ನಮಗೊಂದು ಡೌಟಿತ್ತು ಏನಿದು ಹಜಾರೆ ಇದ್ದಕ್ಕಿದ್ದಂತೆ ಭ್ರಷ್ಟಾಚಾರದ ವಿರುದ್ಧ ಉಪವಾಸ ಕುಳಿತ್ತದ್ಧಾರಲ್ಲ ಎಂದು. ಅದೂ ಗಾಂಧಿ ಫೋಟೋ ಇಟ್ಟು ಕೊಂಡು. ಹಿಂದೆ ಭಾರತ ಮಾತೆಯ ಬೃಹತ್ ಬ್ಯಾನರ್ ಸಿಕ್ಕಿಸಿಕೊಂಡು! ಮತ್ತು ಅವರನ್ನು ಬೆಂಬಲಿಸಿದ್ದು? ಸ್ವಾಮಿ ಅಗ್ನಿವೇಶ್, ಕಿರಣ್ ಬೇಡಿ, ಶಾಂತಿ ಭೂಷಣ್ , ಬಾಬಾರಾಮ್ ದೇವ್, ಅಡ್ವಾಣಿ, ಗಡ್ಕರಿ,ಯಡಿಯೂರಪ್ಪ! ಒಂದಷ್ಟು ಚಿತ್ರತಾರೆಯರು. ಅಬ್ಬಬ್ಬಾ ಪಟ್ಟಿ ಹೇಳುತ್ತಾ ಹೋದರೆ ಒಂದರೆ ಕ್ಷಣ ಕನ್ಫ್ಯೂಸ್ ಆಗುವುದಂತೂ ಖಂಡಿತ. ಹಾಗಿತ್ತು ಹಜಾರೆಯವರ ಗುಂಪು ಮತ್ತು ಅವರ ಹಿಂದಿದ್ದ ಜನ. ಟಿವಿ ಮಾಧ್ಯಮಗಳಂತೂ ಇಡೀ ದೇಶವೇ ಅವರ ಹಿಂದೆ ಇದೆ ಎಂಬಂತೆ ತನ್ನ ಪಾತ್ರವನ್ನು ನಿರ್ವಹಿಸಿತು.
ಹಾಗಿದ್ದರೆ ಹಜಾರೆಯವರು ಮಾಡಿದ್ದಾದರೂ ಏನು? ಎಂತಹದ್ದು? ಅದೆಷ್ಟು ಸರಿ? ಉತ್ತರಕ್ಕೆ ಬಹಳ ದಿನ ಕಾಯಬೇಕಾಗಲಿಲ್ಲ. ಯಾಕೆಂದರೆ ಉಪವಾಸ ಮುಗಿದ ಒಂದೆರಡೇ ದಿನಗಳಲ್ಲಿ ಹಜಾರೆ ಹೊಗಳಿದ್ದು ನರೇಂದ್ರ ಮೋದಿಯನ್ನು, ನಿತೀಶ್ ಕುಮಾರ್ರನ್ನು. ಅಡ್ವಾಣಿ , ಗಡ್ಕರಿ , ಯಡಿಯೂರಪ್ಪ ಇತ್ಯಾದಿ ಎನ್.ಡಿ.ಎ., ಬಿಜೆಪಿ ಸಮೂಹದ ಎಲ್ಲರನ್ನೂ ಹೊಗಳುತ್ತಿದ್ದರೆಂದು ಕಾಣುತ್ತದೆ, ಆದರೆ ಯಾಕೋ ಅವರ ಗಂಟಲು ತಡೆದಿರಬೇಕು. ದನಿ ಕಟ್ಟಿರಬೇಕು. ಅದಕ್ಕೆ ಮೋದಿ, ನಿತೀಶ್ ಅಷ್ಟೆ ಸಾಕೆಂಬಂತೆ ಸುಮ್ಮನಾಗಿದ್ದಾರೆ. ತನ್ಮೂಲಕ ತನ್ನ ಅಸಲಿ ಬಣ್ಣ ಏನೆಂದು ತೋರಿಸಿ ಕೊಟ್ಟಿದ್ಧಾರೆ.
ಅಸಲಿಬಣ್ಣ ಹಾಗೆಂದರೇನು? ಕನ್ಫ್ಯೂಸ್ ಆಗಬೇಡಿ. ಅದು ಕೇಸರಿಯೇ. ಯಾಕೆಂದರೆ ಕೇಸರಿ ಪಡೆಗೆ ಮಾತ್ರ ಅಂತಹ ಸಮೂಹ ಸನ್ನಿಗೆ ಒಳಪಡುವಂತಹ ಯಾರಿಗೂ ಗೊತ್ತಾಗದ ಹಾಗೆ ಯಾರ್ಯಾರ ಮೂಲಕವೋ ತನ್ನ ಆಟ ಆಡುವ ಹಕೀಕತ್ತಿರುತ್ತದೆ. ಯಾಕೆಂದರೆ basically ಹಜಾರೆಯವರು ಎತ್ತಿದ ಪ್ರಶ್ನೆಯೇ ಪ್ರಜಾಪ್ರಭುತ್ವ ವಿರೋಧಿ! ಸಂವಿಧಾನ ವಿರೋಧಿ!! ದಲಿತ, ಹಿಂದುಳಿದವರ ವಿರೋಧಿ!!!
ಏಕೆಂದರೆ ಈ ದೇಶದಲ್ಲಿ ಅದೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಸುಪ್ರೀಮು? ಅಪ್ಪಟ ಪ್ರಜಾಪ್ರಭುತ್ವವಾದಿ ಬಾಬಾಸಾಹೇಬ್ ಅಂಬೇಡ್ಕರ್ ವಿರಚಿತ ಸಂವಿಧಾನದ ಪ್ರಕಾರ ಪಾಲರ್ಿಮೆಂಟ್ ತಾನೆ? ( ನಂತರ ಅದನ್ನು ಹಜಾರೆ ಒಪ್ಪಿಕೊಂಡಿರಬಹುದು ಅದು ಬೇರೆ ಮಾತು. ಆದರೆ ಉಪವಾಸ ಸಂಧರ್ಭದಲ್ಲಿ?) ವಸ್ತು ಸ್ಥಿತಿ ಹೀಗಿರುವಾಗ ಲೋಕಪಾಲ ಮಸೂದೆಯಂತಹ ಗಂಭಿರ ಕಾನೂನು ರಚನೆಯನ್ನು ಆಯ್ದ ಕೆಲವೇ ಮಂದಿ ನಾಗರೀಕರಿಗೆ ನೀಡಿ ಎಂದದ್ದು ಅದೆಷ್ಟು ಸರಿ? ಅದೆಷ್ಟು ಸಂವಿಧಾನ ಬದ್ಧ? ಅದೂ ಕೂಡ ಅದರಲ್ಲಿ ದಲಿತರು ಮತ್ತು ಹಿಂದುಳಿದವರಿಗೆ ಸೂಕ್ತ ಪ್ರಾತಿನಿಧ್ಯ ಕೂಡ ಇಲ್ಲ ಯಾಕೆ? ಅಂದಹಾಗೆ ಇದು ಸಂವಿಧಾನ ಬದ್ಧವಲ್ಲವೆಂದ ಮೇಲೆ ಹಜಾರೆ ಎಂಬ ಗಾಂಧಿವಾದಿ ನಡೆಸಿದ ಉಪವಾಸ ಸತ್ಯಾಗ್ರಹ ಎಂಬ ದಾಳಿ ಯಾರ ವಿರುದ್ಧ? ಸಂವಿಧಾನದ ವಿರುದ್ಧವೇ ಅಲ್ಲವೇ? ಒಂದರ್ಥದಲಿ ಅದು ಗಾಂಧಿವಾದಿ ಹಜಾರೆ, ಅಂಬೇಡ್ಕರ್ ವಿರಚಿತ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೇಯ ವಿರುದ್ಧ ನಡೆಸಿದ ಭೀಭತ್ಸ ಹಲ್ಲೆ ಎನ್ನದೆ ವಿಧಿಯಿಲ್ಲ.
ಹಾಗಿದ್ದರೆ ಹಜಾರೆಯವರು ಎತ್ತಿದ ಭ್ರಷ್ಟಾಚಾರದ ಪ್ರಶ್ನೆ? ಭ್ರಷ್ಟಾಚಾರ ಇರಬೇಕೆ ಆಥವಾ ಅಂಬೇಡ್ಕರ್ವಾದಿಗಳು ಭ್ರಷ್ಟಾಚಾರವನ್ನು ಬೆಂಬಲಿಸುತ್ತಾರೆಂದು ಅರ್ಥವೇ? ಖಂಡಿತ ಇಲ್ಲ. ಭ್ರಷ್ಟಾಚಾರ ತೊಲಗಬೇಕು. ಅದಕ್ಕೆ ಪಿಎಸಿ, ಜೆಪಿಸಿ, ಸಿಬಿಐ, ಸಿವಿಸಿ, ಭ್ರಷ್ಟಾಚಾರ ನಿಗ್ರಹ ದಳ., ಪೋಲೀಸ್, ನ್ಯಾಯಾಲಯ ಇತ್ಯಾದಿ ಏಜೆನ್ಸಿಗಳಿವೆಯಲ್ಲವೇ? ಈಗಿರುವ ಕಾನೂನಿನಲ್ಲಿಯೇ ಅವುಗಳಿಗೆ ಸಾಕಷ್ಟು ಬಲವಿದೆ. ಅಕಸ್ಮಾತ್ ಈ ಸಂಸ್ಥೆಗಳಿಗೆ ಮತ್ತಷ್ಟು ಬಲ ಬೇಕೆಂದರೂ ಅಥವಾ ಭ್ರಷ್ಟಾಚಾರ ತಡೆಗಟ್ಟಲು ಮತ್ತೊಂದು ಸಂಸ್ಥೆ ಸ್ಥಾಪಿಸಬೇಕೆಂದರೂ ಈ ದೇಶದ ಸಂಸತ್ತಿಗೆ ಅಂತಹದ್ದೊಂದು ಹಕ್ಕು ಅಧಿಕಾರ ಇದ್ದೇ ಇರುತ್ತದೆಯಲ್ಲವೇ? ಹೀಗಿರುವಾಗ ಇಂತಹದ್ದೊಂದು ಹಕ್ಕು ಅಧಿಕಾರವನ್ನು ಆಯ್ದ ಕೆಲ ನಾಗರೀಕರಿಗೆ ನೀಡಿ ಎಂದದ್ದು ಅದೆಷ್ಟು ಸರಿ? ಯಾಕೆಂದರೆ ಮುಂದೊಂದು ದಿನ ಲೋಕಪಾಲ ಮಸೂದೆಯ ಹಾಗೆಯೇ ಬೇರೆ ಬೇರೆ ಮಸೂದೆಯ ರಚನೆಯಲ್ಲಿಯೂ ತಮಗೆ ಅವಕಾಶ ಕೊಡಿ ಎಂದು ಕಳ್ಳರು ಕಾಕರು ಸಮಾಜ ಘಾತುಕ ವ್ಯಕ್ತಿಗಳು ಉಪವಾಸ ಕುಳಿತರೇ ? ಅಮರಣಾಂತ ನಿರಶನ ಕೈಗೊಂಡರೆ? ಆಗ ಅದನ್ನು ವಿರೋಧಿಸುವ ನೈತಿಕತೆ ನಮಗಿರುತ್ತದೆಯೇ? ಹಜಾರೆಗೊಂದು ನ್ಯಾಯ ಇತರರಿಗೊಂದು ನ್ಯಾಯ ಎನ್ನಲು ಸಾಧ್ಯವೇ?
ಅಂದಹಾಗೆ ಆಯ್ದ ಕೆಲ ನಾಗರೀಕರು ಎಂದರೆ ಹಜಾರೆ ಮತ್ತು ಮಿತ್ರರು, ಶಾಂತಿಭೂಷಣ್, ಪ್ರಶಾಂತ್ ಭೂಷಣ್ ಎಂಬಿಬ್ಬರು ಅಪ್ಪ ಮಕ್ಕಳು ಮಾತ್ರವಂತೆ! ಯಾಕೆ ಬೇರಾರು ಇಲ್ಲವೇ? ಏಕೆಂದರೆ ಇತ್ತೀಚಿಗೆ ಬಿಡುಗಡೆಯಾದ ಜನಸಂಖ್ಯಾ ವರದಿ ಪ್ರಕಾರ ಈ ದೇಶದ ಒಟ್ಟು ಜನಸಂಖ್ಯೆ ಬರೋಬ್ಬರಿ 120 ಕೋಟಿ. ಹೀಗಿರುವಾಗ ಕೇವಲ ನಾಲ್ಕೈದು ಮಂದಿಗೆ ಈ ದೇಶದ ಭವಿಷ್ಯ ನಿರ್ಧರಿಸ ಬಲ್ಲಂತಹ ಮಸೂದೆ ರಚಿಸುವ , ಅದೂ ಸಂವಿಧಾನ ವಿರೋಧಿ ಮಾರ್ಗದಲ್ಲಿ ಹಕ್ಕು ಅಧಿಕಾರ ನೀಡುವುದಾದರೆ ಈ ದೇಶದ ಉಳಿದ ನಾಗರೀಕರೇನು ಮಾಡಬೇಕು? ಸಂವಿಧಾನ ಈ ನಾಗರೀಕರಿಗೆ ನೀಡಿರುವ ಓಟಿಗೆ ಅರ್ಥವಾದರೂ ಏನಿರುತ್ತದೆ? ಒಂದಂತು ನಿಜ ಇಂತಹ ಸಂವಿಧಾನ ವಿರೋಧಿ ಅಜೆಂಡಾ ಹೊಂದಿದ್ದರಿಂದಲೇ ಹಜಾರೆಯವರು ಗೋಧ್ರಾ ಹತ್ಯಾಕಾಂಡದಂತಹ ಗಂಭೀರ ಸಂವಿಧಾನ ವಿರೋಧಿ ಕೃತ್ಯ ನಡೆಸಿಯೂ , ಪರಮ ಭ್ರಷ್ಟಾಚಾರ ನಡೆಸಿಯೂ ಅಧಿಕಾರದಲ್ಲಿ ಮುಂದುವರಿದಿರುವ ನರೇಂದ್ರ ಮೋದಿಯನ್ನು ಬೆಂಬಲಿಸಿದ್ದು! ಅವರ ಸಹಮಾರ್ಗದಲ್ಲಿ ಸಾಗುತ್ತಿರುವ ನಿತೀಶ್ ಕುಮಾರ್ರನ್ನು ಬೆಂಬಲಿಸಿ ಮಾತಾಡಿದ್ದು. ಯಾಕೆ ಹಜಾರೆಗೆ ಮಾಯಾವತಿ ಕಾಣಲಿಲ್ಲವೇ? ಎಲ್ಲಿ ಕಾಣುತ್ತಾರೆ ಹೇಳಿ ? ಹೇಳಿ ಕೇಳಿ ಅಕೆ ದಲಿತ ವರ್ಗಕ್ಕೆ ಸೇರಿದ ಹೆಣ್ಣು ಮಗಳು . ಗಾಂಧಿವಾದಿಗಳಿಗೂ ದಲಿತರಿಗೂ ಹೊಂದಾಣಿಕೆ ಸಾಧ್ಯವೇ? ಅದಕ್ಕೆ ಹೇಳಿದ್ದು ಹಜಾರೆಯವರ ಉಪವಾಸ ದಲಿತ ವಿರೋಧಿ ಎಂದು.
ಕುತೂಹಲಕಾರಿ ವಿಷಯವೊಂದೆಂದರೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದುರಾಡಳಿತದಂತಹ ಬಹುತೇಕ ಆರೋಪಗಳು ಬರುವುದು ದಲಿತರು, ಹಿಂದುಳಿದವರ ಮೇಲೆ! ಲೋಕಾಯುಕ್ತರಂತೂ ಹುಡುಕಿ ಹುಡುಕಿ ದಲಿತ, ಹಿಂದುಳಿದ ವರ್ಗಗಳಿಗೆ ಸೇರಿದ ಅಧಿಕಾರಿಗಳನ್ನು, ನೌಕರರನ್ನು ಭ್ರಷ್ಟರ ಬಲೆಗೆ ಬೀಳಿಸುತ್ತಾರೆ . ಭ್ರಷ್ಟಾಚಾರದ ಆರೋಪದ ಮೇಲೆ ಕಟಕಟಗೆ ತಂದು ನಿಲ್ಲಿಸುತ್ತಾರೆ. ಅದೂ ಆ ದಲಿತ, ಹಿಂದುಳಿದ ಜನಾಂಗದ ವ್ಯಕ್ತಿ ತನ್ನ ಜನಾಂಗದ ಹಿತಕ್ಕಾಗಿ ದುಡಿಯುತ್ತಾನೆಂದು ಕಂಡುಬಂದರಂತೂ ಅವನ ಕಥೆ ಮುಗಿಯಿತೆಂದೇ ಅರ್ಥ! ಯಾಕೆಂದರೆ ಲೋಕಾಯುಕ್ತ ಅಂತಹವರ ವಿರುದ್ಧ ಮುಗಿಬೀಳುತ್ತದೆ. ಒಂದಂತು ನಿಜ ದಲಿತರು , ಹಿಂದುಳಿದ ವರ್ಗದವರು ಇತ್ತ ಮೀಸಲಾತಿಯ ಮೂಲಕ ಕೆಲಸಕ್ಕೆ ಸೇರುತ್ತಿದ್ದಂತೆ ಅತ್ತ ಲೋಕಾಯುಕ್ತ ಅವರ ವಿರುದ್ಧ ಕ್ರಮ ಕೈಗೊಳ್ಳಲು ಅತ್ತ ಕತ್ತಿ ಮಸೆಯಲು ಪ್ರಾರಂಬಿಸಿರುತ್ತದೆ! ಅವರ ಆಸ್ತಿಯನ್ನು ವಶಪಡಿಸಿಕೊಳ್ಳುವುದು ಎಂದು? ಯಾವಾಗ? ಎಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿರುತ್ತದೆ! ಬೇಕಿದ್ದರೆ ರಾಜ್ಯದಲ್ಲಿ ಇದುವರೆಗೆ ನಡೆದಿರುವ ದಾಳಿಗಳನ್ನು, ಆ ದಾಳಿಗಳಿಗೆ ಒಳಗಾಗಿರುವ ನೌಕರರ ಜಾತಿಯನ್ನು ಲೋಕಾಯುಕ್ತರು ಬಹಿರಂಗ ಪಡಿಸಲಿ ? ಅರತಹ ಪಟ್ಟಿಯನ್ನು ಹೊರಹಾಕಲಿ ? ಖಂಡಿತ ಆ ಪಟ್ಟಿಯಲ್ಲಿರುವವರು ಬಹುತೇಕರು ದಲಿತರು, ಹಿಂದುಳೀದವರು.
ಹಾಗಿದ್ದರೆ ದಲಿತರು ಮತ್ತು ಹಿಂದುಳಿದವರು ಮಾತ್ರ ಭ್ರಷ್ಟರೇ? ಉಳಿದವರೆಲ್ಲಾ ಸಾಚಾ ಜನರೆ? ಈ ನಿಟ್ಟಿನಲ್ಲೇ ಭ್ರಷ್ಟಾಚಾರ ವಿರೋಛಧಿ ಮಸೂದೆ ದಲಿತವಿರೋಧಿ , ಹಿಂದುಳಿದವರ ವಿರೋಧಿ ಎಂದಿದ್ದು. ಅಂದಹಾಗೆ ಅಂತಹ ಮಸೂದೆ ತಯಾರಿಕೆಯನ್ನು ಕೆಲವೇ ನಾಗರೀಕರಿಗೆ ನೀಡಿರುವುದರಿಂದ ಜಾತಿಯ ಮಸುಕು ಹೊದ್ದ ಅವರೇನು ಮಾಡುತ್ತಾರೆ? ದಲಿತರನ್ನು , ಹಿಂದುಳಿದವರನ್ನು ಇನ್ನಷ್ಟು ಬಲಿಹಾಕುತ್ತಾರಷ್ಟೆ. ( ಈಗ ದಲಿತ ವರ್ಗಕ್ಕೆ ಸೇರಿದ ಮಾಜಿ ಸಚಿವ ಎ.ರಾಜಾ ಅವರನ್ನು ಬಲಿಹಾಕುತ್ತಿದ್ದಾರಲ್ಲಾ ಹಾಗೆ. ಏಕೆಂದರೆ ರಾಜಾ ಅವರ ಪ್ರಕರಣದ ತನಿಖೆ ನಡೆಸಿದ ಸಿಬಿಐ ಅವರಿಂದಾದ ನಷ್ಟ ಸುಮಾರು 30000 ಕೋಟಿ ಎಂದು ಅಂದಾಜು ಮಾಡಿದೆ. ಹಾಗಿದ್ದರೆ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಉಳಿದ 1 ಲಕ್ಷದ 45 ಸಾವಿರ ಕೋಟಿ ನುಂಗಿದ್ದು ಯಾರು? ಏಕೆಂದರೆ ಸಿಎಜಿ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ 1ಲಕ್ಷದ 75 ಸಾವಿರ ಕೋಟಿ ನಷ್ಟ ಎಂದು ವರದಿ ನೀಡಿದೆ. ರಾಜಾ ಅವರಿಂದಾದ 30000 ಕೋಟಿ ಕಳೆದರೆ ಉಳಿಯುವುದು 1ಲಕ್ಷದ 45 ಸಾವಿರ ಕೋಟಿ ತಾನೆ? ಹಾಗಿದ್ದರೆ ಈ ಉಳಿದ ಹಣವನ್ನು ಕಬಳಿಸಿದ್ದು ಯಾರು? ಕುತೂಕಹಲಕರವೆಂದರೆ ಈ ಹಗರಣದಲ್ಲಿ ಕೇಳಿಬರುವ ಇತರ ಹೆಸರುಗಳಾದ ಅರುಣ್ ಜ್ಯೇಟ್ಲಿ, ಧಯಾನಿಧಿ ಮಾರನ್, ಸುಖ್ ರಾಂ , ಅನಂತ್ ಕುಮಾರ್, ನೀರಾರಾಡಿಯಾ, ಅನಿಲ್ ಅಂಬಾನಿ, ರತನ್ ಟಾಟಾ ಇತ್ಯಾದಿ ಜನರನ್ನು ವ್ಯವಸ್ಥೆ ರಕ್ಷಿಸುತ್ತಿದೆ. ಅವರು ಮೇಲ್ಜಾತಿಯವರೆಂಬ ಕಾರಣಕ್ಕಾಗಿಯೇ ಒಂದರ್ಥದಲಿ ರಕ್ಷಿಸಕಲ್ಪಡುತ್ತಿದ್ದಾರೆ. ಆದರೆ ರಾಜಾ ದಲಿತರಾದ ಕಾರಣಕ್ಕೆ ಬಲಿಯಾಗುತ್ತಿದ್ದಾರೆ!)
ಈ ನಿಟ್ಟಿನಲ್ಲೇ ಭ್ರಷ್ಟಾಚಾರ ವಿರೋಧಿ ಕಾನೂನು ರಚನೆಯಾಗುತ್ತಿದೆ ಎಂದರೆ in other sense ಅದು ದಲಿತ ವಿರೋಧಿ ಕಾನೂನೇ ಎಂಬಂತಾಗಿದೆ. ಹಿಂದೆ ಮಹಾತ್ಮ ಗಾಂಧಿಯವರು ಪೂನಾ ಒಪ್ಪಂದದ ಸಂಧರ್ಭದಲಿ ದಲಿತರ ವಿರುದ್ಧ ಉಪವಾಸ ಕುಳಿತಿದ್ದರು. ಈಗಲೂ ಅಷ್ಟೆ ಗಾಂಧಿವಾದಿ ಹಜಾರೆ ಲೋಕಪಾಲ ಮಸೂದೆಯ ಹೆಸರಿನಲ್ಲಿ ದಲಿತ ನೌಕರರ ವಿರುದ್ಧ ಉಪವಾಸ ನಡೆಸಿದ್ದಾರೆ! ಅಕಸ್ಮಾತ್ ಹಜಾರೆಯವರಿಗೆ ಸಮಾಜದ ಬಗ್ಗೆ ಅಂತಹ ಕಾಳಜಿ ಇದೆ ಎನ್ನುವುದಾದರೆ ಅವರು ಜಾತೀಯತೆಯ ವಿರುದ್ಧ, ಅಸೃಶ್ಯತೆಯ ವಿರುದ್ಧ ಉಪವಾಸ ಕೂರುತ್ತಿದ್ದರು! ಆದರೆ?
ಆತಂಕದ ವಿಷಯವೊಂದನ್ನು ಇಲ್ಲಿ ಪ್ರಸ್ತಾಪಿಸಲೇ ಬೇಕು. ಅದೇನೆಂದರೆ ಬಾಲಿವುಡ್ ನಟ ಅನುಪಮ್ ಖೇರ್ ಹಜಾರೆಯವರ ಸತ್ಯಾಗ್ರಹವನರ್ನು ಬೆಂಬಲಿಸುತ್ತಾ ಪ್ರಸ್ತುತ ಇರುವ ಸಂವಿಧಾನವನ್ನು ಬದಲಿಸಬೇಕೆಂದರು. ತನ್ಮೂಲಕ ತಮ್ಮ ಸಂವಿಧಾನ ವಿರೋಧಿ ಅಜೆಂಡಾವನ್ನು ಜಗಜ್ಜಾಹೀರುಗೊಳಿಸಿದರು! ಹೀಗಿರುವಾಗ ಅಣ್ಣಾ ಹಜಾರೆ ಮತ್ತು ಮಿತ್ರರ ಇಂತಹ ಸಂವಿಧಾನ ವಿರೋಧಿ , ಅಂಬೇಡ್ಕರ್ ವಿರೋಧಿ ಹೋರಾಟವನ್ನು ದಲಿತರು, ಹಿಂದುಳಿದವರು ಬೆಂಬಲಿಸಬೇಕೆ? ಅವರ ಆಟಾಟೋಪವನ್ನು ಸಹಿಸಿಕೊಳ್ಳಬೇಕೆ? ಇಲ್ಲ, ದಲಿತರು ಹಿಂದುಳಿದವರು ಮತ್ತಿತರ ಪ್ರಜ್ಞಾವಂತರು ಈ ನಿಟ್ಟಿನಲಿ ಎಚ್ಚತ್ತುಕೊಳ್ಳಬೇಕಿದೆ. ಭ್ರಷ್ಟಾಚಾರ ನಿಗ್ರಹದ ಹೆಸರಿನಲ್ಲಿ ನಡೆಯುತ್ತಿರತುವ ಇಂತಹ ಸಂವಿಧಾನ ವಿರೋಧಿಗಳ ದುಷ್ಟ ಹುನ್ನಾರವನ್ನು ಹತ್ತಿಕ್ಕಬೇಕಿದೆ. ತನ್ಮೂಲಕ ಸಂವಿಧಾನದ ರಕ್ಷಣೆಗೆ ಬೀದಿಗೆ ಇಳಿಯಬೇಕಿದೆ.
ರಘೋತ್ತಮ ಹೊ.ಬ
ಚಾಮರಾಜನಗರ
email:raghothama16hb@gmail.com
Raghothama Ho Ba
09481189116
No comments:
Post a Comment