Pages

Thursday, 28 April 2011

ಒಗ್ಗಟ್ಟು: ದಲಿತ ಸಂಘಟನೆಗಳಿಗೆ ಚಂಪಾ ಸಲಹೆ


ಒಗ್ಗಟ್ಟು: ದಲಿತ ಸಂಘಟನೆಗಳಿಗೆ ಚಂಪಾ ಸಲಹೆ
ಪ್ರಜಾವಾಣಿ ವಾರ್ತೆ
'ರಾಜ್ಯದಲ್ಲಿನ ಬಹಳಷ್ಟು ಚಳವಳಿಗಳು ಕುಸಿಯಲು ಹೊರಗಿನ ಆಕ್ರಮಣಗಳಿಂತ ಒಳಗಿನ ವೈರುಧ್ಯಗಳೇ ಕಾರಣವಾಗಿವೆ. ಬಂಡಾಯ ಸಾಹಿತ್ಯ ಸಂಘಟನೆ, ಲೋಹಿಯಾ, ಅಂಬೇಡ್ಕರ್, ಮಾರ್ಕ್ಸ್‌ವಾದ, ರೈತ ಸಂಘಟನೆ ದಲಿತರನ್ನು ಆಕರ್ಷಿಸಲು ಸಫಲವಾಗಲಿಲ್ಲ'


ಶಿವಮೊಗ್ಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ದಲಿತ ಲೇಖಕರ, ಕಲಾವಿದರ ರಾಜ್ಯ ಸಮ್ಮೇಳನ-2’ವನ್ನು ಸಾಹಿತಿ ಚಂದ್ರಶೇಖರ ಪಾಟೀಲ ಉದ್ಘಾಟಿಸಿದರು. ಗೋಪಜ್ಜಿ ನಾಗಪ್ಪ, ರುದ್ರಪ್ಪ ಹನಗವಾಡಿ, ಕೆ.ಟಿ. ಶಿವಪ್ರಸಾದ್, ಡಾ.ಶ್ರೀಕಂಠ ಕೂಡಿಗೆ, ಇಂದಿರಾ ಕೃಷ್ಣಪ್ಪ ಮತ್ತಿತರರು ಚಿತ್ರದಲ್ಲಿದ್ದಾರೆ.    
ಶಿವಮೊಗ್ಗ:
 ದಲಿತ ಸಂಘಟನೆಗಳು ತಮ್ಮೆಲ್ಲಾ ಬಣ ಮತ್ತು ವಾದಗಳನ್ನು ಕಳಚಿಕೊಂಡು ಏಕಶಕ್ತಿಯಾಗಿ ರೂಪುಗೊಳ್ಳುವ ಆವಶ್ಯಕತೆ ಇದೆ ಎಂದು ಸಾಹಿತಿ ಚಂದ್ರಶೇಖರ ಪಾಟೀಲ ಇಲ್ಲಿ ಶುಕ್ರವಾರ ಪ್ರತಿಪಾದಿಸಿದರು.

 ನಗರದ ಕುವೆಂಪು ರಂಗಮಂದಿರದಲ್ಲಿ ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ಸಂಯುಕ್ತವಾಗಿ ಏರ್ಪಡಿಸಿದ್ದ ಎರಡು ದಿನಗಳ ‘ದಲಿತ ಲೇಖಕರ, ಕಲಾವಿದರ ರಾಜ್ಯ ಸಮ್ಮೇಳನ-2’ನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಲಿತ ಹೋರಾಟ ಎಂದರೆ ಅದು ಅಂಬೇಡ್ಕರ್ ಹೋರಾಟವೇ ಆಗಿರುತ್ತದೆ. ಹಾಗಾಗಿ, ದಲಿತ ಸಂಘ, ಬಣ, ವಾದಗಳೆಂಬ ಅಗ್ರಹಾರಗಳನ್ನು ಕಟ್ಟಿಕೊಳ್ಳಬೇಕಾಗಿಲ್ಲ. ಮೂಲ ಸಂಘಟನೆ ಸರಿಯಾಗಿ ಇದ್ದರೆ ಈ ರೀತಿ ಬಣಗಳು ಹುಟ್ಟಿಕೊಳ್ಳುತ್ತಿರಲಿಲ್ಲ ಎಂದು ವಿಷಾದಿಸಿದರು.

 ರಾಜ್ಯದಲ್ಲಿನ ಬಹಳಷ್ಟು ಚಳವಳಿಗಳು ಕುಸಿಯಲು ಹೊರಗಿನ ಆಕ್ರಮಣಗಳಿಂತ ಒಳಗಿನ ವೈರುಧ್ಯಗಳೇ ಕಾರಣವಾಗಿವೆ. ಬಂಡಾಯ ಸಾಹಿತ್ಯ ಸಂಘಟನೆ, ಲೋಹಿಯಾ, ಅಂಬೇಡ್ಕರ್, ಮಾರ್ಕ್ಸ್‌ವಾದ, ರೈತ ಸಂಘಟನೆ ದಲಿತರನ್ನು ಆಕರ್ಷಿಸಲು ಸಫಲವಾಗಲಿಲ್ಲ. ವರ್ಣ, ವರ್ಗದ ಹೋರಾಟದಲ್ಲಿ ಎಲ್ಲರೂ ವರ್ಗವನ್ನು ಗುರಿ ಮಾಡಿದರೇ ಹೊರತು, ಜಾತಿಯನ್ನು ಪ್ರಧಾನವಾಗಿಟ್ಟುಕೊಳ್ಳಲಿಲ್ಲ. ಹಾಗಾಗಿ, ದಲಿತರು ಅದರಿಂದ ಹೊರ ಬರಬೇಕಾಯಿತು ಎಂದು ವಿಶ್ಲೇಷಿಸಿದರು.

No comments:

Post a Comment

html