರ. ಹಾಗಾದರೆ, ಇವತ್ತಿನ ಆಧುನಿಕ ಬೌದ್ಧತ್ವ, ಬೌದ್ಧ ಧರ್ಮಕ್ಕಿಂತ ಬೇರೆಯೇ? ಅದು ಬೌದ್ಧರ ಸಮುದಾಯ ಪ್ರಜ್ಞೆಯ ಒಂದು ಭಾಗವಾಗಿದೆಯೇ? ಹಾಗಾಗಿದ್ದರೆ ಜಮ್ಮು- ಕಾಶ್ಮೀರದ ಲಡಾಕ್‌ನಲ್ಲಿ ಬೌದ್ಧರ ಮೇಲಾಗುತ್ತಿರುವ ದೌರ್ಜನ್ಯಗಳು ಇಲ್ಲಿನವರ ಸಂವೇದನೆಗೆ ತಾಗುವುದಿಲ್ಲವೇಕೆ? ಕೊನೆಪಕ್ಷ, ಲಡಾಕ್‌ನ ಬೌದ್ಧರು, ತಮ್ಮ ಹುಡುಗಿಯರನ್ನು ಮುಸ್ಲಿಮರು ಬಲವಂತದಿಂದ ಹಾರಿಸಿಕೊಂಡು ಹೋಗುತ್ತಿದ್ದಾರೆ ಎಂದು ಕೇಂದ್ರಕ್ಕೆ ಅಳಲು ತೋಡಿಕೊಂಡಿರುವ ವಿಷಯವಾದರೂ ಗೊತ್ತೇ? ಕಾರ್ಗಿಲ್‌ನಲ್ಲಿ ಬೌದ್ಧ ಮತಸ್ಥರು ಸತ್ತರೆ ಅಲ್ಲಿ ಅವರನ್ನು ಹೂಳುವುದಕ್ಕೂ ಅವಕಾಶ ನೀಡದ ಹತಾಶ ಸ್ಥಿತಿ ಇರುವುದು ಲೆಕ್ಕಕ್ಕಿಲ್ಲವೇ? ಅಂಬೇಡ್ಕರ್‌ ಇದ್ದಿದ್ದರೆ ಇವನ್ನೆಲ್ಲ ಗ್ರಹಿಸುತ್ತಿದ್ದ ಪರಿ ಯಾವುದು ಎಂಬ ಕುತೂಹಲ ಕಾಡುತ್ತದೆ. ಹೋಗಲಿ, ಆಧುನಿಕ ಬೌದ್ಧ ಧರ್ಮ ದಲಿತರನ್ನು ಉತ್ತೇಜಿಸುವ ವ್ಯವಸ್ಥೆಯನ್ನಾದರೂ ಹುಟ್ಟುಹಾಕಿದೆಯೇ? ಅವರನ್ನು ಸಾಕ್ಷರರನ್ನಾಗಿಸುವ, ವ್ಯಸನ ಅಂಟಿಸಿಕೊಂಡವರನ್ನು ಮುಕ್ತಗೊಳಿಸುವ, ಉದ್ಯಮಶೀಲತೆ ಬೆಳೆಸುವ, ಯಾವ ಧರ್ಮದಿಂದ ಹೊರಬಂದರೋ ಅದಕ್ಕೆ ಪರ್ಯಾಯವಾಗಿ ಚಲನಶೀಲ ವ್ಯವಸ್ಥೆಯೊಂದನ್ನು ರೂಪಿಸುವ ಪ್ರಯತ್ನಗಳು ಕಾಣುತ್ತಲೇ ಇಲ್ಲ. ಒಂದು ಪಕ್ಷದಲ್ಲಿ ಟಿಕೆಟ್‌ ಸಿಗಲಿಲ್ಲ ಎಂದು ಮತ್ತೊಂದು ಪಕ್ಷ ಸೇರಿದೆ ಎಂಬ ರಾಜಕಾರಣದ ಧಾಟಿಯಲ್ಲೇ ಧರ್ಮವೂ ಬೆಳೆಯಬೇಕೆ? ಇವತ್ತು ಮತಾಂತರ ಹೊಂದುವವರೆಲ್ಲ ಮುಂದೊಡ್ಡುವುದು ಸಮಾನತೆಯ ಕಾರಣವನ್ನು. ಹಿಂದು ಧರ್ಮದಲ್ಲಿ ಜಾತಿ ಪದ್ಧತಿ ಇದೆ ಎಂದು ಕ್ರೈಸ್ತ ಧರ್ಮಕ್ಕೆ ಮತಾಂತರವಾದವರಿಗೆ ದಲಿತಕ್ರೈಸ್ತರೆಂಬ ಹಣೆಪಟ್ಟಿ! ಅಂತೆಯೇ ದಲಿತ ಮುಸ್ಲಿಂ, ದಲಿತ ಸಿಖ್‌... ಹೀಗೆ ಉಳಿದೇ ಹೋಗಿವೆ ವಿಂಗಡನೆಗಳು. ಪ್ರತಿಭಟನೆಯೊಂದನ್ನು ವೈಚಾರಿಕತೆಯ ನಿರಂತರತೆ ತುಂಡರಿಸಿ ಕೊಂಡೊಯ್ದರೆ ಒದಗುವ ಸ್ಥಿತಿ ಇದೇ. ವಿಚಾರವಾದಿಗಳು ಚಿಂತಿಸಬೇಕಿದೆ. - ರಮೇಶ್‌ಚಂದ್ರ, ಮೈಸೂರು

Sunday, 10 April 2011

‘ಹೊಲೆಯ’ರು ಯಾರು?


ಮಂಗಳವಾರ - ಡಿಸೆಂಬರ್-14-2010

ಭಾರತದ ಇತಿಹಾಸದ ಪುಟಗಳನ್ನು ತೆರೆಯು ತ್ತಾ ಹೋದಂತೆ ಅಲ್ಲಿ ಪ್ರಧಾನವಾಗಿ ಕಾಣು ವುದು ಮೂರೇ ಮೂರು ಜನಾಂಗ. 1.ಬ್ರಾಹ್ಮಣರು 2.ಮುಸಲ್ಮಾನರು 3.ಬ್ರಿಟಿಷರು. ಮುಸಲ್ಮಾನರು ಮತ್ತು ಬ್ರಿಟಿಷರು ಕೇವಲ ಧಾಳಿಕೋರರಾಗಿ ಚಿತ್ರಿಸಲ್ಪಟ್ಟಿದ್ದರೆ ಬ್ರಾಹ್ಮಣರು ಎಲ್ಲ ರಾಜರ, ರಾಜವಂಶಗಳ ಮಾರ್ಗದರ್ಶಕರಾಗಿ, ಕೆಲವೊಮ್ಮೆ ಅವರೇ ರಾಜರುಗಳಾಗಿ ಒಟ್ಟಾರೆ ಇಡೀ ಭಾರತದ ವಾರಸುದಾರರಾಗಿ ಚಿತ್ರಿಸಲ್ಪಟ್ಟಿದ್ದಾರೆ.
ಹಾಗಿದ್ದರೆ ಇಷ್ಟೊಂದು ಬೃಹತ್ ಭಾರತ ಮತ್ತದರ ಸುಮಾರು ಐದು ಸಾವಿರ ವರ್ಷಗಳ ಇತಿಹಾಸ ಕೇವಲ 3% ಜನರಿಗೆ ಮಾತ್ರ ಸೀಮಿತವಾದುದೇ? ಮತ್ತು ಇನ್ನುಳಿದ 97% ಜನರಿಗೆ ಈ ಭಾರತ ಮತ್ತದರ ಇತಿಹಾಸ ದಲ್ಲಿ ಯಾವುದೇ ಸ್ಥಾನವಿರಲಿಲ್ಲವೇ? ಖಂಡಿತ ಸುಳ್ಳು. ಬರೆದವರು ‘‘ಅವರು’’ ಮಾತ್ರ ಆದ್ದರಿಂದ ಈ ದೇಶದ ಇತಿಹಾಸವನ್ನು ಅವರಿಗೆ ಒಪ್ಪಿಗೆ ಯಾಗುವ ಹಾಗೆ, ಅವರ ಮೂಗಿನ ನೇರಕ್ಕೆ, ಆ ಮೂಗಿನ ಮೇಲೆ ಇರುವ ನಾಮದ ನೇರಕ್ಕೆ ಬರೆದುಕೊಂಡಿದ್ದಾರೆ ಅಷ್ಟೆ.
ದುರಂತವೆಂದರೆ ಅಂತಹ ಏಕಪಕ್ಷೀಯ ವಿಶ್ಲೇಷಣೆಯ, ಧಗಾಕೋರ ಕಥೆ ಯನ್ನು ಶೂದ್ರ ಮತ್ತು ಅಸ್ಪಶ್ಯ ಸಮುದಾಯಗ ಳಾದ ನಾವು ನಮ್ಮ ಇತಿಹಾಸವೆಂದು ಓದುತ್ತಿ ದ್ದೇವೆ. ಹಾಗಿದ್ದರೆ ‘‘ನಮ್ಮದಲ್ಲದ’’ ಆ ನಮ್ಮ ಇತಿ ಹಾಸದಿಂದ ನಮಗೇನು ಧಕ್ಕುತ್ತದೆ? ಇನ್ನೇನು ಧಕ್ಕುತ್ತದೆ? ನಮ್ಮ ಆ ಅಸ್ಪಶ್ಯ ಸಮುದಾಯವನ್ನು ನಾವೆ ‘ಹೊಲಸು’ ‘ಕಸ’ ಎಂದು ಕೊಳ್ಳಬೇಕು. ಅಥವಾ ಹಾಗೆ ಹೇಳಿಕೊಳ್ಳಲಾಗದೆ ನಮ್ಮ ಜಾತಿಯನ್ನು ನಾವೇ ಮರೆಮಾಚುತ್ತಾ ಸದಾ ಕೀಳರಿಮೆಯಿಂದ ನರಳಬೇಕು.
ಒಟ್ಟಿನಲ್ಲಿ ನಮ್ಮ ಸ್ವಾಭಿಮಾನವನ್ನು ಬದಿಗೊತ್ತಿ ಸದಾ ಇನ್ನೊಬ್ಬರ ಜೀತ ಗಾರರಾಗಲು ನಾವು ಸಿದ್ಧರಿರಬೇಕು. ಇದೇ ಈ ದೇಶದ ಬ್ರಾಹ್ಮಣರಚಿತ ಇತಿಹಾಸ ಈ ದೇಶದ ಅಸ್ಪಶ್ಯರಿಗೆ ನೀಡಿರುವ ಮಹಾನ್ ಕೊಡುಗೆ! ಇರಲಿ, ಇದನ್ನೆಲ್ಲಾ ಯಾಕೆ ಹೇಳಬೇಕಾಯಿ ತೆಂದರೆ ಕಳೆದ ನವೆಂಬರ್ 4ರಂದು ಪತ್ರಿಕೆ ಯೊಂದರಲ್ಲಿ ಆ ಪತ್ರಿಕೆಯ ಸಂಪಾದಕರು ತಮ್ಮ ‘‘ನೂರೆಂಟು ಮಾತು’’ ಎಂಬ ಅಂಕಣ ಬರಹದಲ್ಲಿ ಪ್ರಸ್ತುತ ರಾಜಕೀಯ ಸ್ಥಿತಿಗತಿಯ ಬಗ್ಗೆ ಬರೆಯುತ್ತಾ ‘‘ಆದುನಿಕ ಭಾರತವನ್ನು ನಮ್ಮ ನಾಯಕರು ಹೊಲಗೇರಿ ಮಾಡಿದ್ದಾರೆ’’ ಎಂದು ಬರೆದಿದ್ದಾರೆ!
ಅರೆ, 6ಕೋಟಿ ಜನಸಂಖ್ಯೆ ಇರುವ ರಾಜ್ಯದ ಜನರಲ್ಲಿ ದಲಿತರೇ ಸುಮಾರು 1ಕೋಟಿಗೂ ಮಿಕ್ಕಿ ಇದ್ದಾರೆ. ಅದರಲ್ಲಿ ‘ಹೊಲೆಯ’ರೆಂಬ ಆ ಬೃಹತ್ ಜನ ಸಮುದಾ ಯ ಸುಮಾರು 60 ರಿಂದ 70ಲಕ್ಷದಷ್ಟಿದೆ. ಇಂತಹ ಬೃಹತ್ ಜನಸಮುದಾಯವನ್ನು ತಾನು ಅವಮಾನಿಸುತ್ತಿದ್ದೇನೆಂದು ಆ ಸಂಪಾದಕರಿಗೆ ಅನಿಸಲಿಲ್ಲವೇ? ಅದ್ಹೇಗೆ ಅನಿಸುತ್ತದೆ? ಅವರ ಪ್ರಕಾರ ‘ಹೊಲಗೇರಿ’ ಎಂದರೆ ಕಸ ಎಂದರ್ಥ! ಏಕೆಂದರೆ ಸಂಪಾದಕರ ಈ ಕೃತ್ಯದ ವಿರುದ್ಧ ಬಹುಜನ ಸಮಾಜ ಪಕ್ಷದ ಮುಖಂಡರು ಮೈಸೂರಿನ ಕೆ.ಆರ್.ಪೋಲಿಸ್ ಠಾಣೆಯಲ್ಲಿ ನವೆಂಬರ್ 11ರಂದು ಜಾತಿ ನಿಂದನೆ ದೂರು ದಾಖಲಿಸಿದಾಗ ಆ ಠಾಣೆಯ ಇನ್ಸ್ ಪೆಕ್ಟರ್ ಶ್ರೀನಿವಾಸ್ ಎಂಬವರು ದಿನಾಂಕ 29-11-2010 ರಂದು ನೀಡಿದ ಹಿಂಬರಹದ ವಿವರಣೆ ಏನು ಗೊತ್ತೆ? ಹೊಲಗೇರಿ ಎಂಬ ಪದವನ್ನು ಕಸಕ್ಕೆ ಸಮನಾಗಿ ಉಪಯೋಗಿಸಿ ಬರೆಯಲಾಗಿದೆ. ಅದರಲ್ಲಿ ತಪ್ಪೇನಿಲ್ಲ ಎಂದು!
ಹೇಗಿದೆ ನೋಡಿ ಇವರ ವರಸೆ! ಹೊಲಗೇರಿ ಎಂದರೆ ಕಸವಂತೆ! ಇನ್ನೊಂದಿಷ್ಟು ದಿನ ಹೀಗೆ ಮುಂದುವರಿದರೆ ಹೊಲಗೇರಿಯನ್ನು ಬರಿ ಕಸ ಎಂದಲ್ಲ ಕಾಲಕಸ ಎಂದು ಹಿಂಬರಹ ನೀಡ ಲೂ ಇವರು ಹಿಂಜರಿಯುವುದಿಲ್ಲ! ಹೊಲಗೇರಿ ಯೇನೊ ಕಸ ಸರಿ. ಹಾಗಿದ್ದರೆ ಬ್ರಾಹ್ಮಣಕೇರಿ, ಒಕ್ಕಲಗೇರಿ ಇತ್ಯಾದಿ ಕೇರಿಗಳೆಲ್ಲಾ ಏನು? ವೇಶ್ಯಾಗೃಹಗಳೇ? ಇದನ್ನು ಓದಿದರೆ ಕೆಲವರಿಗೆ ಆಘಾತವಾಗಬಹುದು. ಪ್ರಶ್ನೆಯೇನೆಂದರೆ ಅಂತಹದ್ದೆ ಆಘಾತ ‘ಹೊಲೆಯ’ ಸಮುದಾ ಯಕ್ಕೆ ಆಗುತ್ತದೆ ಎಂಬ ಸಣ್ಣ ಪರಿಜ್ಞಾನ ‘ಹೊಲಗೇರಿ’ ಎಂದು ಬರೆದ ಆ ಸಂಪಾದಕರಿಗೆ ಇರುವುದು ಬೇಡವೇ? ಅಥವಾ ಅವರ ಪ್ರಕಾರ ಶೋಷಿತರೇನು ಬಿಟ್ಟಿಗೆ ಬಿದ್ದಿದ್ದಾದರೆಯೇ? ಏನು ಹೇಳಿದರೂ ನಡೆಯುತ್ತದೆ ಎನ್ನಲಿಕ್ಕೆ?
ಅಂದಹಾಗೆ ಶೋಷಿತ ಸಮುದಾಯಗಳನ್ನು ಹೀಗೆ ಕೀಳಾಗಿ ಚಿತ್ರಿಸುವ ಇಂತಹ ಚಾಳಿ ಇದಿಷ್ಟಕ್ಕೆ ಸೀಮಿತವಾಗುವುದಿಲ್ಲ. ಸಿನಿಮಾ, ನಾಟಕ, ಸಾಹಿತ್ಯ ಇಲ್ಲೆಲ್ಲಾ ಆಗಾಗ ನಡೆಯುತ್ತಲೇ ಇರುತ್ತದೆ. ಉದಾಹರಣೆಗೆ ಕೆಲದಿನಗಳ ಹಿಂದೆ ‘ಈ ಟೀವಿ’ಯಲ್ಲಿ ಪ್ರಸಾರವಾಗುವ ‘‘ಮನೆ ಯೊಂದು ಮೂರು ಬಾಗಿಲು’’ ಎಂಬ ಧಾರಾವಾಹಿಯಲ್ಲಿ ಆ ಧಾರವಾಹಿಯ ಮುಖ್ಯ ಪಾತ್ರ ಧಾರಿಯೊಬ್ಬರು ಆ ಧಾರಾವಾಹಿಯಲ್ಲಿ ಬರುವ ಖಳ ಪಾತ್ರಧಾರಿಯೊಬ್ಬರ ಬಗ್ಗೆ ಮಾತನಾಡುತ್ತಾ ಕುಟುಂಬದಲ್ಲಿ ಹೀಗೆಯೇ ಒಂದಿಬ್ಬರು ಸೇರಿಕೊಂಡು ಇಡೀ ಕುಟುಂಬವನ್ನು ಹೊಲಗೇರಿ ಮಾಡುತ್ತಾರೆ ಎಂದರು!
ಮತ್ತೊಂದು ಉದಾಹರಣೆ ಹೇಳುವುದಾದರೆ ದಿವಂಗತ ರಾಷ್ಟ್ರ ಕವಿ ಗೋವಿಂದ ಪೈಯವರು ತಮ್ಮ ‘‘ಹೊಲೆಯರು ಯಾರು?’’ ಎಂಬ ಕವನ ದಲ್ಲಿ ‘‘ಇಬ್ಬರಾಡುವ ಮಾತು ಕದ್ದು ಕೇಳುವವ ಹೊಲೆಯ, ಹೊಲಸು ತಿಂಬವ ಹೊಲೆಯ....’’ ಹೀಗೆ ಹೊಲೆಯರು ಯಾರು ಎಂಬುದನ್ನು ವರ್ಣಿಸುತ್ತಾ, ಪರೋಕ್ಷವಾಗಿ ಹೊಲೆಯರೇ ಹೀಗೆ ಮಾಡುವವರು ಎಂದು ಬರೆದಿದ್ದರು! ದುರಂತವೆಂದರೆ ಈ ಪದ್ಯವನ್ನು ಪಠ್ಯ ಪುಸ್ತಕದಲ್ಲಿ ಪಠ್ಯವಾಗಿಯೂ ಕೂಡ ಅಳವಡಿಸಲಾಗಿತ್ತು!
ಸಾಹಿತ್ಯದಲ್ಲಿ ‘ಹೊಲೆಯ’ರನ್ನು ಕೀಳಾಗಿ ಕಾಣುವ ಪರಿಪಾಠ ಇಲ್ಲಿಗೇ ನಿಲ್ಲುವುದಿಲ್ಲ. ಈ ಕೆಳಗಿನ ಪುರಂದರದಾಸರ ಕೀರ್ತನೆ ನೋಡಿ. ದಾಸ ಸಾಹಿತ್ಯದಲ್ಲಿಯೂ ಕೂಡ ಅಂತಹ ಚಾಳಿ ಹೇಗೆ ಬೆಳೆದುಬಂದಿತ್ತೆಂಬುದಕ್ಕೆ.
ಹೊಲೆಯ ಬಂದಾನೆಂದು ಒಳಗೆ ದೇವರ ಮಾಡಿ ಘಣಘಣ ಘಂಟೆ ಬಾರಿಸುತ
ತನುವಿನ ಕೋಪ ಹೊಲೆಯಲ್ಲವೇನಯ್ಯ
ಮನಸಿನ ವಂಚನೆ ಹೊಲೆಯಲ್ಲವೇನಯ್ಯ
ಇಂಥಾ ಹೊರಗಿದ್ದ ಹೊಲೆಯನ್ನೆ ಒಳಗೆ ತುಂಬಿಟ್ಟುಕೊಂಡು
ಇದಕ್ಕೇನು ಮದ್ದು ಶ್ರೀ ಪುರಂದರವಿಠಲ
ಹೀಗೆ ಸಾಗುತ್ತದೆ ಕನ್ನಡ ಸಾಹಿತ್ಯದಲ್ಲಿ ‘ಹೊಲೆಯ’ ಎಂಬ ಪದವನ್ನು ಬೇಕಾಬಿಟ್ಟಿ ಯಾಗಿ ಬಳಸುವ ಚಾಳಿ.

ವಾಸ್ತವವಾಗಿ ಹೇಳುವುದಾದರೆ ‘ಹೊಲ ಗೇರಿ’ ಎಂದರೆ ‘ಹೊಲೆಯ’ರು ವಾಸಿಸುವ ಕೇರಿ ಅಥವಾ ಬೀದಿ ಎಂದರ್ಥ. ಹೀಗಿರುವಾಗ ಅದು ಕಸ ಹೇಗಾಗುತ್ತದೆ? ಅದನ್ನು ಕಸ ಎನ್ನುವುದಾದರೆ ಹೊಲಗೇರಿ ಎಂಬ ಆ ಇಡೀ ಬೀದಿ ಅಥವಾ ಕೇರಿಯೇ ಕಸಕ್ಕೆ ಸಮ ಎಂದು ಅರ್ಥ! ಒಂದು ಸಮುದಾಯವನ್ನು ಜೀತಗಾರಿಕೆಗೆ ತಳ್ಳಲು, ನಿರಂತರ ಮಾನಸಿಕ ಗುಲಾಮಗಿರಿಗೆ ನೂಕಲು ಇದಿಷ್ಟು ಮಾತ್ರ ಸಾಕು.
ಸಿಂಪಲ್, ಆ ಸಮುದಾಯದ ಹೆಸರಿನ ಅರ್ಥವನ್ನು ಕೀಳು ಎಂದು ಬಿಂಬಿಸುವುದು. ಹೊಲಸು ಎಂದು ತುಚ್ಛೀಕರಿಸುವುದು! ತನ್ಮೂ ಲಕ ಅವರಲ್ಲಿ ತಮ್ಮ ಸಮುದಾಯದ ಬಗ್ಗೆಯೇ ಕೀಳರಿಮೆ ಹುಟ್ಟುವಂತೆ ಮಾಡುವುದು! ಇನ್ನು ಆ ಸಮುದಾಯ ಇತಿಹಾಸದಲ್ಲಿ ತಲೆ ಎತ್ತಿ ಹೇಗೆ ಬಾಳಲು ಸಾಧ್ಯ? ಬ್ರಾಹ್ಮಣವಾದದ ಇಂತಹ ಕ್ರೂರ ಹುನ್ನಾರ ನಿಜಕ್ಕೂ ದಿಗ್ಭ್ರಮೆ ಗೊಳಿಸುವಂತಹದ್ದು!
ಹಾಗಿದ್ದರೆ ಬ್ರಾಹ್ಮಣರಿಂದ ಕಸ, ಹೊಲಸು ಎಂದು ಕರೆಸಿಕೊಳ್ಳುವ ಹೊಲಗೇರಿ ಮತ್ತು ಅಲ್ಲಿ ವಾಸಿಸುವ ‘ಹೊಲೆಯ’ ಸಮುದಾಯದ ಇತಿ ಹಾಸ ಅಷ್ಟೊಂದು ಹೀನವಾದುದೇ? ಖಂಡಿತ ಇಲ್ಲ. ಹೀನದ ಪ್ರಶ್ನೆ ಒತ್ತಟ್ಟಿಗಿರಲಿ, ವಾಸ್ತವ ವೆಂದರೆ ‘ಹೊಲೆಯ’ರು ಈ ದೇಶದ ಮೂಲ ನಿವಾಸಿಗಳಾಗಿದ್ದವರು.
‘ಹೊಲೆಯ’ ಎಂದರೆ ‘‘ಹೊಲದ ಒಡೆಯ’’ ಎಂದರ್ಥವೇ ಹೊರತು ಹೊಲಸು ತಿಂದವ ಎಂದಲ್ಲ! ಏಕೆಂದರೆ ‘ಹೊಲೆಯ’ ಎಂಬ ಪದದ ಮೂಲ ‘ಹೊಲ’ವೇ ಹೊರತು ಹೊಲಸು ಎಂದಲ್ಲ. ಇದಕ್ಕೆ ಸಾಕ್ಷಿ ಯಾಗಿ ಕರ್ನಾಟಕ ಗೆಜೆಟಿಯರ್  (vol 3, Castes and tribes in mysore) ನಲ್ಲಿ Holeya means owner of land ಎಂದಿದೆ. ಅಲ್ಲದೆ 1901 ರ ಜನಗಣತಿ ವರದಿ ಹೀಗೆ ಹೇಳುತ್ತದೆ, HOLA is the canarese name for a dry crop field and HOLEYA means man of such field! ಹೀಗಿರುವಾಗ ‘ಹೊಲೆಯ’ ಎಂದರೆ ಹೊಲಸು ಹೇಗಾಗುತ್ತದೆ?
ಸ್ವತಃ ಬಾಬಾಸಾಹೇಬ್ ಅಂಬೇಡ್ಕರ್‌ರ ಪ್ರಕಾರ ಮಾದಿಗ, ಹೊಲೆಯ, ಸಮಗಾರ, ಚಮ್ಮಾರ, ಛಲವಾದಿ, ಮಹಾರ್, ಮಾಲ, ಪರಯ್ಯಾ ಇತ್ಯಾದಿ ಅಸ್ಪಶ್ಯ ಸಮುದಾಯಗಳು ಪುರಾತನ ನಾಗವಂಶಕ್ಕೆ ಸೇರಿದವರು. ಸುಪ್ರಸಿದ್ಧ ಸಿಂಧೂ ನದಿಯ ನಾಗರಿಕತೆಯನ್ನು ಕಟ್ಟಿದವರು ಇದೇ ನಾಗ ಜನರು. ನಾಗ ಜನರು ವಾಸಿಸುತ್ತಿದ್ದ ಸ್ಥಳಗಳನ್ನು ‘‘ನಗರ’’ಗಳೆಂದು ಕರೆಯಲಾಗುತ್ತಿತ್ತು.
‘‘ನಾಗಜನರ’’ ಸುಂದರ ಜೀವನ ಶೈಲಿಯೇ ‘‘ನಾಗರಿಕತೆ’’ ಎನಿಸಿಕೊಂಡಿತ್ತು ಮತ್ತು ನಗರ ವಾಸಿ ನಾಗ ಜನರನ್ನು ‘‘ನಾಗರಿಕ’’ ಎನ್ನಲಾಗುತ್ತಿತ್ತು. ವಸ್ತುಸ್ಥಿತಿ ಹೀಗಿರುವಾಗ, ಅಂದರೆ ನಾಗರಿಕತೆಯ ಮೂಲವಾರಸುದಾರ ರಾದ ನಾಗಜನರು ಆಧುನಿಕ ‘ಹೊಲೆಯ’ರಾಗಿ ರುವಾಗ ಅವರು ‘‘ಕಸ’’ ಅಥವಾ ‘‘ಹೊಲಸು’’ ಹೇಗಾಗುತ್ತಾರೆ?
ಹಾಗಿದ್ದರೆ ಬ್ರಾಹ್ಮಣರು ನಾಗವಂಶಸ್ಥರಾದ ‘ಹೊಲೆಯ’ರನ್ನು ಹಾಗೆ ಕೀಳಾಗಿ ಕಾಣಲು ಕಾರಣವಾದರೂ ಏನು?   ಖ್ಯಾತ ಅಂಬೇಡ್ಕರ್ ವಾದಿ ಎಂ. ಗೋಪಿನಾಥ್‌ರವರು ತಮ್ಮ ‘‘ನಾಗ ಲೋಕ’’ ಕೃತಿಯಲ್ಲಿ ಇದಕ್ಕೆ ಹೀಗೆ ವಿವರಣೆ ನೀಡುತ್ತಾರೆ. ಅದೇನೆಂದರೆ ಕ್ರಿ,ಪೂ.2000ನೆ ವರ್ಷದ ಸುಮಾರಿನಲ್ಲಿ ಬಿಳಿ ತೊನ್ನಿನಂತೆ ತೊಗಲು ಹೊಂದಿದ್ದ ಆರ್ಯರು ಎಂಬ ಅಲೆ ಮಾರಿ ತಂಡವೊಂದು ನಾಗಮಂಡಲ (ಭಾರತ) ಕ್ಕೆ ದನಕಾಯುತ್ತಾ ಅನ್ನ, ನೀರು ಹುಡುಕಿಕೊಂಡು ಬಂದಿತು.
ಆ ಆರ್ಯರೇ ಬ್ರಾಹ್ಮಣ, ಬನಿಯಾಗಳ ಪೂರ್ವಿಕರು. ನಾಗ ಜನಾಂಗದ ಅಸುರ, ರಾಕ್ಷಸ, ದಾನವ ರಾಜರುಗಳು ಮಹಾ ಕರುಣಾಮಯಿಗಳಾಗಿದ್ದರು. ಅವರು ಆ ಪರದೇಶಿ ಆರ್ಯರಿಗೆ ಅನ್ನ ನೀರು ನೀಡಿದ್ದಲ್ಲದೆ ತಮ್ಮ ರಾಜ್ಯಗಳಲ್ಲಿ ತಂಗುವುದಕ್ಕೂ ಅವಕಾಶ ಮಾಡಿಕೊಟ್ಟರು. ಭೂಮಿಯ ಒಡೆಯರಾದ ನಾಗ ಜನಾಂಗದವರು ಸ್ವತಂತ್ರವಾಗಿ ಬದುಕಲು ಆರ್ಯರಿಗೆ ಭೂಮಿ ನೀಡಿದ್ದಲ್ಲದೆ, ಹಿಂದು ಮುಂದು ಯೋಚಿಸದೆ ಅಪರಿಚಿತ ಆರ್ಯರಿಗೆ ದಯೆ ತೋರಿಸಿದರು!
ಹೀಗೆ ನಾಗ ಜನಾಂಗದವರಿಂದ ಭೂಮಿ ಮತ್ತು ಬದುಕುವ ಹಕ್ಕು ಪಡೆದ ಆರ್ಯರು ನಾಗ ಜನಾಂಗದ ರಾಜರುಗಳ ನಡುವೆ ಹುಳಿಹಿಂಡಿ, ಅವರು ಪರಸ್ಪರ ಕಚ್ಚಾಡುವಂತೆ ಮಾಡಿದ್ದು, ಅಂತಹ ಕಚ್ಚಾಡುವಿಕೆಯ ಲಾಭ ಪಡೆದು ಇಡಿ ನಾಗಮಂಡಲವನ್ನು ಆಕ್ರಮಿ ಸಿದ್ದು ಮತ್ತು ನಾಗಜನಾಂಗದ ಹಲವಾರು ಕುಲಗಳನ್ನು ಸಣ್ಣ ಪುಟ್ಟ ಜಾತಿಗಳಾಗಿ ವಿಂಗಡಿಸಿ ಜಾತಿ ಎಂಬ ವಿಷದ ಬೀಜವ ಬಿತ್ತಿದ್ದು ಈಗ ಇತಿಹಾಸ.
ಅಂದಹಾಗೆ ನಾಗವಂಶದ ರಾಜರುಗಳನ್ನು ಅಸುರ ಎಂದರೆ ಸುರೆಯನ್ನು ಕುಡಿಯದವ, ರಾಕ್ಷಸ ಎಂದರೆ ರಕ್ಷಿಸುವವ, ದಾನವ ಎಂದರೆ ದಾನ ನೀಡುವವ ಎನ್ನಲಾಗುತ್ತಿತ್ತು. ಆದರೆ ಆರ್ಯರು ಆ ಪದಗಳಿಗೆ ಕೆಟ್ಟ ಕಥೆಗಳನ್ನು ಕಟ್ಟಿ ಅವರನ್ನು ಕ್ರೂರಿಗಳು ಎಂದು ಪ್ರಚಾರ ಮಾಡಿ ದರು ಮತ್ತು ಅವರನ್ನು ಮೋಸದಿಂದ ಕೊಂದ ತಮ್ಮನ್ನು ದೇವತೆಗಳು ಎಂದು ಕರೆದುಕೊಂಡರು! ಶಾಂತಿ ಸೌಹಾರ್ದತೆಯ ನಾಡಾಗಿದ್ದ ನಾಗ ಮಂಡಲದಲ್ಲಿ ಪ್ರಾಣಿಬಲಿ ಯಜ್ಞ ಯಾಗಾದಿ ಗಳು ಪ್ರಾರಂಭವಾದವು. ದನ ಕಾಯುತ್ತಾ ಬಂದ ಆರ್ಯರು ದನದ ಮಾಂಸ ತಿನ್ನುತ್ತಿದ್ದದ್ದು ಈ ಸಂದರ್ಭದಲ್ಲೇ! ಅನೈತಿಕತೆ, ಅರಾಜಕತೆ ಈ ಸಂದರ್ಭದಲ್ಲಿ ತಾಂಡವವಾಡುತ್ತಿತ್ತು.
ಇಷ್ಟೆಲ್ಲಾ ಆದರೂ ನಾಗಜನಾಂಗದಲ್ಲಿ ಇನ್ನೂ ಆ ಸಾತ್ವಿ ಕತೆ, ಹೋರಾಟದ ಕೆಚ್ಚು ಮಾಯವಾಗಿರಲಿಲ್ಲ. ಈ ಸಂಧರ್ಭಲ್ಲಿಯೇ ಕ್ರಿ.ಪೂ. 584 ರಲ್ಲಿ ನಾಗಜನಾಂಗದ ಶಾಕ್ಯ ಕುಲದಲ್ಲಿ ಭಗವಾನ್ ಗೌತಮಬುದ್ಧ ಜನಿಸಿದ್ದು. ಬುದ್ಧನ ನಂತರ ಆರ್ಯರ ಪ್ರಭಾವ ತುಸು ಕಡಿಮೆಯಾಯಿತು. ನಾಗ ಜನಾಂಗದ ಪಾರುಪತ್ಯ ಮತ್ತೆ ಹೆಚ್ಚಿತು. ಮುಂದೆ ಸಿಸುನಾಗ ವಂಶಕ್ಕೆ ಸೇರಿದ ಚಂದ್ರ ಗುಪ್ತ ಮೌರ್ಯನು ಮೌರ್ಯ ಸಂತತಿ ಸ್ಥಾಪಿಸಿ ದ್ದು, ಆ ಸಂತತಿಯ ಶ್ರೇಷ್ಠ ಚಕ್ರವರ್ತಿ ಸಾಮ್ರಾ ಟ ಅಶೋಕನು ಬೌದ್ಧ ಧರ್ಮವನ್ನು ಜಗತ್ತಿನಾದ್ಯಂತ ಹರಡಿದ್ದು ನಾಗಜನರ ಪಾಬಲ್ಯಕ್ಕೆ ಪ್ರಬಲ ಉದಾಹರಣೆ.
ಆದರೆ ಕ್ರಿ.ಪೂ. 185ರಲ್ಲಿ ಮೌರ್ಯ ವಂಶದ ಕೊನೆಯ ದೊರೆ ಬೃಹದ್ರಥ ಮೌರ್ಯನನ್ನು ಶುಂಗ ಬ್ರಾಹ್ಮಣನಾದ ಪುಷ್ಯಮಿತ್ರ ಶುಂಗನು ಸಂಚು ಮಾಡಿ ಕೊಂದು ಆ ಮೂಲಕ ಬ್ರಾಹ್ಮಣರ ಆಳ್ವಿಕೆಗೆ ಅಡಿಗಲ್ಲಿಟ್ಟದ್ದು ಭಾರತದ ಇತಿಹಾಸದ ಬಹುದೊಡ್ಡ ದುರಂತ. ವಿಶೇಷವಾಗಿ ಅಸ್ಪಶರ ದೃಷ್ಟಿಯಲ್ಲಿ. ಏಕೆಂದರೆ ಸಾವಿರಾರು ಬೌದ್ಧ ಭಿಕ್ಷುಗಳ ತಲೆ ಕಡಿಸಿ, ಸುಮತಿ ಭಾರ್ಗವನೆಂಬ ಬ್ರಾಹ್ಮಣನಿಂದ ಕುಖ್ಯಾತ ‘‘ಮನುಸ್ಮತಿ’’ ಬರೆಸಿದ್ದು ಈ ಕಾಲದಲ್ಲೇ ಅದಕ್ಕೆ.
ಮುಂದೆ ಕ್ರಿ.ಶ.4ನೆ ಶತಮಾನದಲ್ಲಿ ಸಮುದ್ರಗುಪ್ತನ ಕಾಲದಲ್ಲಿ ಬೌದ್ಧ ಧರ್ಮ ಮತ್ತು ಬೌದ್ಧ ಭಿಕ್ಕುಗಳ ಮೇಲೆ ಇನ್ನಿಲ್ಲದ ದಬ್ಬಾಳಿಕೆ ನಡೆಸಿ, ಆ ಧರ್ಮದ ಅನುಯಾಯಿ ಗಳಾದ ನಾಗಜನಾಂಗದವರನ್ನು ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸಿ ಅಸ್ಪಶರನ್ನಾಗಿ ಮಾಡಲಾಯಿತು. ತನ್ಮೂಲಕ ನಾಗ ಜನಾಂಗವೆಂಬ ಮೂಲ ಬೌದ್ಧರನ್ನು ಇತಿಹಾಸದ ಮೂಲೆಗೆ ತಳ್ಳಲಾಯಿತು.
ಒಂದಂತು ನಿಜ, ಒಂದು ಕಾಲದಲ್ಲಿ ರಾಜರಾಗಿ, ಬೌದ್ಧ ಧರ್ಮವೆಂಬ ಪ್ರಬಲ ಧರ್ಮದ ಸ್ಥಾಪನೆಗೆ ಕಾರಣರಾಗಿ ಹಾಲಿ ಅಸ್ಪಶರಾಗಿರುವ ಹೊಲೆಯರ ಇತಿಹಾಸ ಇಷ್ಟೊಂದು ಭವ್ಯವಾಗಿರಬೇಕಾದರೆ ಅವರು ‘‘ಕಸ’’ ಅಥವಾ ‘‘ಹೊಲಸು’’ ಹೇಗಾಗುತ್ತಾರೆ? ಅಂದಹಾಗೆ ಅಸ್ಪಶರ ಈ ಭವ್ಯ ಇತಿಹಾಸವನ್ನು ಹೆಕ್ಕಿ ತೆಗೆದದ್ದು ನಾಗ ಜನಾಂಗದ ಆಧುನಿಕ ಯುಗದ ಪ್ರತಿನಿಧಿಯಾದ ಬಾಬಾಸಾಹೇಬ್ ಅಂಬೇಡ್ಕರ್. ತಮ್ಮ ‘‘ಅಸ್ಪಶ್ಯರು ಯಾರು?’’ ಎಂಬ ಕೃತಿಯಲ್ಲಿ ಅಂಬೇಡ್ಕರ್ ‘‘ಅನಾರ್ಯರಾದ ನಾಗರಿಗೂ, ಅರ್ಯರಿಗೂ ಭೀಕರ ಶತ್ರುತ್ವವಿತ್ತು. ನಾವು(ಅಸ್ಪಶರು) ಅನಾರ್ಯರಾದ ನಾಗವಂಶದ ಪೀಳಿಗೆಯವರಾಗಿದ್ದೇವೆ. ಇದೇ ನಾಗ ಜನರೇ ಜಗತ್ತಿನಾದ್ಯಂತ ಬೌದ್ಧ ಧರ್ಮವನ್ನು ಹರಡಿದವರು’’ ಎನ್ನುತ್ತಾರೆ.
ಅಸ್ಪಶ ಜಾತಿಗಳನ್ನು ಭಾರತ ದಾದ್ಯಂತ ‘ಆದಿಕರ್ನಾಟಕ’, ‘ಆದಿಆಂಧ್ರ’, ‘ಆದಿಕೇರಳ’ ಎನ್ನುತ್ತಾರೆ. ಇದರ ಅರ್ಥವಾದರೂ ಏನು? ಆ ಜನರು ಅಲ್ಲಿಯ ಮೂಲನಿವಾಸಿಗಳೆಂದೇ ಹೊರತು ಬೇರೇನಲ್ಲ! ಕಡೆಯದಾಗಿ ಬಾಬಾಸಾಹೇಬ್ ಅಂಬೇಡ್ಕರ್ ಒಂದೆಡೆ ಹೀಗೆ ಹೇಳುತ್ತಾರೆ. "I am proud of my caste mahar, in which I was born'' . ಅಂದರೆ ‘‘ನಾನು ಜನಿಸಿದ ಮಹಾರ್ ಜಾತಿಯ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ’’ ಈ ನಿಟ್ಟಿನಲ್ಲಿ ಬಾಬಾಸಾಹೇಬರ ಅನು ಯಾಯಿಗಳಾದ ನಾವು (‘ಹೊಲೆಯ’ರು) ಕೂಡ ‘‘ನಾವು ಜನಿಸಿದ ‘ಹೊಲೆಯ’ ಜಾತಿಯ ಬಗ್ಗೆ, ನಾವು ಹೆಮ್ಮೆ ಪಡುತ್ತೇವೆ’’ ಎಂದು ಘಂಟಾಘೋಷವಾಗಿ ಹೇಳುತ್ತೇವೆ.
ಏಕೆಂದರೆ ಬಾಬಾಸಾಹೇಬರ ಅಂತಹ ಆತ್ಮವಿಶ್ವಾಸ ತುಂಬಿದ ಮಾತುಗಳ ಅನುಕರಣೆಯಷ್ಟೆ ಅಸ್ಪಶರಾದ ನಮಗೆ ನವ ಚೈತನ್ಯ ತುಂಬಲು ಸಾಧ್ಯ. ‘ಹೊಲಸು’ ‘ಕಸ’ ಎಂಬ ಗೊಡ್ಡು ಬ್ರಾಹ್ಮಣ್ಯವಲ್ಲ.  
ಬುಧವಾರ - ಡಿಸೆಂಬರ್-15-2010
By: H B Raghothama
Chamarajanagar
___
Courtesy  : Varthabharathi



html