ಸೋಮವಾರ - ಅಕ್ಟೋಬರ್ -31-2011 ಮೈಸೂರು, ಅ. 30: ಮಕ್ಕಳ ಕೊರತೆಯ ನೆಪದಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚುವುದೆಂದರೆ, ಅದು ಸರಕಾರ ತನ್ನ ಮುಖದ ಮೇಲೆ ತಾನೇ ಉಗಿದು ಕೊಂಡಂತೆ ಎಂದು ಸಾಹಿತಿ ದೇವನೂರ ಮಹಾದೇವ ವ್ಯಾಖ್ಯಾನಿಸಿದ್ದಾರೆ.
ದಲಿತ ಸಂಘರ್ಷ ಸಮಿತಿ ವತಿ ಯಿಂದ ನಗರದಲ್ಲಿ ರವಿವಾರ ಆಯೋ ಜಿಸಲಾಗಿದ್ದ ‘ದಲಿತ ಸಂಘರ್ಷ: ನೆನ್ನೆ-ಇಂದು-ನಾಳೆ’ ಎಂಬ ವಿಚಾರ ಗೋಷ್ಠಿಯಲ್ಲಿ ‘ದಸಂಸ ಹೋರಾಟದ ಪಯಣ’ ಎಂಬ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ಪ್ರಸಕ್ತ ವರ್ಷ ಮೂರು ಸಾವಿರದಷ್ಟು ಸರಕಾರಿ ಶಾಲೆಗಳನ್ನು ಬಂದ್ ಮಾಡಲು ಸರಕಾರ ಮುಂದಾಗಿದೆ. ಆದರೆ ಕಳೆದ ಹತ್ತು ವರ್ಷಗಳ ಅವಧಿ ಯಲ್ಲಿ ಸುಮಾರು ಹತ್ತು ಸಾವಿ ರಕ್ಕೂ ಮಿಗಿಲಾಗಿ ಸರಕಾರಿ ಶಾಲೆಗಳನ್ನು ಸದ್ದು -ಗದ್ದಲವಿಲ್ಲದೆ ಮುಚ್ಚಲಾಗಿದೆ ಎಂಬ ಸಂಗತಿಯನ್ನು ಬಹಿರಂಗಪಡಿ ಸಿದ ಅವರು, ಆದುದರಿಂದ ಈ ಹತ್ತು ಸಾವಿರ ಶಾಲೆಗಳ ಪುನಾರಂಭಕ್ಕೆ ಆಗ್ರಹಿಸಿ ಹೋರಾಟ ನಡೆಯಬೇಕಿದೆ ಎಂದರು.
ಸರಕಾರಿ ಶಾಲೆಗಳಿಗೆ ಮಕ್ಕಳ ಕೊರತೆ ಉಂಟಾಗಲು ಸರಕಾರವೇ ಕಾರಣ. ಖಾಸಗಿ ಶಾಲೆಗಳಿಗೆ ಮನಬಂದಂತೆ ಪರವಾನಗಿ ನೀಡುವ ಮೂಲಕ ಸರಕಾರಿ ಶಾಲೆಗಳಿಗೆ ಮಕ್ಕಳು ದಾಖಲಾ ಗದಂತೆ ಮಾಡಿದ್ದೇ ಸರಕಾರ. ಆದು ದರಿಂದ ಸರಕಾರ ಹಾಗೂ ಖಾಸಗಿ ಶಾಲೆಗಳು ಒಳಸಂಚು ನಡೆಸಿ ಸರಕಾರಿ ಶಾಲೆಗ ಳನ್ನು ಮುಚ್ಚಿಸುತ್ತಿವೆ ಎಂದರು.
ಸರಕಾರ ಈ ವಿಷಯದಲ್ಲಿ ನಿಜವಾಗಿ ಯೂ ಪ್ರಾಮಾಣಿಕವಾಗಿದ್ದರೆ, ಖಾಸಗಿ ಶಾಲೆಗಳನ್ನು ಮುಚ್ಚುವ ಮೂಲಕ ಸರಕಾರಿ ಶಾಲೆಗಳಿಗೆ ಮಕ್ಕಳ ದಾಖಲಾ ತಿಯನ್ನು ಹೆಚ್ಚಿಸಬಹುದು. ಆದರೆ ಹಾಗೆ ಮಾಡುವ ಬದಲು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗ್ಡೆ ಕಾಗೇರಿ ಸರಕಾರಿ ಶಾಲೆಗಳ ಮೇಲೆ ಕಾಗೆ ಹಾರಿಸಲು ಹೊರಟಿದ್ದಾರೆ ಎಂದು ದೇವನೂರ ವ್ಯಂಗ್ಯವಾಡಿದರು.
ಜಾಗತೀಕರಣದ ನಂತರ ಜಗತ್ತು ಯಾವ ದಿಕ್ಕಿಗೆ ಓಡುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಪ್ರಸ್ತುತ ಜನಪ್ರತಿನಿಧಿ ಗಳು ನಿಜವಾದ ಪ್ರತಿನಿಧಿಗಳಾಗಿ ಉಳಿದಿಲ್ಲ. ವಿವೇಚನೆಯ ಮೂಲಕ ಅವರು ನಿರ್ಧಾರಗಳನ್ನು ತೆಗೆದುಕೊ ಳ್ಳುತ್ತಿಲ್ಲ. ಕಾರ್ಪೊರೇಟ್ ಸೆಕ್ಟರ್ ಮತ್ತು ಖಾಸಗಿ ಕಂಪೆನಿಗಳ ಕೈಗೆ ಆಡಳಿತವನ್ನು ಒಪ್ಪಿಸ ಲಾಗಿದೆ. ಅವರು ಸೂಚಿಸಿದಂತೆ ಜನಪ್ರ ತಿನಿಧಿಗಳು ಹೆಬ್ಬೆಟ್ಟಿನ ರುಜು ಹಾಕುತ್ತಿ ದ್ದಾರೆ. ಸರಕಾರ ಹಣ ಮಾಡುವ ದಂಧೆಯಲ್ಲಿ ತೊಡಗಿದೆ ಎಂದು ಸಾತ್ವಿಕ ಸಿಟ್ಟು ವ್ಯಕ್ತಪಡಿಸಿದ ಅವರು, ದುಡ್ಡಿಗಾಗಿ ಮಾತೃಭೂಮಿ ಯನ್ನೇ ಮಾರುವ ದೇಶ ಪ್ರೇಮಿಗಳಿಗೆ ಮಾತೃಭಾಷೆ ಯಾವ ಲೆಕ್ಕ ಎಂದು ಮೂದಲಿಸಿದರು.
ಹಿಂದೆ ಮನುಧರ್ಮ ಶಾಸ್ತ್ರದಲ್ಲಿ ಕೆಳವರ್ಗದವರಿಗೆ ಶಿಕ್ಷಣವನ್ನು ನಿರಾಕರಿ ಸಲಾಗಿತ್ತು. ಆದರೆ ಸಂವಿಧಾನ ಜಾರಿ ನಂತರ ಸರ್ವರಿಗೂ ಶಿಕ್ಷಣದ ಸೌಲಭ್ಯ ದೊರೆಯಿತು. ಆದರೆ ಸರಕಾರಗಳು ಏಕರೂಪ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರಲಿಲ್ಲ. ಹೀಗಾಗಿ ಶಿಕ್ಷಣ ವಿಷಯದಲ್ಲಿ ಪ್ರಸ್ತುತ ಎರಡು ಸಂವಿಧಾನಗಳು ಜಾರಿಯಲ್ಲಿದ್ದಂತಿದೆ. ಖಾಸಗಿ ಶಾಲೆಗಳ ಮೂಲಕ ನಗರನಿವಾಸಿ ಮತ್ತು ಸ್ಥಿತಿವಂತರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲಾಗುತ್ತಿದ್ದರೆ, ಸರಕಾರಿ ಶಾಲೆಗಳ ಮೂಲಕ ಗ್ರಾಮೀಣ ಮತ್ತು ಬಡವರ ಮಕ್ಕಳಿಗೆ ಕಳಪೆ ಶಿಕ್ಷಣ ನೀಡಲಾಗುತ್ತಿದೆ. ಆದುದರಿಂದ ಕನಿಷ್ಠ ಏಕರೂಪ ಪ್ರಾಥಮಿಕ ಶಿಕ್ಷಣಕ್ಕಾಗಿ ಹೋರಾಟ ನಡೆಸಬೇಕಿದೆ ಎಂದು ಕರೆ ನೀಡಿದರು.
No comments:
Post a Comment