ಬಹುಶಃ ಅದು 1917 ರ ಸಮಯ ಬಾಬಾಸಾಹೇಬ್ ಅಂಬೇಡ್ಕರರು ಲಂಡನ್ನಿನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಡಿ.ಎಸ್.ಸಿ(ಡಾಕ್ಟರ್ ಆಫ್ ಸೈನ್ಸ್) ಪದವಿ ಪಡೆದು ಹಿಂದುರಿಗಿದ ವರ್ಷ. ಮೊದಲೆ ಆದ ಒಪ್ಪಂದದ ಹಾಗೆ ಅವರು ಬರೋಡ ಮಹಾರಾಜರ ಆಸ್ಥಾನದಲ್ಲಿ ಅಧಿಕಾರಿಯಾಗಿ ಸೇವೆಗೆ ಸೇರಿದರು. ಆದರೆ ಆ ಸಂಧರ್ಭದಲ್ಲಿ ಬರೋಡದಲ್ಲಿ ಉಳಿದುಕೊಳ್ಳಲು ಅವರಿಗೆ ವಸತಿ ಸಿಕ್ಕಿತೇ? ದಿನಾಂಕ 22-4-2011 ರಂದು ಪ್ರಕಟವಾದ ಬಸವರಾಜ ಹುಡೇದಗಡ್ಡಿಯವರ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಆ ಘಟನೆಯನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ.
ಸ್ವತಃ ಅಂಬೇಡ್ಕರರ ಮಾತುಗಳನ್ನೇ ಇಲ್ಲಿ ಸಂಕ್ಷಿಪ್ತವಾಗಿ ಹೇಳುವುದಾದರೆ ಬರೋಡಕ್ಕೆ ನಾನು ಬಂದಾಗ ನನಗೆ ಉಳಿದು ಕೊಳ್ಳಲು ಎಲ್ಲಿಯೂ ಮನೆ ಸಿಗಲಿಲ್ಲ. ಕಡೆಗೆ ನಾನೊಂದು ಧರ್ಮ ಛತ್ರದಲ್ಲಿ ಅದೂ ನಾನು ಪಾಸರ್ಿ ಧರ್ಮಕ್ಕೆ ಸೇರಿದವನು, ನನ್ನ ಹೆಸರು ಅಡಲ್ಜಿ ಸೊರಾಬ್ಜಿಎಂದು ಸುಳ್ಳು ಹೇಳಿ ಉಳಿದುಕೊಂಡೆ. ಆದರೆ ಸತ್ಯ ಗೊತ್ತಾಗಲೆ ಬೇಕಲ್ಲವೇ? ಯಾಕೆಂದರೆ ಮಹಾರಾಜರ ಆಸ್ಥಾನದಲ್ಲಿ ಮಹಾರ್ ಹುಡುಗನೊಬ್ಬ ಅಧಿಕಾರಿಯಾಗಿ ಕೆಲಸಕ್ಕೆ ಸೇರಿದ್ದಾನೆ ಎಂಬ ಸುದ್ದಿ ಅದಾಗಲೇ ಕಾಡ್ಗಿಚ್ಚಿನಂತೆ ಹರಡಿತ್ತು. ಅದೂ ನಾನು ಪಾಸರ್ಿ ವಸತಿ ಗೃಹವೊಂದರಲ್ಲಿ ಅನುಮಾನಾಸ್ಪದವಾಗಿ ಉಳಿದುಕೊಂಡಿರುವ ವಿಷಯ ಕೆಲವರಿಗೆ ತಿಳಿದು ಹೋಗಿತ್ತು. ಈ ಕಾರಣಕ್ಕಾಗಿ ನಾನು ಅಲ್ಲಿ ಉಳಿದುಕೊಂಡಿದ್ದ ಎರಡನೇ ದಿನ ನಾನು ತಿಂಡಿ ತಿಂದು ಕಛೇರಿಗೆ ತೆರಳುತ್ತಿದ್ದಂತೆ ಪಾಸರ್ಿ ಹುಡುಗರ ಗುಂಪೊಂದು ದೊಣ್ಣೆಗಳನ್ನು ಹಿಡಿದು ನನ್ನ ಮೇಲೆ ದಾಳಿ ಮಾಡಿತು.
ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ, ಕೊಲ್ಲುವುದಾಗಿ ಬೆದರಿಕೆ ಹಾಕಿದ ಆ ಗುಂಪು ನಾನಾರೆಂದು? ಪ್ರಶ್ನಿಸಿತು. ತಪ್ಪಿಸಿಕೊಳ್ಳಲೆಂಬಂತೆ ನಾನು ಅಷ್ಟೇ ಕೂಲಾಗಿ ನಾನು ಹಿಂದೂ ಎಂದು ಉತ್ತರಿಸಿದೆ. ನನ್ನ ಉತ್ತರದಿಂದ ತೃಪ್ತರಾಗದ ಉದ್ರಿಕ್ತ ಆ ಗುಂಪು ನನ್ನನ್ನು ಅವಾಚ್ಯ ಶಬ್ಧಗಳಿಂದ ಬೈಯುತ್ತಾ ಕೊಠಡಿ ಖಾಲಿ ಮಾಡುವಂತೆ ಕೂಗಾಡಿತು. ಬೇರೆ ದಾರಿಕಾಣದೆ ನನಗೆ ಎಂಟು ಗಂಟೆಗಳ ಕಾಲಾವಕಾಶ ಕೊಡಿ ಎಂದು ಆ ಗುಂಪನ್ನು ನಾನು ಧೈನ್ಯತೆಯಿಂದ ಕೆಳಿಕೊಂಡೆ!
ನನಗೆ ಇದ್ದುದು ಕೆಲವೇ ಗಂಟೆಗಳು! ನನಗೆ ಪರಿಚಯವಿದ್ದ ಸ್ನೇಹಿತರನ್ನೆಲ್ಲ ನನಗೆ ವಸತಿ ವ್ಯವಸ್ಥೆ ಮಾಡಿಕೊಡುವಂತೆ ಗೋಗರೆದೆ. ಆದರೆ ಪ್ರತಿಯೊಬ್ಬರು ತಮ್ಮ ಅಸಹಾಯಕತೆಯನ್ನು ಪ್ರದಶರ್ಿಸಿದರು. ಮುಂದೇನು ಮಾಡಲಿ? ಎಲ್ಲಿ ಹೋಗಲಿ? ಅಸಹಾಯಕತೆಯಿಂದ ನಿರಾಶನಾಗಿ ಬೀದಿಯಲ್ಲಿ ಒಂದೆಡೆ ಕುಳಿತು ಗಳಗಳನೆ ಅತ್ತೆ. ನನ್ನ ಕಣ್ಣಿನಿಂದ ನೀರು ಧಾರಾಕಾರವಾಗಿ ಸುರಿಯುತ್ತಿತ್ತು. ಕಡೆಗೆ ವಿಧಿ ಇಲ್ಲದೇ ನನ್ನ ಕೆಲಸಕ್ಕೆ ರಾಜೀನಾಮೆ ಇತ್ತು ಅದೇ ರಾತ್ರಿ ರೈಲಿನಲ್ಲಿ ಮುಂಬೈಗೆ ವಾಪಸ್ ಬಂದೆ.
ಈಗ ಹೇಳಿ ಸ್ವತಃ ಅಂಬೇಡ್ಕರರಿಗೇ ಆ ಕಾಲದಲ್ಲಿ ವರ್ಗರಹಿತ ವಸತಿ ಸಿಗಲಿಲ್ಲ. ಅದೂ ಅಂಬೇಡ್ಕರರು ನಾನು ಹಿಂದೂ ಎಂದರೂ, ನನ್ನದು ಪಾಸರ್ಿ ಧರ್ಮ ನನ್ನ ಹೆಸರು ಅಡಲ್ಜಿ ಸೊರಾಬ್ಜಿ ಎಂದು ಸುಳ್ಳು ಹೇಳಿದರೂ ಅವರಿಗೆ ವರ್ಗ ರಹಿತ ವಸತಿ ಸಿಗಲಿಲ್ಲ. ಇನ್ನು ಸಾಮಾನ್ಯ ದಲಿತರಿಗೆ ವರ್ಗ ರಹಿತ, ಜಾತಿ ರಹಿತ ವಸತಿ ಸಾಧ್ಯವೇ? ಅಕಸ್ಮಾತ್ ಸಿಕ್ಕಿದರೂ ಅಂತಹ ವಸತಿ ಗೃಹಗಳಲ್ಲಿ ದಲಿತರು ಬದುಕಲು ಸಾಧ್ಯವೇ? ಹೆಚ್ಚೆಂದರೆ ಅಂಬೇಡ್ಕರರು ಮಾಡಿದ ಹಾಗೆ ಸಮಸ್ತ ದಲಿತರು ಅಂತಹ ವಸತಿಗೃಹಗಳ ಹೊರಗೆ ನಿಂತು ಗಳಗಳನೆ ಅಳಬೇಕಾಗುತ್ತದಷ್ಟೆ!
ರಘೋತ್ತಮ ಹೊ. ಬ
ಚಾಮರಾಜನಗರ-571313
ಮೊ-0381189116
No comments:
Post a Comment