ಹುಣಸೂರು,ಎ.30: ದಲಿತರ ಮೇಲೆ ಮೇಲ್ವರ್ಗದ ವ್ಯಕ್ತಿಗಳು ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಮುತ್ತುರಾಯನಹೊಸಳ್ಳಿ ಗ್ರಾಮಕ್ಕೆ ಶಾಸಕ ಎಚ್.ಪಿ. ಮಂಜು ನಾಥ್, ಗೃಹಮಂಡಳಿ ಅಧ್ಯಕ್ಷ ಜಿ.ಟಿ. ದೇವೇಗೌಡ, ವಿಧಾನ ಪರಿಷತ್ ಸದಸ್ಯ ಎಸ್.ಚಿಕ್ಕಮಾದು, ಭೇಟಿ ನೀಡಿದರು. ತಾಲೂಕಿನ ಮುತ್ತುರಾಯನಹೊಸಳ್ಳಿ ಗ್ರಾಮದ ವ್ಯಕ್ತಿಯೋರ್ವರ ಮಗಳ ಬೀಗರ ಔತಣದಲ್ಲಿ ದಲಿತರು ಚಪ್ಪಲಿ ಹಾಕಿ ಊಟಕ್ಕ ಕುಳಿತರೆಂಬ ಕಾರಣಕ್ಕೆ ದಲಿತರ ಮೇಲೆ ಮಂಜು ಎಂಬಾತ ಹಲ್ಲೆ ನಡೆಸಿದ್ದ. ನಂತರ ಸಂಜೆ ಕಲಹ ಮರು ಕಳಿಸಿದ್ದು, ಈ ಸಂದರ್ಭ 4 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 10 ಮಂದಿ ದಲಿತರು ಗಾಯಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದ ಜಿ.ಟಿ. ದೇವೇಗೌಡ, ಮಂಜುನಾಥ್, ನೊಂದವರಿಗೆ ಸಾಂತ್ವನ ಹೇಳಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳು ವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
No comments:
Post a Comment