Pages

Tuesday, 17 May 2011

ಬುದ್ಧ ಪ್ರಜ್ಞೆ ಜಾಗೃತಗೊಳ್ಳಲಿ: ಪ್ರೊ.ಶಿವಶಂಕರ್ಬುಧವಾರ

,
ಬುದ್ಧ ಪ್ರಜ್ಞೆ ಜಾಗೃತಗೊಳ್ಳಲಿ: ಪ್ರೊ.ಶಿವಶಂಕರ್

ಬುದ್ಧ ಪ್ರಜ್ಞೆ ಜಾಗೃತಗೊಳ್ಳಲಿ: ಪ್ರೊ.ಶಿವಶಂಕರ್ಬುಧವಾರ - ಮೇ -18-2011

ಬುದ್ಧ ಜಯಂತಿ ಕಾರ್ಯಕ್ರಮ
ಮಂಗಳೂರು, ಮೇ 17: ಜಗತ್ತಿಗೆ ಸಾರ್ವಕಾಲಿಕ ವಾದ ಸಂದೇಶ ನೀಡಿದ ಬುದ್ಧನ ಆದರ್ಶಗಳು ಇಂದಿಗೂ ಪ್ರಸ್ತುತ. ಈ ನಿಟ್ಟಿನಲ್ಲಿ ಬುದ್ಧ ಪ್ರಜ್ಞೆ ಜಾಗೃತಗೊಳ್ಳಲಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಟಿ.ಸಿ. ಶಿವಶಂಕರ ಮೂರ್ತಿ ತಿಳಿಸಿದರು.

ಅವರು ಇಂದು ದಕ್ಷಿಣ ಕನ್ನಡ ಜಿಲ್ಲಾ ಬೌದ್ಧ ಮಹಾಸಭಾ ಮಂಗಳೂರು ಇದರ ವತಿಯಿಂದ ನಗರದ ಎನ್‌ಜಿಓ ಸಭಾಂಗಣದಲ್ಲಿ ಹಮ್ಮಿ ಕೊಂಡ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಈ ನಿಸರ್ಗದ ಸಂಪತ್ತು ಎಲ್ಲರಿಗೂ ಸೇರಿದೆ. ಅದನ್ನು ಎಲ್ಲರೂ ಸಮಾನವಾಗಿ ಬಳಸಿಕೊಳ್ಳ ಬೇಕು ಎನ್ನುವುದನ್ನು ಬುದ್ಧ 2500 ವರ್ಷಗಳ ಹಿಂದೆಯೇ ತಿಳಿಸಿದ್ದರು. ಆ ಸಂದೇಶ ಇಂದಿಗೂ ಪ್ರಸ್ತುತ. ನಮ್ಮ ಸಮಾಜದಲ್ಲಿ ಹಲವಾರು ಮಂದಿ ಐಷಾರಾಮಿಯಾಗಿ ಬದುಕುತ್ತಿದ್ದಾರೆ. ಬಹಳಷ್ಟು ಮಂದಿ ಬಡತನದ ಬೇಗೆಯಲ್ಲಿದ್ದಾರೆ. ಇಂತಹ ಅಸಮಾನತೆಯನ್ನು ಹೋಗಲಾಡಿಸಬೇಕಾದರೆ ಬುದ್ಧನ ಆದರ್ಶವಾದ, ಸಮಾನತೆ ಸಮಾಜದ ಎಲ್ಲ ಹಂತಗಳಲ್ಲಿ ಕಂಡು ಬರಬೇಕು ಎಂದು ಶಿವಶಂಕರ ಮೂರ್ತಿ ತಿಳಿಸಿದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರಿನ ವೀರ್ಯಶೀಲ ಭಂತೇಜಿ ಮಾತನಾಡಿ, ಬೌದ್ಧ ಧರ್ಮ ನಿಜವಾದ ಅರ್ಥದಲ್ಲಿ ಒಂದು ಧರ್ಮವಲ್ಲ. ಒಂದು ಜೀವನ ಮಾರ್ಗ. ಮಾನವನ ಜೀವಿತ ಕಾಲದಲ್ಲಿ ಒದಗಿ ಬರುವ ನಾನಾ ವಿಧವಾದ ದು:ಖಗಳನ್ನು ದೂರ ಮಾಡಲು ಪಂಚಶೀಲ, ಅಷ್ಟಾಂಗ ಮಾರ್ಗಗಳಲ್ಲಿ ಸಾಗಿ ಸುಖ, ಶಾಂತಿ, ನೆಮ್ಮದಿಯನ್ನು ಪಡೆಯುವ ವಿಧಾನವನ್ನು ಇದು ಬೋಧಿಸುತ್ತದೆ. ಸಕಲ ಜೀವಿಗಳ ಸುಖ, ಶಾಂತಿ, ನೆಮ್ಮದಿಯನ್ನು ಬೌದ್ಧ ಧರ್ಮ ಬಯಸುತ್ತದೆ ಎಂದರು.

ಸಮಾರಂಭದಲ್ಲಿ ಬುದ್ಧ ವಂದನೆ, ದಮ್ಮೋಪದೇಶ, 207 ಕುಟುಂಬದ 775 ಜನರಿಗೆ ಆರೋಗ್ಯ ಸ್ವಾಸ್ಥ ವಿಮಾ ಯೋಜನೆ ಪಾಲಿಸಿ, ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಎಸ್.ಆರ್. ಲಕ್ಷ್ಮಣ, ಯುನೈಟೆಡ್ ಇನ್ಶೂರೆನ್ಸ್ ಸಂಸ್ಥೆಯ ಉದಯ, ಸಂಘಟನೆಯ ಪ್ರಧಾನ ಕಾರ್ಯ ದರ್ಶಿ ಕಾಂತಪ್ಪ ಅಲಂಗಾರ್ ಉಪಸ್ಥಿತರಿದ್ದರು. ದೇವಪ್ಪ ಬೋಧ್ ಕಾರ್ಯಕ್ರಮ ನಿರೂಪಿಸಿ, ಶಶಿಧರ ಜೋಕಟ್ಟೆ ವಂದಿಸಿದರು

No comments:

Post a Comment

html