Pages

Sunday, 24 April 2011

ಅಂಬೇಡ್ಕರ್: ಬುದ್ಧನನ್ನು ಮತ್ತೆ ತಂದ ಬೋಧಿಸತ್ವ



      ಬುದ್ಧ, ಬಹುಶಃ ಜಗತ್ತಿನಲ್ಲಿಯೇ ಶ್ರೇಷ್ಠ ಜ್ಞಾನಿ ಎಂದರೆ ಆತನೇ ಇರಬೇಕು. ಎಲ್ಲಾ ತತ್ವಜ್ಞಾನಿಗಳು ದೇವರ ಸುತ್ತ ಗಿರಕಿ ಹೊಡೆದರೆ  ಬುದ್ಧ ದೇವರ ಬಗ್ಗೆ ಚಕಾರವೆತ್ತದೆ  ಮಾನವನ ಸಮಸ್ಯೆಗಳಿಗೆಲ್ಲ ಆತನ ಮನಸ್ಸೇ ಮೂಲವೆಂದು, ಮನಸ್ಸನ್ನು ಹಿಡಿದಿಟ್ಟುಕೊಳ್ಳುವುದೇ ನಿಜವಾದ ಧರ್ಮವೆಂದು ಪ್ರತಿಪಾದಿಸಿದ ಅಪ್ಪಟ ಜ್ಞಾನಿ. ಅದಕ್ಕೇ ಇರಬೇಕು ಖ್ಯಾತ ವಿಜ್ಞಾನಿ ಆಲ್ಬಟರ್್ ಐನ್ಸ್ಟೀನ್  ಒಂದೆಡೆ  ಈ ಜಗತ್ತಿನಲ್ಲಿ ಯಾವುದಾದರೊಂದು ಧರ್ಮ ವಿಜ್ಞಾನದ ಅಗತ್ಯತೆಗಳನ್ನು ಪೂರೈಸುತ್ತದೆ ಎನ್ನುವುದಾದರೆ ಅದು ಬುದ್ಧ ಧರ್ಮ ಎಂದಿರುವುದು. ಇಂತಹ ವೈಜ್ಞಾನಿಕ ತಳಹದಿಯ ಮನೋವೈಜ್ಞಾನಿಕ ಸಿದ್ಧಾಂತದ ಬುದ್ಧನ ತತ್ವ 2500ವರ್ಷಗಳ ಹಿಂದೆ ಧರ್ಮವಾಗಿ ಮೈದಳೆದದ್ದು ನಿಜಕ್ಕೂ ಆಶ್ಚರ್ಯ ಮತ್ತು wonder of the world  ಎನ್ನಬಹುದು.ಆದರೆ ಅಂತಹ ಆಶ್ಚರ್ಯ ಮತ್ತು ಅದ್ಭುತ ತಾನು ಹುಟ್ಟಿದ ನೆಲದಲ್ಲಿ  ಇದ್ದಕ್ಕಿದ್ದಂತೆ ಮರೆಯಾದದ್ದು? ಬಹುಶಃ ಭಾರತೀಯರ ಪಾಲಿಗೆ ಒದಗಿದ ದೊಡ್ಡ ದುರಂತ ಅದು. ಆದರೆ ಅದನ್ನು ದುರಂತವೆಂದು  ಮತ್ತು ಅಂತಹ ದುರಂತದಿಂದ ಯಾರಿಗೂ ಪ್ರಯೋಜನವಿಲ್ಲವೆಂದು ವ್ಯಕ್ತಿಯೊಬ್ಬರು, ಕ್ಷಮಿಸಿ ಶಕ್ತಿಯೊಂದು ಹಾಗೆ ಕುಳಿತ್ತಿದ್ದರೆ? ಅದರ ಪುನರುತ್ಥಾನಕ್ಕಾಗಿ ಶ್ರಮಿಸದೇ ಇದ್ದಿದ್ದರೆ? ಬಹುಶಃ ನಾವು ಅದರ ಬಗ್ಗೆ ಬರೆಯುವ, ಅದರ ಬಗ್ಗೆ ತಿಳಿದುಕೊಳ್ಳುವ ಸಣ್ಣ ಅವಕಾಶವೂ ನಮಗೆ ಸಿಗುತ್ತಿರಲಿಲ್ಲವೋ ಏನೋ? ಆದರೆ ಶ್ರೇಷ್ಠ ಬದುಕು ಸತ್ತುಹೋಗಬಾರದು  ಹಾಗೆಯೇ ಈಗ ಜಾರಿಯಲ್ಲಿರುವ ಕನಿಷ್ಠಕ್ಕೆ ಪ್ರತ್ಯುತ್ತರವಾದ ಶ್ರೇಷ್ಠವಾದ ಆ ಬುದ್ಧ ತತ್ವ ನಶಿಸಿಹೋಗಬಾರದು ಎಂದು  ಬುದ್ಧನನ್ನು ಮತ್ತೆ ಭಾರತಕ್ಕೆ ತಂದ ವ್ಯಕ್ತಿ ಅಥರ್ಾತ್ ಶಕ್ತಿ, ಸರಳವಾಗಿ ಹೇಳುವುದಾದರೆ ಬೋಧಿಸತ್ವ ಬೇರಾರೂ ಅಲ್ಲ. ಬಾಬಾಸಾಹೇಬ್ ಅಂಬೇಡ್ಕರ್ . ನಿನಗೆ ನೀನೆ ಬೆಳಕು ಎಂದವನ್ನು ಬೆಳಕಿಗೆ ತಂದ ಬುದ್ಧ ಸಾಹೇಬ!
    ಹಾಗಿದ್ದರೆ ಬಾಬಾಸಾಹೇಬರೇಕೆ? ಬುದ್ಧನನ್ನು ಬೆಳಕಿಗೆ ತಂದರು? ಸುಮ್ಮನೆ ಹಿಂದೂ ಧರ್ಮವನ್ನು ಬೈದು, ಅದರ ಕೊಳಕು ಜಾತಿ ವ್ಯವಸ್ಥೆಯನ್ನು ಟೀಕಿಸಿ  ಸುಮ್ಮನಿರಬಹುದಿತ್ತಲ್ಲ? ಉತ್ತರ ಸ್ಪಷ್ಟ, ಸಾಧಾರಣ ನಾಯಕರು ಮಾತ್ರ ಹಾಗೆ ಇರುತ್ತಾರೆ . ಅವರು  ಬರೀ ಸಮಸ್ಯೆಗಳನ್ನು ಕೆದಕಿ ಅದರ ಪರಿಸ್ಥಿತಿಯ ಲಾಭವನ್ನಷ್ಟೆ ಬಯಸಿ ತಾವು ಒಂದು ಪದವಿಯನ್ನೊ ಅಧಿಕಾರವನ್ನೊ ಪಡೆದು ಸುನಮ್ಮನಾಗುತ್ತಾರೆ. ಆದರೆ ಅಂಬೇಡ್ಕರ್? ಸಮಚಿತ್ತದ ದೂರದಶರ್ಿ ವ್ಯಕ್ತಿತ್ವದ ನಾಯಕ. ತಾನು ಏನು ಮಾಡುತ್ತಿದ್ದೇನೆ ಅದರ ಪರಿಣಾಮ  ಏನಾಗಬಹುದು ಎಂಬುದನ್ನು ಸುಮಾರು 10000 ವರ್ಷಗಳ ಮುಂದಕ್ಕೆ  ಯೋಚಿಸಿದ ಅಸಾಧಾರಣ  ನಾಯಕ. ಬಹುಶಃ ಅಂತಹವರು ಯುಗಕ್ಕೆ ಒಬ್ಬರು ಇಬ್ಬರು ಜನಿಸಬಹುದಷ್ಟೆ. ಯಾಕೆಂದರೆ  ಅಂಬೇಡ್ಕರ್ ಬರೀ ಸಮಸ್ಯೆಗಳನ್ನಷ್ಟೆ ಕೆದಕಲಿಲ್ಲ. ಬದಲಿಗೆ ಅವುಗಳಿಗೆ  ಸೂಕ್ತ ಪರಿಹಾರವನ್ನು ಸಹ ತೆರೆದಿಟ್ಟು ಹೋದರು. ಹಿಂದೂ ಧರ್ಮದ ಅಂತಹ ಸಮಸ್ಯೆಗೆ ಪರಿಹಾರವಾಗಿ ಅವರು ತೆರೆದದ್ದೆ ಬುದ್ಧ ಮತ್ತು ಆತನ ಧರ್ಮದ ಹೆಬ್ಬಾಗಿಲು.
   ಹಾಗಿದ್ದರೆ ಅವರೇನು ಅದನ್ನು ಧಿಡೀರನೇ ತೆರೆದರೇ ? ಅಥವಾ  ಯಾವುದಾದರೂ ಒತ್ತಡಕ್ಕೆ ಸಿಲುಕಿ ಅದಕ್ಕೆ ಪುನರ್ಜನ್ಮ ನೀಡಿದರೇ? ಬಹುಶಃ ಇದಕ್ಕೆ ಉತ್ತರ ಅಂಬೇಡ್ಕರರ ಬಾಲ್ಯದಲ್ಲಿಯೇ ಸಿಗುತ್ತದೆ. ಅಂಬೇಡ್ಕರರು ಮೆಟ್ರಿಕುಲೇಷನ್ ಪಾಸಾದಾಗ ಅಭಿನಂದನಾರ್ಹವಾಗಿ ಅವರಿಗೆ ಬಂದದ್ದು ಗೌತಮ ಬುದ್ಧನ ಜೀವನ ಚರಿತ್ರೆಯ ಪುಸ್ತಕ. ತಾವೇ ಬರೆದಿದ್ದ ಆ ಪುಸ್ತಕವನ್ನು ಅವರಿಗೆ ನೀಡಿದ್ದು ಖ್ಯಾತ ಮರಾಠಿ ಲೇಖಕ ಮತ್ತು ಚಿಂತಕ ಕೃಷ್ಣ ಅಜರ್ುನ ಕೆಲೂಸ್ಕರ್ರವರು . ಇದು ನಡೆದದ್ದು 1907 ರಲ್ಲಿ. ಅಂದರೆ ಅಂಬೇಡ್ಕರ್ರವರಿಗೆ ಆಗ ಕೇವಲ 16 ವರ್ಷ.
    ಹಿಂದೂ ಎಂಬ ಮರುಭುಮಿ
ಯಲ್ಲಿ ಸಮಾನತೆ ಎಂಬ ನೀರು ಸಿಗದೆ ತಹತಹಿಸುತ್ತಿದ್ದ ಸಮುದಾಯವೊಂದಕ್ಕೆ ಅಂಬೇಡ್ಕರ್ರವರಿಗೆ ಸಿಕ್ಕ ಆ ಬುದ್ಧನ ಜೀವನ ಚರಿತ್ರೆ ಕೃತಿ ಹೇಗೆ ಕಂಡಿರಬೇಕು? ಮರುಭೂಮಿಯಲ್ಲಿ ಸಿಕ್ಕ ಒಯಸಿಸ್ನ ಹಾಗೆ ತಾನೆ? ಅಂಬೇಡ್ಕರ್ ಬುದ್ಧ ಧರ್ಮ ಎಂಬ ಆ ಒಯಸಿಸ್ಅನ್ನು ಅಪ್ಪಿಕೊಂಡರು. ಫಲಭರಿತ ಈ ಭರತ ಭೂಮಿ ಮರುಭೂಮಿ ಆದದ್ದೇಕೆ? ಎಂಬ ನಿಟ್ಟಿನಲಿ ಚಿಂತಿಸುತ್ತಾ ಮುನ್ನುಗ್ಗಿದ್ದರು.ಅಂತಹ ಆ ಮುನ್ನುಗ್ಗುವಿಕೆಯಲ್ಲಿ ಅವರು ಸಿಂಹದಂತೆ ಗಜರ್ಿಸಿದ್ದು 1935 ರಲ್ಲಿ ನಾಸಿಕ್ನ ಈಯೋಲಾ ಎಂಬಲ್ಲಿ,ನಾನು ಹಿಂದೂವಾಗಿ ಹುಟ್ಟಿರಬಹುದು ಅದು ನನ್ನ ಕೈಲಿರಲಿಲ್ಲ., ಆದರೆ ಹಿಂದೂವಾಗಿ ಖಂಡಿತ ಸಾಯುವುದಿಲ್ಲ ಎಂದು ಗುಡುಗಿದರು. ಬಹುಶಃ ಅಂಬೇಡ್ಕರರ ಆ ಗುಡುಗು 'ಮರುಭೂಮಿಯ ಜನರಿಗೆ' ದೀಪಾವಳಿ ಪಟಾಕಿ ಸದ್ದಿನ ಹಾಗೆ ಕೇಳಿಸಿರಬೇಕು! ಆದರೆ ಅದು ಪಟಾಕಿಯಲ್ಲ ಹೈಡ್ರೋಜನ್ ಬಾಂಬ್ ಎಂದು ಗೊತ್ತಾದದ್ದು 1956 ಅಕ್ಟೋಬರ್ 14 ರಂದು. ಏಕೆಂದರೆ ಅಂದು ಅಂಬೇಡ್ಕರರು ತಮ್ಮ 10 ಲಕ್ಷ ಅನುಯಾಯಿಗಳೊಂದಿಗೆ ನಾಗಪುರದ ದೀಕ್ಷಾಭೂಮಿಯಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರು . ತನ್ಮೂಲಕ  ಬುದ್ಧನ ಧರ್ಮದ ಪುನರುತ್ಥಾನಕ್ಕೆ ನಾಂದಿ ಹಾಡಿದರು.
    ಹಾಗಿದ್ದರೆ ಅಂಬೇಡ್ಕರರು ಬೌದ್ಧ ಧರ್ಮವನ್ನು ಸುಮ್ಮನೆ ಸ್ವೀಕರಿಸಿದರೇ? blind ಆಗಿ  follow ಮಾಡಿದರೆ? ಖಂಡಿತ ಇಲ್ಲ. ಹಾಗೆ ಹೇಳುವುದಾದರೆ ಬೇರೆಯವರು ಬೇಕಾದರೆ ಹಾಗೆ ಮಾಡಬಹುದಿತ್ತೋ ಏನೋ? ಆದರೆ ಅಪ್ಪಟ ಶ್ರೇಷ್ಠ ಜ್ಞಾನಿ, ಹೋರಾಟಗಾರ ಅಂಬೇಡ್ಕರ್ರವರು ಹಾಗೆ ಮಾಡಲಿಲ್ಲ. ಯಾಕೆಂದರೆ ಬೌದ್ಧ ಧರ್ಮವನ್ನು ಸ್ವೀಕರಿಸಬೇಕಾದ ಅವರ ಆ ನಿಧರ್ಾರದಲ್ಲಿ ಮುಖ್ಯವಾಗಿ ಅಡಗಿದ್ದು ದೇಶಪ್ರೇಮ, ತನ್ನಸಮುದಾಯದ ನೈಜ ಇತಿಹಾಸ ಮತ್ತು ಹಿತಚಿಂತನೆ, ಹಾಗೆ ಬುದ್ಧ ಎಂಬ ಮಹಾನ್ ಸಾಮಾಜಿಕ ವಿಜ್ಞಾನಿಯೆಡೆಗಿನ ಪ್ರೀತಿ.
    ಅಂದಹಾಗೆ ಅಂಬೇಡ್ಕರರ ಈ ನಿಧರ್ಾರದಲ್ಲಿ ದೇಶಪ್ರೇಮದ ಪಾತ್ರ ಎಂತಹದ್ದು? ಸರಳವಾಗಿ ಹೇಳುವುದಾದರೆ  ಅಂಬೇಡ್ಕರರು ಹಿಂದೂವಾಗಿ ಸಾಯಲಾರೆ ಎಂದಾಕ್ಷಣ ಮುಸ್ಲೀಮರು, ಕ್ರೈಸ್ತರು ಇತ್ಯಾದಿ ಧರ್ಮಗಳವರು ಅಂಬೇಡ್ಕರರನ್ನು ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳಲು ಮುಂದೆ ಬಂದರು. ಆದರೆ ದೇಶ ಪ್ರೇಮಕ್ಕೆ ಕಟಿಬದ್ಧರಾದ  ಅಂಬೇಡ್ಕರ್ರವರು ಸೇರುವುದಾದರೆ ನಮ್ಮ ದೇಶದಲ್ಲೇ ಹುಟ್ಟಿ ಬೆಳೆದ  ಧರ್ಮವನ್ನಷ್ಟೆ ಸೇರುವುದು  ಎಂದು ನಿರ್ಧರಿಸಿ ಬೌದ್ಧ ಧರ್ಮದತ್ತ ಒಲವು ತೋರಿದರು. ತನ್ಮೂಲಕ ದೇಶಪ್ರೇಮ ಎಂದು ಬಡಬಡಿಸುವವರಿಗೆ ನಿಜವಾದ ದೇಶಪ್ರೇಮದ ಸಣ್ಣ ಪಾಠವನ್ನು ಸಹ ಹೇಳಿಕೊಟ್ಟರು.
    ಹಾಗೆಯೇ ತನ್ನ ಸಮುದಾಯದ ನೈಜ ಇತಿಹಾಸ? ಹಾಗೆಂದರೆ? ಏಕೆಂದರೆ ಅಂಬೇಡ್ಕರರು ಒಂದೆಡೆ ಭಾರತದ ಇತಿಹಾಸ ನಿಜವಾಗಿಯೂ ಬೌದ್ಧ ಧರ್ಮಕ್ಕೂ ಬ್ರಾಹ್ಮಣ ಧರ್ಮಕ್ಕೂ ನಡೆದ ನಿರಂತರ ಸಂಘರ್ಷವಲ್ಲದೇ ಬೇರೇನಲ್ಲ ಎನ್ನುತ್ತಾರೆ. ಈ ನಿಟ್ಟಿನಲ್ಲಿ ಹೇಳುವುದಾದರೆ  ಅಂಬೇಡ್ಕರರ ಈ ಬೌದ್ಧ ಧರ್ಮದ ನಡೆಯ ಹಿಂದೆ ನಿಜಕ್ಕೂ ಇದ್ದದ್ದೂ ಅಂತಹ ಆ ಒರಿಜಿನಲ್ ಇತಿಹಾಸವೇ ಹೊರತು ಬೇರೇನಲ್ಲ. ಅಂತಹ ಭವ್ಯ ಇತಿಹಾಸವನ್ನು ಅಂಬೇಡ್ಕರರು ಹೀಗೆ ದಾಖಲಿಸುತ್ತಾರೆ ಭಾರತದ ಇತಿಹಾಸ ಗೊತ್ತಿರುವವರಿಗೆ ತಿಳಿದುಬರುವುದೇನೆಂದರೆ  ಈ ದೇಶದಲ್ಲಿ ಬೌದ್ಧ ಧರ್ಮವನ್ನು ಪ್ರಚುರ ಪಡಿಸಿದವರು ನಾಗ ಜನಾಂಗದವರು. ನಾಗಜನರು ಆರ್ಯರ ಪ್ರಭಲ ಶತೃಗಳಾಗಿದ್ದರು.  ಆರ್ಯರು ಮತ್ತು ನಾಗಜನರ ನಡುವೆ ಘೋರ ಯುದ್ಧಗಳು ನಡೆದಿವೆ.  ಆರ್ಯರು ನಾಗಜನರನ್ನು ಜೀವಂತ ಸುಟ್ಟಿರುವ ಅನೇಕ ಐತಿಹ್ಯಗಳು ಪುರಾಣದಲ್ಲಿವೆ. ಆದರೆ ಅಗಸ್ತ್ಯ ಮುನಿಯು  ಆರ್ಯರು ಮತ್ತು ನಾಗರ ಅಂತಹ ಘೋರ ಕದನದ ನಡುವೆ  ಒಬ್ಬ ನಾಗನನ್ನು ರಕ್ಷಿಸಿದರು. ಅವನ ವಾರಸುದಾರರೇ ನಾವು( ಅಂದರೆ ದಲಿತರು). ಆರ್ಯರ ಈ ದಬ್ಬಾಳಿಕೆಯಿಂದ  ನೊಂದಿದ್ದ ನಾಗ ಜನರು  ಮುಂದೊಂದು ದಿನ ತಮ್ಮನ್ನು ಈ ನೋವಿನಿಂದ ಮೇಲೆತ್ತುವ  ನಾಯಕನೊಬ್ಬ ಹುಟ್ಟುತ್ತಾನೆಂದು ನಂಬಿದ್ದರು. ಆ ನಾಯಕನೇ ಗೌತಮ ಬುದ್ಧ. ಬುದ್ಧನ ಕಾಲದಲ್ಲಿ  ನಾಗಜನರು ಅವನ ತತ್ವಗಳನ್ನು ಏಷ್ಯಾಖಂಡದಾಂದ್ಯಂತ ಪ್ರಚುರಪಡಿಸಿದರು. ಅಂತಹ ಶ್ರೇಷ್ಠ ನಾಗ ಜನಾಂಗಕ್ಕೆ ಸೇರಿದವರು ನಾವು ಎಂದು ಅಂಬೇಡ್ಕರರು  ತನ್ನ ಸಮುದಾಯದ ಭವ್ಯ ಇತಿಹಾಸವನ್ನು  ಬುದ್ಧನ ಜೊತೆ ಲಿಂಕ್ ಮಾಡುತ್ತಾರೆ.  ತನ್ಮೂಲಕ ತಾನೇಕೆ? ಜೊತೆಗೆ ತನ್ನ ಸಮುದಾಯವೇಕೆ ಬೌದ್ಧ ಧರ್ಮ ಸ್ವೀಕರಿಸಬೇಕು? ಎಂದು ಇಡೀ ಜಗತ್ತಿಗೆ  ಐತಿಹಾಸಿಕ ಸಾಕ್ಷಿಗಳೊಂದಿಗೆ ಸಾರಿಹೇಳುತ್ತರೆ. ಈಗ ಹೇಳಿ ಅಂಬೇಡ್ಕರ್ ಕಾಟಾಚಾರಕ್ಕೆ ಬೌದ್ಧ ಧನರ್ಮ ಸ್ವೀಕರಿಸಿದರೆ? ಕಾಟಾಚಾರ? ಅಂಬೇಡ್ಕರರ ಡಿಕ್ಷನರಿಯಲ್ಲಿ ಆ ಪದಕ್ಕೆ ಅರ್ಥವೇ ಇಲ್ಲವೇನೋ? ಯಾಕೆಂದರೆ ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು  ಅಂಬೇಡ್ಕರರು ಅಳೆದು ಸುರಿದು ಬದುಕಿದ್ದಾರೆ .ಹೆಜ್ಜೆಹೆಜ್ಜೆಗೂ  ತಮ್ಮ ಜೀವನವನ್ನು ತ್ಯಾಗ ಮಾಡಿ ತನ್ನ ಸಮುದಾಯದ ಏಳ್ಗೆಗಾಗಿ  ಒಟ್ಟಾರೆ ಮಾನವಪರ ಹಕ್ಕುಗಳಿಗಾಗಿ  ದುಡಿದಿದ್ದಾರೆ.ಅಂತಹ ಹುಟ್ಟು ಹೋರಾಟಗಾರ  ತನ್ನ ನಿರಂತರ ಹೋರಾಟದ ನಡುವೆಯೂ ಧರ್ಮವೊಂದನ್ನು ಪುನರುಜ್ಜೀವನಗೊಳಿಸಿದ್ದಿದೆಯಲ್ಲ? ಅದು ಟಠಿಟಥಿ ಣಠಿಜಡಿಛ! ಹಾಗಂದರೂ ಕೂಡ ತಪ್ಪಾಗುತ್ತದೆ. ಏಕೆಂದರೆ ಅಂಬೇಡ್ಕರರ ಸಾಧನೆಯನ್ನು ವಣರ್ಿಸಲು ಪದಗಳೇ ಸಾಲದು.
      ಕಡೆಯದಾಗಿ ಹೇಳುವುದಾದರೆ ಅಂಬೇಡ್ಕರರು ಬೌದ್ಧ ಧರ್ಮದತ್ತ  ಆಕಷರ್ಿತರಾದದ್ದು ಬುದ್ಧ ಮತ್ತು ಆತನ ಧರ್ಮದ  ಶ್ರೇಷ್ಠತನದಿಂದಾಗಿ .ಇಂತಹ ಶ್ರೇಷ್ಠತನವನ್ನು ಹೀಗಳೆದವರನ್ನು ಕೂಡ ಅವರು ಸುಮ್ಮನೆ ಬಿಟ್ಟಿಲ್ಲ.  ಏಕೆಂದರೆ ಮೇ 24, 1956 ರಂದು ಬುದ್ಧನ ಅಹಿಂಸಾ ತತ್ವದ ಬಗ್ಗೆ ಟೀಕೆ ಮಾಡಿದ್ದ ವೀರ್ ಸಾವರ್ಕರ್ ಬರಹಗಳಿಗೆ ಉಗ್ರವಾಗಿ ಉತ್ತರಿಸುತ್ತಾ ಅಂಬೇಡ್ಕರ್ರವರು ಹಿಂದೂ ಧರ್ಮ ದೇವರನ್ನು ನಂಬುತ್ತದೆ, ಆದರೆ ಬೌದ್ಧ ಧರ್ಮ ನಂಬುವುದಿಲ್ಲ.ಹಿಂದೂ ಧರ್ಮ ಅತ್ಮವನ್ನು ನಂಬುತ್ತದೆ ಆದರೆ ಬೌದ್ಧ ಧರ್ಮದ ಪ್ರಕಾರ ಆತ್ಮವೆಂಬುದೇ ಇಲ್ಲ! ಹಿಂದೂ ಧರ್ಮ ಚಾತುರ್ವಣ್ರ್ಯ ಮತ್ತು ಜಾತಿಪದ್ಧತಿಯನ್ನು ನಂಬುತ್ತದೆ ಆದರೆ ಬೌದ್ಧ ಧರ್ಮದಲ್ಲಿ ಚಾತುರ್ವಣ್ರ್ಯ ಮತ್ತು ಜಾತಿ ಪದ್ಧತಿಗೆ ಅವಕಾಶವೇ ಇಲ್ಲ ಆದ್ದರಿಂದ ತಾನು ಮತ್ತು ತನ್ನ ಸಮುದಾಯ ಬೌದ್ಧ ಧರ್ಮವನ್ನು ಸ್ವೀಕರಿಸುವುದಾಗಿ ಅಂಬೇಡ್ಕರ್ರವರು ಸಾವರ್ಕರ್ರಂತಹ ಹಿಂದುತ್ವವಾದಿಗಳಿಗೆ ಚುಚ್ಚಿ ಹೇಳುತ್ತಾರೆ ಮತ್ತು ಹಾಗೆ ಹೇಳುವ ಭರದಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸುವ ತಾನು  ಮತ್ತು ತನ್ನವರನ್ನು ಹಳ್ಳಕ್ಕೆ ಬೀಳುತ್ತಿದ್ದೀರಿ ಎಂದ ಹಿಂದುತ್ವವಾದಿಗಳಿಗೆ ಅಷ್ಟೆ ಸ್ಪೀಡಾಗಿ ಉತ್ತರಿಸಿದ ಅಂಬೇಡ್ಕರ್ರವರು ನನ್ನನ್ನು ಟೀಕಿಸುವವರು ನನ್ನನ್ನು ಒಂಟಿಯಾಗಿರಲು ಬಿಡಿ. ನಾನು ಮತ್ತು  ನನ್ನ ಜನ  ಹಳ್ಳಕ್ಕೆ ಬಿದ್ದರೂ ಪರವಾಗಿಲ್ಲ ಏಕೆಂದರೆ ಹಾಗೆ ಹಳ್ಳಕ್ಕೆ ಬೀಳುವ ಬಿದ್ದು ಏಳುವ ಸ್ವಾತಂತ್ರ್ಯ ನಮಗೆ ಇದ್ದೆ ಇದೆ! ಬೇರೆಯವರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮುಂದುವರಿದು ಅವರು , ಹಾಗೆ ಹೇಳುವುದಾದರೆ ನನ್ನ ಜನರು ಕುರಿಗಳಿದ್ದ ಹಾಗೆ. ನಾನು ಅವರನ್ನು ಕಾಯುವ ಕುರುಬ. ಅವರಿಗೆ ನನಗಿಂತ ಶ್ರೇಷ್ಠ ಮಾರ್ಗದರ್ಶಕ ಸಿಗುತ್ತಾನೆಂದು ಖಂಡಿತವಾಗಿಯೂ ನನಗನಿಸುತ್ತಿಲ್ಲ. ಆ ಕಾರಣಕ್ಕಾಗಿ ನನ್ನನ್ನು ಅವರು ಚಾಚೂ ತಪ್ಪದೇ ಪಾಲಿಸುತ್ತಾರೆ. ಹಾಗೆ ಪಾಲಿಸುವುದರ ಮೂಲಕ ಅವರು ಶ್ರೇಷ್ಠ ಜ್ಞಾನವನ್ನು ಕೂಡ ಪಡೆಯುತ್ತಾರೆ ಎಂದು ಅಂಬೇಡ್ಕರ್ರವರು ಹಿಂದುತ್ವವಾದಿಗಳಿಗೆ ಚುರುಕು ಮುಟ್ಟಿಸುತ್ತಾರೆ.
      ಒಂದಂತೂ ನಿಜ ಕ್ರಿ.ಪೂ.543ರಿಂದ ಕ್ರಿ.ಶ. 1400 ರವರೆಗೆ  ಈ ಭಾರತದಲ್ಲಿ ರಂಗು ರಂಗಾಗಿ ಮಿನುಗಿದ ಬುದ್ಧ ಧರ್ಮದ ಅವನತಿ ಹೇಗಾಯಿತೋ ಖಂಡಿತ ಗೊತ್ತಿಲ್ಲ.ಅಕಸ್ಮಾತ್ ಗೊತ್ತಿದ್ದರೂ ಅದನ್ನು ಪ್ರಸ್ತುತ ಪಡಿಸುವ ಅಗತ್ಯ ಇಲ್ಲಿ ಖಂಡಿತ ಕಾಣುತ್ತಿಲ್ಲ. ಆದರೆ ಅದಕ್ಕೆ ಜೀವಕ್ಕೆ ಜೀವಕೊಟ್ಟು, ಉಸಿರಿಗೆ ಉಸಿರು ಬೆಸೆದು ಕಾಪಾಡಿದ್ದು? ಪುನರ್ಜನ್ಮ ನೀಡಿದ್ದು? ಅಕ್ಷರಶಃ ನಿಜ ಅದು ಡಾ. ಅಂಬೇಡ್ಕರ್ರಲ್ಲದೇ ಬೇರಾರೂ ಅಲ್ಲ.ಸರಳವಾಗಿ ಹೇಳುವುದಾದರೆ ಕನ್ನಡದಲ್ಲಿ ಚಲನ ಚಿತ್ರವೊಂದಿದೆ ಭೂಮಿಗೆ ಬಂದ ಭಗವಂತ ಅಂತ. ಆ ಚಿತ್ರದಲ್ಲಿ ಭಗವಂತ ಭೂಮಿಗೆ ಬಂದನೋ? ಏನೋ? ಗೊತ್ತಿಲ್ಲ! ಆದರೆ ಅಂಬೇಡ್ಕರರಂತೂ ಭರತ ಭೂಮಿಗೆ ಬುದ್ಧನನ್ನು ಖಂಡಿತ ವಾಪಸ್ ತಂದರು.ಅವನ ಬೆಳಕಿನ ಹಣತೆಯನ್ನು ಈ ದೇಶವಾಸಿಗಳ ಬೆಚ್ಚನೆಯ ಹೃದಯದಲ್ಲಿ ಮೌನವಾಗಿ ಹಚ್ಚಿದರು.ತನ್ಮೂಲಕ ಬೋಧಿಸತ್ವ ಎಂಬ ತಮ್ಮ ಅನ್ವರ್ಥಕ್ಕೆ ಸಾಕ್ಷಿಯಾಗಿ ನಿಂತರು.
  ಯಾರು ಏನೆ ಹೇಳಲಿ ಅಂಬೇಡ್ಕರರು ಅಂದು ಹಚ್ಚಿದ ಹಣತೆ  ಇಂದು ದೇಶದ ಕೋಟ್ಯಾಂತರ ದಲಿತರ ಹೃದಯಗಳಲ್ಲಿ ಹಾಗೇ ಉರಿಯುತ್ತಿದೆ. ಎಲ್ಲಿ ಅಂಬೇಡ್ಕರರಿರುತ್ತಾರೋ ಅಲ್ಲಿ ಬುದ್ಧ ಎಂಬಂತಾಗಿದೆ! ಔಪಚಾರಿಕವಾಗಿ ಸ್ವೀಕರಿಸುವುದಷ್ಟೆ ಧರ್ಮವಲ್ಲ ಅನೌಪಚಾರಿಕವಾಗಿ ಹಾಗೆ ಒಪ್ಪಿಕೊಳ್ಳುವದೂ ಕೂಡ ಧರ್ಮವೇ! ಈ ನಿಟ್ಟಿನಲಿ ಅಂಬೇಡ್ಕರರು ಅಂದು ಸ್ಥಾಪಿಸಿದ ಅನೌಪಚಾರಿಕ ಬೌದ್ಧ ಧರ್ಮ ಮತ್ತಷ್ಟು ಬೆಳೆಯಲಿ ಬುದ್ಧ ನಮ್ಮೆಲ್ಲರೆದೆಯಲ್ಲಿ ನೆಲೆಗೊಳ್ಳಲಿ ಎಂಬುದಷ್ಟೆ ಸಧ್ಯದ ಕಳಕಳಿ.
      ರಘೋತ್ತಮ ಹೊ.ಬ
      ಚಾಮರಾಜನಗರ
       
     

No comments:

Post a Comment

html