Pages

Wednesday, 18 May 2011

ಅಂಬೇಡ್ಕರರ ರಾಜಕೀಯ ನಿಲುವಿನ ಬಗ್ಗೆ ತಪ್ಪಭಿಪ್ರಾಯ ಸಲ್ಲ!


ಹಿರಿಯರಾದ, ಶಾಸಕರೂ ಆದ ಮಾಜಿ ಕೇಂದ್ರ ಸಚಿವ ಶ್ರೀ ವಿ. ಶ್ರೀನಿವಾಸಪ್ರಸಾದ್ರವರು ಅಂಬೇಡ್ಕರರ ಬಗ್ಗೆ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಜಾತೀಯತೆ, ರಾಜಕೀಯದ ಸೋಂಕಿಲ್ಲದ ನಾಯಕ ಅಂಬೇಡ್ಕರ್ ಎಂದಿದ್ದಾರೆ. ಈ ಹಿನ್ನಿಲೆಯಲ್ಲಿ ಒಂದು ಪ್ರತಿಕ್ರಿಯೆ.

ನಿಜಕ್ಕೂ ಪ್ರಸಾದರ ಈ ಹೇಳಿಕೆ ದುರದೃಷ್ಟಕರ. ಯಾಕೆಂದರೆ ಯಾವ ಅಂಬೇಡ್ಕರ್ ತನ್ನ ಜೀವನದುದ್ದಕ್ಕೂ ದಲಿತರ ಪ್ರತಿಯೊಂದು ಸಮಸ್ಯೆಗಳಿಗೂ ರಾಜಕೀಯ ಅಧಿಕಾರ ಪಡೆಯುವುದರಲ್ಲಿಯೇ ಪರಿಹಾರವಿದೆಯೆಂದು ಪ್ರತಿಪಾದಿಸುತ್ತಿದ್ದರೋ, ರಾಜಕೀಯವನ್ನು ತನ್ನ ಜೀವನದ ಉಸಿರಾಗಿ ಹೊಂದಿದ್ದರೋ ಅಂತಹ ಅಂಬೇಡ್ಕರರನ್ನು ರಾಜಕೀಯದ ಸೋಂಕಿಲ್ಲದವರೆನ್ನುವುದು ಅದೆಷ್ಟು ಸರಿ? ಉದಾಹರಣೆಗೆ ಹೇಳುವುದಾದರೆ 1948 ಏಪ್ರಿಲ್ 25 ರ ಭಾನುವಾರ ಲಕ್ನೋ ನಗರದಲ್ಲಿ ಪರಿಶಿಷ್ಟ ಜಾತಿಗಳ ಒಕ್ಕೂಟವನ್ನುದ್ದೇಶಿಸಿ ಮಾತನಾಡುತ್ತಾ ಅಂಬೇಡ್ಕರ್ರವರು ಸಾಮಾಜಿಕವಾಗಿ ಆಭಿವೃದ್ಧಿ ಹೊಂದಲು ರಾಜಕೀಯ ಅಧಿಕಾರ ಪಡೆಯುವುದು ಅತ್ಯಗತ್ಯವಾಗಿದೆ. ಆದ್ದರಿಂದ ರಾಜಕೀಯ ಅಧಿಕಾರ ಪಡೆಯುವುದರ ಮೂಲಕ ಪರಿಶಿಷ್ಟಜಾತಿಯ ಜನರು ತಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎನ್ನುತ್ತಾರೆ. ಮತ್ತೊಂದೆಡೆ 1942 ಆಗಸ್ಟ್ 23 ರಂದು ದೆಹಲಿಯಲ್ಲಿ ಮಾತನಾಡುತ್ತಾ ಅವರು ರಾಜ್ಯದ ಆಡಳಿತದ ಬೀಗದ ಕೈಯನ್ನು ನಿಮ್ಮ ಕೈಗೆ ತರಲು ನಾನು ಯತ್ನಿಸುತ್ತಿದ್ದೇನೆ. ನೀವು ಇತರರ ಜೊತೆ ಸಮಾನತೆಯ ಅಧಾರದ ಮೇಲೆ ಆ ರಾಜಕೀಯ ಅಧಿಕಾರವನ್ನು ಹಂಚಿಕೊಂಡು ಮುನ್ನುಗ್ಗಬೇಕು ಎಂದು ಕರೆ ನೀಡುತ್ತಾರೆ.



ಅಂದಹಾಗೆ ಅಂಬೇಡ್ಕರರ ಬಗ್ಗೆ ಅವರ ರಾಜಕೀಯ ಒಲವು ನಿಲುವುಗಳ ಬಗ್ಗೆ ಇಂತಹ ಒಂದಲ್ಲ ಎರಡಲ್ಲ ಒಂದು ನೂರು ಉದಾಹರಣೆ ಕೊಡಬಹುದು. ಹಾಗೆಯೇ ರಾಜಕೀಯ ಎಂದರೆ ರಾಜಕೀಯ ಪಕ್ಷಗಳನ್ನು ಸ್ಥಾಪಿಸಬೇಕಲ್ಲವೇ? ಅಂಬೇಡ್ಕರರು ತಮ್ಮ ಜೀವಿತಾವಧಿಯಲ್ಲಿ ಸ್ಥಾಪಿಸಿದ್ದು ಬರೆ ಒಂದಲ್ಲ! ಸ್ವತಂತ್ರ ಕಾಮರ್ಿಕ ಪಕ್ಷ, ಪರಿಶಿಷ್ಟ ಜಾತಿಗಳ ಒಕ್ಕೂಟ, ರಿಪಬ್ಲಿಕನ್ ಪಾಟರ್ಿ ಆಫ್ ಇಂಡಿಯಾ ಎಂಬ ಒಟ್ಟು ಮೂರು ರಾಜಕೀಯ ಪಕ್ಷಗಳನ್ನು! ಸ್ವತಂತ್ರ ಕಾಮರ್ಿಕ ಪಕ್ಷದಿಂದ ಮುಂಬೈ ಲೆಜಿಸ್ಲೇಟಿವ್ ಅಸೆಂಬ್ಲಿಗೆ ಸ್ಪಧರ್ಿಸಿ 17 ಸ್ಥಾನಗಳನ್ನು ಗೆಲ್ಲುವ ಅವರು, ಬ್ರಿಟಿಷ್ ಸಕರ್ಾರದಲ್ಲಿ ನಾಲ್ಕು ವರ್ಷ, ಸ್ವತಂತ್ರ ಬಂದಾಗ ನಾಲ್ಕು ವರ್ಷ ಒಟ್ಟು 8 ವರ್ಷ ಕೇಂದ್ರದಲ್ಲಿ ಮಂತ್ರಿಯಾಗಿಯೂ ಸೇವೆ ಸಲ್ಲಿಸುತ್ತಾರೆ. ಎರಡು ಬಾರಿ ಲೋಕಸಭಾ ಚುನಾವಣೆಗೆ ಸ್ಪಧರ್ಿಸಿ ಕಾಂಗ್ರೆಸ್ ಅಭ್ಯಥರ್ಿಗಳ ಎದುರು ಸೋಲುವ ಅವರು ಕಡೆಗೆ ಮುಂಬೈ ಅಸೆಂಬ್ಲಿಯಿಂದ ಪಕ್ಷೇತರರ ಸಹಾಯದಿಂದ ರಾಜ್ಯಸಭೆಗೆ ಆಯ್ಕೆಗೆ ರಾಜ್ಯಸಭಾ ಸದಸ್ಯರೂ ಆಗುತ್ತಾರೆ! ಇಷ್ಟೆಲ್ಲಾ ಇರುವಾಗ ಅವರಿಗೆ ರಾಜಕೀಯದ ಸೋಂಕಿಲ್ಲ ಎನ್ನುವುದು ಅದೆಷ್ಟು ಸರಿ? ಯಾಕೆ ಅಂಬೇಡ್ಕರ್ರವರು ಕಾಂಗ್ರೆಸ್ ಪಕ್ಷವನ್ನು ಸೇರಿದ್ದರೆ ಮಾತ್ರ ಅವರು ರಾಜಕೀಯ ವ್ಯಕ್ತಿಯಾಗುತ್ತಿದ್ದರೆ? ಕಾಂಗ್ರೆಸ್ಸನ್ನು ತಮ್ಮ ಜೀವನದುದ್ದಕ್ಕೂ ವಿರೋಧಿಸಿ ಸ್ವಂತ ಶಕ್ತಿಯ ಮೇಲೆ ಆಡಳಿತದ ಚುಕ್ಕಾಣಿ ಹಿಡಿಯಲು ಯತ್ನಿಸಿದ್ದು ರಾಜಕೀಯವಾಗುವುದಿಲ್ಲವೇ? ಬೇಡ, ಅಂಬೇಡ್ಕರರ ಸ್ವಾಭಿಮಾನಿ ರಾಜಕೀಯದ ಬಗ್ಗೆ ಹಗುರವಾಗಿ ಮಾತನಾಡುವುದು ಬೇಡ. ಹಾಗೇನಾದರೂ ಮಾತನಾಡಿದರೆ ಅದು ನಾವು ಅವರ ವ್ಯಕ್ತಿತ್ವಕ್ಕೆ ಎಸಗುವ ಅಪಚಾರವಲ್ಲದೆ ಬೇರೇನಲ್ಲ. 
Ho Ba Raghothama
ರಘೋತ್ತಮ ಹೊ.ಬ
ಚಾಮರಾಜನಗರ_571313

No comments:

Post a Comment

html