ರವಿವಾರ - ಮೇ -01-2011
ಜೈಪುರ, ಎ. 30: ಕೇಸರಿ ಭಯೋತ್ಪಾದನಾ ಜಾಲದ ರೂವಾರಿ ಎಂದು ಆಪಾದಿಸಲ್ಪಟ್ಟಿರುವ ಸ್ವಾಮಿ ಅಸೀಮಾನಂದನ ನ್ಯಾಯಾಂಗ ಬಂಧನ ಮೇ 14ರವರೆಗೆ ಮುಂದುವರಿಸಲಾಗಿದೆ. ಅಜ್ಮೀರ್ ಸ್ಫೋಟ ಸಹಿತ ವಿವಿಧ ಸ್ಫೋಟ ಪ್ರಕರಣಗಳ ಆರೋಪಿಯಾಗಿರುವಸ್ವಾಮಿ ಅಸೀಮಾನಂದ ಮತ್ತು ಭರತ್ ಭಾಯಿಯ ನ್ಯಾಯಾಂಗ ಬಂಧನವನ್ನು ಮೇ 14ವರೆಗೆ ಮುಂದುವರಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು ಮನವಿ ಮಾಡಿದ್ದುದರಿಂದ ಸ್ಥಳೀಯ ನ್ಯಾಯಾಲಯವೊಂದು ಈ ಆದೇಶ ಜಾರಿಗೊಳಿಸಿದೆ.
ನ್ಯಾಯಾಧೀಶ ಸಿ.ಎನ್. ಮಾಥುರ್ ಮುಂದೆ ಶನಿವಾರ ಆರೋಪಿಗಳನ್ನು ಹಾಜರು ಪಡಿಸಲಾಯಿತು. ಎನ್‌ಐಎ ಮನವಿ ಮೇರೆಗೆ ನ್ಯಾಯಾಧೀಶರು ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿದರು. ಇಬ್ಬರು ಆರೋಪಿಗಳ ವಿರುದ್ಧ ದೋಷಾರೋಪ ಸಲ್ಲಿಸಲು ಎನ್‌ಐಎ ಸಮಯ ಅವಕಾಶ ಕೇಳಿದೆ. ವಿಷಯದ ಕುರಿತು ಮೇ 2ರಂದು ವಿಚಾರಣೆ ನಡೆಯಲಿದೆ. ಇನ್ನಿಬ್ಬರು ಆರೋಪಿಗಳಾದ ಮುಕೇಶ್ ವಾಸನಿ ಮತ್ತು ಹರ್ಷದ್ ವಿರುದ್ಧ ನಿನ್ನೆ ದೋಷಾರೋಪ ಪಟ್ಟಿ ದಾಖಲಿಸಲಾಗಿದೆ. ಅವರನ್ನೂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಅಜ್ಮೀರ್, ಮಕ್ಕಾ ಮಸೀದಿ ಸ್ಫೀಟಗಳಲ್ಲಿ ಆರೋಪಿಯಾಗಿರುವ ಸಾ್ವಮಿ ಅಸೀಮಾನಂದ, ಕಳೆದ ವರ್ಷದ ಡಿಸೆಂಬರ್ 12ರಂದು ನ್ಯಾಯಾಲಯವೊಂದರಲ್ಲಿ ನೀಡಿದ ತಪ್ಪೊಪ್ಪಿಗೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಸ್ಫೋಟ ಪ್ರಕರಣಗಳಲ್ಲಿ ಕೇಸರಿ ಭಯೋತ್ಪಾದಕರ ಕೈವಾಡವಿದ್ದ ಬಗ್ಗೆ ಬಹಿರಂಗ ಪಡಿಸಿದ್ದಾನೆ.
No comments:
Post a Comment