ಶುಕ್ರವಾರ - ಜನವರಿ -28-2011
ದೇಶ 61ನೆ ಗಣರಾಜ್ಯೋತ್ಸವ ಆಚರಿಸುತ್ತಿದೆ. ಹಾಗೆಂದರೇನು? ಯಥಾ ಪ್ರಕಾರ ದೆಹಲಿಯಲ್ಲಿ ನಮ್ಮ ರಕ್ಷಣಾ ಪಡೆಗಳು ಅಮೆರಿಕ, ಇಸ್ರೇಲ್ ಮತ್ತಿತರ ದೇಶಗಳಿಂದ ಕೊಂಡು ಕೊಂಡ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿ ನೆರೆಹೊರೆಯ ದೇಶ ಗಳಿಗೆ ಭೀತಿ ಬಿತ್ತಲು ಮತ್ತು ರಾಜ್ಯದಲ್ಲಿ ಶಾಲಾ ಮಕ್ಕಳು ಬಾಲಿವುಡ್‌ನ ಪ್ಲಾಸ್ಟಿಕ್ ದೇಶಪ್ರೇಮದ ಹಾಡುಗಳಿಗೆ ಡ್ಯಾನ್ಸ್ ಮಾಡಲು ಹಾಗೂ ಟಿವಿ ಚಾನೆಲ್‌ಗಳು ಹಸಿ ಮತ್ತು ಹುಸಿ ದೇಶ ಪ್ರೇಮದ ಚಲನಚಿತ್ರಗಳನ್ನು ದಿನವಿಡೀ ಪ್ರದ ರ್ಶಿಸಲು ಸಜ್ಜಾಗುವುದು ಎಂದೇ ಆರ್ಥವಾಗಿ ಬಿಟ್ಟಿದೆ. ಈ ನಡುವೆ ಎಲ್ಲಾ ಕಡೆ ದೇಶದ ಬಾವುಟವನ್ನು ಹಾರಿಸಿದಾಗ ನಮ್ಮ ಪ್ರಜಾ ಪ್ರಭುತ್ವದ ಬಗ್ಗೆ ಮತ್ತು ನಮ್ಮ ಸಂವಿಧಾನದ ಬಗ್ಗೆ ಈ ದೇಶದ ಪ್ರಭುಗಳೆಲ್ಲಾ ಹಾಡಿ ಹೊಗಳಾಡು ವುದು ವಾಡಿಕೆಯಾಗಿ ಬಿಟ್ಟಿದೆ. ಅದರ ಜೊತೆ ಜೊತೆಗೆ ಪ್ರಪಂಚದಲ್ಲಿ ಅತ್ಯುತ್ತಮ ಸಂವಿಧಾನ ವನ್ನು ನೀಡಿದ ಸಂವಿಧಾನ ಕರ್ತೃ ಬಾಬಾ ಸಾಹೇಬ್ ಅಂಬೇಡ್ಕರ್ ಎಂಬ ಮಾತನ್ನು ಸೇರಿಸಿಬಿಡಲಾಗುತ್ತಿದೆ.
ಕೇಳಲೇಬೇಕಾದ ಪ್ರಶ್ನೆಗಳು!
ಅಂಬೇಡ್ಕರ್ ಅವರ ಬದುಕಿನ ಆಶಯ ಗಳನ್ನು, ಅವರ ಹೋರಾಟಗಳನ್ನು ಹಾಗೂ ಈ ದೇಶದ ಎಲ್ಲಾ ಶೊಷಿತ ಮತ್ತು ದಮನಿತ ಜನತೆಯ ವಿಮೋಚನೆಗಾಗಿ-ಕೇವಲ ದಲಿತರ ವಿಮೋಚನೆಗಲ್ಲ-ಅವರು ನಡೆಸಿದ ಸತತ ಸಂಘರ್ಷವನ್ನು ಹಾಗೂ ಸಹಸ್ರಾರು ವರ್ಷ ಜಾತಿ-ವರ್ಗಗಳ ಶೋಷಣೆಯಿಂದ ಕಂಗೆಟ್ಟಿದ್ದ ಈ ದೇಶ ಸ್ವಾತಂತ್ರ್ಯ-ಸಮಾನತೆ-ಭ್ರಾತೃತ್ವಗಳ ನೆಲೆಗಟ್ಟಿನಲ್ಲಿ ಹೊಸ ದಾರಿಯಲ್ಲಿ ನಡೆ ಯಲು ಮಾರ್ಗವನ್ನರಿಸಿದ ದಾರ್ಶನಿಕ ಚಿಂತನೆಯನ್ನು ಅರ್ಥಮಾಡಿಕೊಂಡಿರುವ ಎಲ್ಲರಿಗೂ ಸಂವಿಧಾನದ ಜೊತೆ ಅಂಬೇ ಡ್ಕರ್ ಹೆಸರು ಜೋಡಿಸಿದೊಡನೆ ಸಂವಿ ಧಾನದ ಬಗ್ಗೆಯೂ ಅದೇ ರೀತಿಯ ಭಾವನೆಗಳು ಮೂಡುತ್ತವೆ. ಅದು ಸಹಜ.
ಆದರೆ 63 ವರ್ಷಗಳ ನಂತರವೂ, ಒಂದು ‘ಅತ್ಯುತ್ತಮ’ ಸಂವಿಧಾನವನ್ನು ಈ ದೇಶ ಹೊಂದಿದ್ದರೂ ಈ ದೇಶದ ಶೋಷಿತರ ಪರಿಸ್ಥಿತಿ, ದಲಿತರ ದಮನ, ರೈತಾಪಿಗಳ ಸಂಕಷ್ಟ ದಿನೇ ದಿನೇ ಹೆಚ್ಚುತ್ತಲೇ ಇರು ವುದು ಏಕೆ? 1947 ಕ್ಕೆ ಹೋಲಿಸಿ ದರೂ ಈ ದೇಶದಲ್ಲಿ ಶೇ.60 ಜನರ ಆಹಾರ ಬಳಕೆ ಕಡಿಮೆಯೇ ಆಗುತ್ತಿರುವುದು ಏಕೆ? ದಲಿತರ ಮೇಲಿನ ದಮನ ಇನ್ನೂ ಹೊಸ ಹೊಸ ರೂಪಗಳನ್ನು ಪಡೆದು ಕೊಂಡು ಭೀಕರ ರೂಪದಲ್ಲಿ ಮುಂದುವರಿಯುತ್ತಿರು ವುದೇಕೆ? ನಮ್ಮ ಆರ್ಥಿಕ ನೀತಿಗಳು ಮತ್ತು ಸಾಮಾಜಿಕ ನೀತಿಗಳು ಈ ದೇಶದ ಯಾರನ್ನೂ ಜಾತಿ-ಲಿಂಗ-ವರ್ಗದ ಆಧಾರದಲ್ಲಿ ತಾರತಮ್ಯ ಮಾಡದೆ ಎಲ್ಲರನ್ನೂ ಒಳಗೊಳ್ಳುವ ನೀತಿಗಳನ್ನು ಅನುಸರಿಸಬೇಕೆಂದು ಅಂಬೇಡ್ಕರ್ ಅವರೇ ಖುದ್ದಾಗಿ ರಚಿಸಿದ ಸಂವಿಧಾನದ ನಿರ್ದೇಶನಾ ತತ್ವಗಳಲ್ಲಿ ಇದ್ದರೂ ಸಾಮಾಜಿಕ ವಾಗಿ ಶೂದ್ರ-ದಲಿತರನ್ನು ಹೊರಗಿಡುವ ಹಿಂದುತ್ವ ಮತ್ತು ಆರ್ಥಿಕವಾಗಿ ಎಲ್ಲಾ ಬಡವ ರನ್ನು ಇನ್ನಷ್ಟು ಬಡತನದ ಕೂಪಕ್ಕೆ ತಳ್ಳುತ್ತಿ ರುವ ಜಾಗತೀಕರಣಗಳೆ ರಾಜ್ಯಭಾರ ಮಾಡಲು ಸಾಧ್ಯವಾದದ್ದು ಹೇಗೆ?
ಇವೆಲ್ಲವೂ ಕೇವಲ ಸಂವಿಧಾನದ ಅನುಷ್ಠಾನ ದಲ್ಲಿ ಇರುವ ಸಮಸ್ಯೆಯೋ? ಅಥವಾ ಸಂವಿ ಧಾನದ ರಚನೆಯಲ್ಲೇ ಇದ್ದ ಸಮಸ್ಯೆಯೋ? ಆದುದರಿಂದಲೇ ಅಂಬೇಡ್ಕರ್ ಅವರು ಕನಸಿದ ಸಂವಿಧಾನ ಮತ್ತು ಅಂತಿಮವಾಗಿ ಸಂವಿ ಧಾನ ರಚನಾ ಸಭೆ ನೀಡಿದ ಸಂವಿಧಾನ ವೂ ಎರಡೂ ನಿಜಕ್ಕೂ ಒಂದೇ ಆಗಿದೆಯೇ ಎಂಬ ಪ್ರಶ್ನೆಯನ್ನು ಈಗಲಾದರೂ ಹಾಕಿ ಕೊಳ್ಳಬೇಕಾ ಗುತ್ತದೆ..ಅಲ್ಲವೇ?
ಈ ಪ್ರಶ್ನೆಗೆ ಸರಿಯಾದ ಉತ್ತರವನ್ನು ಪಡೆದು ಕೊಳ್ಳಬೇಕೆಂದರೆ ಈ ದೇಶದ ಸಂವಿಧಾನವನ್ನು ರಚಿಸಿದ ಪ್ರಧಾನಶಕ್ತಿಗಳು ಯಾವುವು? ಮತ್ತು ಸಂವಿಧಾನ ರಚನಾ ಸಭೆಯಲ್ಲಿ ನಿಜಕ್ಕೂ ಅಂಬೇಡ್ಕರ್ ಕನಸಿದ ಸಮಾಜವಾದಿ ಆಶಯ ಗಳಿಗೂ ಮತ್ತು ರಚನಾ ಸಭೆಯಲ್ಲಿದ್ದ ಇತರ ಶಕ್ತಿಗಳಿಗೂ ನಡೆದ ವಾಗ್ವಾದಗಳೇನು? ಮತ್ತು ಅಂತಿಮವಾಗಿ ಅಂಬೇಡ್ಕರ್ ಈ ಸಂಘರ್ಷ ದಲ್ಲಿ ಈ ದೇಶದ ವರ್ಣಾಶ್ರಮ ವ್ಯವಸ್ಥೆಗೆ ಬಲಿ ಯಾಗಿ ಶೋಷಿತರು ಶತಶತಮಾನಗಳಿಂದ ಕನಸು ಕಾಣಲು ಸಾಧ್ಯವಾಗದೇ ಇದ್ದ ಕೆಲವು ಮೂಲಭೂತ ಹಕ್ಕುಗಳನ್ನು ಸಂಘರ್ಷದ ಮೂಲಕ ಗಳಿಸಿಕೊಟ್ಟಿದ್ದು ನಿಜವೇ ಆದರೂ ದಮನಿತ ಜನರ ಸಮಗ್ರ ವಿಮೋಚನೆಗೆ ಈ ಸಂವಿಧಾನ ನಿಜಕ್ಕೂ ಪೂರಕವಾಗುತ್ತದೆ ಎಂದು ಭಾವಿಸಿದ್ದರೆ ಎಂಬ ಪ್ರಶ್ನೆಯನ್ನೂ ಹಾಕಿಕೊಳ್ಳ ಬೇಕಾಗುತ್ತದೆ.
ಸಂವಿಧಾನ ರಚನಾ ಸಭೆ-ಉಳ್ಳವರಿಂದ ಉಳ್ಳವರಿಗಾಗಿ
ಮೊದಲನೆಯದಾಗಿ ಈ ದೇಶಕ್ಕೆ ‘‘ಸ್ವಾತಂತ್ರ್ಯವನ್ನು ನೀಡಲು’’ ಬಂದ ಬ್ರಿಟನ್ನಿನ ಕ್ಯಾಬಿನೆಟ್ ಮಿಷನ್ನಿನ ಸಲಹೆಯ ಮೇರೆಗೆ ಈ ದೇಶದಲ್ಲಿ ಸಂವಿಧಾನ ರಚನಾ ಸಭೆಯೊಂದು ರೂಪು ಗೊಂಡಿತು. ಆದರೆ ಈ ಸಂವಿಧಾನ ರಚನಾ ಸಭೆಯು ಆಯ್ಕೆಯಾಗುವುದು ಹೇಗೆ? ಅದಕ್ಕೆ ಬ್ರಿಟಿಷರು ಸೂಚಿಸಿದ ಮಾನದಂಡ ಮತ್ತು ಕಾಂಗ್ರೆಸ್ ನಾಯಕರು ಒಪ್ಪಿಕೊಂಡ ಮಾನ ದಂಡ ಎಂದರೆ ಪರೋಕ್ಷ ಮತದಾನ.
1935 ರಲ್ಲಿ ಬ್ರಿಟಿಷ್ ಚಕ್ರಾಧಿಪತ್ಯದ ಕೆಳಗೆ ಬ್ರಿಟಿಷರೇ ರಚಿಸಿದ ಗವರ್ನ್‌ಮೆಂಟ್ ಆಫ್ ಇಂಡಿಯಾ ಆಕ್ಟ್‌ನಡಿ ಈ ದೇಶದಲ್ಲಿ ಪ್ರಾಂತೀಯ ಅಸೆಂಬ್ಲಿ ಗಳನ್ನು ರಚಿಸಲಾಗಿತ್ತು. ಅದು ಬಡವರು, ದಲಿತರು, ಅನಕ್ಷರಸ್ಥರು ಎಲ್ಲರೂ ಸೇರಿ ಮಾಡಿದ ಸಾರ್ವತ್ರಿಕ ಮತದಾನದ ಮೂಲಕ ಆಯ್ಕೆಯಾದ ಅಸೆಂಬ್ಲಿಗಳಲ್ಲ. ಬದಲಿಗೆ ಪದವೀಧರರು ಮತ್ತು ಆಸ್ತಿವಂತರಿಗೆ ಮಾತ್ರ ಮತದಾನದ ಹಕ್ಕಿದ್ದ ಮತಕ್ಷೇತ್ರಗಳ ಮೂಲಕ ಆಯ್ಕೆಯಾದ ಅಸೆಂಬ್ಲಿಗಳು. ಸಹಜವಾಗಿಯೇ ವಿದ್ಯೆ ಮತ್ತು ಆಸ್ತಿ ಎರಡು ಮೇಲ್ಜಾತಿ ಮತ್ತು ಮೇಲ್ವರ್ಗಗಳಿಗೆ ಮಾತ್ರ ಸೀಮಿತವಾಗಿದ್ದ ಈ ದೇಶದಲ್ಲಿ ಈ ಮೂಲಕ ಆಯ್ಕೆಯಾದ ಶೇ.90 ರಷ್ಟು ಜನ ಮೇಲ್ವರ್ಗ ಮತ್ತು ಮೇಲ್ಜಾತಿಗಳಿಗೆ ಸೇರಿದ್ದವರು ಮಾತ್ರವಲ್ಲ. ಮೇಲ್ವರ್ಗ ಮತ್ತು ಮೇಲ್ಜಾತಿಗಳ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶವುಳ್ಳವರೇ ಆಗಿದ್ದರು.
ಸಂವಿಧಾನ ರಚನಾ ಸಭೆ ಆಯ್ಕೆಯಾಗಿದ್ದು ಈ ಪ್ರಾಂತಿಯ ಸಭೆಗಳ ಸದಸ್ಯರಾಗಿದ್ದವರ ಮತದಾನದಿಂದ! ಅಂದರೆ ಒಂದು ಅಂದಾಜಿನ ಪ್ರಕಾರ ಈ ದೇಶದ ಶೇ.17ರಷ್ಟು ಜನ ಮಾತ್ರ ಮಾಡಿದ ಮತದಾನದ ಮೂಲಕ.! ಹಾಗೆಯೇ ಸಂವಿಧಾನ ರಚನಾಸಭೆಗೆ ಪ್ರಧಾನವಾಗಿ ಆಯ್ಕೆ ಯಾದದ್ದು ಮೇಲ್ಜಾತಿ ಮತ್ತು ಮೇಲ್ವರ್ಗ ಗಳ ಹಿತಾಸಕ್ತಿಗಳೇ!!
ಅಂತಿಮವಾಗಿ 292 ಸದಸ್ಯರು ಈ ರೀತಿಯ ಪರೋಕ್ಷ ಮತದಾನದಿಂದ ಆಯ್ಕೆಯಾದರೆ ಇನ್ನೂ 93 ಸದಸ್ಯರನ್ನು ರಾಜಸಂಸ್ಥಾನಗಳು ಅಂದರೆ ಊಳಿಗಮಾನ್ಯ ದೊರೆಗಳು ತಮ್ಮ ಪ್ರತಿ ನಿಧಿಗಳನ್ನಾಗಿ ನೇಮಿಸಿದರು! ಇನ್ನು ನಾಲ್ಕು ಜನರನು ಚೀಫ್ ಕಮಿಷನರೇಟ್ ಅಡಿಯ ಲ್ಲಿದ್ದ ಪ್ರಾಂತ್ಯಗಳಿಂದ ನೇಮಿಸಲಾಯಿತು. ಹೀಗೆ ಒಟ್ಟು 389 ಸದಸ್ಯರ ಭಾರತದ ಸಂವಿಧಾನ ರಚನಾ ಸಭೆ ರೂಪುಗೊಂಡಿತು. ಆದರೆ 1947ರಲ್ಲಿ ದೇಶವಿಭಜನೆಯಾದ ನಂತರ ಒಟ್ಟು ಸಂವಿಧಾನ ರಚನಾ ಸಭೆಯ ಸದಸ್ಯರ ಸಂಖ್ಯೆ 299ಕ್ಕೆ ಕುಸಿಯಿತು.
ಇದೇ ಸಮಯದಲ್ಲಿ ಎರಡನೇ ಪ್ರಪಂಚ ಯುದ್ಧದ ನಂತರ ಫ್ಯಾಶಿಸ್ಟ್ ಆಳ್ವಿಕೆಯಿಂದ ವಿಮೋಚನೆಗೊಂಡ ಇಟಲಿಯನ್ನೂ ಒಳ ಗೊಂಡಂತೆ ಹಲವಾರು ನವ ವಿಮೋಚಿತ ಮತ್ತು ಬಡ ದೇಶಗಳ ಸಂವಿಧಾನ ರಚನಾ ಸಭೆ ಸಾರ್ವತ್ರಿಕ ಮತದಾನದ ಮೂಲಕವೇ ಆಯ್ಕೆಯಾಗಿದ್ದನ್ನು ಇಲ್ಲಿ ಗುರುತಿಸಲೇ ಬೇಕು. ಹೀಗೆ ಭಾರತದ ಪ್ರಜಾತಾಂತ್ರಿಕ ಸಂವಿಧಾನ ರಚನೆಯ ಬುನಾದಿಯೇ ಅಪ್ರಜಾತಾಂತ್ರಿಕವಾಗಿತ್ತು.
ಅಂಬೇಡ್ಕರ್‌ರನ್ನು ಹೊರಗಿಡಲು ನಡೆದ ಹುನ್ನಾರಗಳು
ಇನ್ನು ಈ ಸಂವಿಧಾನ ಸಭೆಯ ಕರಡು ಸಮಿತಿಯ ಅಧ್ಯಕ್ಷರಾಗುವುದಿರಲಿ ಸದಸ್ಯ ರಾಗುವುದಕ್ಕೇ ಅಂಬೇಡ್ಕರ್ ಪಟ್ಟ ಪಾಡು ಈ ಸಂವಿಧಾನ ರಚನಾ ಸಭೆಯ ಅಪ್ರಜಾತಾಂತ್ರಿಕ ನೆಲೆ ಗಳನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ.
ಸ್ವಾತಂತ್ರ್ಯ ಹೋರಾಟದ ಉದ್ದಕ್ಕೂ ಕಾಂಗ್ರೆಸ್ ನಾಯಕತ್ವದ ಸ್ವತಂತ್ರ ಭಾರತದಲ್ಲಿ ಹಿಂದೂ ಸವರ್ಣೀಯರ ಭಾರತವಾಗುತ್ತದೆಯೇ ವಿನಃ ದಲಿತ ಭಾರತವಾಗುವುದಿಲ್ಲ ಎಂದು ಸ್ಪಷ್ಟವಾಗಿ ಮನಗಂಡು ದಲಿತರಿಗೆ ಸ್ವತಂತ್ರ ಭಾರತದಲ್ಲಿ ಗೌರವನೀಯ ಮತ್ತು ಪ್ರತ್ಯೇಕ ಸ್ಥಾನಮಾನಕ್ಕೆ ಪೂನಾ ಒಪ್ಪಂದದ (1932) ದಿನಗಳಿಂದಲೂ ಹೋರಾಡುತ್ತಿದ್ದ ಅಂಬೇಡ್ಕರ್ ಸಂವಿಧಾನ ರಚನಾ ಸಭೆಗೆ ಆಯ್ಕೆಯಾಗುವುದು ಕಾಂಗ್ರೆಸ್ಸಿ ಗರಿಗೆ ಬೇಡವಾಗಿತ್ತು. ಬ್ರಿಟನ್ನಿನ ಕ್ಯಾಬಿನೆಟ್ ಕಮಿಷನ್ ಭಾರತಕ್ಕೆ ಬಂದಾಗ ಕಾಂಗ್ರೆಸ್, ಮುಸ್ಲಿಂ ಲೀಗ್ ಮತ್ತು ಅಂಬೇಡ್ಕರ್ ನೇತೃತ್ವದ ಶೆಡ್ಯೂಲ್ಡ್ ಕಾಸ್ಟ್ ಫೆಡರೇಷನ್-ಈ ಮೂರೂ ಶಕ್ತಿಗಳ ಒಡಂಬಡಿಕೆಯ ಆಧಾರದ ಮೇಲೆ ಹೊಸ ಸಂವಿಧಾನ ಮತ್ತು ಸ್ವತಂತ್ರ ಭಾರತದ ಸ್ವರೂಪ ರೂಪುಗೊಳ್ಳುವುದೆಂಬ ಅಭಿಪ್ರಾಯ ವನ್ನು ನೀಡಲಾಗಿತ್ತು.
No comments:
Post a Comment