ಡಾ|ಬಿ.ಅರ್. ಅಂಬೇಡ್ಕರ್ ಬೌದ್ದ ಧರ್ಮವನ್ನು ಸ್ವೀಕರಿಸಿರಬಹುದು ಆದರೆ ಅವರು ಮುಸ್ಲೀಮರ, ಕ್ರೈಸ್ತರ ಸಮಸ್ಯೆಯ ವಿರುದ್ದ ಹೋರಾಡಿದ್ದಾರೆ ಎಂದು ವಾರ್ತಾಭಾರತಿ ದೈನಿಕ ಪತ್ರಿಕೆಯ ಸಂಪಾದಕ ಬಿ.ಎಂ. ಬಸೀರ್ ಅಭಿಪ್ರಾಯ ಪಟ್ಟಿದ್ದಾರೆ.
ಉಡುಪಿಯ ಡಾನ್ ಬಾಸ್ಕೋ ಸಭಾಂಗಣದಲ್ಲಿ ಜಿಲ್ಲಾ ಅಲ್ಪ ಸಂಖ್ಯಾತರ ವೇದಿಕೆ, ರಾಜ್ಯ ದಲಿತ ಸಂಘರ್ಷ ಸಮಿತಿ, ರಾಜ್ಯ ಕೋಮು ಸೌಹಾರ್ದ ವೇದಿಕೆ, ಜಿಲ್ಲಾ ಮುಸ್ಲೀಂ ಒಕ್ಕೂಟ, ಕ್ಯಾಥೋಲಿಕ್ ಸಭೆಯ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ|ಬಿ.ಆರ್. ಅಂಬೇಡ್ಕರ್ ಅವರ ದಿನಾಚರಣೆಯನ್ನು ಆಚರಿಸಲಾಯಿತು. ಸಮಾರಂಭವನ್ನು ವಾರ್ತಾ ಭಾರತಿ ಪತ್ರಿಕೆಯ ಸಂಪಾದಕ ಬಿ.ಎಂ. ಬಶೀರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ನೆರೆದ ಗಣ್ಯರು ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಶೀರ್, ದಲಿತರನ್ನು ಪ್ರೀತಿಯಿಂದ ಕಾಣಲಿಕ್ಕೆ, ಅನ್ಯೋನ್ಯವಾಗಿ ಬದುಕಲಿಕ್ಕೆ ಯಾವ ರಾಜಕೀಯ ಪಕ್ಷಗಳ ಅಗತ್ಯ ಬೇಕಾಗಿಲ್ಲ. ದಲಿತರಲ್ಲೇ ಅತೀ ಹೆಚ್ಚು ದೌರ್ಜನ್ಯಕ್ಕೆ ಒಳಗಾದವರೂ ಇದ್ದಾರೆ. ಮುಸ್ಲೀಮರಲ್ಲೂ ಬ್ರಾಹ್ಮಣರಂತೆ ಮಲಗಿರುವ ಹಾವುಗಳೂ ಇದ್ದಾರೆ ಎಂದು ಅಭಿಪ್ರಾಯ ಪಟ್ಟರು.
ವೇದಿಕೆಯಲ್ಲಿ ಖ್ಯಾತ ಅಂಕಣಕಾರ ಶಿವ ಸುಂದರ್, ಉಪನ್ಯಾಸಕ ಪಣಿರಾಜ್, ಮಂದಾರ್ತಿ ಹೈಸ್ಕೂಲ್ನ ಪ್ರಾದ್ಯಾಪಕ ನಾರಾಯಣ ಮಣೂರು, ಜಿ.ರಾಜಶೇಖರ್, ಕ್ಯಾಥೋಲಿಕ್ ಸಭಾದ ವಾಲ್ಟರ್ ಸಿರಿಲ್ ಪಿಂಟೋ, ದಲಿತ ಸಂಘರ್ಷ ಸಮಿತಿಯ ಜಯನ್ ಮಲ್ಪೆ, ಶೇಖರ್ ಅಜ್ಮಾಡಿ, ಅಲ್ಪಸಂಖ್ಯಾತ ವೇದಿಕೆಯ ಕಾರ್ಯದರ್ಶಿ ಲೂವಿಸ್ ಅಲ್ಮೇಡಾ ಉಪಸ್ಥಿತರಿದ್ದರು.
No comments:
Post a Comment