ಮಂಗಳೂರು, ಆ.13: ಸುಳ್ಯ-ಪೆರಾ ಜೆಯ ದಲಿತ ಯುವಕನೊಬ್ಬನನ್ನು ಬಜರಂಗದಳದವರು ಅಪಹರಿಸಿ ಬೆತ್ತಲೆಗೊಳಿಸಿ ದೌರ್ಜನ್ಯ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥ 10 ಮಂದಿಯನ್ನು ದಲಿತ ದೌರ್ಜನ್ಯ ಕಾಯ್ದೆಯಡಿ ಬಂಧಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ದ.ಕ. ಜಿಲ್ಲಾ ಶಾಖೆಯು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
‘‘ಸುಮಾರು ಒಂದು ವರ್ಷದ ಹಿಂದೆ ಬಂಟ್ವಾಳ ತಾಲೂಕಿನ ಬರಿಮಾರಿನ ಬಜರಂಗದಳದ ಮಾಧವ ಕುಲಾಲ್ ಎಂಬವರ ತಂಗಿ ಅನಿತಾ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಪೆರಾಜೆಯ ಶ್ರೀಧರ ಎಂಬ ದಲಿತ ಯುವಕನನ್ನು ಬಜರಂಗದಳದವರು ಅಪಹರಿಸಿ ಬಂಟ್ವಾಳಕ್ಕೆ ಕರೆದೊಯ್ದು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿ ದೌರ್ಜನ್ಯ ಎಸಗಿದ್ದರು. ಆದರೆ ಈ ಪ್ರಕರಣದಲ್ಲಿ ಶ್ರೀಧರ್ ನಿರಪರಾಧಿ.
ಯುವತಿಯರ ಸರಣಿ ಹತ್ಯಾ ಆರೋಪಿ ಮೋಹನ್ ಕುಮಾರ್‌ನಿಂದ ಅನಿತಾ ಹಾಗೂ ಶ್ರೀಧರ್ ತಂಗಿ ಕಾವೇರಿ ಕೂಡಾ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ವಾಸ್ತವ ಹೀಗಿದ್ದು, ಬಜರಂಗದಳದವರು ಕಾನೂನನ್ನು ಕೈಗೆತ್ತಿಕೊಂಡು ನಡೆಸಿದ ದೌರ್ಜನ್ಯ ದಿಂದ ಶ್ರೀಧರ್ ದೈಹಿಕ ಹಾಗೂ ಮಾನಸಿಕವಾಗಿ ಘಾಸಿಗೊಂಡಿ ದ್ದಾರೆ’’ ಎಂದು ಪ್ರತಿಭಟನ ಕಾರರನ್ನುದ್ದೇಶಿಸಿ ದಸಂಸ ಜಿಲ್ಲಾ ಪ್ರಧಾನ ಸಂಚಾಲ ಎಸ್.ಪಿ.ಆನಂದ ಹೇಳಿದರು. ನೊಂದ ಶ್ರೀಧರ್‌ರ ಜೀವನ ನಿರ್ವಹಣೆಗೆ ಯಾವುದಾದರೂ ಸರಕಾರಿ ಉದ್ಯೋಗ ನೀಡಿ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಈ ಸಂದರ್ಭ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಂಗಳೂರು ವಿವಿಯ ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿಶೇಷ ಅಧಿಕಾರಿ ಉಮೇಶ್ಚಂದ್ರ ಮಾತನಾಡಿ ವಿದ್ಯಾವಂತ ದಲಿತರು ಈ ರೀತಿಯ ದಲಿತ ವಿರೋಧಿ ದೌರ್ಜನ್ಯ ಗಳ ವಿರುದ್ಧ ಧ್ವನಿ ಎತ್ತಲು ಮುಂದಾಗದಿ ರುವುದು ದುರಂತ ಎಂದು ಖೇದ ವ್ಯಕ್ತಪಡಿಸಿದರು. ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿ ಮೂಲಕ ಗೃಹಸಚಿವರಿಗೆ ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಕಾರ್ಪೊರೇಟರ್ ಅಪ್ಪಿ, ದಸಂಸ ಒಕ್ಕೂಟದ ಅಧ್ಯಕ್ಷ ನಿರ್ಮಲ್ ಕುಮಾರ್, ಜಗದೀಶ್ ಪಾಂಡೇಶ್ವರ ಮೊದಲಾದವರು ಉಪಸ್ಥಿತರಿದ್ದರು. ಇದೇ ವೇಳೆ ದಸಂಸ (ಅಂಬೇಡ್ಕರ್ ವಾದ) ದ.ಕ. ಜಿಲ್ಲಾ ಸಮಿತಿ ಪದಾಧಿಕಾ ರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾ ರಿಗೆ ಮನವಿ ಸಲ್ಲಿಸಿದರು. ಈ ಕುರಿತು ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಎಸ್ಪಿ ಸುಬ್ರಹ್ಮ ಣ್ಯೇಶ್ವರ ರಾವ್, ‘‘ಪ್ರಸ್ತುತ ಪ್ರಕರಣದ ತನಿಖೆಯನ್ನು ಎಎಸ್ಪಿ ಅಮಿತ್ ಕುಮಾರ್ ಸಿಂಗ್‌ಗೆ ವಹಿಸ ಲಾಗಿದೆ. ಆರೋಪಿಗಳ ಗುರುತು ಹಚ್ಚುವ ಪಕ್ರಿಯೆ ನಡೆದು, ದೂರುದಾರ ಶ್ರೀಧರ್ ಗುರುತಿಸಿದ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲಾ ಗುವುದು. ಎಎಸ್ಪಿಯ ವರದಿಯ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು’’ ಎಂದು ಹೇಳಿದರು.
No comments:
Post a Comment