Pages

Tuesday 6 September 2011

ಪುರೋಹಿತಶಾಹಿ ಲೂಟಿಗೆ ಚಾಮರಾಜನಗರ ಬಲಿ?


         ಜ್ಯೋತಿಷ್ಯಶಾಸ್ತ್ರ, ಬುಡಬುಡಿಕೆ, ಕಣಿ, ಇತ್ಯಾದಿ ಮೂಢನಂಬಿಕೆಗಳೆಲ್ಲಾ ತೀರಾ ವಯಕ್ತಿಕ ವಿಷಯಗಳು. ಕೆಲವರು ಅದನ್ನು ವಂಚನೆಯ  ಹಾದಿಯನ್ನಾಗಿ, ಸಂಪಾದನೆಯ ಹಾದಿಯನ್ನಾಗಿ ಬಳಸಿಕೊಂಡರೆ ಮತ್ತೆ ಕೆಲವರು ಅಂತಹ ವಂಚನೆಗೆ ನಿತ್ಯ ತಲೆ ಕೊಡುವತ್ತಲೇ ತಮ್ಮ ಜೀವನ ಸವೆಸುತ್ತಾರೆ. ಒಟ್ಟಿನಲಿ ಇವರಿಬ್ಬರ ಸಂಖ್ಯೆ ಸಮಾಜದಲ್ಲಿ ತೀರಾ ಕಮ್ಮಿ. ಪ್ರಶ್ನೆ ಏನೆಂದರೆ ಇಂತಹ ವಂಚನೆಯ ವಯಕ್ತಿಕ ವಿಷಯಗಳನ್ನು ಸಾರ್ವತ್ರೀಕರಣಗೊಳಿಸಿದರೆ? ಇಡೀ ಒಂದು ಜಿಲ್ಲೆಯೇ ಶಾಪಗ್ರಸ್ತವಾಗಿದೆ ಎಂದು ಕಣಿ ಹೇಳಿ ಅದರ ಶಾಪವನ್ನು ಬಿಡಿಸುತ್ತೇವೆಂದು ಹೊರಟರೆ? ಅದೂ ಸಕರ್ಾರಿ ಬೊಕ್ಕಸದ ವೆಚ್ಚದಲ್ಲಿ?
          ಹೌದು, ಜನಸಾಮಾನ್ಯರ ಬೊಕ್ಕಸದ ಹಣವನ್ನು ಇಂತಹ ವಂಚನೆಯ, ಮೂಢನಂಬಿಕೆಯ ಹೀನಕೃತ್ಯಕ್ಕೆ ಬಳಸಿ ಬರೋಬ್ಬರಿ 12 ಲಕ್ಷ ದೋಚುವ ಕ್ರಿಯೆ ನಡೆದಿರುವುದು ಚಾಮರಾಜನಗರದಲ್ಲಿ. ಅದೂ ಆ ನಗರದ ಹಿತಚಿಂತನೆಯ ಹೆಸರಲ್ಲಿ! ದುರಂತವೆಂದರೆ ಸಾಧಾರಣ ಭಿಕ್ಷುಕರಿಗೆ  ಎಂಟಾಣೆ, ಒಂದು ರೂಪಾಯಿ  ಭಿಕ್ಷೆ ನೀಡಲು ಹಿಂದೆ ಮುಂದೆ ನೋಡುವ ಜನ ಪುರೋಹಿತಶಾಹಿಗಳು ನಡೆಸುತ್ತಿರುವ ಈ ರೀತಿಯ ಬೃಹತ್ ಹಗಲು ದರೋಡೆಯನ್ನು ನೋಡುತ್ತಾ ಸುಮ್ಮನೆ ಕುಳಿತ್ತಿದ್ದಾರೆ! ಏಕೆಂದರೆ ಇಷ್ಟೊತ್ತಿಗಾಗಲೇ ಇಡೀ ಜಿಲ್ಲೆಯ ಜನ ರೊಚ್ಚಿಗೇಳಬೇಕಿತ್ತು. ನಮ್ಮ ಜಿಲ್ಲೆ ಶಾಪಗ್ರಸ್ತವಲ್ಲ, ನಾವು ಶಾಪಗ್ರಸ್ತ ಜನರಲ್ಲ ಎಂದು ಎದೆ ತಟ್ಟಿ ಸ್ವಾಭಿಮಾನಿಗಳಾಗಿ ಬೀದಿಗಿಳಿಯಬೇಕಿತ್ತು. ಆದರೆ?
     ಅಂದಹಾಗೆ 12 ಲಕ್ಷ ಖಚರ್ು ಮಾಡಿ ಮಾಡಿರುವ ಈ ಹೋಮ ಹವನಕ್ಕೆ ನೀಡಿರುವ ಕಾರಣಗಳಂತೂ  ತೀರಾ ತಲೆಹರಟೆಯ ಮಾದರಿಯಂತಹದ್ದು. ಅಷ್ಟ ಮಂಗಲ, ವಾಸ್ತು ದೋಷ, ಬ್ರಹ್ಮ ದೋಷ, ಸ್ತ್ರೀಹತ್ಯಾ ದೋಷ, ಕಲ್ಯಾಣಿ ಕೋಳ ಮುಚ್ಚಿರುವುದು, ರಾಜದ್ರೋಹ, ಗುರುದ್ರೋಹ, ದೈವದ್ರೋಹ ಇತ್ಯಾದಿ ಶುದ್ಧ ನಾನ್ಸೆನ್ಸ್ ವಿಚಾರಗಳೇ ಹೋಮ ಹವನದ ಈ ಕ್ರಿಯೆಯ ಹಿಂದೆ ತುಂಬಿರುವುದು! ಈ ವಿಚಾರಗಳು ಎಷ್ಟು ಮೋಸ? ಎಷ್ಟು ಸಾಚಾ? ಎಂಬುದನ್ನು ಆ ವಿಚಾರಗಳ ಹೆಸರು ಕೇಳಿದ ಯಾರಾದರೂ ಊಹಿಸಬಹುದು! ಸಾರ್ವಜನಿಕರ ಕಣ್ಣಿಗೆ ಮಂಕುಬೂದಿ ಎರಚಲೆಂಬತ್ತಷ್ಟೆ ಇಂತಹ ಕುವಿಚಾರಗಳನ್ನು ತೇಲಿ ಬಿಟ್ಟಿರುವುದು! ಒಟ್ಟಾರೆ ಇಲ್ಲಿ ನಡೆದಿರುವುದಿಷ್ಟೆ ಮೂಢನಂಬಿಕೆಯ ಹೆಸರಿನಲ್ಲಿ  ಪುರೋಹಿತಶಾಹಿಗಳಿಂದ  ಸಕರ್ಾರಿ ಹಣದ ಲೂಟಿ! ಸಾಲದಕ್ಕೆ ಅಂತಹ ಲೂಟಿಗೆ ಕೆಲವು ಪುರೋಹಿತಶಾಹಿ ಸಂಘಟನೆಗಳ, ಮಲಯಾಳಿ ಜ್ಯೋತéಿಷಿಗಳ ಎದುರುಕನ್ನಡದ ಸ್ವಾಭಿಮಾನ ಕಳೆದುಕೊಂಡ ಕೆಲವು ಕನ್ನಡಪರ ಸಂಘಟನೆಗಳ ಕಾರ್ಯಕರ್ತರ ಬೆಂಬಲ ಬೇರೆ!
     ಒಂದಂತು ನಿಜ, ಬಿಜೆಪಿ ನೇತೃತ್ವದ ಯಾವುದೇ ಸಕರ್ಾರವಿರಲಿ ಅದು ಪುರೋಹಿತಶಾಹಿ ವ್ಯವಸ್ಥೆಯ ಆಡುಂಬೋಲವೆಂದು ಬಹುತೇಕರು ಆಡಿಕೊಳ್ಳುತ್ತಾರೆ. ಅಂದಹಾಗೆ ಜನಸಾಮಾನ್ಯರ ಈ ಅನಿಸಿಕೆ  ಹೋಗಲಾಡಿಸಲು ಆಳುವ ಪ್ರಭೃತಿಗಳು ಏನು ಮಾಡಬೇಕು? ಇಲ್ಲ ನಮ್ಮದು ಜನಪರ, ಸಂವಿಧಾನಬದ್ಧ ಸಕರ್ಾರ ಎಂಬುದನ್ನು ತೋರಿಸಿಕೊಡಬೇಕಲ್ಲವೇ? ಅದು ಬಿಟ್ಟು ಸಾಕ್ಷಾತ್ ಸಕರ್ಾರವೇ ಈ ರೀತಿ ಮೂರನೇ ದಜರ್ೆ ಪುರೋಹೊತಶಾಹಿಗಿರಿಯನ್ನು ಪ್ರದಶರ್ಿಸಿದರೆ? ಅದೂ ಚಾಮರಾಜನಗರದಂತಹ ಪ್ರಗತಿಪರ ನಾಡಿನಲ್ಲಿ?
 ಈ ನಿಟ್ಟಿನಲಿ ಜನ ಎಚ್ಚೆತ್ತುಕೊಳ್ಳಬೇಕಿದೆ. ಬೊಕ್ಕಸದ ದುಡ್ಡು ಖಚರ್ು ಮಾಡಬೇಕಿರುವುದು ಹೋಮಹವನಕ್ಕಲ್ಲ! ಬುಡುಬುಡಿಕೆ ಶಾಸ್ತ್ರಕ್ಕಲ್ಲ!! ನಮ್ಮೂರಿನ ಕಿತ್ತುಹೋದ ರಸ್ತೆಗಳಿಗೆ, ಕೊಠಡಿಗಳಿಲ್ಲದ ಶಾಲೆಗಳಿಗೆ, ಶೌಚಾಲಯಗಳಿಲ್ಲದ ಮನೆಗಳಿಗೆ, ಸೂರಿಲ್ಲದ ಬಡವರಿಗೆ  ಎಂಬುದನ್ನು ಸಕರ್ಾರದ ಕಿವಿ ಕಿತ್ತು ಹೋಗುವ ಹಾಗೆ ಕೂಗಿ ಹೇಳಬೇಕಿದೆ.
                 ಜನ ಹಾಗೆ ಹೇಳುವರೇ? ಕಾದು ನೋಡಬೇಕಷ್ಟೆ.
                                                         
ರಘೋತ್ತಮ ಹೊ.ಬ
ಚಾಮರಾಜನಗರ-571313
http://ibnlive.in.com/news/chamarajanagar-to-conduct-astamangala-pooja/181473-60-115.html

http://www.youtube.com/watch?v=J6e6V8ZqeZg

No comments:

Post a Comment

html