ಮೈಸೂರು, ಡಿ.6: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಲ್ಬಣಿಸುತ್ತಿರುವ ಅಸಮಾನತೆ, ಅಸ್ಪಶತೆಯ ತಾತ್ಸಾರ ದಂತಹ ಸಮಸ್ಯೆಗಳನ್ನು ಹೋಗಲಾಡಿಸಿ, ಸಂವಿಧಾನದ ಆಶಯಗಳನ್ನು ಸಮರ್ಪಕ ಅನುಷ್ಠಾನಕ್ಕೆ ಒತ್ತಡ ಹೇರುವ ಜತೆಗೆ, ಛಿದ್ರಗೊಳ್ಳುತ್ತಿರುವ ದಲಿತ ಸಮುದಾ ಯವನ್ನು ಸಂಘಟಿಸಿ, ಸಮಾಜಮುಖಿಯನ್ನಾಗಿಸಲು ದಲಿತ ಸಂಘರ್ಷ ಸಮಿತಿ ರಾಜ್ಯಾದ್ಯಂತ ಹಮ್ಮಿಕೊಂಡಿ ರುವ ಜನ ಜಾಗೃತಿ ಜಾಥಾಕ್ಕೆ ಮಂಗಳವಾರ ನಗರದಲ್ಲಿ ಚಾಲನೆ ದೊರೆಯಿತು.
ದಸಂಸ ಮೂಲ ಆಶಯಗಳ ಪುನರುತ್ಥಾನ ಹಾಗೂ ದಲಿತರ ಸಂವಿಧಾನ ಬದ್ಧ ಹಕ್ಕು ಸಂರಕ್ಷಣೆ ಎಂಬ ಧ್ಯೇಯದೊಂದಿಗೆ ‘ಮರಳಿ ಹಳ್ಳಿ ಕಡೆಗೆ-ದಸಂಸ ನಡಿಗೆ’ ಎಂಬ ಹೆಸರಿನಲ್ಲಿ ದಲಿತ ಸಂಘರ್ಷ ಸಮಿ ತಿಯು ಮಂಗಳವಾರದಿಂದ 2012 ಜನವರಿ 26ರ ವರೆಗೆ ರಾಜ್ಯಾದ್ಯಂತ ಜನ ಜಾಗೃತಿ ಜಾಥಾ ನಡೆಸ ಲಿದ್ದು, ಇಂದು ಬೆಳಗ್ಗೆ ಪುರಭವನ ಆವರಣದಿಂದ ಪ್ರಾರಂಭಗೊಂಡ ಜಾಥಾಕ್ಕೆ ದಸಂಸ ಪೋಷಕಿ ಹಾಗೂ ಮೈಸೂರು ವಿವಿ ಸಿಂಡಿಕೇಟ್ ಸದಸ್ಯೆ ಪ್ರೊ.ಸುಮಿತ್ರಾ ಬಾಯಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ವಿವಿಧ ಶಾಲೆ-ಕಾಲೇಜು ವಿದ್ಯಾರ್ಥಿಗಳು ಸೇರಿ ದಂತೆ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ದಲಿತ ಜನಾಂಗದ ಮುಖಂಡರು, ಜಾಥಾ ಉದ್ದಕ್ಕೂ ಅಂಬೇಡ್ಕರ್ ಅವರ ಸಂದೇಶಗಳನ್ನು ಒಳಗೊಂಡ ನಾಮಫಲಕ ಪ್ರದರ್ಶಿಸಿದರು. ಅಲ್ಲದೆ ದೀನ-ದಲಿತರ ಅಭಿವೃದ್ಧಿಗೆ ಸರಕಾರ ವಿಶೇಷ ಕಾಳಜಿ ವಹಿಸಬೇಕು. ಸವರ್ಣೀಯರಿಂದ ಆಗುತ್ತಿರುವ ಸಾಮಾಜಿಕ ಬಹಿಷ್ಕಾರ, ದೈಹಿಕ ಮತ್ತು ಮಾನಸಿಕ ಹಲ್ಲೆಗಳನ್ನು ತಡೆಗಟ್ಟಬೇಕು. ದಲಿತರೂ ಈ ಸಮಾಜದಲ್ಲಿ ಮನುಷ್ಯರಾಗಿ ಬದುಕಲು ಅವಕಾಶ ಮಾಡಿಕೊಡ ಬೇಕು ನಾಮಫಲಕಗಳ ಪ್ರದರ್ಶನ ಸಾರ್ವಜನಿಕರ ಮನದಟ್ಟುವಂತಿತ್ತು.
ನಿತ್ಯ ಎರಡು ಅಥವಾ ಮೂರು ತಾಲೂಕುಗಳಿಗೆ ಭೇಟಿ ನೀಡುವ ಜಾಥಾ, ಸ್ಥಳೀಯರೊಂದಿಗೆ ಸಭೆ ನಡೆಸುವುದಲ್ಲದೆ ಸಂವಿಧಾನಬದ್ಧ ಹಕ್ಕುಗಳು ಸಮರ್ಪ ಕವಾಗಿ ಅನುಷ್ಠಾನಗೊಳ್ಳಲು ದಲಿತರು ವಹಿಸಬೇಕಾ ಗಿರುವ ಕಾಳಜಿ ಹಾಗೂ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಪಡಬೇಕಾಗಿರುವ ಶ್ರಮದ ಬಗ್ಗೆ ಚರ್ಚೆ ಹಾಗೂ ಉಪನ್ಯಾಸದ ಮೂಲಕ ಅರಿವು ಮೂಡಿಸಲಾಗುತ್ತದೆ ಎಂದು ದಸಂಸ ಮೈಸೂರು ಜಿಲ್ಲಾ ಸಂಚಾಲಕ ದೇವಗಳ್ಳಿ ಸೋಮಶೇಖರ್ ವಿವರಿಸಿದರು.
ಜಾಥಾದಲ್ಲಿ ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೂಡು, ಚಿಂತಕ ಪ್ರೊ.ಹಿ.ಶಿ. ರಾಮಚಂದ್ರೇಗೌಡ, ಕವಿ ಪ್ರೊ.ಎಚ್.ಗೋವಿಂದಯ್ಯ, ರಂಗನಿರ್ದೇಶಕ ಎಚ್.ಜನಾರ್ದನ (ಜನ್ನ್ನಿ), ದಸಂಸ ಹಿರಿಯ ನಾಯಕ ಹರಿಹರ ಆನಂದಸ್ವಾಮಿ ಅತಿಥಿಯಾಗಿ ಪಾಲ್ಗೊಂಡಿದ್ದರು.