ನವೆಂಬರ್ -13-2010
ಪಾಟ್ನಾ, ನ. 12: ಆರೆಸ್ಸೆಸ್ ಭಯೋತ್ಪಾದಕ ಸಂಘಟನೆ, ತಕ್ಷಣವೇ ಅದನ್ನು ನಿಷೇಧಿಸುವಂತೆ ಬಿಹಾರ ಕಾಂಗ್ರೆಸ್ ನಾಯಕ ಪ್ರೇಮ್ ಚಂದ್ರ ಮಿಶ್ರಾ ಇಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಆರೆಸ್ಸೆಸ್ ನಾಯಕ ಕೆ.ಎಸ್. ಸುದರ್ಶನ್ ಮಾಡಿರುವ ಆಪಾದನೆಗಳನ್ನು ವಿರೋಧಿಸಿ, ಇಂದಿಲ್ಲಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಿಶ್ರಾ ಈ ರೀತಿ ಆಗ್ರಹಿಸಿದ್ದಾರೆ. ಆಕ್ರೋಶಿತ ಕಾಂಗ್ರೆಸ್ ಕಾರ್ಯಕರ್ತರು, ಆರೆಸ್ಸೆಸ್ ನಾಯಕ ಸುದರ್ಶನ್‌ರ ಪ್ರತಿಕೃತಿಯನ್ನು ದಹಿಸಿ, ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು.
ಹಿರಿಯ ಕಾಂಗ್ರೆಸ್ ನಾಯಕ ಪ್ರೇಮ್ ಚಂದ್ರ ಮಿಶ್ರಾರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದು, ಪಾಟ್ನಾ ಜಂಕ್ಷನ್ ಬಳಿಯಿಂದ ಡಾಕ್ ಬಂಗ್ಲೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಅಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸುದರ್ಶನ್‌ರ ಪ್ರತಿಕೃತಿಯನ್ನು ದಹಿಸಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು. ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಲಲನ್ ಕುಮಾರ್ ಉಪಸ್ಥಿತರಿದ್ದರು.
ಸೋನಿಯಾ ಗಾಂಧಿಯ ತೇಜೋವಧೆ ಮಾಡಲೆತ್ನಿಸಿದ ಸುದರ್ಶನ್ ವಿರುದ್ಧ ಪ್ರಕರಣ ದಾಖಲಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದರು. ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಮಿಶ್ರಾ, ಆರೆಸ್ಸೆಸ್ ಒಂದು ಭಯೋತ್ಪಾದಕ ಸಂಘಟನೆ ಎಂದು ಆಪಾದಿಸಿದರು. ದೇಶದ ವಿರುದ್ಧ ಕಾರ್ಯಾಚರಿಸುತ್ತಿರುವ ಆರೆಸ್ಸೆಸ್‌ನ್ನು ತಕ್ಷಣವೇ ನಿಷೇಧಿಸುವಂತೆ ಅವರು ಆಗ್ರಹಿಸಿದರು.
http://vbnewsonline.com/specialNews/32621/
No comments:
Post a Comment