ಕೊಳ್ಳೇಗಾಲ, ಡಿ. 6: ಪಟ್ಟಣದ ಭೀಮನಗರದ ಬಸವನ ದೇವರ ಗುಡಿಯಲ್ಲಿ ಮಂಗಳವಾರ ಡಾ.ಬಿ.ಆರ್. ಅಂಬೇಡ್ಕರ್ ಸ್ಮಾರಕ ಸಂಘದ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 55ನೆ ವರ್ಷದ ಪರಿನಿಬ್ಬಾಣ ದಿನಾಚರಣೆಯನ್ನು ಆಚರಿಸಲಾಯಿತು.
ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಚಿಕ್ಕಮಾಳಿಗೆ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು ಬಾಬಾ ಸಾಹೇಬರು ಭಾರತಕ್ಕೆ ಸಂವಿಧಾನದ ಮೂಲಕ ನಿಜವಾದ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟಿದ್ದಾರೆ. ಸಮಾಜದಲ್ಲಿದ್ದ ಅಸ್ಪೃಶ್ಯತೆ ನಿರ್ಮೂಲನೆಗೆ ತಮ್ಮ ಜೀವನವನ್ನೇ ಪಣವಾಗಿ ಇಟ್ಟು ಹೋರಾಟ ಮಾಡಿ ದೀನದಲಿತರ ಆಶಾಕಿರಣವಾಗಿದ್ದರು ಎಂದರು.
ಬಾಬಾ ಸಾಹೇಬರ ಭಾವಚಿತ್ರದ ಮುಂದೆ ದೀಪ ಬೆಳಗಿಸಿ ಮಾತನಾಡಿದ ಸಂಘದ ಗೌರವಾಧ್ಯಕ್ಷರಾದ ಡಿ.ಸಿದ್ದರಾಜು ಅಂಬೇಡ್ಕರ್‌ರ ಈ ಪರಿನಿರ್ವಾಣ ದಿನದ ಆಚರಣೆಯನ್ನು ಈ ಒಂದು ದಿನಕ್ಕೆ ಸೀಮಿತವಾಗಿರಿಸದೇ ಪ್ರತೀ ನಿತ್ಯ ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕೆಂದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕ ಎಲ್. ಲಿಂಗರಾಜು, ಉಪಾಧ್ಯಕ್ಷ ರಾಜೇಂದ್ರ, ಕಾರ್ಯದರ್ಶಿ ಪಾಪಣ್ಣ, ನಿರ್ದೇಶಕರುಗಳಾದ ಪುನೀತ್, ನಾಗು, ಪಿ. ಕೃಷ್ಣರಾಜ್, ಪೀಟರ್, ಶಿವರಾಜ್, ನಟರಾಜು, ನಾಗರಾಜು, ಪ್ರಸನ್ನ ಕುಮಾರ್, ಸಿದ್ಧಾರ್ಥ, ಶಿವರಾಜ್, ಕಸಬಾ ಯಜಮಾನರುಗಳಾದ ಸಿದ್ದಪ್ಪಾಜಿ, ನಟರಾಜು, ಬಸವಯ್ಯ, ಕೆಂಪಯ್ಯ, ಲಿಂಗರಾಜು, ಸಿದ್ದರಾಜು, ಮರಯ್ಯ, ಮುಖಂಡರಾದ ಕಚ್ಚಿ ಮಹದೇವ್, ವರದರಾಜು, ಪಿ.ಜಗದೀಶ್, ಪ್ರತಾಪ್, ಮಹದೇವ್, ರಾಜು, ಅಶೋಕ್, ಸಂತೋಷ, ಎಸ್.ಮಲ್ಲೇಶ್ ಮತ್ತಿತರರು ಹಾಜರಿದ್ದರು.
No comments:
Post a Comment