Pages

Saturday 21 May 2011

ಭಾರತದಲ್ಲಿ ಅಂಬೇಡ್ಕರ್ ಮಾದರಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆಯೇ?


   ಪ್ರಜಾಪ್ರಭುತ್ವ ಹಾಗೆಂದರೆ  ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ಸಕರ್ಾರ. ಇದು ಅಮೆರಿಕಾದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ನರ ಡೈಲಾಗು. ಒಂದರ್ಥದಲಿ ಇದು ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದಂತೆ ಇಡೀ ವಿಶ್ವದ ಡೈಲಾಗಾಗಿ ಹೋಗಿದೆ.ಪ್ರಜಾಪ್ರಭುತ್ವ ಎಂದರೆ ಏನು ಎಂದಾಕ್ಷಣ ಎಲ್ಲರು ಹೇಳುವುದು ಅದನ್ನೆ.  ಆದರೆ ಅದು ಎಷ್ಟು ಸರಿ? ಪ್ರಜಾಪ್ರಭುತ್ವವೆಂದರೆ ಕೆವಲ ಸಕರ್ಾರದ ಒಂದು ಮಾದರಿಯೇ? ಆಡಳಿತದ  ಒಂದು ಪದ್ಧತಿಯೇ? ಬೇರೇನು ಅಲ್ಲವೇ? ಇಂತಹದ್ದರ ಬಗ್ಗೆ ಯಾರು ತಲೆಕೆಡಿಸಿಕೊಳ್ಳಲು ಹೋಗಿಲ್ಲ.  ಹಾಗೆ ಹೋಗುವುದೂ ಇಲ್ಲ. ಒಳ್ಳೆ ಗಿಳಿಪಾಠ ಹೇಳಿದ ಹಾಗೆ ಲಿಂಕನ್ನರ ಡೈಲಾಗನ್ನು ಪಟಪಟ ಎಂದು ಉದುರಿಸುತ್ತಾರೆ. ತನ್ಮೂಲಕ ಪ್ರಜಾಪ್ರಭುತ್ವ ಎಂದರೆ ಇದಿಷ್ಟೆ ಎಂದು ಅದಕ್ಕೆ ಒಂದು ಸೀಮಿತ ಚೌಕಟ್ಟನ್ನು ಒದಗಿಸುತ್ತಾರೆ.  ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿವರ್ೀರ್ಯಗೊಳಿಸುತ್ತಿದ್ದಾರೆನ್ನಬಹುದು.ವಿಶೇಷವಾಗಿ ಭಾರತದ ಮಟ್ಟಿಗೆ.
    ಹಾಗಿದ್ದರೆ ಪ್ರಜಾಪ್ರಭುತ್ವ ಹಾಗೆಂದರೇನು? ಅದರ ನೈಜ ಅರ್ಥ ಏನು? ವಿಶ್ವದಲ್ಲಿ ವಿಶೇಷವಾಗಿ ಭಾರತದಲ್ಲಿ ಅದರ ಸ್ಥಾನ ಏನು? ಅದರ ಸಾಮಾನ್ಯ ಅರ್ಥಕ್ಕೂ, ಅದಕ್ಕೆ ಇರುವ ನೈಜ ಅರ್ಥಕ್ಕೂ ಇರುವ ವ್ಯತ್ಯಾಸ ಎಂತಹದ್ದು? ತಪ್ಪುತಪ್ಪಾಗಿ , ಆತುರಾತುರವಾಗಿ ಹಿಂದೆ ಮುಂದೆ ಯೋಚಿಸದೆ  ಅದನ್ನು ವ್ಯಾಖ್ಯಾನಿಸುವ ಆಥರ್ೈಸಿಕೊಳ್ಳುವ ಹುನ್ನಾರವಾದರೂ ಏನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರಿಸದೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸುವುದು ಸಾಧ್ಯವಿಲ್ಲ.
       ಹಾಗಿದ್ದರೆ ಪ್ರಜಾಪ್ರಭುತ್ವ ಹಾಗೆಂದರೇನು? ಖ್ಯಾತ ಚಿಂತಕರೂ ವಿಶ್ವ ಶ್ರೇಷ್ಠ ಜ್ಞಾನಿಗಳೂ ಆದ ಬಾಬಾಸಾಹೇಬ್ ಡಾ.ಅಂಬೇಡ್ಕರರ ಪ್ರಕಾರ ಪ್ರಜಾಪ್ರಭುತ್ವ ಹಾಗೆಂದರೆ ಹಲವು ಜನರು ಒಂದೆಡೆ ಸಹಯೋಗದಿಂದ ಒಟ್ಟಾಗಿ ಜೀವಿಸುವ ಜೀವನ ವಿಧಾನ ವೆಂದರ್ಥ. ಅವರ ಪ್ರಕಾರ  ಅದು ಬರೀ  ಸಕರ್ಾರದ ಒಂದು ವಿಧವಲ್ಲ. ಒಂದರ್ಥದಲಿ  ಅದಕ್ಕಿಂತ ಹೆಚ್ಚಿನದು. ಅವರ ಪ್ರಕಾರ ಅದರ ಮೂಲ ಬೇರು ಸಮಾಜದ ವಿವಿಧ ಜನರ  ನಡುವೆ ಇರುವ ಸಾಮಾಜಿಕ ಸಂಬಂಧದಲ್ಲಿರುತ್ತದೆ. ಅಕಸ್ಮಾತ್ ಆ ಸಂಬಂಧ  ಗಟ್ಟಿಯಾಗಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿದೆ ಎಂದರ್ಥ. ಸಡಿಲವಾಗಿದ್ದರೆ ಸಡಿಲವಾಗಿದೆ ಎಂದರ್ಥ. ವಿಶಾಲಾರ್ಥದಲಿ ಹೇಳುವುದಾದರೆ ಯಾರೋ ಒಬ್ಬ ಪ್ರಧಾನಿ, ಮುಖ್ಯಮಂತ್ರಿಯಾಗಬೇಕು ಅದಕ್ಕೋಸ್ಕರ ಉಳಿದವರೆಲ್ಲಾ ಓಟು ಹಾಕಬೇಕು ಎನ್ನುವುದಷ್ಟಕ್ಕೆ   ಪ್ರಜಾಪ್ರಭುತ್ವ ವ್ಯವಸ್ಥೆ ಉಂಟಾಗುವುದಿಲ್ಲ. ಬದಲಿಗೆ ಆ ದೇಶದ, ಆ ದೇಶದೊಳಗಿನ ವಿವಿಧ ಸಮಾಜದ ಜನರ ನಡುವೆ ಪರಸ್ಪರ ಸಹಕಾರ , ಸಹಯೋಗದಿಂದ ಬದುಕುವ ಉದ್ದೇಶ ಮತ್ತು ಆಸೆ ಇರಬೇಕು. ಪರಸ್ಪರ ವಿಶ್ವಾಸ, ನಂಬಿಕೆ, ಸೌಹಾರ್ದತೆ ಇರಬೇಕು. ವಯಕ್ತಿಕ ಮಟ್ಟದಲ್ಲಲ್ಲದಿರಬಹುದು ಚಿಣ ಟಜಚಿಣ  ಸಾಮುದಾಯಿಕ ಮಟ್ಟದಲ್ಲಿ.
     ಅಂದಹಾಗೆ ಪ್ರಜಾಪ್ರಭುತ್ವಕ್ಕೆ ಸಂಬಂಧಪಟ್ಟಂತೆ  ಅಂಬೇಡ್ಕರರರ ಈ ವ್ಯಾಖ್ಯೆ? ನಿಜಕ್ಕೂ ಆಶ್ಚರ್ಯಕರವಾದುದು.  ಹಾಗೆ ಕುತೂಹಲಕರವಾದುದೂ ಕೂಡ ಹೌದು. ಏಕೆಂದರೆ  ಜನಗಳು ಓಟು ಹಾಕಿ ಜನಪ್ರತಿನಿಧಿಗಳನ್ನು ಗೆಲ್ಲಿಸಿ ಆ ಜನರಲ್ಲೇ ಒಬ್ಬನನ್ನು ಕಒ ಆಗಿ ಕಡಿಜಜಜಟಿಣ ಆಗಿ ನೇಮಿಸುವುದನ್ನು ಬಹುತೇಕರು ಪ್ರಜಾಪ್ರಭುತ್ವ ಎಂದು ಕೊಂಡಿದ್ದಾರೆ! ಎಂದು ಕೊಳ್ಳುತ್ತಿದ್ದಾರೆ ಕೂಡ. ಅಂತಹದ್ದರಲ್ಲಿ ಸೌಹಾರ್ದತೆಯಿಂದ ಬದುಕುವುದನ್ನೇ ನಿಜವಾದ ಪ್ರಜಾಪ್ರಭುತ್ವವೆನ್ನುವುದು? ವಿಚಿತ್ರ! ಆದರೆ ಸತ್ಯ. ಅಂದಹಾಗೆ ಪ್ರಜಾಪ್ರಭುತ್ವದ ಬಗೆಗಿನ ಅಂಬೇಡ್ಕರರ ಆ ನಿಲುವು ಬಹುಶಃ ವಿಶ್ವದ ಯಾವುದೇ ರಾಜಕೀಯವಿಜ್ಞಾನಿಗೆ ಗೋಚರಿಸದಂತಹದ್ದು. ಯಾರ ಊಹೆಗೂ ನಿಲುಕದಂತಹದ್ದು. ಯಾಕೆಂದರೆ ಉದಾಹರಣೆಗೆ ಭಾರತದ  ಮಟ್ಟಿಗೆ ಹೇಳುವುದಾದರೆ ಒಂದು ಚುನಾವಣೆ ಬರುತ್ತದೆಂದಿಟ್ಟುಕೊಳ್ಳಿ.  ಜನ ಓಟು ಮಾಡುತ್ತಾರೆ. ಯಾರೋ ಒಬ್ಬ ಗೆಲ್ಲುತ್ತಾನೆ. ಒಐಂ,ಒಕ ಕೂಡ ಆಗುತ್ತಾನೆ. ಕಒ, ಕಡಿಜಜಜಟಿಣ ಕೂಡ ಆಗುತ್ತಾನೆ. ಹಾಗೆ ಆದ  ಮಾರನೆ ದಿನವೇ  ದೇಶದ ಯಾವುದೋ ಮೂಲೆಯಲ್ಲಿ ಯಾವುದೋ  ಒಂದು ಊರಿನ ಒಂದು ಜಾತಿಯ ಜನರು  ಇನ್ನೊಂದು ಜಾತಿಯ ಜನರಿಗೆ ಎಲ್ಲಾ ಹಕ್ಕುಗಳನ್ನು ನಿರಾಕರಿಸುತ್ತಾರೆ! ಬಹಿಷ್ಕಾರ ಹಾಕುತ್ತಾರೆ! ಆ ಒಂದು ಜಾತಿಯ ಜನರು ಇನ್ನೊಂದು ಜಾತಿಯ ಜನರಿಗೆ ಗುಲಾಮರಾಗಿರಬೇಕು. ಅವರು ಹೇಳಿದ ಹಾಗೆ ಕೆಳಬೇಕು. ಅವರು ನಿಂತುಕೊಳ್ಳೀ ಎಂದರೆ ನಿಂತುಕೋಳ್ಳಬೇಕು ಕುಳಿತು ಕೋಳ್ಳಿ ಎಂದರೆ ಕುಳಿತುಕೊಳ್ಳಬೇಕು! ಊರಹೊರಗಿರಿ ಎಂದರೆ ಇರಬೇಕು! ಅಂದಹಾಗೆ ಹಾಗೆ ಊರ ಹೊರಗೆ ತಳ್ಳಲ್ಪಟ್ಟ ಜನ ಅಂದರೆ ಪ್ರಜೆಗಳು "ಪ್ರಭುಗಳು ಹೇಗಾಗುತ್ತಾರೆ? ಹಾಗೆ ಅದು ಪ್ರಜಾಪ್ರಭುತ್ವ ವ್ಯವಸ್ಥೆ ಹೇಗಾಗುತ್ತದೆ? ಒಟ್ಟಾರೆ ಅಲ್ಲಿ ಮೆರೆದಾಡುವುದು ಮೇಲ್ಜಾತಿ ಜನರ ಸವರ್ಾಧಿಕಾರವೇ ಅಲ್ಲವೇ? ಮುಂದುವರಿದು ಹೇಳುವುದಾದರೆ ಊರ ಹೊರಗೆ ತಳ್ಳಲ್ಪಟ್ಟ ಅಂತಹ ಪ್ರಜೆಗಳು ಹಾಗೆ ನಡೆದ ಚುನಾವಣೆಯಲ್ಲಿ ಮೇಲ್ಜಾತಿ ಜನರು  ಹೇಳಿದ ಪಕ್ಷಕ್ಕೆ ಮತ್ತವರು ನೀಡಿದ ಒಂದು ಪೊಟ್ಟಣ ಚಿತ್ರಾನ್ನ ಮತ್ತು ಒಂದು ಪಾಕೀಟು ಸಾರಾಯಿಗೆ  ಕಟ್ಟುಬಿದ್ದು ಓಟುಮಾಡಿರುತ್ತಾರೆ ಮತ್ತು ಅವರ ಓಟು ಪಡೆದವನೇ ಒಐಂ,ಒಕ,ಅಒ,ಕಒ ಕೂಡ ಆಗಿರುತ್ತಾನೆ. ಹಾಗೆಂದ ಮಾತ್ರಕ್ಕೆ ಇವರು ಪ್ರಭುಗಳಾದರೆಂದರ್ಥವೇ? ಇವರ ಕೈಗೆ ಆಡಳಿತ ಬಂತೆಂದರ್ಥವೇ? ಖಂಡಿತ ಇಲ್ಲ. ಹಾಗೇನಾದರೂ ಇವರು ಮತ್ತು ಇವರ ಸಮುದಾಯದವರು  ಪ್ರತಿಶತ ಓಟುಮಾಡಿದ್ದಾರೆ ಆದ್ದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಿದೆ ಎಂದುಕೊಂಡರೆ ಅದಕ್ಕಿಂತ ಕ್ರೂರ ಆತ್ಮಘಾತುಕ ಹೇಳಿಕೆ ಮತ್ತೊಂದಿಲ್ಲ. ಏಕೆಂದರೆ ಮೇಲ್ಜಾತಿಗಳ ಮಜರ್ಿಗೆ ಒಳಗಾಗಿ ಅವರ ದೌರ್ಜನ್ಯಕ್ಕೆ ಹೆದರಿ ಬದುಕುವ ಆ ತಳ ಸಮುದಾಯ ಗುಲಾಮಿ ಸಮುದಾಯ .ಹಾಗೆಯೇ ಪ್ರಜಾಪ್ರಭುತ್ವದ ಹೆಸರಿನಲ್ಲಿ ಇಲ್ಲಿ ನಡೆಯುವುದು ಮೇಲ್ಜಾತಿ ಜನರ ಸವರ್ಾಧಿಕಾರ. ಹೀಗಿರುವಾಗ ಇಲ್ಲಿ  ಎಲ್ಲರೂ ಪ್ರಜೆಗಳೂ , ಎಲ್ಲರಿಗೂ ಅಧೀಕಾರ ಸಿಕ್ಕಿದೆ ಎಂಬ ಪ್ರಜಾಪ್ರಭುತ್ವದ ನೈಜ ಆಶಯ ನೆರವೇರಿದೆಯೇ?ಖಂಡಿತ ಇಲ್ಲ.ಹೀಗಿರುವಾಗ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಎಂದು ಮಗ್ಗಿ ಒಪ್ಪಿಸುವುದು? ಒಂದರ್ಥದಲಿ ಅದು ವ್ಯವಸ್ಥೆಯನು ದಿಕ್ಕು ತಪ್ಪಿಸುವಂತಹದ್ದು. ಅಥವಾ ದಿಕ್ಕು ತಪ್ಪಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವಂತಹದ್ದು.
 ಹಾಗಿದ್ದರೆ ಈ ವಿಶ್ವದಲ್ಲಿ ವಿಶೇಷವಾಗಿ ಬಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೇ ಅಸ್ತಿತ್ವದಲ್ಲಿದೆಯೇ? ಖಂಡಿತ ಈ ಪ್ರಶ್ನೆಗೆ ಉತ್ತರ ಟಿಠ ಎಂದಷ್ಟೆ ಹೇಳಬೇಕು. ಯಾಕೆಂದರೆ  120 ಕೋಟಿ ಜನರೂ ಪರಸ್ಪರ ಸಹಯೊಗದಿಂದ ಬದುಕುವುದು ಬೇಡ ಕನಿಷ್ಠ ಇಲ್ಲಿರುವ 6000 ಕ್ಕೂ ಹೆಚ್ಚು ಜಾತಿಗಳವರು, 5 ಕ್ಕೂ ಹೆಚ್ಚು ಧರ್ಮಗಳವರು ಪರಸ್ಪರ ಒಬ್ಬರ ಹಕ್ಕುಗಳನ್ನು  ಮತ್ತೊಬ್ಬರು ಗೌರವಿಸಿ ಸಹಯೋಗದಿಂದ ಬದುಕುವುದು ಬೇಡವೇ? ಸೌಹಾರ್ದತೆಯಿಂದ ಬಾಳ್ವೆ ನಡೆಸುವುದು ಬೇಡವೆ? ಮತ್ತೊಬ್ಬರ ಮೆಲೆ ತಮ್ಮ ಡೌಲು ದರ್ಪಗಳನ್ನು ತೋರಿಸುವುದು ಅದೆಷ್ಟು ಸರಿ?  ಇಂತಹ ನಡತೆ ಹಿಟ್ಲರನ ನಡತೆಗಿಂತ ಅದ್ಯಾವ ರೀತಿ ಕಮ್ಮಿ?
   ಮುಂದುವರಿದು ಒಂದು ಸಮುದಾಯವನ್ನು  ಊರ ಹೊರಗಿರಿ , ನೀವು ಶಿಕ್ಷಣ ಪಡೆಯಬೇಡಿ, ನೀವು ಮುಟ್ಟಿಸಿಕೊಳ್ಳಬೇಡಿ,  ನೀವು ದೇವಸ್ಥಾನ ಪ್ರವೇಶಿಸ ಬೇಡಿ, ನೀವು ನಮ್ಮ ಮಕ್ಕಳ ಜೊತೆ ಕೂರಬೇಡಿ, ನೀವು ಅಡಿಗೆ ಮಾಡಿದರೆ ನಾವು ತಿನ್ನುವುದಿಲ್ಲ. ನಿಮಗೆ ಬೇರೆ ಪಂಕ್ತಿ ನಮಗೆ ಬೇರೆ ಪಂಕ್ತಿ , ನಿಮ್ಮನ್ನು ಮಟ್ಟ ಹಾಕುವುದೇ ನಮ್ಮ ಗುರಿ,ನಿಮ್ಮನ್ನು ತುಳಿಯುವುದು ನಮ್ಮ ರಕ್ತ ಗುಣ, ನಿಮಗೆ ತೊಂದರೆ ಕೊಡುವುದೇ, ಆ ತೊಂದರೆಯಲ್ಲಿ ನೀವು ನರಳುವಂತೆ ಮಾಡುವುದರಲ್ಲೇ ನಮ್ಮ ಶ್ರೇಯಸ್ಸಡಗಿದೆ ಎನ್ನುವುದರಲ್ಲಿ ಪ್ರಜಾಪ್ರಭುತ್ವವೆಲ್ಲಿದೆ? ಮೇಲ್ಜಾತಿಗಳ ಸವರ್ಾಧಿಕಾರಿ ನಿಲುವಿಗೆ ಕೆಳಜಾತಿಗಳು ನಲುಗುವುದು ಎಂದರೆ ಇದೇ ಅಲ್ಲವೇ? ಮತ್ತು ಹೀಗೆ ಬದುಕುವುದನ್ನು  ಪ್ರಜಜಾಪ್ರಭುತ್ವವೆಂದು ಕರೆಯಲು ಸಾಧ್ಯವೇ? ಹಾಗೆಯೇ ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಕೊಳ್ಳಬೇಕೆ? ಖಂಡಿತ ಹಾಗೇ ಹೇಳಿದ್ದೇ ಆದರೆ ಅದು ನಮ್ಮ ಕಣ್ಣಿಗೆ ನಾವೇ ಮಂಕು ಬೂದಿ ಎರಚಿಕೊಂಡ ಹಾಗೆ. ದೂರದ ಲಿಂಕನ್ನನನ್ನು ಹಿಂದು ಮುಂದು ನೋಡದೆ ಇಲ್ಲಿ ಮಾತನಾಡಿದರೆ ಅಥವಾ ಅವನ ಸಿದ್ಧಾಂತ ನಮ್ಮಲ್ಲಿ ಯಶಸ್ವಿಯಾಗಿದೆ ಎಂದರೆ ನಮಗೆ ನಾವೇ ನೇಣು ಹಾಕಿಕೊಂಡ ಹಾಗೆ.
 ಈ ನಿಟ್ಟಿನಲಿ ಪ್ರಜಾಪ್ರಭುತ್ವದ ಪರಿಕಲ್ಪನೆ ಬದಲಾಗಬೇಕಿದೆ. ಬೇರೆ ಕಡೆ ಹೇಗೇ ಏನೋ ಗೊತ್ತಿಲ್ಲ.  ವಿಶೇಷವಾಗಿ ಭಾರತದ ದೃಷ್ಟಿಯಲ್ಲಂತೂ ಖಂಡಿತ ಬದಲಾಗಲೇಬೇಕಿದೆ. ಒಂದು ದೇಶದ ವಿವಿಧ ಸಮುದಾಯಗಳು ಪರಸ್ಪರ ಸಹಯೊಗದಿಂದ ಬದುಕುವುದೇ ನಿಜವಾದ  ಪ್ರಜಾಪ್ರಭುತ್ವ  ಎಂಬ ಅಂಬೇಡ್ಕರರ ವ್ಯಾಖ್ಯೆ ಸಾಕಾರಗೊಳ್ಳಬೇಕಿದೆ. ಚಾಲ್ತಿಗೆ ಬರಬೇಕಿದೆ. ಆಗ ಮಾತ್ರ ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುವುದು ಸಾಧ್ಯ.ಇಲ್ಲದಿದ್ದರೆ ಯುದ್ಧದಲ್ಲಿ ಸೈನಿಕರು ಸತ್ತರೆ ಸತ್ತವನು ಯಾವ ಜಾತಿ? ಸಾಯಲಿ ಬಿಡಿ, ಅವನ ಜಾತಿಯವರು ನಮಗೆ ತೊಂದರೆ ಕೊಟ್ಟಿದ್ದಾರೆ, ಅವರ ಧರ್ಮದವರು ನಮ್ಮನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎಂದು ಸುಮ್ಮನಾಗುತ್ತೇವೆ. ಸಹಯೋಗದಿಂದ ಬದುಕದ ನಮ್ಮ ಸಾಮಾಜಿಕ ದೌರ್ಬಲ್ಯದಿಂದಾಗಿ ನಮಗೆ ನಾವೇ ಬಲಿಯಾಗುತ್ತೇವೆ. ತನ್ಮೂಲಕ ಈ ದೇಶದ ಇಂಚಿಂಚನ್ನೂ ಶತೃಗಳಿಗೆ ಕಳೆದುಕೊಳ್ಳುತ್ತಾ ಬರುತ್ತೇವಷ್ಟೆ!
ಖಂಡಿತ, ಹಾಗಾಗಬಾರದು. ಅಂಬೇಡ್ಕರರ ಪ್ರಜಾಪ್ರಭುತ್ವದ ವ್ಯಾಖ್ಯೆಯ ಪ್ರಕಾರ ಈ ದೇಶದ ವಿವಿಧ ಸಮುದಾಯಗಳವರು , ಜಾತಿಗಳವರು, ಧರ್ಮಗಳವರು ಪರಸ್ಪರ ಸಹಯೋಗದಿಂದ ಸೌಹಾರ್ದದಿಂದ ಬದುಕುವಂತಾಗಬೇಕು. ಮನುಪ್ರಣೀತ ಸಂವಿಧಾನದಿಂದ ಹೊರಬಂದು ಸ್ವತಃ ಅಂಬೇಡ್ಕರ್ರವರೇ ರಚಿಸಿರುವ ಸಂವಿಧಾನದ ತತ್ವಗಳನ್ನು ಅನುಸರಿಸಿ ಪರಸ್ಪರ ಹಕ್ಕುಗಳನ್ನು ಗೌರವಿಸುವುದನ್ನು ಕಲಿಂಕಬೇಕು. ಮೇಲುಕೀಳು ವ್ಯವಸ್ಥೆಯನ್ನು ಧಿಕ್ಕರಿಸಿ ಸಮಾನತೆಯ ಹಾದಿಯಲಿ ಮುನ್ನುಗ್ಗಬೇಕು. ತನ್ಮೂಲಕ ಭಾರತದಲ್ಲಿ ಅಂಬೇಡ್ಕರ್ ಮಾದರಿ ಪ್ರಜಾಪ್ರಭುತ್ವ ಸ್ಥಾಪಿತವಾಗಬೇಕು. ಹಾಗೆ ಆಗುತ್ತದೆಯೇ ಕಾದು ನೋಡಬೇಕಷ್ಟೆ.
                                  ರಘೋತ್ತಮ ಹೊ.ಬ
                                 ಚಾಮರಾಜನಗರ-571313

No comments:

Post a Comment

html