ಮಂಗಳವಾರ - ಮೇ -17-2011
ಹಾಸನ, ಮೇ 16: ಆಲೂರು ತಾಲೂಕಿನ ಹಂಚೂರು ಗ್ರಾಮದಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾ ನಗೊಳಿಸಿದ ಪ್ರಕರಣದ ಆರೋಪಿ ಗಳನ್ನು ಬಂಧಿಸುವಲ್ಲಿ ಪೊಲೀಸರು ನಿರ್ಲಕ್ಷ ತಾಳಿದ್ದಾರೆ ಎಂದು ಆರೋ ಪಿಸಿ ಬಿಎಸ್ಪಿ ನೇತೃತ್ವದಲ್ಲಿ ದಲಿತ ಸಂಘಟನೆಗಳ ಕಾರ್ಯಕರ್ತರು ನಗರ ದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದ ಪ್ರತಿಭಟನಕಾರರು, ಹಂಚೂರು ಗ್ರಾಮದಲ್ಲಿ ಕಳೆದ 28 ರಂದು ಅಂಬೇಡ್ಕರ್ ಕಟೌಟ್ಗಳನ್ನು ನಾಶಪಡಿಸಿ ಕಿಡಿಗೇಡಿಗಳು ಅಪಮಾನ ಗೊಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿ ಸಿದಂತೆ ಆರೋಪಿಗಳನ್ನು ಬಂಧಿಸು ವಂತೆ ಆಲೂರು ಪೊಲೀಸರಿಗೆ ದೂರು ನೀಡಿದ್ದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಘಟನೆ ನಡೆದ ದಿನದಂದೇ ಪೊಲೀಸರಿಗೆ ದೂರು ನೀಡಿ ತಪ್ಪಿತಸ್ಥ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸ ಬೇಕೆಂದು ಒತ್ತಾಯಿಸಲಾಗಿತ್ತು. ಆದರೆ ಪ್ರಕರಣ ನಡೆದು 15 ದಿನ ಕಳೆದರೂ ದುಶ್ಕತ್ಯ ಎಸಗಿದ ಆರೋಪಿಗಳನ್ನು ಬಂಧೀಸುವಲ್ಲಿ ಪೊಲೀಸರು ಉದಾಸೀ ನತೆ ತೋರುತ್ತಿದ್ದಾರೆ. ಈಗಲಾದರೂ ಎಚ್ಚೆತ್ತು ಆರೋಪಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವು ದಾಗಿ ಬಿಎಸ್ಪಿ ಜಿಲ್ಲಾಧ್ಯಕ್ಷ ಎ.ಪಿ. ಅಹ್ಮದ್ ಎಚ್ಚರಿಸಿದರು. ನಂತರ ಪ್ರತಿಭ ಟನಕಾರರು ಜಿಲ್ಲಾಧಿಕಾರಿಧಗೆ ಮನವಿ ಸಲ್ಲಿಸಿದರು.
http://vbnewsonline.com/Karnataka/54259/
No comments:
Post a Comment