Pages

Showing posts with label ಬೌದ್ಧಧರ್ಮ. Show all posts
Showing posts with label ಬೌದ್ಧಧರ್ಮ. Show all posts

Wednesday, 18 May 2011

‘ಹೊಲಸು’: ಆಹಾರ ಪ್ರಮಾಣ


‘ಹೊಲಸು’: ಆಹಾರ ಪ್ರಮಾಣ ;ಭಾಗ-1- ಡಾ. ರಹಮತ್ ತರೀಕೆರೆ

ಯಾವ ಸಾಮಾಜಿಕ ಆವರಣದೊಳಗೆ ನಾವು ಬದುಕುತ್ತಿದ್ದೇವೆಯೋ ಅದರ ತಳಬುಡವನ್ನು ಅರಿತುಕೊಳ್ಳುವುದು ಸಂಸ್ಕೃತಿ ಚರ್ಚೆಯಲ್ಲಿ ಅಗತ್ಯ ವಾಗಿದೆ. ಯಾವ ನೆಲದಲ್ಲಿ ಜಲವುಣಿಸುವ ಧಾರೆ ಗಳಿಗಾಗಿ ನೆರಳನೀವ ತರುಗಳಿಗಾಗಿ ಅಮರ್ದಿನ ಬಳ್ಳಿಗಾಗಿ ತಡಕಾಡುತ್ತಿದ್ದೇವೆಯೋ, ಆ ನೆಲದ ಮೇಲೆ ಬೆಳೆದ ಕಳೆಕಸಗಳ ಪರಿವೆ ಇರಬೇಕಷ್ಟೇ. ‘ಪ್ರಮಾಣ’ವೆಂದರೆ, ನಮ್ಮ ಸಮಾಜದ ವಿವಿಧ ಸ್ತರಗಳಲ್ಲಿ ಆಳುವ ಸಂಸ್ಕೃತಿಯ ಆಲೋಚನಾ ಕ್ರಮಕ್ಕೆ ತಕ್ಕನಾಗಿ ರೂಪುಗೊಂಡು ನೆಲೆಸಿರುವ ನಂಬಿಕೆ ಆಚರಣೆಗಳು; ಮನುಷ್ಯರಿಂದ ಹಿಡಿದು ಪಶುಪಕ್ಷಿ ಗಿಡಮರ ದಿಕ್ಕುಗಳು ಬಣ್ಣಗಳು ಉಣ್ಣು ವುದು ಉಡುವುದು ಆಡುವ ಮಾತು ಮಾಡುವ ಕಸುಬುಗಳಾದಿಯಾಗಿ, ಜೀವನವನ್ನೆಲ್ಲಾ ವ್ಯಾಪಿಸಿ ಕೊಂಡಿರುವ ಶ್ರೇಣೀಕರಣಗಳು; ಈ ಪ್ರಮಾಣೀ ಕರಣಗಳು ನಮ್ಮ ದೈನಿಕ ಬದುಕಿನಲ್ಲಿ ಸಹಜವಾಗಿ ಸೇರಿಹೋಗಿವೆ.

ಎಷ್ಟೆಂದರೆ, ಎದುರಲ್ಲಿ ಗೋಚರಿ ಸುತ್ತಿದ್ದರೂ, ನಮ್ಮ ಭಾಷೆ ಸಾಹಿತ್ಯಕೃತಿ ದೈನಿಕ ವರ್ತನೆಗಳು ಅವನ್ನು ಮತ್ತೆಮತ್ತೆ ಪ್ರಕಟಿಸುತ್ತಿ ದ್ದರೂ, ತಟ್ಟನೆ ಅವು ಅರಿವಿಗೆ ಬರುವುದೇ ಇಲ್ಲ. ಬಂದರೂ ತಲೆ ಕೆಡಿಸುವುದಿಲ್ಲ. ಈ ಪ್ರಮಾಣೀ ಕರಣದ ಜಗತ್ತನ್ನು ಅರಿಯುವುದೆಂದರೆ, ಇಂಡಿ ಯಾದ ಬೇರೆಬೇರೆ ಸಮುದಾಯ ಗಳು ಅದನ್ನು ಎಲ್ಲಿ ಉಲ್ಲಂಘಿಸಿವೆ, ದಾಟ ಲಾಗದೆ ಬಳಲಿವೆ ಅಥವಾ ಜಗಳಕ್ಕೆ ಹೋಗದೆ ಬದಲಿ ನಿರ್ಮಿಸಿಕೊಂಡಿವೆ ಎಂಬುದರ ಶೋಧ ಕೂಡಾ. ಪ್ರತಿಸಂಸ್ಕೃತಿ ನಿರ್ಮಾಣದ ಚರ್ಚೆಗೆ ಹಿನ್ನೆಲೆ ಒದಗಿಸಿ ಕೊಳ್ಳುವುದಕ್ಕಾಗಿ, ಪ್ರಮಾಣಗಳ ‘ಚರಿತ್ರೆ’ ಯನ್ನು ವಿಶ್ಲೇಷಿಸಲು ಪ್ರಯತ್ನಿಸಲಾಗಿದೆ. ಈ ಪ್ರಮಾಣಗಳಲ್ಲಿ ಆಹಾರ ಪ್ರಮಾಣವು ಮುಖ್ಯವಾದುದು.

ಬಹುಸಂಸ್ಕೃತಿಗಳ ಈ ದೇಶದೊಳಗೆ ನಡೆದ, ಈಗಲೂ ನಡೆಯುತ್ತಿರುವ ದೊಡ್ಡ ದೌರ್ಜನ್ಯವೆಂದರೆ, ಸಂಸ್ಕೃತಿನಿಷ್ಠವೂ ಖಾಸ ಗಿಯೂ ಆದ ಉಣ್ಣುವ ವಸ್ತುಗಳನ್ನು, ಕನಿಷ್ಠ ವೆಂದು ಶ್ರೇಷ್ಠವೆಂದು ವಿಂಗಡಿಸಿ ಪ್ರಮಾಣೀ ಕರಿಸಿರುವುದು. ಈ ಬಗೆಯ ಪ್ರಮಾಣೀಕರ ಣಗಳು ಹೆಚ್ಚಾಗಿ ರಾಜಕೀಯ ಅಧಿಕಾರ ಪಡೆದ ಸಂಸ್ಕೃತಿಯ ಕೇಂದ್ರದಿಂದ ಸೃಷ್ಟಿಯಾ ಗಿರುತ್ತವೆ. ಸಾಮಾಜಿಕವಾಗಿ ಪ್ರತಿಷ್ಠೆ ಪಡೆಯ ಬಯಸುವ ಉಳಿದ ಸಮುದಾಯಗಳು ‘ಉಚ್ಚಸಂಸ್ಕೃತಿ’ಯ ಈ ಮಾದರಿಗಳನ್ನು ಆದರ್ಶ ವೆಂದು ಒಪ್ಪಿಕೊಳ್ಳುತ್ತವೆ. ಎಷ್ಟೋ ಸಮುದಾಯ ಗಳು ಚರಿತ್ರೆಯಲ್ಲಿ ಮಾಂಸಾಹಾರವನ್ನು ಬಿಟ್ಟು ಶ್ರೇಷ್ಠಗೊಳಿಸಲು ಯತ್ನಿಸಿದ್ದು ಹೀಗೆ. ಚಮ್ಮಾರರಾದ ಛತ್ತೀಸಗಢದ ಸತ್ನಾಮಿಗಳು, ಗುರುಘಾಸೀದಾಸನ ಪ್ರಭಾವದಿಂದ ಭಕ್ತರಾಗಿ ಜನಿವಾರ ಧರಿಸಿದರು. ಮಾಂಸಾಹಾರ ತ್ಯಜಿಸಿದರು.

ಮಾತ್ರವಲ್ಲ, ಕೆಂಪು ತರಕಾರಿ ಕೂಡ ತಿನ್ನುವುದನ್ನು ನಿಲ್ಲಿಸಿಬಿಟ್ಟರು. ಒಂದನ್ನು ಪಡೆಯಲು ಮತ್ತೊಂದರ ತ್ಯಾಗ. ಸಾಮಾಜಿಕ ಸ್ಥಾನಮಾನಕ್ಕಾಗಿ ಸಂಸ್ಕೃತೀಕರಣಗೊಳ್ಳಬೇಕೆಂಬ ಆಸೆ ಹಾಗೂ ತಮ್ಮ ಪ್ರೀತಿಯ ಆಹಾರಕ್ರಮಗಳನ್ನು ಕೈಬಿಡಲಾಗದ ಅಸಹಾಯಕತೆ. ಈ ತೊಳಲಾಟದಲ್ಲಿ ಅತ್ತಲೂ ಇತ್ತಲೂ ಇರಬಯಸುವ ಆದರೆ ವಾಸ್ತವದಲ್ಲಿ ಇರಲಾಗದ ದ್ವಂದ್ವಗಳಲ್ಲಿ ಉಳಿದುಬಿಡುವ ಸಮು ದಾಯಗಳೇ ಹೆಚ್ಚು. ಸದ್ಯಕ್ಕೆ ಇವು ಕೆಲವು ‘ಶುಭ’ ಕಾರ್ಯಗಳಲ್ಲಿ ಮಾತ್ರ ‘ಉಚ್ಚ’ ಸಂಸ್ಕೃತಿಯನ್ನು ಅನುಸರಿಸುವ ಮಟ್ಟಕ್ಕೆ ರಾಜಿಯಾಗಿವೆ. ಮುಖ್ಯವಾಗಿ ಇದು ಇಂಡಿಯಾದ ನಡುಹಂತದ ಶೂದ್ರ ಜಾತಿ ಸಮುದಾಯಗಳ ಪಾಡು.

ಆದರೆ ಸಂಸ್ಕೃತೀಕರಣದ ಯಾವ ಆಮಿಷಕ್ಕೂ ಮನಗೊಡದೆ ತಂತಮ್ಮ ಆಹಾರ ಕ್ರಮಗಳನ್ನು ಆತ್ಮವಿಶ್ವಾಸದಿಂದ ದಿಟ್ಟವಾಗಿ ಮುಂದುವರಿಸಿಕೊಂಡು ಬಂದವೆಂದರೆ, ತೀರ ಕೆಳಸ್ತರದ ಸಮುದಾಯಗಳು. ಅವಕ್ಕೆ ಮೇಲ್ಚ ಲನೆಯ ಸಾಧ್ಯತೆಗಳು ಕಡಿಮೆಯಿದ್ದುದರಿಂದಲೂ ಹೀಗಾಗಿರಬಹುದು. ಆದರೂ ತಮ್ಮ ಪಾರಂಪರಿಕ ಆಹಾರ ಪದ್ಧತಿಯನ್ನು ಬಿಟ್ಟುಕೊಡದ ಹಠವನ್ನು ಪ್ರತಿಸಂಸ್ಕೃತಿಯ ಜಿಗುಟುತನ ಎಂದು ಕರೆಯ ಬಹುದು.ಈ ಬಗೆಯ ಮೇಲ್ಚನೆಗಳಲ್ಲಿರುವ ವ್ಯಂಗ್ಯ ವೆಂದರೆ, ಯಾವ ಸಂಸ್ಕೃತಿಯು ಉಳಿದವಕ್ಕೆ ಮಾದ ರಿಯಾಗಿದೆಯೋ ಅದು, ಚರಿತ್ರೆಯ ಒಂದು ಘಟ್ಟದಲ್ಲಿ ಸ್ವತಃ ಇನ್ನೊಂದನ್ನು ಅನುಕರಿಸಿ ರುವುದು. ಅಂದರೆ ಪ್ರಮಾಣೀಕರಣಗಳನ್ನು ನಿರ್ಧ ರಿಸುವ ಅಧಿಕಾರ ಸ್ಥಾನದಲ್ಲಿರುವ ಬ್ರಾಹ್ಮಣರು, ಒಂದು ಕಾಲಕ್ಕೆ ಮಾಂಸಾಹಾರಿಗಳಾಗಿದ್ದವರು; ತಮ್ಮ ಯಜ್ಞ ಮತ್ತು ಶ್ರಾದ್ಧಗಳಲ್ಲಿ ಪ್ರಾಣಿಬಲಿ ಮಾಂಸದಡಿಗೆಗಳನ್ನು ಪವಿತ್ರ ಆಚರಣೆಗಳಾಗಿ ಹೊಂದಿದ್ದವರು.

ಈ ಸಂಗತಿಯನ್ನು ವೇದಗಳ ಬಗ್ಗೆ ಅಧ್ಯಯನ ಮಾಡಿರುವ ಅನೇಕ ವಿದ್ವಾಂಸರು ವಿಶ್ಲೇಷಿಸಿದ್ದಾರೆ. ಎಂತಲೆ ಚಾರ್ವಾಕರು ವಚನಕಾರರು ಬ್ರಹ್ಮಶಿವ ಮೊದಲಾದವರು ಬ್ರಾಹ್ಮಣರ ಟೀಕೆ ಮಾಡುವಾಗ, ಮೇಲಿನ ಚಾರಿತ್ರಿಕ ತಥ್ಯವನ್ನು ಒಂದು ಪ್ರಬಲ ಅಸ್ತ್ರ ಮಾಡಿಕೊಳ್ಳುತ್ತಾರೆ.ಮಾಂಸಾಹಾರದ ನಿರಾಕರಣೆ ಮತ್ತು ಒಪ್ಪು ವಿಕೆಯು ಭಾರತದ ಸಂಸ್ಕೃತಿಗಳಲ್ಲಿ ನಿರ್ಮಿಸಿರುವ ಆಕರ್ಷಣೆ ವಿಕರ್ಷಣೆಯ ದ್ವಂದ್ವಗಳು ವಿಚಿತ್ರ ವಾಗಿವೆ. ಸಮುದಾಯಗಳ ನಂಬಿಕೆ ಆಚರಣೆ ಮಿತ್‌ಗಳಲ್ಲಿ ಈ ದ್ವಂದ್ವವನ್ನು ಗುರುತಿಸಬಹುದು. ಇವನ್ನು ಮೂರು ನೆಲೆಗಳಲ್ಲಿ ವಿವರಿಸಬಹುದು.

ಅ. ‘ಗೋಮಾಂಸ’ ಸ್ವೀಕರಿಸುವ ಜನರ ಸಂಸ್ಕೃತಿಗಳು

ಆ. ದನವಲ್ಲದೆ ಇತರ ಪ್ರಾಣಿಗಳ ಮಾಂಸ ತಿನ್ನುವ ಜನರ ಸಂಸ್ಕೃತಿಗಳು ಇ. ಇಲಿ, ಉಡ, ಹಾವು, ಇರುವೆ ಇತ್ಯಾದಿಗಳನ್ನು ತಿನ್ನುವ ಜನರ ಸಂಸ್ಕೃತಿಗಳು.

ಇ. ‘ಗೋಮಾಂಸ’ದ ರಾಜಕಾರಣ: ವಲಸೆ ಗಾರರಾಗಿ ಬಂದ ಆರ್ಯರಿಗೆ ಹಸು ಸಂಪತ್ತೂ ಹೌದು, ಆಹಾರವೂ ಹೌದು. ಗೋವು ಪವಿತ್ರವಾಗಿತ್ತು ಎಂಬ ಕಾರಣಕ್ಕಾಗಿಯೇ ಅದರ ಮಾಂಸಸೇವನೆ ಪವಿತ್ರೀಕರಿಸುವ ಆಚರಣೆಗಳಲ್ಲಿ ಒಂದಾಗಿತ್ತು ಎಂದು ವೈದಿಕ ಧರ್ಮಶಾಸ್ತ್ರದ ದೊಡ್ಡವಿದ್ವಾಂಸ ಪಿ.ವಿ.ಕಾಣೆ ಹೇಳುತ್ತಾರೆ.

ವೇದಗಳಲ್ಲಿ ಬರುವ ‘ಗೋಘ್ನ’ (ಹಸು ತಿನ್ನುವವನು) ಎಂಬ ಶಬ್ದವು ಅತಿಥಿಗೆ ಪರ್ಯಾಯ ಹೆಸರು. ಯಾಕೆಂದರೆ ಆರ್ಯರು ಗೌರವಾನ್ವಿತ ಅತಿಥಿಗೆ ಕೊಡುತ್ತಿದ್ದ ‘ಮಧುಪರ್ಕ’ ದಲ್ಲಿ ದನದಮಾಂಸ ಇರಲೇಬೇಕಿತ್ತು. ಅಜಯಾಗ ದಲ್ಲಿ ಆಡಿನ, ಅಶ್ವಮೇಧಯಾಗದಲ್ಲಿ ಕುದುರೆಯ ವಿಭಿನ್ನ ಅಂಗಗಳನ್ನು ಹಂಚುವ ಮತ್ತು ಅಡುವ ವಿವರಣೆ ವೇದಗಳಲ್ಲಿದೆ. ಯಾವ ದೇವತೆಗಳಿಗೆ ಯಾವ ಬಣ್ಣದ ಹಸುವನ್ನು ಬಲಿಕೊಡಬೇಕೆಂಬ ವಿವರಣೆಗಳಿವೆ; ಮಹಾಭಾರತದಲ್ಲಿ (ಅರಣ್ಯ ಪರ್ವ: 207 - 209) ವದಂತಿರಾಜನ ಅಡುಗೆ ಮನೆಯಲ್ಲಿ ಪ್ರತಿದಿನ ಎರಡುಸಾವಿರ ದನಗಳ ಮಾಂಸವನ್ನು ಅಡುತ್ತಿದ್ದ ಬಗ್ಗೆ ಉಲ್ಲೇಖವಿದೆ. ಅಂಬೇಡ್ಕರ್ ತಮ್ಮ ‘ಅಸ್ಪಶ್ಯರು’ ಕೃತಿಯಲ್ಲಿ ಇಂತಹ ಅನೇಕ ಉಲ್ಲೇಖಗಳನ್ನು ವೈದಿಕ ವಾಙ್ಮಯದಿಂದ ಆಯ್ದು ಕೊಡುತ್ತಾರೆ.

ವೈದಿಕರು ತಮ್ಮ ಧಾರ್ಮಿಕ ಆಚರಣೆಗಳಲ್ಲಿ ನಡೆಸುತ್ತಿದ್ದ ಈ ಅವ್ಯಾಹತ ಪಶುವಧೆಗೆ ಪ್ರತಿ ರೋಧ ಒಡ್ಡಿದವನು ಬುದ್ಧ. ರೈತಾಪಿ ಸಮಾಜ ದಲ್ಲಿ ಈ ರೀತಿಯ ಪಶುವಧೆ ದುಷ್ಪರಿಣಾಮ ಬೀರುತ್ತದೆಂದು ಅವನು ಮಂಡಿಸಿದ ‘ಅಹಿಂಸೆ’ ಯ ತತ್ವವು, ಕೃಷಿಕ ಪಶುಪಾಲಕ ಜನಕ್ಕೆ ಪ್ರಿಯ ವಾಯಿತು. ಅವರು ಬೌದ್ಧಧರ್ಮ ಸೇರಿ ಅದನ್ನು ಜನಪ್ರಿಯಗೊಳಿಸಿದರು. ಎಂತಲೇ ಬೌದ್ಧ ಸಾಹಿ ತ್ಯಗಳಲ್ಲಿ ವೈದಿಕರ ‘ಹಿಂಸೆ’ಯ ಬಗ್ಗೆ ಬಲವಾದ ಟೀಕೆಗಳಿವೆ. ಯಾವಾಗ ಸಮುದಾಯಗಳನ್ನು ತನ್ನತ್ತ ಹೀಗೆ ಸೆಳೆದುಕೊಂಡು ಬೌದ್ಧಧರ್ಮವು ಒಂದು ಪ್ರತಿಶಕ್ತಿಯಾಗಿ ಬೆಳೆಯತೊಡಗಿತೋ, ಆಗ ವೈಗದಿಕರು ತಮ್ಮ ಜೀವನಕ್ರಮದ ಸ್ವವಿಮ ರ್ಶೆಗೂ ಸೂಕ್ತ ಮಾರ್ಪಾಟಿಗೂ ತೊಡಗಲೇ ಬೇಕಾಯಿತು.

ಅಂಬೇಡ್ಕರ್ ಪ್ರಕಾರ, ಬ್ರಾಹ್ಮಣರು ತಮ್ಮ ಜೀವನಕ್ರಮದಲ್ಲಿ ಎರಡು ಕ್ರಾಂತಿಕಾರಕ ಮಾರ್ಪಾಟನ್ನು ತಂದುಕೊಂಡರು. ಒಂದು: ಗೋಮಾಂಸ ಭಕ್ಷಣೆಯನ್ನು ನಿಲ್ಲಿಸಿದ್ದು. ಎರಡು: ಇನ್ನೂ ಕೊಂಚ ಮುಂದುವರಿದು ಎಲ್ಲ ಬಗೆಯ ಮಾಂಸಾಹಾರವನ್ನು ಕೈ ಬಿಟ್ಟಿದ್ದು. ‘ನನ್ನ ದೃಷ್ಟಿಯಲ್ಲಿ ಬ್ರಾಹ್ಮಣರು ಗೋಮಾಂಸ ಭಕ್ಷಣೆ ತ್ಯಜಿಸಿ ಗೋವನ್ನು ಪೂಜಿಸಲು ಆರಂಭಿಸಿದ್ದು ದೊಡ್ಡ ರಾಜ ತಂತ್ರ’ ಎನ್ನುವ ಅಂಬೇಡ್ಕರ್, ಬೌದ್ಧರ ಮತ್ತು ತಮ್ಮ ಧರ್ಮಗಳೊಳಗಣ ಸ್ಪರ್ಧೆ ಯಲ್ಲಿ ಬ್ರಾಹ್ಮಣರು, ತಾವು ಬೌದ್ಧರಿಗಿಂತ ಶ್ರೇಷ್ಠವೆಂದು ರುಜುವಾತು ಪಡಿಸುವ ಹಠದಲ್ಲಿ ಈ ಬದಲಾವಣೆಯನ್ನು ಪಡೆದರೆಂದು ವಿವರಿಸುತ್ತಾರೆ.

ವಿಸ್ಮಯವೆಂದರೆ, ಚರಿತ್ರೆಯಲ್ಲಾದ ಈ ಪಲ್ಲಟವನ್ನು ಈಗ ಗೋಪೂಜೆ ಹಾಗೂ ಸಸ್ಯಾಹಾರಗಳ ವಕ್ತಾರನಂತಿರುವ ಬ್ರಾಹ್ಮಣ ಸಂಸ್ಕೃತಿಯು ಮರೆತುಬಿಟ್ಟಿರುವುದು: ಬದ ಲಿಗೆ ಇಂಡಿಯಾದ ಅನೇಕ ಮಾಂಸಾ ಹಾರಿ ಸಂಸ್ಕೃತಿಗಳನ್ನು ಹೀನಾಯವಾಗಿ ನೋಡುವಂತಹ ದೃಷ್ಟಿಕೋನ ಬೆಳೆಯಲು ಕಾರಣವಾಗಿರುವುದು. ಗಳಗನಾಥರ ‘ಮಾಧವ ಕರುಣಾವಿಲಾಸ’ ಕಾದಂಬರಿ ಯಲ್ಲಿ ವಿದ್ಯಾರಣ್ಯನು ಅಸ್ಪಶ್ಯತೆಯನ್ನು ಕುರಿತು ಹೇಳುವುದನ್ನು ಗಮನಿಸಬೇಕು: ‘‘ಗೋಮಾಂಸಾದಿ ನಿಷಿದ್ಧ ಪದಾರ್ಥಗಳ ಭಕ್ಷಣ ಮಾಡುವವರೂ ಆದ ಪಂಚಮರು, ವೈದಿಕರಿಗೆ, ಪ್ರಾಚೀನ ಋಷಿ ಸಮ್ಮತವಾಗಿ ಧಾರ್ಮಿಕ ವ್ಯವಹಾರದಲ್ಲಿ ಸ್ಪರ್ಶರು ಹ್ಯಾಗಾದರು?’’
‘ಚಾರಿತ್ರಿಕ’ ಕಾದಂಬರಿಯೊಂದು ಒಪ್ಪಿಸು ತ್ತಿರುವ ಅಚಾರಿತ್ರಿಕ ನಂಬಿಕೆಯಿದು: ಅಂಬೇ ಡ್ಕರ್ ಪ್ರಕಾರ ಅಸ್ಪಶ್ಯರು ಸೃಷ್ಟಿಯಾಗಿದ್ದು, ಬ್ರಾಹ್ಮಣ ಸಂಸ್ಕೃತಿ ನಿಷೇಧಿಸಿದ ಆಹಾರವನ್ನು ಬಿಡದೆ ಮುಂದುವರಿಸಿದ್ದಕ್ಕೆ. ಅದರಲ್ಲೂ ಸತ್ತ ದನಗಳನ್ನು ಹೊರುವುದು, ಅದರ ಚರ್ಮ ಬಳಸಿ ವೃತ್ತಿ ಮಾಡುವುದು ಯಾರ ಸಾಮಾಜಿಕ ಕರ್ತವ್ಯ ವಾಗಿತ್ತೊ ಅಂತಹವರು ಸತ್ತ ದನದಮಾಂಸ ತಿನ್ನುವುದು ಸಹಜವಾಗಿತ್ತು. ಆ ಜನ ಅಸ್ಪಶ್ಯ ರೆನಿಸಿದರು.ಸ್ವಂತ ಅಭಿರುಚಿಗೆ ಸಂಬಂಧಿಸಿದ ವಿಷಯಕ್ಕೆ ಧಾರ್ಮಿಕ ಲೇಪ ಬಂದೊಡನೆ ‘ಗೋವು’ ಎಂಬ ಪ್ರಾಣಿಯು ಬ್ರಾಹ್ಮಣರೊಡನೆ (ಗೋಬ್ರಾಹ್ಮಣ) ಸಮೀಕರಣಗೊಂಡು ದೈವವಾಗಿ, ಕೋಟ್ಯಂತರ ದೇವತೆಗಳ ವಾಸಸ್ಥಾನವಾಗಿ, ಅದರ ಮಾಂಸ ಸೇವನೆಯು ಘೋರ ಪಾಪವಾಗಿಬಿಟ್ಟಿತು.

ಸನಾತನವಾದಿಗಳಾದ ಗುಪ್ತರ ಕಾಲದಲ್ಲಿ ಈ ನಂಬಿಕೆ ಧರ್ಮಶಾಶ್ತ್ರವಾಯಿತು. ಇಂತಹ ಸನಾತ ಸಂಸ್ಕೃತಿಯ ಅಲೆ ದಕ್ಷಿಣಕ್ಕೆ ಬಂದಾಗ, ತಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ಮದ್ಯ ಮಾಂಸಗಳನ್ನು ಪವಿತ್ರವೆಂದು ಎಣಿಸಿದ್ದ ‘ದ್ರಾವಿಡ’ ಸಂಸ್ಕೃತಿಗಳೂ ಪ್ರಭಾವಗೊಂಡವು.


ಡಾ. ರಹಮತ್ ತರೀಕೆರೆ

http://beta.varthabharathi.net/print/52748/

Mysore: 'Sangeetha Namana’ to Buddha


Mysore, May 16, DHNS :

'Buddhanige Belagana Sangeeta Namana', a 12-hour music programme will be held at Vishwa Maitri Buddha Vihara in the city on May 17 at 6 pm, in connection with Buddha Purnima.

Addressing a news conference here on Monday, H R Mahesh of Sangeeta Jangamara Samsthe said Buddha is the propagator of Manava Dharma and in  his memory, a novel programme is organised.

Introducing history
The purpose of this was to introduce the real history of Buddha to the people. Kalyanasiri Bhantheji will be present.
Participants 
Noted music director of Kannada, Hamsalekha, vice-chancellor of Music University, Dr Hanumanna Nayak Dore, Registrar of Music University, Prof Nilagiri M Talwar, deputy director of Department of Kannada and Culture, A Annegowda, Accounts Officer Venkataraju, Bhanandur Kempaiah, Laxman Hugar, noted folk singer, Bannur Kempamma, Mr Justice H Mohakumar will attend.

After the inauguration, there will be 12-hour non-stop music programme from 7 pm to 7 am on Wednesday.

Six main singers and nine co-singers will present the programme. Of 12 hours, four hours is dedicated to the songs on Buddha and eight hours to Folk songs, theatre songs, bhavageete and vachanas. Plans are afoot to hold 24-hour programme in the next Buddha Purnima.
Girija Mahesh, Lakshmirao, B P Nagaraj, Govindaraswamy and Krishnamurthy Mandya were present.

Tuesday, 17 May 2011

Buddha Purnima Jayanti Hunsur

ಹುಣಸೂರು: ಇಂದು ಬುದ್ಧ ಜಯಂತಿಬುಧವಾರ - ಜೂನ್ -02-2010
ಹುಣಸೂರು, ಜೂ. 1: ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜೂ. 2ರಂದು ಬೆಳಗ್ಗೆ 11ಗಂಟೆಗೆ ಬುದ್ಧ ಜಯಂತಿ ಕಾರ್ಯಕ್ರಮ ನಡೆಯಲಿರುವುದು. ದಸಂಸದ ಜಿಲ್ಲಾ ಸಂಚಾಲಕ ನಿಂಗರಾಜ್ ಮಲ್ಲಾಡಿಯ ಅಧ್ಯಕ್ಷತೆಯಲ್ಲಿ ಹುಣಸೂರು ಶಾಸಕರಾದ ಎಚ್.ಪಿ.ಮಂಜುನಾಥ್ ಕಾರ್ಯಕ್ರಮ ವನ್ನು ಉದ್ಘಾಟಿಸಲಿರುವರು. ಗಾವಡಗರೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮೋದೂರು ಮಹೇಶಾರಾಧ್ಯ ಮುಖ್ಯ ಭಾಷಣಗೈಯಲಿದ್ದಾರೆ ಎಂದು ದಸಂಸ ತಾಲೂಕು ಸಮಿತಿ ಸಂಚಾಲಕ ದೇವೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Buddha-Ambedkar: Art Painting


By Basavaraja Kalegara Yadagir
ಯಾದಗಿರಿ: ತಮ್ಮ ಭಕ್ತಿ, ಗೌರವ ಸಮರ್ಪಿಸಲು ಎಲ್ಲರಿಗೂ ಒಂದೊಂದು ದಾರಿ. ಕೆಲವರು ಕೈಮುಗಿದು ಶರಣು ಎಂದರೆ, ಇನ್ನು ಕೆಲವರು ಅವರ ಸಂದೇಶಗಳನ್ನು ಹಾಡಿ ಹೊಗಳುತ್ತಾರೆ. ಹಾಗೆಯೇ ಎಲ್ಲರಲ್ಲಿಯೂ ವಿಶಿಷ್ಟವಾದುದನ್ನು ಮಾಡುವ ಮೂಲಕ ಮಹನೀಯರಿಗೆ ಗೌರವ ಸಮರ್ಪಿಸುವ ಅಪರೂಪದ ಕೆಲಸ ಮಾಡಿದವರು ಚಿತ್ರ ಕಲಾವಿದ ಬಸವರಾಜ ಕಲೆಗಾರ.

ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬುದ್ಧ ಜಯಂತಿ ಅಂಗವಾಗಿ ಕಲಾವಿದ ಬಸವರಾಜ ಕಲೆಗಾರ ತಮ್ಮ ಕಲಾಕೃತಿಗಳ ಮೂಲಕ ವಿಶಿಷ್ಟವಾಗಿ ಬುದ್ಧ ಮತ್ತು ಡಾ. ಅಂಬೇಡ್ಕರ್ ಅವರನ್ನು ಚಿತ್ರಿಸುವ ಮೂಲಕ ಅಂಬೇಡ್ಕರ್‌ರಿಗೆ ನಮನ ಸಲ್ಲಿಸಿದ್ದಾರೆ. ಡಾ. ಅಂಬೇಡ್ಕರ್ ಜಯಂತಿ ಅಂಗವಾಗಿಯೇ ರಚಿಸಿರುವ ಈ ವಿಶಿಷ್ಟ ಕಲಾಕೃತಿಗಳು ಜನರ ಗಮನ ಸೆಳೆದಿವೆ. ಅಂಬೇಡ್ಕರ್‌ರ ಭಾವಚಿತ್ರ, ಬುದ್ಧನ ಲೀಲಾಮೃತ, ಸಾವನ್ನು ಗೆದ್ದ ಬುದ್ಧ, ಬುದ್ಧನ ಸೃಷ್ಟಿ, ಬುದ್ಧ ಮತ್ತು ಮಾಯಾದೇವಿ, ಬುದ್ಧನ ಹೃದಯ ದೊಳಗೆ ಅಂಬೇಡ್ಕರ್ ಹೀಗೆ ಹತ್ತಾರು ಚಿತ್ರಗಳನ್ನು ತಮ್ಮ ಕುಂಚದಲ್ಲಿ ಅರಳಿಸಿದ್ದಾರೆ.

ಅಂಬೇಡ್ಕರ್‌ರ ಭಾವಚಿತ್ರವು ವಿಶೇಷವಾಗಿದೆ. ಹಿಂದೆ ಬುದ್ಧನ ಚಿತ್ರಗಳಿದ್ದು, ಎಲ್ಲರೂ ಒಂದೇ ಎನ್ನುವ ಸಂಕೇತವಾಗಿ ಡಾ. ಅಂಬೇಡ್ಕರ್‌ರ ಎದೆಯಲ್ಲಿ ಕೈ ಚಿತ್ರವನ್ನು ಬಿಡಿಸಿದ್ದಾರೆ. ಬುದ್ಧನು ತಪಸ್ಸುಗೈದ ಇನ್ನೊಂದು ಚಿತ್ರದಲ್ಲಿ ಮೇಲೆ ಚಂದ್ರನಿದ್ದರೆ, ಗುಲಾಬಿ ಹೂವುಗಳು ಕಾಣುತ್ತವೆ. ಮೂರನೇ ಚಿತ್ರದಲ್ಲಿ ಸಾವನ್ನು ಗೆದ್ದು ಬುದ್ಧನನ್ನು ಬಿಡಿಸಿದ್ದು, ಮಾನವನ ತಲೆಬುರುಡೆ, ಧ್ಯಾನ ಮಗ್ನನಾದ ಬುದ್ಧನನ್ನು ಚಿತ್ರಿಕರಿಸಿದ್ದಾರೆ.

ಬುದ್ಧನ ಸೃಷ್ಟಿಯನ್ನು ತೋರಿ ಸುವ     ಇನ್ನೊಂದು ಚಿತ್ರದಲ್ಲಿ ಎಲೆ ಯಾ ಕಾರದೊಳಗೆ ಬುದ್ಧ ನನ್ನು ಬಿಡಿಸಿದ್ದು, ಅರಳಿದ ಹೂವುಗಳು, ನವಿಲಿನ ಚಿತ್ರ ಗಳಿವೆ. ತಾಯಿ ಮಾಯಾದೇವಿಯು ತನ್ನ ಮಗ ಬುದ್ಧನ ಯಶಸ್ಸನ್ನು ಸಂತೋಷದಿಂದ ಆಲಿಸುವ ಕ್ಷಣ ವನ್ನು ಬಣ್ಣಗಳ ಮೂಲಕ ಬಿಡಿಸಿ ತೋರಿಸಿದ್ದಾರೆ.

ಅದ್ಭುತವಾದ ಹಲವಾರು ಕಲಾ ಕೃತಿಗಳ ಮೂಲಕ ಗಮನ ಸೆಳೆದಿರುವ ಬಸವರಾಜ ಕಲೆಗಾರ ಶಹಾಪುರ ತಾಲ್ಲೂಕಿನ ಕೊಂಕಲ್‌ನವರು. ಇದೀಗ ಹಂಪಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅವರು, ವಿಶೇಷ ಸಂದರ್ಭಗಳಲ್ಲಿ ಅದಕ್ಕೆ ತಕ್ಕಂತೆ ಚಿತ್ರಗಳನ್ನು ಬಿಡಿಸುವುದರಲ್ಲಿ ಸಿದ್ಧಹಸ್ತರು. ಇತ್ತೀಚೆಗಷ್ಟೇ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ ದಲ್ಲಿಯೂ ಯಾದಗಿರಿ ಜಿಲ್ಲೆಯ ವೈಶಿಷ್ಟ್ಯವನ್ನು ಸಾರುವ ಕಲಾಕೃತಿ ಗಳನ್ನು ತಯಾರಿಸುವಲ್ಲಿಯೂ ತಮ್ಮ ಕೊಡೆಗೆ ನೀಡಿದ್ದಾರೆ

ಬುದ್ಧ ಜಯಂತಿ: ಸಂಭ್ರಮದ ಮೆರವಣಿಗೆ


ಪ್ರಜಾವಾಣಿ ವಾರ್ತೆ
ಕೋಲಾರ: 2554ನೇ ಬುದ್ಧ ಜಯಂತಿ ಪ್ರಯುಕ್ತ ಭಗವಾನ್ ಬುದ್ಧ ಜಯಂತ್ಯುತ್ಸವ ಸಮಿತಿಯು ನಗರದಲ್ಲಿ ಗುರುವಾರ ಬುದ್ಧನ ಭಾವಚಿತ್ರದ ಮೆರವಣಿಗೆಯನ್ನು ಹಮ್ಮಿಕೊಂಡಿತ್ತು. ಸಮಿತಿಯ ಪ್ರಮುಖರು, ಕಾರ್ಯಕರ್ತರು ಬುದ್ಧನ ಭಾವಚಿತ್ರವಿದ್ದ ಬ್ಯಾಡ್ಜ್‌ಗಳನ್ನು ಧರಿಸಿ ಭಾಗವಹಿಸಿದರು.
ನಗರದ ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಶುರುವಾದ ಮೆರವಣಿಗೆ ಬಾಲಕರ ಸರ್ಕಾರಿ ಕಾಲೇಜು ಮೂಲಕ, ದೊಡ್ಡಪೇಟೆ ವೃತ್ತ, ಎಂ.ಜಿ. ರಸ್ತೆ ಮೂಲಕ ಕೆಇಬಿ ಸಮುದಾಯ ಭವನದಲ್ಲಿ ಕೊನೆಗೊಂಡಿತು.ಮೆರವಣಿಗೆಯುದ್ದಕ್ಕೂ ಕಾರ್ಯಕರ್ತರು ಬುದ್ಧಂ ಶರಣ ಗಚ್ಛಾಮಿ ಪ್ರಾರ್ಥನೆಯನ್ನು ಹಾಡಿದರು.
ಈ ಮೆರವಣಿಗೆ ಆಡಂಬರವಿಲ್ಲದೆ, ಸರಳರೂಪದಲ್ಲಿದ್ದು ವಿಶೇಷವಾಗಿ ನಗರದ ಜನರ ಗಮನ ಸೆಳೆಯಿತು. ಮೆರವಣಿಗೆಯ ದಾರಿಯುದ್ದಕ್ಕೂ ಜನ ಮೆಚ್ಚುಗೆಯಿಂದ ವೀಕ್ಷಿಸಿದರು. ಜನನಿಬಿಡ ಸ್ಥಳವಾದ ದೊಡ್ಡಪೇಟೆ ರಸ್ತೆಯಲ್ಲಿ ಮೆರವಣಿಗೆಯ ಪ್ರಯುಕ್ತ ಪ್ರಸ್ತುತಪಡಿಸಿದ ಹಾಡುಗಳು ಇಂಪಾಗಿ ಕೇಳಿಬಂದವು.
ಸಮತಾ ಸೈನಿಕ ದಳದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಐಪಲ್ಲಿ ನಾರಾಯಣಸ್ವಾಮಿ, ಟಿ.ವಿಜಯಕುಮಾರ್, ಫಾಲ್ಗುಣ, ಮಂಜುನಾಥ, ಮುನಿವೆಂಕಟಪ್ಪ, ಜೆ.ಸತ್ಯರಾಜ್, ಬಾಂಸೆಫ್ ನಾರಾಯಣಪ್ಪ, ಬಂಗವಾದಿ ನಾರಾಯಣಪ್ಪ ಸೇರಿದಂತೆ ಹಲವು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಂತರ ಕೆಇಬಿ 

Buddha Purnima Jayanti Gulbarga

Buddha jayanti purnima mangalore Veeryasheela Bhantheji

BH_0

BH_1

BH_2
united buddhist organisation bangalore Veeryasheela Bhante



Mangalore, May 17: The teachings of Gautama Buddha, who upheld the social justice and equality, are relevant even today, said Prof T C Shivashankar Murthy, Vice Chancellor of Mangalore University.

He was speaking as the chief guest at the 2555th holy birth anniversary of Buddha organised by Dakshina Kannada district Buddha Maha Sabha, at NGO Hall here on Tuesday afternoon.

Murthy said even though a man called Buddha lived and died over two and a half thousand years ago, his messages and teaches are universal and eternal.

Opining that the increasing gap between rich and poor will only lead the whole humanity to chaos, he pointed out that Buddha had called upon the affluent to think about poor. 

“The concept of ‘Buddha conscious’ can reduce the human greed,” he added. 

Veeryasheela Bhantheji, President of United Buddhist Organisation, Bangalore, in his inaugural address stated that Buddhism is not a merely religion, but a complete way of life, which leads people towards eternal bliss.

He pointed out that Buddhism is in the forefront in 28 countries of the world and extending its strength in many other countries, as a large number of people, including Indians are inclining towards it. 

S R Laxman, district president of the Sabha, presided over the programme. Dr. Uday Rao, Director of TTC insurance company and Kanthappa Alangar, Secretary were present among others. 

‘ಬೌದ್ಧ ತಾತ್ವಿಕತೆಯನ್ನು ಅರಿಯಲು ಯಾರ ಸಹಾಯವೂ ಬೇಕಿಲ್ಲ’



ತುಮಕೂರು, ಮೇ 17: ಮನುಷ್ಯನ ಉನ್ನತಿಗೆ ಬೇಕಾದ ಸರಳ ಹಾಗೂ ನಿಸರ್ಗ ತರ್ಕವನ್ನು ಅನ್ವೇಷಿಸಿದ ಮೊದಲ ವ್ಯಕ್ತಿಯೆಂದರೆ ಭಗವಾನ್ ಬುದ್ಧ. ಬೌದ್ಧ ತಾತ್ವಿಕತೆಯನ್ನು ಅರಿಯಲು ಯಾರೊಬ್ಬರ ಸಹಾಯವೂ ಬೇಕಿಲ್ಲ ಎಂದು ಸಾಹಿತಿ ಹಾಗೂ ಉಪನ್ಯಾಸಕ ನಟರಾಜ್ ಬೂದಾಳ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಉಪ್ಪಾರಹಳ್ಳಿಯಲ್ಲಿರುವ ಸಾಹಿತಿ ಕೆ.ಬಿ.ಸಿದ್ದಯ್ಯರ ನಿವಾಸದಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ಏರ್ಪಡಿಸಿದ್ದ ಕವಿಗೋಷ್ಠಿ ಕಾರ್ಯ ಕ್ರಮದಲ್ಲಿ ಬುದ್ಧನ ಕುರಿತು ಮಾತನಾಡುತ್ತಿದ್ದ ಅವರು, ಸಾಮಾನ್ಯ ಬದುಕಿನ ಪ್ರಶ್ನೆಯೇ ಬೌದ್ಧ ತಾತ್ವಿಕತೆಯ ಹುಟ್ಟಿಗೆ ಕಾರಣ. ಭಂತೆ ಮಿಲಿಂದ ಮತ್ತು ನಾಗಸೇನನ ನಡುವಿನ ಪ್ರಶ್ನಾವಳಿಯೇ ಇಡೀ ಮನುಜರ ಬದುಕನ್ನು ಅವಲಂಬಿಸಿದೆ. ಇದನ್ನು ಪ್ರತಿಯೊಬ್ಬ ವ್ಯಕ್ತಿಯೂ ಸರಳವಾಗಿ ಅರ್ಥ ಮಾಡಿಕೊಳ್ಳಬಹುದು. ಒಂದೇ ಮಾತಿನಲ್ಲಿ ಹೇಳುವುದಾದರೆ ಭ್ರಷ್ಟತೆಯನ್ನು ಅರಿತು ನಡೆದರೆ ಅದೇ ಭೌದ್ದ ತಾತ್ವಿಕತೆಯಾಗುತ್ತದೆ ಎಂದರು.

ಭೌದ್ಧ ಧರ್ಮ ಮತ್ತು ಅದರ ತತ್ವಗಳು ಹಾಗೂ ಇತರ ಪರಂಪರೆಗಳ ಹೆಸರಿನಲ್ಲಿ ದಿಕ್ಕು ತಪ್ಪಿಸುವ ಹಲವಾರು ಮಂದಿ ಇಂದು ನಮ್ಮ ನಡುವೆ ಇದ್ದಾರೆ. ಅನಾದಿ ಕಾಲದಿಂದಲೂ ಈ ಕಾರ್ಯ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಲೇ ಬಂದಿದೆ. ಇದನ್ನು ಮೆಟ್ಟಿ ನಿಲ್ಲಬೇಕಾದರೆ ಮೊದಲು ನಾವು ಭೌದ್ಧ ಧರ್ಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಇದನ್ನು ಡಾ.ಬಿ.ಆರ್.ಅಂಬೇಡ್ಕರ್ ತಮ್ಮ 12 ವ್ಯಾಲೂಮ್‌ಗಳ ಮೂಲಕ ಜನರಿಗೆ ತಿಳಿಯುವಂತೆ ವಿವರಿಸಿದ್ದಾರೆ. ಅವರ ಪ್ರಕಾರ ಸಾಮಾನ್ಯ ವಿವೇಕವೇ ಭೌದ್ಧ ತಾತ್ವಿಕತೆ. ಇದನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ನಟರಾಜ್ ಬೂದಾಳ್ ನುಡಿದರು.

ಕವಿಗೋಷ್ಠಿ ಉದ್ಘಾಟಿಸಿದ ಕವಯತ್ರಿ ಡಿ.ಬಿ.ರಜಿಯಾ ಮಾತನಾಡಿ, ಭಗವಾನ್ ಬುದ್ಧ ಸಮಾಜವನ್ನು ಅರಿಯಲು ನಮಗೆ ತೋರಿಸಿದ ವಿವೇಕ ಎಂಬ ಅಸ್ತ್ರಕ್ಕೆ ಇಂದು ಮಂಕು ಕವಿದಿದೆ.ಇದರಿಂದ ಹೊರಬರುವ ಅಗತ್ಯವಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ಅನ್ನಪೂರ್ಣ ವೆಂಕಟನಂಜಪ್ಪ ಮಾತನಾಡಿ, ಹಣ, ಅಧಿಕಾರವೆಂಬ ಪ್ರಬಲ ಶಕ್ತಿಗಳು ಇಂದು ನಮ್ಮನ್ನು ಆಳುತ್ತಿದ್ದು, ಚಿಂತಕರು, ಪ್ರಗತಿಶೀಲರೆನಿಸಿಕೊಂಡ ಬುದ್ಧಿಜೀವಿಗಳು ಇಂದು ಅಧಿಕಾರ ಇರುವವರ ಬೆಂಬಲಕ್ಕೆ ನಿಂತಿರುವುದನ್ನು ನೋಡಿದರೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳ ಬೇಕಾಗುತ್ತದೆ. ಅಧಿಕಾರದ ಆಸೆಗೆ ಭ್ರಷ್ಟತೆಯಲ್ಲಿ ತೊಡಗಿರುವವರನ್ನೇ ಇಂದ್ರ, ಚಂದ್ರರೆಂದು ಬಸವಣ್ಣನಂತಹ ಕಾಂತ್ರಿಕಾರಿ ವ್ಯಕ್ತಿಗಳಿಗೆ ಹೋಲಿಸಿ ಮಾತನಾಡುತ್ತಿರುವುದನ್ನು ನೋಡಿದರೆ ನಾವು ಯಾವ ಹಂತ ತಲುಪಿದ್ದೇವೆ ಎಂಬುದು ಅರ್ಥವಾಗುತ್ತದೆ. ಧಾರ್ಮಿಕ ಭಯೋತ್ಪಾಧನೆಯನ್ನು ತಡೆಯಲು ನಾವೆಲ್ಲರೂ ಮುಂದಾಗಬೇಕಿದೆ ಎಂದರು.

ಸಂತ ಶಿಶುನಾಳ ಷರೀಫರ ಹಾಡುಗಳ ಮೂಲಕವೇ ಜನಪ್ರಿಯರಾಗಿರುವ ನರಸಿಂಹಮೂರ್ತಿ ಷರೀಫರ ತತ್ವಪದಗಳನ್ನು ಹಾಡುವ ಮೂಲಕ ರಂಜಿಸಿದರು. ಪ್ರೊ. ಸಿ.ಎಚ್.ಮರಿದೇವರು, ಡಾ.ರವಿಕುಮಾರ್ ನೀ.ಹ., ಜಿ.ಇಂದ್ರಕುಮಾರ್, ಉಗಮ ಶ್ರೀನಿವಾಸ್, ಪದ್ಮಕೃಷ್ಣಮೂರ್ತಿ ಸೇರಿದಂತೆ ಹತ್ತಾರು ಮಂದಿ ಕವಿಗಳು ತಮ್ಮ ಕವಿತೆಗಳನ್ನು ವಾಚಿಸಿದರು.

ಬುದ್ಧ ಪ್ರಜ್ಞೆ ಜಾಗೃತಗೊಳ್ಳಲಿ: ಪ್ರೊ.ಶಿವಶಂಕರ್ಬುಧವಾರ

,
ಬುದ್ಧ ಪ್ರಜ್ಞೆ ಜಾಗೃತಗೊಳ್ಳಲಿ: ಪ್ರೊ.ಶಿವಶಂಕರ್

ಬುದ್ಧ ಪ್ರಜ್ಞೆ ಜಾಗೃತಗೊಳ್ಳಲಿ: ಪ್ರೊ.ಶಿವಶಂಕರ್ಬುಧವಾರ - ಮೇ -18-2011

ಬುದ್ಧ ಜಯಂತಿ ಕಾರ್ಯಕ್ರಮ
ಮಂಗಳೂರು, ಮೇ 17: ಜಗತ್ತಿಗೆ ಸಾರ್ವಕಾಲಿಕ ವಾದ ಸಂದೇಶ ನೀಡಿದ ಬುದ್ಧನ ಆದರ್ಶಗಳು ಇಂದಿಗೂ ಪ್ರಸ್ತುತ. ಈ ನಿಟ್ಟಿನಲ್ಲಿ ಬುದ್ಧ ಪ್ರಜ್ಞೆ ಜಾಗೃತಗೊಳ್ಳಲಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಟಿ.ಸಿ. ಶಿವಶಂಕರ ಮೂರ್ತಿ ತಿಳಿಸಿದರು.

ಅವರು ಇಂದು ದಕ್ಷಿಣ ಕನ್ನಡ ಜಿಲ್ಲಾ ಬೌದ್ಧ ಮಹಾಸಭಾ ಮಂಗಳೂರು ಇದರ ವತಿಯಿಂದ ನಗರದ ಎನ್‌ಜಿಓ ಸಭಾಂಗಣದಲ್ಲಿ ಹಮ್ಮಿ ಕೊಂಡ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಈ ನಿಸರ್ಗದ ಸಂಪತ್ತು ಎಲ್ಲರಿಗೂ ಸೇರಿದೆ. ಅದನ್ನು ಎಲ್ಲರೂ ಸಮಾನವಾಗಿ ಬಳಸಿಕೊಳ್ಳ ಬೇಕು ಎನ್ನುವುದನ್ನು ಬುದ್ಧ 2500 ವರ್ಷಗಳ ಹಿಂದೆಯೇ ತಿಳಿಸಿದ್ದರು. ಆ ಸಂದೇಶ ಇಂದಿಗೂ ಪ್ರಸ್ತುತ. ನಮ್ಮ ಸಮಾಜದಲ್ಲಿ ಹಲವಾರು ಮಂದಿ ಐಷಾರಾಮಿಯಾಗಿ ಬದುಕುತ್ತಿದ್ದಾರೆ. ಬಹಳಷ್ಟು ಮಂದಿ ಬಡತನದ ಬೇಗೆಯಲ್ಲಿದ್ದಾರೆ. ಇಂತಹ ಅಸಮಾನತೆಯನ್ನು ಹೋಗಲಾಡಿಸಬೇಕಾದರೆ ಬುದ್ಧನ ಆದರ್ಶವಾದ, ಸಮಾನತೆ ಸಮಾಜದ ಎಲ್ಲ ಹಂತಗಳಲ್ಲಿ ಕಂಡು ಬರಬೇಕು ಎಂದು ಶಿವಶಂಕರ ಮೂರ್ತಿ ತಿಳಿಸಿದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರಿನ ವೀರ್ಯಶೀಲ ಭಂತೇಜಿ ಮಾತನಾಡಿ, ಬೌದ್ಧ ಧರ್ಮ ನಿಜವಾದ ಅರ್ಥದಲ್ಲಿ ಒಂದು ಧರ್ಮವಲ್ಲ. ಒಂದು ಜೀವನ ಮಾರ್ಗ. ಮಾನವನ ಜೀವಿತ ಕಾಲದಲ್ಲಿ ಒದಗಿ ಬರುವ ನಾನಾ ವಿಧವಾದ ದು:ಖಗಳನ್ನು ದೂರ ಮಾಡಲು ಪಂಚಶೀಲ, ಅಷ್ಟಾಂಗ ಮಾರ್ಗಗಳಲ್ಲಿ ಸಾಗಿ ಸುಖ, ಶಾಂತಿ, ನೆಮ್ಮದಿಯನ್ನು ಪಡೆಯುವ ವಿಧಾನವನ್ನು ಇದು ಬೋಧಿಸುತ್ತದೆ. ಸಕಲ ಜೀವಿಗಳ ಸುಖ, ಶಾಂತಿ, ನೆಮ್ಮದಿಯನ್ನು ಬೌದ್ಧ ಧರ್ಮ ಬಯಸುತ್ತದೆ ಎಂದರು.

ಸಮಾರಂಭದಲ್ಲಿ ಬುದ್ಧ ವಂದನೆ, ದಮ್ಮೋಪದೇಶ, 207 ಕುಟುಂಬದ 775 ಜನರಿಗೆ ಆರೋಗ್ಯ ಸ್ವಾಸ್ಥ ವಿಮಾ ಯೋಜನೆ ಪಾಲಿಸಿ, ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಎಸ್.ಆರ್. ಲಕ್ಷ್ಮಣ, ಯುನೈಟೆಡ್ ಇನ್ಶೂರೆನ್ಸ್ ಸಂಸ್ಥೆಯ ಉದಯ, ಸಂಘಟನೆಯ ಪ್ರಧಾನ ಕಾರ್ಯ ದರ್ಶಿ ಕಾಂತಪ್ಪ ಅಲಂಗಾರ್ ಉಪಸ್ಥಿತರಿದ್ದರು. ದೇವಪ್ಪ ಬೋಧ್ ಕಾರ್ಯಕ್ರಮ ನಿರೂಪಿಸಿ, ಶಶಿಧರ ಜೋಕಟ್ಟೆ ವಂದಿಸಿದರು

html