ಅಕ್ರಮ ಸಂತಾನಕ್ಕೇ ಮಠದ ಉತ್ತರಾಧಿಕಾರ: ನಿಡುಮಾಮಿಡಿ
ದಾವಣಗೆರೆ: ಅಕ್ರಮ ಸಂತಾನಗಳನ್ನೇ ಸ್ವಾಮಿಗಳು ಮಠಗಳ ಉತ್ತರಾಧಿಕಾರಿಯನ್ನಾಗಿ ಮಾಡಲಾಗುತ್ತಿದೆ ಎಂದು ಕೋಲಾರ ಬಾಗೇಪಲ್ಲಿ ನಿಡುಮಾಮಿಡಿ ಮಹಾ ಸಂಸ್ಥಾನಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಕರ್ನಾಟಕ ವಿದ್ಯುಚ್ಚಕ್ತಿ ಮಂಡಳೀಯ ಪರಿಶಿಷ್ಟ ಜಾತಿ, ವರ್ಗಗಳ ಕಲ್ಯಾಣ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾದ ಡಾ.ಬಿ.ಆರ್. ಅಂಬೇಡ್ಕರ್ ಅವರ 120ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಂಶವ್ಯಾಮೋಹ ಮಂತ್ರಿ ಮಹೋದಯರಿಂದ ಹಿಡಿದು ಸಾಧು ಸನ್ಯಾಸಿಗಳನ್ನೂ ಬಿಟ್ಟಿಲ್ಲ. ಬಹುತೇಕ ಮಠಗಳಲ್ಲಿ ಆಸ್ತಿ ಬೇರೆಯವರ ಪಾಲಾಗಬಾರದು ಎಂದು ಸಾಧು-ಸನ್ಯಾಸಿಗಳ ಅಕ್ರಮ ಸಂತಾನಗಳನ್ನೇ ಪೀಠಾಧಿಪತಿಯನ್ನಾಗಿ ಮಾಡಲಾಗುತ್ತಿದೆ. `ವಂಶಪಾರಂಪರ್ಯ~ ಎಂಬ ರೋಗ ಈ ದೇಶದ ಅನಿಷ್ಟಗಳಲ್ಲಿ ಒಂದು. ಸಾಮಾಜಿಕ ವ್ಯವಸ್ಥೆಯಲ್ಲಿ ಹುಟ್ಟಿನ ಸಿದ್ಧಾಂತಕ್ಕೆ ಮಹತ್ವ ನೀಡಿದಾಗಲೇ ಈ ದೇಶಕ್ಕೆ ಜಡತ್ವ ಬಂದಿತು. ಚಲನಶೀಲತೆ ಮಾಯವಾಯಿತು. ಭಗವದ್ಗೀತೆಯಲ್ಲಿಯೂ ಚಾತುರ್ವರ್ಣ ವ್ಯವಸ್ಥೆಯನ್ನು ಸ್ಥಿರೀಕರಿಸುವ ಪ್ರಯತ್ನಗಳಾದವು ಎಂದು ಬೇಸರ ವ್ಯಕ್ತಪಡಿಸಿದರು

No comments:
Post a Comment