Pages

Thursday 15 December 2011

ದಸಂಸ ಚಳವಳಿಗಳ ತಾಯಿ:ಬಸವರಾಜು


`ದಸಂಸ ನಡಿಗೆ ಹಳ್ಳಿಯೆಡೆಗೆ' ಜಾಥಾಗೆ ಬೀಳ್ಕೊಡುಗೆ
ಹುಣಸೂರು,ಡಿ.13-ದಲಿತ ಸಂಂಘಂಷಂಜ
ಸಮಿತಿ ಎಂದರೆ ಚಳವಳಿಗಳ ತಾಯಿ. ಅದು
ಎಲ್ಲಾ ಬಗೆಯ ಚಳವಳಿಗಳು ಹಾಗೂ
ಆಂದೋಲನಗಳಿಗೆ ತಾಯಿ ಬೇರು ಇದ್ದಂತೆ
ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿ ಬಸವರಾಜು
ದೇವನೂರು ಬಣ್ಣಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ
ಏರ್ಪಡಿಸಿದ್ದ ದಲಿತ ಸಂಂಘಂಷಂಜ ಸಮಿತಿ
ಮೂಲ ಆಶಯಗಳ ಪುನರುತ್ಥಾನ ಹಾಗೂ
ದಲಿತರ ಸಂವಿಧಾನಬದ್ಧ ಹಕ್ಕುಗಳ ಸಂರ
ಕ್ಷಣೆಗಾಗಿ ದಸಂಸ ಹಮ್ಮಿಕೊಂಡಿರುವ `ದಸಂಸ
ನಡಿಗೆ ಹಳ್ಳಿಯೆಡೆಗೆ, ಜನ ಜಾಗೃತಿ ಜಾಥಾದ
ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ
ಅವರು ಮಾತನಾಡಿದರು.
ಭದ್ರಾವತಿಯ ಉಕ್ಕಿನ ಪ್ರದೇಶದಲ್ಲಿ ಜನ್ಮ
ತಾಳಿದ ದಲಿತ ಸಂಂಘಂಷಂಜ ಸಮಿತಿ ಡಾ.ಬಿ.
ಆರ್.ಅಂಬೇಡ್ಕರ್ ಅವರ ಆದರ್ಶ ಹಾಗೂ
ತತ್ವಗಳ ಹಾದಿಯಲ್ಲಿ ಮುನ್ನಡೆಯುತ್ತಿದೆ.
ಅಲ್ಲದೇ ರೈತ ಚಳವಳಿ, ಕಾಮರ್ಿಕ ಚಳವಳಿ,
ವಿದ್ಯಾಥರ್ಿ ಚಳವಳಿ, ಮಹಿಳಾ ಚಳವಳಿ,
ಬಂಡಾಯ ಚಳವಳಿ ಸೇರಿದಂತೆ ಇನ್ನಿತರ
ಚಳವಳಿಗಳ ಹುಟ್ಟಿಗೆ ದಸಂಸ ಕಾರಣವಾಯಿತು.
ಜೊತೆಗೆ ದಲಿತರ ಮೇಲೆ ದಬ್ಬಾಳಿಕೆ ಮಾಡು
ತ್ತಿರುವವರ ವಿರುದ್ಧ ಹೋರಾಟ ಮಾಡುತ್ತಾ,
ದೌರ್ಜನ್ಯಕ್ಕೆ ಒಳಗಾದ ದಲಿತರಿಗೆ ರಕ್ಷಣೆ
ನೀಡುವಲ್ಲಿ ದಸಂಸ ಮುನ್ನುಗ್ಗುತ್ತಿದೆ ಎಂದು
ಹೇಳಿದರು.
ಇತ್ತೀಚಿನ ದಿನಗಳಲ್ಲಿ ದಲಿತ ಜನಾಂಗ
ದವರು ವಿವಿಧ ರಾಜಕೀಯ ಪಕ್ಷಗಳು ಹಾಗೂ
ವಿವಿಧ ಸಂಘ ಸಂಸ್ಥೆಗಳಲ್ಲಿ ಹಂಚಿ ಹೋಗಿ
ದ್ದಾರೆ. ಇದರಿಂದ ದಲಿತ ಸಮುದಾಯದಲ್ಲಿ
ಒಗ್ಗಟ್ಟು ಇಲ್ಲದಂತಾಗಿದೆ. ಪರಿಣಾಮ ಪ್ರತಿ
ದಿನ ವಿವಿಧ ಪ್ರದೇಶಗಳಲ್ಲಿ ದಲಿತರ ಮೇಲಿನ
ದೌರ್ಜನ್ಯಗಳು ಪದೇ ಪದೇ ಸಂಭವಿಸುತ್ತಿವೆ.
ಹೀಗಾಗಿ ದಲಿತ ಜನಾಂಗದವರು ಡಾ.ಬಿ.
ಆರ್.ಅಂಬೇಡ್ಕರ್ ಅವರ ಆದರ್ಶ-ತತ್ವಗ
ಳನ್ನು ಜೀವನದಲ್ಲಿ ಅಳವಡಿಸಿಕೊಂಡು ಒಗ್ಗ
ಟ್ಟಿನ ಮನೋಭಾವ ಬೆಳೆಸಿಕೊಳ್ಳಬೇಕಿದೆ.
ಆಗ ಮಾತ್ರ ದಲಿತರ ಮೇಲಿನ ದೌರ್ಜನ್ಯ
ಪ್ರಕರಣಗಳು ಕಡಿಮೆಯಾಗುತ್ತವೆ ಎಂದು
ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ
ಸಂಚಾಲಕ ದೇವಗಳ್ಳಿ ಸೋಮಶೇಖರ್,
ಜಿ.ಪಂ. ಮಾಜಿ ಸದಸ್ಯ ನಾಗರಾಜ್ ಮಲ್ಲಾಡಿ,
ದಸಂಸ ರಾಜ್ಯ ಸಂಚಾಲಕ ಹರಿಹರ ಆನಂ
ದಸ್ವಾಮಿ, ಪುರಸಭೆ ಮಾಜಿ ಸದಸ್ಯ ಹೆಚ್.ಎಸ್.
ವರದರಾಜು, ನಿಂಗರಾಜು ಮಲ್ಲಾಡಿ, ಬೋಪ
ನಹಳ್ಳಿ ರಾಜಶೇಖರ್, ಲ್ಯಾಂಪ್ ಸೊಸೈಟಿ
ಅಧ್ಯಕ್ಷ ಕಂಇಷಂಗಂಂಂಚಿ ಮಾತನಾಡಿದರು. ಸಮಾ
ರಂಭದಲ್ಲಿ ದಲಿತ ಮುಖಂಡರಾದ ಮಹದೇವು,
ಕಾಂತರಾಜು, ಕೆಂಪರಾಜು, ದೇವರಾಜು,
ಧರ್ಮಪುರ ನಾರಾಯಣ್, ವಿ.ಪಿ.ಸಾಯಿ
ನಾಥ್, ಶಿವಣ್ಣ, ಶಿವಕುಮಾರ್ ಸೇರಿದಂತೆ
ಅನೇಕರು ಹಾಜರಿದ್ದರು

No comments:

Post a Comment

html